ಟಾಟಾ ಗ್ರೂಪ್‌ನ ಏರ್ ಇಂಡಿಯಾ ಇತಿಹಾಸದಲ್ಲೇ ಅತೀ ದೊಡ್ಡ ಮಲ್ಟಿ ಬಿಲಿಯನ್ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿದೆ. ಫ್ರಾನ್ಸ್‌ನ ಏರ್‌ಬಸ್ ಮತ್ತು ಅಮೆರಿಕಾದ ವಿಮಾನ ತಯಾರಕ ಸಂಸ್ಥೆ ಬೋಯಿಂಗ್ ಜೊತೆ ಏರ್ ಇಂಡಿಯಾ ಈ ಒಪ್ಪಂದವನ್ನು ಮಾಡಿಕೊಂಡಿದೆ. ಈ ಎರಡು ಸಂಸ್ಥೆಗಳಿಂದ ಒಟ್ಟು 470 ಪ್ರಯಾಣಿಕ ವಿಮಾನ ಖರೀದಿಯ ಡೀಲ್ ಕುದುರಿಸುವ ಮೂಲಕ ಇತಿಹಾಸದಲ್ಲೇ ಅತೀ ದೊಡ್ಡ ಒಪ್ಪಂದಕ್ಕೆ ಏರ್‌ಇಂಡಿಯಾ ಮುಂದಾಗಿದೆ.
ಈ ಬಗ್ಗೆ ಲಭ್ಯವಾದ ಮಾಹಿತಿ ಪ್ರಕಾರ 470 ವಿಮಾನಗಳ ಸಂಪೂರ್ಣ ಡೀಲ್ 70ರಿಂದ 80 ಬಿಲಿಯನ್ ಡಾಲರ್‌ನಲ್ಲಿ ನಡೆಯಲಿದೆ. ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದೆ. ಸರ್ಕಾರದ ಅಡಿಯಲ್ಲಿದ್ದ ಈ ಏರ್ ಇಂಡಿಯಾವನ್ನು ಡೀಲ್ ಮೂಲ ಟಾಟಾ ಗ್ರೂಪ್ ಮತ್ತೆ ಪಡೆದುಕೊಂಡಿದೆ.
ಸುಮಾರು 69 ವರ್ಷಗಳ ಕಾಲ ಸರ್ಕಾರದ ನಿಯಂತ್ರದಲ್ಲಿನ ಏರ್ ಇಂಡಿಯಾವನ್ನು ಎರಡು ವರ್ಷದ ಹಿಂದೆ ಟಾಟಾ ಗ್ರೂಪ್ ಮತ್ತೆ ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿದೆ. ಅಕ್ಟೋಬರ್ 2021ರಂದು ಟಾಟಾ ಗ್ರೂಪ್ ಏರ್‌ಇಂಡಿಯಾವನ್ನು ಸರ್ಕಾರದಿಂದ ಖರೀದಿಸಿದೆ. ಇದಾದ ಬಳಿಕ ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈಗ ಏರ್‌ಇಂಡಿಯಾವು ಏರ್‌ಬಸ್ ಸಂಸ್ಥೆಯಿಂದ 250 ವಿಮಾನಗಳು ಮತ್ತು ಬೋಯಿಂಗ್‌ನಿಂದ 220 ವಿಮಾನಗಳ ಖರೀದಿಗೆ ಮುಂದಾಗಿದೆ.
ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿಕೆ
"ಏರ್‌ಇಂಡಿಯಾ ಮತ್ತು ಬೋಯಿಂಗ್ ನಡುವೆ ಡೀಲ್ ನಡೆದು 200 ಅಮೆರಿಕಾದಲ್ಲಿ ತಯಾರಿಸಲಾದ ವಿಮಾನಗಳನ್ನು ಖರೀದಿ ಮಾಡಲಾಗುವ ಬಗ್ಗೆ ಘೋಷಣೆ ಮಾಡುವ ಐತಿಹಾಸಿಕ ಒಪ್ಪಂದದ ಬಗ್ಗೆ ಘೋಷಣೆ ಮಾಡಲು ನಾನು ಹೆಮ್ಮೆಪಡುತ್ತೇನೆ. ಈ ವಿಮಾನ ಖರೀದಿಯಿಂದಾಗಿ ಅಮೆರಿಕಾದ 44 ಸ್ಟೇಟ್‌ಗಳಲ್ಲಿ 1 ಮಿಲಿಯನ್ ಜನರಿಗೆ ಉದ್ಯೋಗ ನೀಡಲು ಸಹಾಯಕವಾಗಲಿದೆ," ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬೈಡೆನ್ ಏರ್ ಇಂಡಿಯಾ ಮತ್ತು ಬೋಯಿಂಗ್ ನಡುವಿನ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿದ್ದಾರೆ. "ಪರಸ್ಪರ ಪ್ರಯೋಜನವನ್ನು ಉಂಟು ಮಾಡುವ ಹೊಳೆಯುವ ಉದಾಹರಣೆ ಇದಾಗಿದೆ" ಎಂದು ಉಭಯ ನಾಯಕರುಗಳು ಕೂಡಾ ಡೀಲ್ ಅನ್ನು ಸ್ವಾಗತಿಸಿದ್ದಾರೆ. ಏರ್ ಇಂಡಿಯಾವು 70ಕ್ಕೂ ಅಧಿಕ ಬೋಯಿಂಗ್ ವಿಮಾನಗಳನ್ನು ಖರೀದಿ ಮಾಡುವ ಆಯ್ಕೆಯಿದೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಹೇಳಿಕೆ
