Akshaya Tritiya: ಅಕ್ಷಯ ತೃತೀಯ ದಿನ ಹೂಡಿಕೆಗೆ ಬೆಸ್ಟ್ ಆಯ್ಕೆಗಳಿವು

ಅಕ್ಷಯ ತೃತೀಯವನ್ನು ಚಿನ್ನ, ಬೆಳ್ಳಿ ಮೊದಲಾದ ಅತೀ ಅಮೂಲ್ಯವಾದ ಲೋಹಗಳನ್ನು ಖರೀದಿ ಮಾಡಲು ಅತೀ ಪವಿತ್ರವಾದ ದಿನ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿಯೇ ಅಕ್ಷಯ ತೃತೀಯ ದಿನವೇ ಚಿನ್ನ ಖರೀದಿ ಮಾಡಲು ಜನರು ಮುಂದಾಗುತ್ತಾರೆ. ಅದಕ್ಕೆ ಮುಖ್ಯ ಕಾರಣ ಈ ದಿನ ಚಿನ್ನ ಖರೀದಿ ಮಾಡಿದರೆ, ನಮ್ಮಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಈ ನಡುವೆ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಚಿನ್ನದ ಬೆಲೆಯು ಸಾರ್ವಕಾಲಿಕವಾಗಿ ಏರಿಕೆಯಾಗಿದೆ. ಈ ನಡುವೆ ಚಿನ್ನವನ್ನು ನಾವು ಖರೀದಿ ಮಾಡುವ ಬೆಸ್ಟ್ ದಿನವಾದ ಅಕ್ಷಯ ತೃತೀಯ ಬಂದಿದೆ. ಈ ಹಿಂದೆ ಚಿನ್ನದ ದರ ಹೆಚ್ಚಳವಾಗಿದ್ದಾಗಲೂ ಚಿನ್ನವನ್ನು ಖರೀದಿ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಈ ವರ್ಷವೂ ಬೇಡಿಕೆ ಇರಬಹುದು ಎಂದು ನಂಬಲಾಗಿದೆ.

 Akshaya Tritiya: ಅಕ್ಷಯ ತೃತೀಯ ದಿನ ಹೂಡಿಕೆಗೆ ಬೆಸ್ಟ್ ಆಯ್ಕೆಗಳಿವು

ಅಕ್ಷಯ ತೃತೀಯವನ್ನು ಆಕ್ತಿ ಅಥವಾ ಅಖಾ ತೀಜ್ ಅಥವಾ ಅಕ್ಷಯ ತದಿಗೆ ಎಂದು ಕೂಡಾ ಕರೆಯಲಾಗುತ್ತದೆ. ಅಕ್ಷಯ ತೃತೀಯ ಹಿಂದೂಗಳಿಗೆ ಅತೀ ಪವಿತ್ರವಾದ ದಿನವಾಗಿದೆ. ವೈಶಾಖ ತಿಂಗಳ ಮೂರನೇ ದಿನದಂದು ಅಕ್ಷಯ ತೃತೀಯವನ್ನು ಆಚರಣೆ ಮಾಡಲಾಗುತ್ತದೆ.

ಅಕ್ಷಯ ತೃತೀಯ ಬಗ್ಗೆ ಪ್ರತಿಕೃಯೇ ನೀಡಿದ ಎಂಜಲ್ ಒನ್ ಲಿಮಿಟೆಡ್‌ನ ಪ್ರಥಮೇಶ್ ಮಲ್ಯ, "ಯಾವುದೇ ಹೂಡಿಕೆದಾರರಾದರೂ ಚಿನ್ನದ ಮೇಲೆ ಮಾಡುವ ಹೂಡಿಕೆಯನ್ನು ಅತೀ ಸುರಕ್ಷಿತ ಹೂಡಿಕೆ ಎಂದು ನಂಬುತ್ತಾರೆ. ದೀರ್ಘಾವಧಿಯ ಹೂಡಿಕೆ ವಿಚಾರಕ್ಕೆ ಬಂದಾಗ ಹೂಡಿಕೆದಾರರ ಆಯ್ಕೆ ಚಿನ್ನ ಆಗಿರುತ್ತದೆ," ಎಂದು ತಿಳಿಸಿದ್ದಾರೆ. ಅಕ್ಷಯ ತೃತೀಯ ದಿನ ಚಿನ್ನದ ಮೇಲೆ ಹೂಡಿಕೆ ಮಾಡುವ ಉತ್ತಮ ಆಯ್ಕೆಗಳು ಈ ಕೆಳಗಿದೆ.

ಚಿನ್ನದ ಆಭರಣ, ನಾಣ್ಯ: ನೀವು ಅಕ್ಷಯ ತೃತೀಯ ದಿನ ಯಾವುದೇ ಆಭರಣ ಮಳಿಗೆಗಳಲ್ಲಿ ಚಿನ್ನದ ಆಭರಣಗಳನ್ನು ಖರೀದಿ ಮಾಡಬಹುದು. ಸಾಮಾನ್ಯವಾಗಿ ಎಲ್ಲಾ ಮಳಿಗೆಗಳಲ್ಲಿ ಹಾಲ್‌ಮಾರ್ಕ್ ಇರುವ ಚಿನ್ನವನ್ನೆ ಮಾರಾಟ ಮಾಡಲಾಗುತ್ತದೆ. ಇದನ್ನು ಹೊರತುಪಡಿಸಿ ನೀವು ಚಿನ್ನದ ನಾಣ್ಯ, ಚಿನ್ನದ ಬಾರ್‌ಗಳನ್ನು ಖರೀದಿ ಮಾಡಬಹುದು. ಚಿನ್ನದ ನಾಣ್ಯಗಳನ್ನು ನೀವು ಜ್ಯುವೆಲ್ಲರಿಗಳಲ್ಲಿ ಅಥವಾ ಬ್ಯಾಂಕ್‌ಗಳಲ್ಲಿ ಖರೀದಿಸಬಹುದು.

