ಅಮೆಜಾನ್ ಇಂಡಿಯಾ ಆಗಸ್ಟ್ 4 ರಿಂದ ಆಗಸ್ಟ್ 8, 2023 ರವರೆಗೆ ಗ್ರೇಟ್ ಫ್ರೀಡಂ ಫೆಸ್ಟಿವಲ್ ಅನ್ನು ಘೋಷಣೆ ಮಾಡಿದೆ. ಅಂದರೆ ಇಂದಿನಿಂದ ಈ ಸೇಲ್ ಆರಂಭವಾಗಲಿದೆ. ಈ ಮಾರಾಟದ ಅವಧಿಯಲ್ಲಿ ವಿವಿಧ ಉತ್ಪನ್ನಗಳ ಮೇಲೆ ಉತ್ತಮ ರಿಯಾಯಿತಿಯು ಇದೆ. ಅಮೆಜಾನ್ ತನ್ನ ಪ್ರೈಮ್ ಮೆಂಬರ್‌ಗಳಿಗೆ ಆರಂಭಿಕ ಮಾರಾಟವನ್ನು ಆಗಸ್ಟ್ 3 ರ ಮಧ್ಯಾಹ್ನದಂದೇ ಪ್ರಾರಂಭಿಸಿದೆ.
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಮಾರಾಟದಲ್ಲಿ ಗ್ರಾಹಕರು Xiaomi, ಸ್ಯಾಮ್‌ಸಂಗ್, ಟಿಸಿಎಲ್, ಎಲ್‌ಜಿ, ಮೈಕ್ರೋಸಾಫ್ಟ್‌ನಂತಹ ವಿವಿಧ ಬ್ರ್ಯಾಂಡ್‌ಗಳಿಗೆ ಆಫರ್ ಪಡೆಯಬಹುದು, ಕಡಿಮೆ ಬೆಲೆಗೆ ಖರೀದಿ ಮಾಡಿ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಆಫರ್‌ನಲ್ಲಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ 5 ಸಾವಿರ ರೂಪಾಯಿವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ. 12 ತಿಂಗಳವರೆಗೆ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಕೂಡಾ ಪಡೆಯಬಹುದಾಗಿದೆ. ಯಾವುದಕ್ಕೆಲ್ಲ ಆಫರ್ ನೋಡಿ

ಒನ್‌ಪ್ಲಸ್ ನಾರ್ಡ್ ಸೀರಿಸ್‌ಗೆ ಡೀಲ್‌ಗಳು
ಒನ್‌ಪ್ಲಸ್ ನಾರ್ಡ್ ಸೀರಿಸ್ ಮಾರಾಟದ ವೇಳೆ ನೀವು 3,000 ರೂಪಾಯಿವರೆಗೆ ಹೆಚ್ಚವರಿ ವಿನಿಮಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಒನ್ನು ಒನ್‌ಪ್ಲಸ್ ನಾರ್ಡ್ ಸಿಇ 2 ಲೈಟ್‌ಗೆ ಅಮೆಜಾನ್ ಕೂಪನ್‌ಗಳನ್ನು ಬಳಸಿಕೊಂಡು ಹೆಚ್ಚಿನ ಉಳಿತಾಯ ಮಾಡಲು ಅವಕಾಶವಿದೆ. ಒನ್‌ಪ್ಲಸ್ 11 5ಜಿಗಾಗಿ ನೀವು 2,000 ರೂಪಾಯಿ ಬ್ಯಾಂಕ್ ರಿಯಾಯಿತಿ, 6,000 ರೂಪಾಯಿಗಳ ವಿನಿಮಯ ಕಡಿತ ಲಭ್ಯವಿದೆ.
ರಿಯಲ್‌ಮಿ ಸ್ಮಾರ್ಟ್‌ಫೋನ್ ಮೇಲೆ ಡೀಲ್
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗೆ ರಿಯಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. 6,799 ರೂಪಾಯಿಯಷ್ಟು ಕಡಿಮೆ ದರದಲ್ಲಿ ಮೊಬೈಲ್ ಲಭ್ಯವಾಗುತ್ತದೆ. ಹೆಚ್ಚುವರಿಯಾಗಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಲ್ಲಿ 1000 ರೂಪಾಯಿ ಕೂಪನ್ ಲಭ್ಯವಾಗಲಿದೆ. 1500 ರೂಪಾಯಿವರೆಗೆ ತ್ವರಿತ ಬ್ಯಾಂಕ್ ರಿಯಾಯಿತಿ ಪ್ರಯೋಜನ ಲಭ್ಯವಾಗಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ ಮೇಲಿನ್ ಆಫರ್
ನೀವು ಹೊಸದಾಗಿ ಪ್ರಾರಂಭ ಮಾಡಲಾದ ಗ್ಯಾಲಕ್ಸಿ ಎಂ34 5ಜಿ ಅನ್ನು ಕೇವಲ 16,999 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಅದೇ ಸಮಯದಲ್ಲಿ, ನೀವು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ14 5ಜಿ ಅನ್ನು ಕೇವಲ 12,490 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ04 ಕೇವಲ 6,999 ರೂಪಾಯಿಗಳಲ್ಲಿ ಲಭ್ಯವಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಖರೀದಿಯಲ್ಲಿ ಸೇವ್ ಮಾಡಿಕೊಳ್ಳಿ
ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನ ಭಾಗವಾಗಿ ಅಮೆಜಾನ್ ತನ್ನ ಒಎಲ್‌ಇಡಿ ಮತ್ತು ಕ್ಯೂಎಲ್‌ಇಡಿ ಟಿವಿಗಳಿಗೆ ಶೇಕಡ 60ರಷ್ಟು ಕಡಿತವನ್ನು ನೀಡುತ್ತದೆ. ಹಾಗೆಯೇ 24-ತಿಂಗಳ ನೋ-ಕಾಸ್ಟ್ ಇಎಂಐ ಪ್ರಯೋಜನವು ನಿಮಗಿದೆ. ನೀವು 40 ಸಾವಿರ ರೂಪಾಯಿವರೆಗೆ ರಿಯಾಯಿತಿಯನ್ನು ಪಡೆಯಲು ಸಾಧ್ಯವಿದೆ. ಇದಲ್ಲದೆ ಗೃಹೋಪಯೋಗಿ ಉಪಕರಣಗಳ ಮೇಲೆ ಶೇಕಡ 60ರಷ್ಟು ರಿಯಾಯಿತಿ ಲಭ್ಯವಿದೆ.


Click it and Unblock the Notifications