ಅಕ್ಷಯ ತೃತೀಯವನ್ನು ಎಂದಿಗೂ ಕೂಡಾ ಹಿಂದೂಗಳಲ್ಲಿ ಪವಿತ್ರ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ನಾವು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿ ಮಾಡಿದರೆ, ನಮ್ಮಲ್ಲಿ ಸಂಪತ್ತು ವೃದ್ಧಿಯಾಗಲಿದೆ ಎಂಬ ನಂಬಿಕೆಯಿದೆ. ಹಾಗೆಯೇ ಅದೃಷ್ಟ ನಮ್ಮದಾಗಲಿದೆ. ಈ ನಂಬಿಕೆಯ ಭಾಗವಾಗಿ ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡುವುದು ಸಂಪ್ರದಾಯವಾಗಿದೆ.
ಸಾಂಪ್ರಾದಾಯಿಕವಾಗಿ ಅಕ್ಷಯ ತೃತೀಯ ದಿನ ಚಿನ್ನವನ್ನು ಖರೀದಿ ಮಾಡಲಾಗುತ್ತದೆ. ಆದರೆ ಫಿಸಿಕಲ್ ಗೋಲ್ಡ್ ಅಥವಾ ಚಿನ್ನದ ಆಭರಣ, ನಾಣ್ಯ, ಬಾರ್‌ಗಳಿಗಿಂತ ಭಿನ್ನವಾಗಿ ನಮ್ಮಲ್ಲಿ ಬೇರೆ ಆಯ್ಕೆಗಳು ಕೂಡಾ ಇದೆ ಎಂಬುವುದು ನಿಮಗೆ ತಿಳಿದಿದೆಯೇ?. ಹೌದು, ಚಿನ್ನದ ಆಭರಣಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಕಷ್ಟ ಎಂಬವರಿಗೆ ಡಿಜಿಟಲ್ ಚಿನ್ನದ ಆಯ್ಕೆ ಕೂಡಾ ಇದೆ. ಹೌದು, ನೀವು ಆನ್‌ಲೈನ್ ಮೂಲಕ ಡಿಜಿಟಲ್ ಚಿನ್ನವನ್ನು ಖರೀದಿ ಮಾಡಬಹುದು.

ಪ್ರಸ್ತುತ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ನಾವು ಎಲ್ಲದನ್ನು ಡಿಜಿಟಲ್ ರೂಪದಲ್ಲಿ ಪಡೆಯಬಹುದಾಗಿದೆ. ಅತೀ ಅಮೂಲ್ಯವಾದ ಲೋಹವಾದ ಚಿನ್ನವನ್ನು ಕೂಡಾ ಆನ್‌ಲೈನ್ ಮೂಲಕ ಖರೀದಿ ಮಾಡಬಹುದಾಗಿದೆ. ಆದರೆ ಈ ಚಿನ್ನವು ಡಿಜಿಟಲ್ ರೂಪದಲ್ಲಿರಲಿದೆ. ಪ್ರಸ್ತುತ ನಾವು ಫಿಸಿಕಲ್ ಚಿನ್ನ ಖರೀದಿ ಮಾಡುವುದಕ್ಕಿಂತ ಡಿಜಿಟಲ್ ಚಿನ್ನ ಖರೀದಿ ಮಾಡುವುದು ಸುರಕ್ಷಿತವಾಗಿದೆ.
ನಾವು ಒಂದು ರೂಪಾಯಿಯಿಂದ ಹಿಡಿದು ಯಾವುದೇ ಮಾನದಂಡವಿಲ್ಲದೆ ಎಷ್ಟು ಮೊತ್ತದವರೆಗೂ ಡಿಜಿಟಲ್ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಸಾಮಾನ್ಯವಾಗಿ ಚಿನ್ನ ಖರೀದಿ ಮಾಡುವಾಗ ಮೇಕಿಂಗ್ ಚಾರ್ಜ್ ನೀಡಬೇಕಾಗುತ್ತದೆ. ಆದರೆ ಡಿಜಿಟಲ್ ಚಿನ್ನವನ್ನು ನಾವು ಖರೀದಿ ಮಾಡಿದರೆ, ಮೇಕಿಂಗ್ ಚಾರ್ಜ್ ನೀಡುವ ಯಾವುದೇ ತಲೆ ಬಿಸಿಯಿಲ್ಲ.
