ಭಾರ್ತಿ ಏರ್‌ಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಗೋಪಾಲ್ ವಿಟ್ಟಲ್ 2022-23ರ ಹಣಕಾಸು ವರ್ಷದಲ್ಲಿ ಒಟ್ಟು 16.84 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆದಿದ್ದಾರೆ. ಈ ಸಂಭಾವನೆಯು ಈ ಹಿಂದಿನ ಹಣಕಾಸು ವರ್ಷದಲ್ಲಿ ಪಡೆದ ಸಂಭಾವನೆಗಿಂತ ಸುಮಾರು ಶೇಕಡ 10.39ರಷ್ಟು ಹೆಚ್ಚಳವಾಗಿದೆ.
ಸಂಭಾವನೆಯಲ್ಲಿ ಸಂಬಳ ಮತ್ತು ಭತ್ಯೆಗಳು 10.09 ಕೋಟಿ ರೂಪಾಯಿ ಮತ್ತು 6.74 ಕೋಟಿ ರೂಪಾಯಿಗಳ ಕಾರ್ಯನಿರ್ವಹಣೆ ಆಧಾರದಲ್ಲಿ ನೀಡಲಾಗುವ ಪ್ರೋತ್ಸಾಹ ನಿಧಿ ಅಥವಾ ಇನ್‌ಸೆಂಟಿವ್, ಇತರೆ ಮೊತ್ತಗಳು ಸೇರಿದೆ. 2022-23 ರ ಭಾರ್ತಿ ಏರ್‌ಟೆಲ್‌ನ ವಾರ್ಷಿಕ ವರದಿಯ ಪ್ರಕಾರ, "ಗೋಪಾಲ್ ವಿಟ್ಟಲ್ ಅವರ ಸಂಭಾವನೆಯು ಹಣಕಾಸು ವರ್ಷ 2022-23 ರ ಅವಧಿಯಲ್ಲಿ ಸ್ಟಾಕ್ ಎಲ್ಲವೂ ಸೇರಿದಂತೆ 137,857,311 ರೂಪಾಯಿಗಳು ಆಗಿದೆ."

ವರದಿಯ ಪ್ರಕಾರ, ಗೋಪಾಲ್ ವಿಟ್ಟಲ್ ಅವರ ವಾರ್ಷಿಕ ಸಂಭಾವನೆಯು ಭಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಸಂಭಾವನೆಗಿಂತ ಅಧಿಕವಾಗಿದೆ. ಸುನಿಲ್ ಭಾರ್ತಿ ಮಿತ್ತಲ್ ಸಂಭಾವನೆಯು 16.77 ಕೋಟಿ ರೂಪಾಯಿ ಆಗಿದೆ. ಹಣಕಾಸು ವರ್ಷ 2022ಕ್ಕೆ ನಾವು ಹೋಲಿಕೆ ಮಾಡಿದರೆ ಸುನಿಲ್ ಭಾರ್ತಿ ಮಿತ್ತಲ್ ವಾರ್ಷಿಕ ವೇತನ ಮತ್ತು ಭತ್ಯೆಗಳು ಈ ಹಣಕಾಸು ವರ್ಷದಲ್ಲಿ ಹೆಚ್ಚಳವಾಗಿದೆ.
ಈ ಹಿಂದಿನ ಹಣಕಾಸು ವರ್ಷದಲ್ಲಿ ಸುನಿಲ್ ಭಾರ್ತಿ ಮಿತ್ತಲ್ ಸಂಭಾವನೆ 10.06 ಕೋಟಿ ರೂಪಾಯಿ ಆಗಿದೆ. ಆದರೆ ಹಣಕಾಸು ವರ್ಷ 2023ರಲ್ಲಿ ಸುನಿಲ್ ಭಾರ್ತಿ ಮಿತ್ತಲ್ ವಾರ್ಷಿಕ ಸಂಭಾವನೆಯು 16.77 ಕೋಟಿ ರೂಪಾಯಿ ಆಗಿದ್ದು, ಈ ಪೈಕಿ 10.06 ಕೋಟಿ ರೂಪಾಯಿ ಸಂಬಳ ಮತ್ತು ಭತ್ಯೆ ಆಗಿದೆ. 4.5 ಕೋಟಿ ರೂಪಾಯಿ ಪಿಎಲ್‌ಐ, 2.2 ಕೋಟಿ ರೂಪಾಯಿ ಪರ್ಕ್ವಿಸಿಟ್ ಒಳಗೊಂಡಿದೆ.
ವಾರ್ಷಿಕ ವರದಿಯಲ್ಲಿ ಗೋಪಾಲ್ ವಿಟ್ಟಲ್ ಹೇಳಿದ್ದೇನು?
"ನಾವು ನಮ್ಮ ನೆಟ್‌ವರ್ಕ್‌ಗೆ 23.3 ಮಿಲಿಯನ್ 4ಜಿ ಗ್ರಾಹಕರನ್ನು ಸೇರಿಸಿದ್ದೇವೆ. ನಾವು ಉದ್ಯಮದಲ್ಲಿ ಉತ್ತಮ ಸ್ಥಾನವನ್ನು ಹೊಂದಿದ್ದೇವೆ. ಹಣಕಾಸು ವರ್ಷ 2022-23ರ ನಾಲ್ಕನೇ ತ್ರೈಮಾಸಿಕದಲ್ಲಿ ನಮ್ಮ ಎಆರ್‌ಪಿಯು 193 ರೂಪಾಯಿಗೆ ಏರಿಕೆಯಾಗಿದೆ. ನಮ್ಮ ನೆಟ್‌ವರ್ಕ್ ಇಲ್ಲದ ಗ್ರಾಮಗಳಲ್ಲಿ ನಮ್ಮ ನೆಟ್‌ವರ್ಕ್ ವಿಸ್ತರಣೆಯ ಕಾರ್ಯವನ್ನು ನಾವು ಮಾಡುತ್ತಿದ್ದೇವೆ, ಇದುವೇ ನಮ್ಮ ಮೊದಲ, ಪ್ರಮುಖ ಆದ್ಯತೆಯಾಗಿದೆ," ಎಂದು ತಿಳಿಸಿದ್ದಾರೆ.
ಇನ್ನು ಏರ್‌ಟೆಲ್ ಬ್ರಾಡ್‌ಬ್ಯಾಂಡ್ ವಿಚಾರಕ್ಕೆ ನಾವು ಬಂದಾಗ ವೇಗವು ಮುಂದುವರಿದಿದೆ. ಬ್ರಾಡ್‌ಬ್ಯಾಂಡ್ ನಿವ್ವಳ ಆದಾಯಕ್ಕೆ ಹೆಚ್ಚುವರಿ ಕೊಡುಗೆಯನ್ನು ನೀಡಿದೆ. ಡಿಟಿಎಚ್‌ನಲ್ಲಿ ವಿಶಾಲವಾದ ಮಾರುಕಟ್ಟೆ ಇದ್ದರೂ ಕೂಡಾ ಉದ್ಯಮವು ವಿಸ್ತಾರಗೊಳ್ಳುತ್ತಿದೆ," ಎಂದು ಹೇಳಿದ್ದಾರೆ.


Click it and Unblock the Notifications