ಹಾಲಿವುಡ್ ಸೀರಿಸ್ ಹಾರ್ಟ್ ಆಫ್ ಸ್ಟೋನ್‌ನಲ್ಲಿ ಕಾಣಿಸಿಕೊಂಡಿರುವ ಭಾರತೀಯ ನಟಿ ಆಲಿಯಾ ಭಟ್, ಈಗಾಗಲೇ ಗಲ್ಲಿ ಬಾಯ್, ಗಂಗೂಬಾಯಿ ಕಥಿವಾಡಿ, ಡಾರ್ಲಿಂಗ್ಸ್ ಮೊದಲಾದ ಸಿನಿಮಾದಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. 20 ಹೆಚ್ಚು ಅಧಿಕ ಗಳಿಕೆಯ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಈ ಪೈಕಿ ಏಳು ಚಿತ್ರಗಳು 100 ಕೋಟಿ ರೂಪಾಯಿಗೂ ಅಧಿಕ ಗಳಿಕೆಯನ್ನು ಪಡೆದಿದೆ. ಸಿನಿಮಾದಲ್ಲಿ ಮಾತ್ರವಲ್ಲ ಹಲವಾರು ಉದ್ಯಮ, ವ್ಯವಹಾರಗಳಿಂದಲೂ ಆಲಿಯಾ ಭಟ್ ಆದಾಯವನ್ನು ಗಳಿಸುತ್ತಿದ್ದಾರೆ. ಹಾಗೆಯೇ ಐಷಾರಾಮಿ ವಸ್ತುಗಳನ್ನು ಕೂಡಾ ಆಲಿಯಾ ಹೊಂದಿದ್ದಾರೆ. ಆಲಿಯಾ ಹೂಡಿಕೆ, ಸಂಸ್ಥೆ, ನಿವ್ವಳ ಆದಾಯ, ಕಾರುಗಳು, ಇತರೆ ವಿವರ ಇಲ್ಲಿದೆ ಮುಂದೆ ಓದಿ....

ಆಲಿಯಾ ಭಟ್ ಹೂಡಿಕೆ
ಆಲಿಯಾ ಭಟ್‌ನ ಎಡ್-ಎ-ಮಮ್ಮಾ (Ed-a-Mamma) ಪ್ರಸ್ತುತ 150 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಪ್ರಾರಂಭವಾದ ಒಂದು ವರ್ಷದೊಳಗೆಯೇ ಇಷ್ಟೊಂದು ಬೆಳವಣಿಗೆಯನ್ನು ಕಂಡಿದೆ. ಆಲಿಯಾ ಆರ್ಥಿಕ ಸಾಮರ್ಥ್ಯವು ಏಂಜೆಲ್ ಹೂಡಿಕೆಗಳಿಗೂ ವ್ಯಾಪಿಸಿದೆ. ಐಐಟಿ ಕಾನ್ಪುರ-ಬೆಂಬಲಿತ ವೆಲ್‌ನೆಸ್ ಕಂಪನಿಯಾದ ಪೂಲ್ ಡಾಟ್ ಕಾಮ್ ಎಂಬ ಬ್ರ್ಯಾಂಡ್‌ನಲ್ಲಿ ಹೂಡಿಕೆಗಳನ್ನು ಹೊಂದಿದ್ದಾರೆ.
ಎಷ್ಟು ಮೊತ್ತವನ್ನು ಹೂಡಿಕೆ ಮಾಡಿದ್ದಾರೆ ಎಂಬುವುದು ತಿಳಿದಿಲ್ಲ. ಆದರೆ ಆದಾಯವನನ್ನು ಗಳಿಸುವಂತಹ ಹೂಡಿಕೆ ಮಾಡಿದ್ದಾರೆ ಎಂಬುವುದು ಖಚಿತವಾಗಿದೆ. ಸ್ವತಃ ಪ್ರಭಾವಿ ಮತ್ತು ಯಶಸ್ವಿ ಮಹಿಳೆಯಾಗಿರುವ ಆಲಿಯಾ ಭಟ್, ವ್ಯಾಪಾರದಲ್ಲಿ ಇತರ ಮಹಿಳೆಯರನ್ನು ಸಬಲೀಕರಣಗೊಳಿಸಲು ಕ್ರಮವನ್ನು ಕೂಡಾ ತೆಗೆದುಕೊಂಡಿದ್ದಾರೆ.
ಜುಲೈ 2020 ರಲ್ಲಿ ಮಹಿಳೆಯರ ಒಡೆತನದಲ್ಲಿ ಪ್ರಾರಂಭವಾದ ನೈಕಾದಲ್ಲಿ ಆರಂಭಿಕ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ನೈಕಾದ ಬ್ಲಾಕ್‌ಬಸ್ಟರ್ ಪಬ್ಲಿಕ್ ಲೀಸ್ಟ್ ಸಮಯದಲ್ಲಿ ಅವರ ಹೂಡಿಕೆಯು ತಿಂಗಳೊಳಗೆ 10x ಗಿಂತ ಹೆಚ್ಚು 54 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಮತ್ತೊಂದು ಮಹಿಳಾ ಒಡೆತನದ ವ್ಯಾಪಾರ ಆಲಿಯಾ ಮುಂಬೈ ಮೂಲದ ವೈಯಕ್ತಿಕ ಸ್ಟೈಲಿಂಗ್ ಪ್ಲಾಟ್‌ಫಾರ್ಮ್ ಸ್ಟೈಲ್ ಕ್ರ್ಯಾಕರ್‌ನ ಹೂಡಿಕೆದಾರರಾಗಿದ್ದಾರೆ.
ನಟಿಯಾಗಿ ಭಾರಿ ಯಶಸ್ಸನ್ನು ಕಂಡ ಬಳಿಕ, ಆಲಿಯಾ ಭಟ್ ತನ್ನ ನೆಟ್‌ಫ್ಲಿಕ್ಸ್ ಹಿಟ್ 'ಡಾರ್ಲಿಂಗ್ಸ್' ಮೂಲಕ ನಟನಾ ಉದ್ಯಮದಿಂದ ನಿರ್ಮಾಪಕಿಯಾಗಿ ಬೆಳೆದರು. ಆಕೆಯ ವ್ಯಕ್ತಿತ್ವಕ್ಕೆ ಹೊಂದಿಕೆಯಾಗುವ 'ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್' ಎಂಬ ಹೆಸರಿನ ಪ್ರೊಡಕ್ಷನ್ ಹೌಸ್ ಅನ್ನು ಸಹ ಅವರು ಹೊಂದಿದ್ದಾರೆ.
ಆಲಿಯಾ ಭಟ್ ನಿವ್ವಳ ಆದಾಯ
ಆಕೆಯ ಅನೇಕ ಯಶಸ್ವಿ ಉದ್ಯಮಗಳಿಂದಾಗಿ ಆಕೆಯ ನಿವ್ವಳ ಮೌಲ್ಯವು 299 ಕೋಟಿ ರೂಪಾಯಿಗಳಿಗೆ ಏರಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಆಕೆಯು ಒಂದು ಸಿನಿಮಾದಲ್ಲಿ ನಟಿಸಲು 20 ಕೋಟಿ ರೂಪಾಯಿಯಷ್ಟು ಸಂಭಾವನೆಯನ್ನು ಪಡೆಯುತ್ತಾರೆ. ಹಾಗೆಯೇ ಬ್ರ್ಯಾಂಡ್ ಅಂಬಾಸಿಡರ್ ಆಗಿ, 1-2 ಕೋಟಿ ರೂಪಾಯಿಯಷ್ಟು ಶುಲ್ಕವನ್ನು ಪಡೆಯುತ್ತಾರೆ.
ಆಲಿಯಾ ಭಟ್ ಐಷಾರಾಮಿ ಮಹಲು ಮತ್ತು ಕಾರುಗಳು
ಆಲಿಯಾ ಭಟ್ ಅಪಾರ್ಟ್‌ಮೆಂಟ್ 13.11 ಕೋಟಿ ರೂಪಾಯಿಗಳಾಗಿದ್ದು, ಮುಂಬೈನ ಬಾಂದ್ರಾದ ಐಷಾರಾಮಿ ಪ್ರದೇಶದಲ್ಲಿದೆ. ವರದಿ ಪ್ರಕಾರ ಆಲಿಯಾ ಭಟ್ ಎರಡು ಮನೆಗಳನ್ನು ಹೊಂದಿದ್ದಾರೆ. ಆಲಿಯಾ ಭಟ್ ಬಿಎಂಡಬ್ಲ್ಯೂ 7 ಸಿರೀಸ್, ಆಡಿ ಎ6, ಆಡಿ ಎ7, ರೇಂಜ್ ರೋವರ್ ವೋಗ್ ಸೇರಿದಂತೆ ಹಲವಾರು ಕಾರುಗಳನ್ನು ಹೊಂದಿದ್ದಾರೆ. ಒಟ್ಟಾಗಿ 3 ಕೋಟಿ ರೂಪಾಯಿ ಮೌಲ್ಯದ ಕಾರುಗಳನ್ನು ಹೊಂದಿದ್ದಾರೆ.
ಆಲಿಯಾ ಭಟ್ 2022 ರಲ್ಲಿ ಟೈಮ್ 100 ಇಂಪ್ಯಾಕ್ಟ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗೆಯೇ ಹಲವಾರು ಸಿನಿಮಾಗಳಿಗೆ ಪುರಸ್ಕಾರಗಳನ್ನು ಪಡೆದಿದ್ದಾರೆ. ಆಲಿಯಾ ಚಲನಚಿತ್ರಗಳಲ್ಲಿ ನಟಿಸಿ ಯಶಸ್ವಿ ನಟಿ ಎನಿಸಿಕೊಂಡಿರುವ ಜೊತೆಗೆ ಸ್ಪೂರ್ತಿದಾಯಕ ಉದ್ಯಮಿಯೂ ಕೂಡಾ ಆಗಿದ್ದಾರೆ.


Click it and Unblock the Notifications