ಹಾಗೆಯೇ ನಾವು ಈ ಡಿಜಿಟಲ್ ಗೋಲ್ಡ್ ಅನ್ನು ಜ್ಯುವೆಲ್ಲರಿಯಾಗಿ ಬದಲಾವಣೆ ಮಾಡಿಕೊಳ್ಳುವ ಆಯ್ಕೆಯಿದೆ. ನಾಣ್ಯ ಅಥವಾ ಬಾರ್‌ಗಳಾಗಿಯೂ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಆದರೆ ಅದಕ್ಕಾಗಿ ನೀವು ಮೇಕಿಂಗ್ ಚಾರ್ಜ್ ಪಾವತಿಸಬೇಕಾಗುತ್ತದೆ. ಡೆಲಿವರಿ ಶುಲ್ಕವನ್ನು ಕೂಡಾ ಪಾವತಿಸಬೇಕಾಗುತ್ತದೆ. ನೀವು ಈ ಅಕ್ಷಯ ತೃತೀಯ ದಿನ ಡಿಜಿಟಲ್ ಗೋಲ್ಡ್ ಅನ್ನು ಆನ್‌ಲೈನ್ ಮೂಲಕ ಖರೀದಿಸುವುದು ಹೇಗೆ ಎಂದು ಇಲ್ಲಿ ವಿವರಿಸಿದ್ದೇವೆ.
ಆನ್‌ಲೈನ್ ಮೂಲಕ ಡಿಜಿಟಲ್ ಚಿನ್ನ ಖರೀದಿಸುವುದು ಹೇಗೆ?
ಎಂಎಂಟಿಸಿ-ಪಿಎಎಂಪಿ, ಸೇಫ್‌ಗೋಲ್ಡ್, ಆಗ್‌ಮಾಂಟ್ ಗೋಲ್ಡ್ ಮೊದಲಾದವುಗಳು ಆನ್‌ಲೈನ್ ಮೂಲಕ ಡಿಜಿಟಲ್ ಚಿನ್ನವನ್ನು ಮಾರಾಟ ಮಾಡುತ್ತದೆ. ನೀವು ಈ ಸಂಸ್ಥೆಯ ವೆಬ್‌ಸೈಟ್ ಮೂಲಕ ಅಥವಾ ಪಾವತಿ ಆಪ್‌ಗಳ ಮೂಲಕ ಡಿಜಿಟಲ್ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಪಾವತಿ ಆಪ್‌ಗಳಾದ ಪೇಟಿಎಂ, ಫೋನ್‌ಪೇ, ಗೂಗಲ್ ಪೇ ಮೂಲಕ ಡಿಜಿಟಲ್ ಚಿನ್ನವನ್ನು ಖರೀದಿಸಬಹುದು.
ಎಂಎಂಟಿಸಿ-ಪಿಎಎಂಪಿ ನಿಮಗೆ ಡಿಜಿಟಲ್ ಚಿನ್ನಕ್ಕಾಗಿ ಮೂರು ಆಯ್ಕೆಗಳನ್ನು ನೀಡುತ್ತದೆ:
* ಎಂಎಂಟಿಸಿ-ಪಿಎಎಂಪಿಯಿಂದ ರಚಿಸಲಾದ ಚಿನ್ನದ ಬಾರ್‌ಗಳು ಮತ್ತು ನಾಣ್ಯಗಳನ್ನು ತೆಗೆದುಕೊಳ್ಳುವ ಮೂಲಕ ಡಿಜಿಟಲ್ ಚಿನ್ನವನ್ನು ಪಡೆದುಕೊಳ್ಳಿ
* ನಿಮಗೆ ಬೇಕಾದಾಗ ನಿಮ್ಮ ಚಿನ್ನವನ್ನು ಡಿಜಿಟಲ್ ಮೂಲಕ ಎಂಎಂಟಿಸಿ -ಪಿಎಎಂಪಿಗೆ ಮಾರಾಟ ಮಾಡಿ. ಕೂಲಿಂಗ್ ಅವಧಿಯ ನಂತರ (72 ಗಂಟೆಗಳು) ತ್ವರಿತ ಬ್ಯಾಂಕ್ ವರ್ಗಾವಣೆ ಪಡೆಯಿರಿ.
