For Quick Alerts
ALLOW NOTIFICATIONS  
For Daily Alerts

ಹಬ್ಬದ ಸೀಸನ್ ನಡುವೆ ಬಂಗಾರ ಅಗ್ಗ: ಖರೀದಿ ಸೂಕ್ತವೇ?

|

ಭಾರತದಲ್ಲಿ ಹಬ್ಬದ ಸೀಸನ್ ಮತ್ತೆ ಆರಂಭವಾಗಿದೆ. ಸಾಮಾನ್ಯವಾಗಿ ಈ ಹಬ್ಬವಿರುವ ದಿನಗಳಲ್ಲಿ ಚಿನ್ನವನ್ನು ಖರೀದಿ ಮಾಡಿದರೆ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬುವುದು ನಂಬಿಕೆಯಾಗಿದೆ. ಈ ಹಬ್ಬದ ಸೀಸನ್‌ ಆರಂಭದಲ್ಲೇ ಚಿನ್ನದ ಬೆಲೆ ಇಳಿಕೆಯಾಗಿದೆ. ಈ ಸಂದರ್ಭದಲ್ಲಿ ನೀವು ಚಿನ್ನವನ್ನು ಖರೀದಿ ಮಾಡಬಹುದೇ?, ಈ ಬಗ್ಗೆ ಇಲ್ಲಿದೆ ವಿವರ.

ಸೆಪ್ಟೆಂಬರ್ 24ರಂದು ಚಿನ್ನದ ಬೆಲೆಯು ಭಾರಿ ಇಳಿಕೆಯಾಗಿದೆ. ಆ ಬಳಿಕ ಸತತ ಎರಡು ದಿನಗಳಿಂದ ಚಿನ್ನದ ಬೆಲೆಯು ಸ್ಥಿರವಾಗಿದೆ. ಸೆಪ್ಟೆಂಬರ್ 24ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 500 ರೂಪಾಯಿ ಇಳಿಕೆಯಾಗಿದ್ದು 46,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 530 ರೂಪಾಯಿ ಕುಗ್ಗಿದ್ದು 50,200 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು 500 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 56,300 ರೂಪಾಯಿ ಆಗಿದೆ.

ಹಬ್ಬದ ಸೀಸನ್‌ನಲ್ಲಿ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಹೇಗೆ?ಹಬ್ಬದ ಸೀಸನ್‌ನಲ್ಲಿ ಡಿಜಿಟಲ್ ಚಿನ್ನದ ಮೇಲೆ ಹೂಡಿಕೆ ಹೇಗೆ?

ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರವನ್ನು 75 ಮೂಲಾಂಕ ಏರಿಕೆ ಮಾಡಿದ ಬೆನ್ನಲ್ಲೇ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಸಾಮಾನ್ಯವಾಗಿ ಡಾಲರ್ ಬೆಲೆ ಕುಸಿತವಾದರೆ ಅದರ ವಿರುದ್ಧವಾಗಿ ಚಿನ್ನದ ದರ ಏರಿಕೆಯಾಗುತ್ತದೆ. ಈಗ ಡಾಲರ್ ಮೌಲ್ಯ ಹೆಚ್ಚಾಗಿದ್ದು ಇದರ ಪರಿಣಾಮವಾಗಿ ಭಾರತದಲ್ಲಿ ಚಿನ್ನದ ದರ ಕುಸಿತವಾಗುತ್ತಿದೆ. ಈ ಸಂದರ್ಭದಲ್ಲಿ ನೀವು ಚಿನ್ನ ಖರೀದಿ ಮಾಡಬಹುದೇ?, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಹಬ್ಬದ ಸೀಸನ್ ನಡುವೆ ಬಂಗಾರ ಅಗ್ಗ: ಖರೀದಿ ಸೂಕ್ತವೇ?

ಭಾರತದಲ್ಲಿ ಚಿನ್ನದ ದರ ಇಳಿಕೆ

ಇಂದು, ನಿನ್ನೆ ಗೋಲ್ಡ್ ರೇಟ್ ಸ್ಥಿರವಾಗಿದ್ದರೂ ಕೂಡಾ ಎರಡು ದಿನಗಳ ಹಿಂದೆ ಚಿನ್ನದ ಬೆಲೆಯು ಇಳಿಕೆಯಾಗುತ್ತಿದೆ. ಈ ಹಬ್ಬದ ಸೀಸನ್‌ ನಡುವೆ ಬಂಗಾರ ದರ ಕುಸಿಯುತ್ತಿರುವುದು ಭಾರತದ ರಿಟೇಲ್ ಖರೀದಿದಾರರಿಗೆ ಉತ್ತಮ ಅವಕಾಶ ಕಲ್ಪಿಸಿದೆ. ಚಿನ್ನದ ದರ ಹೀಗೆಯೇ ನಿರಂತರವಾಗಿ ಇಳಿಕೆಯಾದರೆ ಪ್ರಸ್ತುತ ಈ ಹಬ್ಬದ ಸೀಸನ್‌ನಲ್ಲಿ ನಾವು ಕಡಿಮೆ ಬೆಲೆಗೆ ಬಂಗಾರ ಖರೀದಿ ಮಾಡಲು ಸಾಧ್ಯವಾಗಲಿದೆ. ಸಾಮಾನ್ಯವಾಗಿ ಹಬ್ಬದ ಸೀಸನ್‌ನಲ್ಲಿ ಭಾರತದಲ್ಲಿ ಚಿನ್ನವನ್ನು ಖರೀದಿ ಮಾಡಲಾಗುತ್ತದೆ. ಈ ನಡುವೆ ಚಿನ್ನಕ್ಕೆ ಬೇಡಿಕೆ ಅಧಿಕವಾಗಲಿದೆ.

SGB: ಚಿನ್ನದ ಮೇಲೆ ನೆಚ್ಚಿನ ಹೂಡಿಕೆ ಸ್ಕೀಮ್, ದರ ಎಷ್ಟಕ್ಕೆ ನಿಗದಿ?SGB: ಚಿನ್ನದ ಮೇಲೆ ನೆಚ್ಚಿನ ಹೂಡಿಕೆ ಸ್ಕೀಮ್, ದರ ಎಷ್ಟಕ್ಕೆ ನಿಗದಿ?

ಇಂದಿನ ಚಿನ್ನದ ದರ

ಸೆಪ್ಟೆಂಬರ್ 25ರಂದು ಗೋಲ್ಡ್ ರೇಟ್ ಸ್ಥಿರವಾಗಿದೆ. ಆ ಬಳಿಕ ಸತತ ಎರಡು ದಿನಗಳಿಂದ ಚಿನ್ನದ ಬೆಲೆಯು ಸ್ಥಿರವಾಗಿದೆ. ಸೆಪ್ಟೆಂಬರ್ 25ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ಯಥಾಸ್ಥಿತಿ ಕಾಯ್ದುಕೊಂಡಿದ್ದು 46,000 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ ಸ್ಥಿರವಾಗಿದ್ದು 50,200 ರೂಪಾಯಿ ಆಗಿದೆ.

English summary

Ahead of Festive Season Gold Rate Decreases, Should you Buy?

Indian gold price sharply decreased Ahead of Festive Season, Should you Buy? here's details in kannada.
Story first published: Monday, September 26, 2022, 14:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X