ಇನ್ನು ಟಾಟಾ ಗ್ರೂಪ್ ಏರ್‌ಬಸ್‌ನೊಂದಿಗೆ 250 ವಿಮಾನಗಳ ಖರೀದಿಯ ಡೀಲ್ ಅನ್ನು ಮಾಡಿದೆ. ಈ ಪೈಕಿ 40 A350 ವಿಸ್ತಾರವಾದ ವಿಮಾನವಾಗಿದೆ, 210 ಸಣ್ಣ ಗಾತ್ರದ ವಿಮಾನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. "ಏರ್‌ಬಸ್‌ಗೆ ಇದು ಏರ್ ಇಂಡಿಯಾಕ್ಕೆ ಸಹಾಯ ಮಾಡಲಾಗುವ ಐತಿಹಾಸಿಕ ಘಟನೆಯಾಗಿದೆ," ಎಂದು ಏರ್‌ಬಸ್ ಸಿಇಒ ಗ್ಯುಲ್ಯಾಮ್ ಫೌರಿ, ಪ್ರಧಾನಿ ಮೋದಿ, ರತನ್ ಟಾಟಾ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್, ಇತರೆ ನಾಯಕರುಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ತಿಳಿಸಿದ್ದಾರೆ. "ಭಾರತ ಮತ್ತು ಫ್ರಾನ್ಸ್‌ನ ಸ್ನೇಹ ಭಾಂದ್ಯವ್ಯದಲ್ಲಿ ಈ ಒಪ್ಪಂದವು ಒಂದು ಮೈಲಿಗಲ್ಲು," ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ತಿಳಿಸಿದ್ದಾರೆ. ಈ ಸಭೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ, ಟಾಟಾ ಸನ್ಸ್ ಚೇರ್‌ಮನ್ ಎನ್ ಚಂದ್ರಶೇಖರನ್ ಕೂಡಾ ಇದ್ದರು.
ಯಾವೆಲ್ಲ ವಿಮಾನ ಖರೀದಿಯ ಡೀಲ್?
ಏರ್‌ಬಸ್‌ನ A350ನಲ್ಲಿ ಎರಡು ವರ್ಜನ್‌ಗಲಿದೆ. ಒಂದು A350-900 ಮತ್ತೊಂದು A350-1000 ಆಗಿದೆ. ಏರ್‌ಬಸ್‌ನ ಕಡಿಮೆ ವಿಸ್ತಾರದ ವಿಮಾನದಲ್ಲಿ A320 ಮತ್ತು A220 ವಿಮಾನಗಳು ಇರಲಿದೆ. ಭಾರತದಲ್ಲಿ ಈಗಾಗಲೇ ಹಲವಾರು ಏರ್‌ಲೈನ್ ಸಂಸ್ಥೆಗಳ ಬಳಿ A320 ಶೈಲಿಯ ವಿಮಾನಗಳಿದೆ. ಇನ್ನು ಬೋಯಿಂಗ್ ವಿಮಾನ ಖರೀದಿಯ ಬಗ್ಗೆ ಲೀಸ್ಟ್ ಅನ್ನು ನೀಡಲಾಡಗಿದೆ. 20 ಬೋಯಿಂಗ್ 787, 10 ಬೋಯಿಂಗ್ 777-9 ವಿಸ್ತಾರವಾದ ವಿಮಾನ, ಮತ್ತು 190 ಬೋಯಿಂಗ್ 737 MAX ವಿಮಾನ ಖರೀದಿಯ ಮಾತುಕತೆ ನಡೆದಿದೆ. ಇನ್ನು ಏರ್ ಇಂಡಿಯಾದ ಉದ್ಯೋಗಿಗಳ ಸಮವಸ್ತ್ರವನ್ನು ಕೂಡಾ ಬದಲಾವಣೆ ಮಾಡುವ ಸಾಧ್ಯತೆಯಿದೆ. ಕಳೆದ ತಿಂಗಳು 400 ಮಿಲಿಯನ್ ಡಾಲರ್ ವ್ಯಯಿಸಿ ವಿಮಾನದಲ್ಲಿ ಹಲವಾರು ಬದಲಾವಣೆಗಳನ್ನು ಏರ್ ಇಂಡಿಯಾ ಮಾಡಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications