ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ-ನೀತಾ ಅಂಬಾನಿ ಹಿರಿಯ ಮಗ ಅಕಾಶ್ ಅಂಬಾನಿ ಪತ್ನಿ ಶ್ಲೋಕಾ ಮೆಹ್ತಾ ಎರಡನೇ ಮಗುವಿಗೆ ಜನ್ಮನೀಡಿದ್ದಾರೆ. ಈ ದಂಪತಿಗೆ ಮೇ 31, ಬುಧವಾರದಂದು ಹೆಣ್ಣು ಮಗು ಜನಿಸಿದೆ. ಅಕಾಶ್ ದಂಪತಿಗೆ ಈಗಾಗಲೇ ಒಂದು ಗಂಡು ಮಗುವಿದ್ದು, ಪೃಥ್ವಿ ಆಕಾಶ್ ಅಂಬಾನಿ ಎಂದು ಹೆಸರಿರಿಸಿದ್ದಾರೆ.
ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಮಗಳು, ಅಂಬಾನಿ ಫ್ಯಾಮಿಲಿಯ ಪುಟ್ಟ ರಾಜಕುಮಾರಿಯ ಸರ್ ಹೆಚ್.ಎನ್ ರಿಲಯನ್ಸ್ ಫೌಂಡೇಶನ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ ಜನಿಸಿದ್ದಾಳೆ. ಸರ್ ಹೆಚ್.ಎನ್ ರಿಲಯನ್ಸ್ ಫೌಂಡೇಶನ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ರಿಲಯನ್ಸ್ ಫೌಂಡೇಶನ್ ನಿರ್ವಹಣೆ ಮಾಡುತ್ತಿದೆ.

ಈ ಆಸ್ಪತ್ರೆಯೂ ಮುಂಬೈನ ಗಿರ್ಗಾಂವ್ ಪ್ರದೇಶದಲ್ಲಿದೆ. ಸರ್ ಹೆಚ್.ಎನ್ ರಿಲಯನ್ಸ್ ಫೌಂಡೇಶನ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ನ್ನು 1925 ರಲ್ಲಿ ಗೋರ್ಧಂದಾಸ್ ಭಗವಾನದಾಸ್ ನರೋತ್ತಮದಾಸ್ ಅವರು ಸ್ಥಾಪಿಸಿದರು. ಈ ಆಸ್ಪತ್ರೆಯನ್ನು 2014 ರಲ್ಲಿ ನವೀಕರಿಸಿ ಮತ್ತೆ ಸಾರ್ವಜನಿಕ ಬಳಕೆಗೆ ತೆರೆಯಲಾಯಿತು. ಜನಪ್ರಿಯವಾಗಿರುವ ಈ ಆಸ್ಪತ್ರೆಯನ್ನು ಹುರ್ಕಿಸೋಂದಾಸ್ ಆಸ್ಪತ್ರೆ ಅಥವಾ ರಿಲಯನ್ಸ್ ಆಸ್ಪತ್ರೆ ಎಂದು ಸ್ಥಳೀಯವಾಗಿ ಕರೆಯಲಾಗುತ್ತದೆ.
ಆಸ್ಪತ್ರೆಯ ಸಂಸ್ಥಾಪಕ ಗೋರ್ಧಂದಾಸ್ ಭಗವಾನದಾಸ್ ನರೋತ್ತಮ್‌ದಾಸ್ ಅವರು ಫಿಸಿಷಿಯನ್ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಇವರು ಹರ್ಕಿಸನ್ ನರೋತ್ತಮ್‌ದಾಸ್ ಆಸ್ಪತ್ರೆ ಎಂದು (ಇದು ಹುರ್ಕಿಸೊಂದಾಸ್ ನುರ್ರೋತಮ್‌ದಾಸ್ ಆಸ್ಪತ್ರೆ ಎಂದೂ ಕರೆಯಲ್ಪಡುತ್ತಿತ್ತು) ಹೆಸರಿಸಿದರು.
ಲೇಡಿ ವಿಲ್ಲಿಂಗ್ಡನ್ ಅವರು 1918 ರಲ್ಲಿ ಈ ಆಸ್ಪತ್ರೆಗೆ ಅಡಿಗಲ್ಲು ಹಾಕಿದ್ದು, ನಿರ್ಮಾಣ ಪೂರ್ಣಗೊಂಡ ನಂತರ ಅಂದರೆ 1925ರಲ್ಲಿ ಬಾಂಬೆಯ ಗವರ್ನರ್ ಲೆಸ್ಲಿ ವಿಲ್ಸನ್ ಅವರು ಉದ್ಘಾಟಿಸಿದರು. 2006 ರಲ್ಲಿ ರಿಲಯನ್ಸ್ ಫೌಂಡೇಶನ್ ಈ ಆಸ್ಪತ್ರೆಯನ್ನು ಸ್ವಾಧೀನಪಡಿಸಿಕೊಂಡು 2011 ರಲ್ಲಿ ನವೀಕರಣವು ಪ್ರಾರಂಭಿಸಿತು. 2014 ರ ಅಕ್ಟೋಬರ್ 25ರಂದು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೀಕೃತ ಆಸ್ಪತ್ರೆ ಸರ್ ಹೆಚ್.ಎನ್ ರಿಲಯನ್ಸ್ ಫೌಂಡೇಶನ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ಉದ್ಘಾಟಿಸಿದರು.
ಸರ್ ಹೆಚ್.ಎನ್ ರಿಲಯನ್ಸ್ ಫೌಂಡೇಶನ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ತುರ್ತು ವೈದ್ಯಕೀಯ ಸೇವೆಗಳು, ಹೊರರೋಗಿ ವಿಭಾಗ, ಒಳರೋಗಿ ಸೇವೆಗಳು, ರೋಗನಿರ್ಣಯ, ಆಪರೇಷನ್ ಥಿಯೇಟರ್ ವಿಭಾಗ, ಆರೋಗ್ಯ ತಪಾಸಣೆ ಸೌಲಭ್ಯ, ಡೇಕೇರ್, ಮಹಿಳೆ ಮತ್ತು ಮಕ್ಕಳ ಆರೋಗ್ಯ, ಕ್ರಿಟಿಕಲ್ ಕೇರ್ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸುತ್ತದೆ.
ಈ ಆಸ್ಪತ್ರೆಯೂ ವಿವಿಧ ವಿಭಾಗದಲ್ಲಿ 258 ಕ್ಕೂ ಹೆಚ್ಚು ಸ್ಪೆಶಲೈಜೇಶನ್ ಕನ್ಸಲ್ಟೆಂಟ್ಸ್ ಇದ್ದು ಅರೆವೈದ್ಯಕೀಯ ಮತ್ತು ಇತರ ಬೆಂಬಲಿತ ಸಿಬ್ಬಂದಿ ಒಳಗೊಂಡಂತೆ 1,000 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾರೆ.
ಜನನದ ಘೋಷಣೆಗೈದ ಧನರಾಜ್ ನತ್ವಾನಿ ಯಾರು?
ಕಳೆದ ಎರಡು ದಿನಗಳಿಂದ ಧನರಾಜ್ ನತ್ವಾನಿ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಗುರುವಾರದಂದು ದೇಶದ ಅತೀ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿಯ ಮೊಮ್ಮಗಳು ಜನಿಸಿದ ಬಗ್ಗೆ ಘೋಷಣೆ ಮಾಡಿದ ಬಳಿಕ ಧನರಾಜ್ ನತ್ವಾನಿ ಸುದ್ದಿಯಾಗುತ್ತಿದ್ದಾರೆ. ಅಷ್ಟಕ್ಕೂ ಅಂಬಾನಿ ಕುಟುಂಬದ ಸುದ್ದಿ ಘೋಷಿಸಿರುವ ಧನರಾಜ್ ಯಾರಪ್ಪ?
37 ವರ್ಷ ಪ್ರಾಯದ ಧನರಾಜ್ ನತ್ವಾನಿಯು ಇಶಾ ಅಂಬಾನಿ, ಆಕಾಶ್ ಅಂಬಾನಿ ಹಾಗೂ ಅನಂತ್ ಅಂಬಾನಿಯ ಸ್ನೇಹಿತರಾಗಿದ್ದಾರೆ. ಮುಕೇಶ್ ಅಂಬಾನಿಯ ರಿಲಯನ್ಸ್ ಸಂಸ್ಥೆಯಲ್ಲಿನ ಉನ್ನತ ಅಧಿಕಾರಿ ಸ್ಥಾನದಲ್ಲಿಯು ಧನರಾಜ್ ನತ್ವಾನಿ ಇದ್ದಾರೆ. ಲಂಡನ್‌ನಲ್ಲಿರುವ ರೆಜೆಂಟ್ ಬ್ಯುಜಿನೆಸ್ ಸ್ಕೂಲ್‌ನಲ್ಲಿ ಧನರಾಜ್ ತನ್ನ ವಿದ್ಯಾಭ್ಯಾಸ ಮಾಡಿದ್ದಾರೆ.


Click it and Unblock the Notifications