* ನಿಮ್ಮ ಡಿಜಿಟಲ್ ಚಿನ್ನವನ್ನು ನೀವು ಪ್ರೀತಿಪಾತ್ರರಿಗೆ ವರ್ಗಾಯಿಸಬಹುದು. ಅವರ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಎಂಎಂಟಿಸಿ -ಪಿಎಎಂಪಿನಲ್ಲಿ ನೋಂದಾಯಿಸಲು ನೀವು ಅವರಿಗೆ ಆಹ್ವಾನವನ್ನು ಕಳುಹಿಸಬೇಕಾಗಿದೆ.
ಪಾವತಿ ಆಪ್‌ಗಳ ಮೂಲಕ ಚಿನ್ನ ಖರೀದಿ
ಪೇಟಿಎಂ: ಭಾರತೀಯ ಪ್ರಮುಖ ಪಾವತಿ ಅಪ್ಲಿಕೇಶನ್ ಪೇಟಿಎಂ ಎಂಎಂಟಿಸಿ -ಪಿಎಎಂಪಿಯ ಡಿಜಿಟಲ್ ಚಿನ್ನವನ್ನು ಖರೀದಿಸಲು ಅವಕಾಶವನ್ನು ನೀಡುತ್ತದೆ. ನೀವು ಕೇವಲ 'ಸ್ಟಾಕ್ಸ್ ಮತ್ತು ವೆಲ್ತ್' (Stocks and Wealth) ಐಕಾನ್ ಅಡಿಯಲ್ಲಿ 'Paytm Gold' (ಪೇಟಿಎಂ ಗೋಲ್ಡ್) ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ನೀವು ಖರೀದಿಸಲು ಬಯಸುವ ಚಿನ್ನದ ಮೌಲ್ಯ/ಗುಣಮಟ್ಟವನ್ನು ಆಯ್ಕೆ ಮಾಡಿಕೊಂಡರೆ ಪ್ರಕ್ರಿಯೆ ಪೂರ್ಣವಾಗಲಿದೆ.
ಗೂಗಲ್ ಪೇ: ಗೂಗಲ್ ಪೇ ಡಿಜಿಟಲ್ ಚಿನ್ನದ ವಹಿವಾಟುಗಳಿಗೆ ಅನುಮತಿ ನೀಡುತ್ತದೆ. ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿಸಿದ ಚಿನ್ನವನ್ನು ಎಂಎಂಟಿಸಿ -ಪಿಎಎಂಪಿ ನಿರ್ವಹಿಸುವ ಚಿನ್ನದ ಸಂಗ್ರಹಣೆ ಯೋಜನೆ ಅಥವಾ GAP ನಲ್ಲಿ ಸಂಗ್ರಹಿಸಲಾಗುತ್ತದೆ. ಗೂಗಲ್ ಪೇನಲ್ಲಿನ ಗೋಲ್ಡ್ ಲಾಕರ್‌ನಲ್ಲಿ ಮಾಲೀಕರು ಎಲ್ಲಾ ಡಿಜಿಟಲ್ ಚಿನ್ನ-ಸಂಬಂಧಿತ ವಹಿವಾಟುಗಳನ್ನು ಪರಿಶೀಲಿಸಬಹುದು.
ಫೋನ್‌ಪೇ: ಫೋನ್‌ಪೇನಲ್ಲಿ ಸದಸ್ಯರಿಗೆ 1 ರೂಪಾಯಿಗಳಷ್ಟು ಕಡಿಮೆ ಹೂಡಿಕೆ ಮಾಡಲು ಮತ್ತು ಕಾಲಾನಂತರದಲ್ಲಿ ಚಿನ್ನವನ್ನು ಸಂಗ್ರಹಿಸಲು ಅವಕಾಶವಿದೆ. ನೀವು ಎಂಎಂಟಿಸಿ -ಪಿಎಎಂಪಿ, ಸೇಫ್‌ಗೋಲ್ಡ್ ಚಿನ್ನವನ್ನು ಖರೀದಿ ಮಾಡಬಹುದು.


Click it and Unblock the Notifications