ಗೋಲ್ಡ್‌ ಇಟಿಎಫ್: ಸುರಕ್ಷತಾ ಕಾರಣಗಳಿಂದಾಗಿ ಯಾರೂ ಚಿನ್ನವನ್ನು ಖರೀದಿ ಮಾಡಿ ಮನೆಯಲ್ಲಿ ಅಥವಾ ಲಾಕರ್‌ಗಳಲ್ಲಿ ಇಟ್ಟು ಕೊಳ್ಳಲು ಬಯಸುವುದಿಲ್ಲವೋ ಅವರಿಗೆ ಉತ್ತಮ ಆಯ್ಕೆ ಗೋಲ್ಡ್‌ ಇಟಿಎಫ್. ಇಟಿಎಫ್ ಹೂಡಿಕೆ ಎಂದಿಗೂ ಕೂಡ ಉತ್ತಮ ಹೂಡಿಕೆ ಆಯ್ಕೆ ಎಂಬುವುದು ತಜ್ಞರ ಅಭಿಪ್ರಾಯ.
ಅದಕ್ಕಾಗಿ ನಿಮ್ಮಲ್ಲಿ ಡಿಮ್ಯಾಟ್ ಅಕೌಂಟ್ ಇರಬೇಕಾಗುತ್ತದೆ. ಆನ್‌ಲೈನ್‌ನಲ್ಲಿ ಹಲವಾರು ಗೋಲ್ಡ್‌ ಇಟಿಎಫ್‌ಗಳು ಲಭ್ಯವಿದೆ. ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಗದ ಚಿನ್ನವನ್ನು ಖರೀದಿಸಬಹುದು. ಇದು ಯಾವುದೇ ತೊಂದರೆ ಇಲ್ಲದೆ ಚಿನ್ನವನ್ನು ಖರೀದಿ ಮಾಡಿ ಸುರಕ್ಷಿತವಾಗಿ ಇರಿಸುವ ವಿಧಾನವಾಗಿದೆ.

ಕಮೋಡಿಟಿ ಎಕ್ಸ್‌ಚೇಂಜ್‌ ಮೂಲಕ ಗೋಲ್ಡ್‌ ಟ್ರೇಡಿಂಗ್‌: ನೀವು ಗೋಲ್ಡ್‌ ಟ್ರೇಡಿಂಗ್ ಮಾರುಕಟ್ಟೆಗಳಾದ ಎಂಸಿಎಕ್ಸ್‌, ಎನ್‌ಸಿಡಿಇಎಕ್ಸ್ ಮತ್ತು ಐಸಿಇಕ್ಸ್‌ಗಳಲ್ಲಿ ಚಿನ್ನ ಖರೀದಿ ಮಾಡಬಹುದು ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಇದಕ್ಕೂ ಕೂಡಾ ನೀವು ಡಿಮ್ಯಾಟ್ ಖಾತೆಯನ್ನು ಹೊಂದುವುದು ಮುಖ್ಯ. ಫ್ಯೂಚರ್ ಗೋಲ್ಡ್, ಸ್ಪಾಟ್ ಗೋಲ್ಡ್ ಹೂಡಿಕೆ ಮಾಡಲು ಬ್ರೋಕರೇಜ್ ಶುಲ್ಕ ನೀಡಬೇಕಾಗುತ್ತದೆ.

ಇ-ಗೋಲ್ಡ್ ಖರೀದಿ: ಡಿಜಿಟಲ್‌ ರೂಪದಲ್ಲಿ ಚಿನ್ನವನ್ನು ಇಟ್ಟುಕೊಳ್ಳುವ ಇನ್ನೊಂದು ವಿಧಾನವೇ ಇ-ಗೋಲ್ಡ್. ಇಟಿಎಫ್ ಖರೀದಿಗೂ ಇ-ಗೋಲ್ಡ್‌ಗೂ ವ್ಯತ್ಯಾಸವಿದೆ. ಇಟಿಎಫ್‌ಗಳಲ್ಲಿ ಹೋಲ್ಡಿಂಗ್ ಸಂಸ್ಥೆಗಳು ಚಿನ್ನವನ್ನು ಹೊಂದಿರುತ್ತದೆ. ಆದರೆ ಇ-ಗೋಲ್ಡ್‌ನಲ್ಲಿ ನೀವೇ ಚಿನ್ನದ ಮಾಲೀಕರಾಗಿರುತ್ತೀರಿ.

ಈಕ್ವಿಟಿ ಆಧಾರಿತ ಗೋಲ್ಡ್ ಫಂಡ್‌ಗಳು: ಚಿನ್ನವನ್ನು ಮಾರಾಟ ಮಾಡುವ, ಗಣಿಗಾರಿಕೆ ಮೊದಲಾದ ಚಿನ್ನ ತಯಾರಿಕಾ ಪ್ರಕ್ರಿಯೆಯನ್ನು ನಡೆಸುವ ಸಂಸ್ಥೆಗಳ ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡಬಹುದು. ಇದಕ್ಕೂ ಕೂಡ ಮುಖ್ಯವಾಗಿ ಬೇಕಾಗಿರುವುದು ಡಿಮ್ಯಾಟ್ ಖಾತೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+