ಜನವರಿ 1, 2024 ರಂದು, ಹೊಸ ವರ್ಷದ ಕಾರಣದಿಂದಾಗಿ ವಿಶ್ವದ ಹೆಚ್ಚಿನ ಷೇರು ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಆದರೆ ಜನವರಿ 2 ರಂದು ಮಾರುಕಟ್ಟೆಗಳು ತೆರೆಯಲಾಗಿದೆ. ಈ ಸಂದರ್ಭದಲ್ಲಿ ಗಮನಾರ್ಹವಾಗಿ ಷೇರುಪೇಟೆ ಕುಸಿತವಾಗಿದೆ.
ಇದರಿಂದಾಗಿ ವರ್ಷದ ಆರಂಭದಲ್ಲಿಯೇ ವಿಶ್ವದ ಶ್ರೀಮಂತ ವ್ಯಕ್ತಿಗಳ ಅದೃಷ್ಟ ಉಲ್ಟಾ ಹೊಡೆದಿದೆ. ಅನಿರೀಕ್ಷಿತವಾಗಿ ಈ ಬಿಲಿಯನೇರ್‌ಗಳು ಟ್ವಿಸ್ಟ್ ಕಂಡಿದ್ದಾರೆ. ಜಾಗತಿಕವಾಗಿ ಅಗ್ರ 10 ಬಿಲಿಯನೇರ್‌ಗಳ ಪೈಕಿ ಒಂಬತ್ತು ಮಂದಿ ನಿವ್ವಳ ಮೌಲ್ಯದಲ್ಲಿ ಕುಸಿತ ಉಂಟಾಗಿದೆ.

ಯಾರ ನಿವ್ವಳ ಆದಾಯ ಎಷ್ಟು ಬದಲಾವಣೆ?
ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ 6.11 ಬಿಲಿಯನ್ ಡಾಲರ್ ನಿವ್ವಳ ಆದಾಯ ಇಳಿಕೆಯೊಂದಿಗೆ ಅತೀ ಹೆಚ್ಚು ನಷ್ಟವನ್ನು ಕಂಡ ವ್ಯಕ್ತಿ ಅನಿಸಿಕೊಂಡಿದ್ದಾರೆ. ಈ ಒಂದು ದಿನದ ನಷ್ಟದಿಂದಾಗಿ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಅಧಿಕ ಗಳಿಸಿದ ಅದಾನಿ!
ಕುತೂಹಲಕಾರಿಯಾಗಿ, ವಾರೆನ್ ಬಫೆಟ್ ಟಾಪ್ 10 ರಲ್ಲಿ ಏಕೈಕ ಗೇನರ್ ಆಗಿದ್ದರೆ, ಗೌತಮ್ ಅದಾನಿ ನಿವ್ವಳ ಆದಾಯದಲ್ಲಿ ಕೂಡಾ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದರೂ ಕೂಡಾ ಹೆಚ್ಚಿನ ಅದಾನಿ ಗ್ರೂಪ್ ಷೇರುಗಳು ಮಂಗಳವಾರ ಏರಿಕೆಯನ್ನು ಕಂಡಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಅದಾನಿ ನಿವ್ವಳ ಮೌಲ್ಯವು 1.63 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಇದರಿಂದಾಗಿ ಒಟ್ಟು ನಿವ್ವಳ ಆದಾಯವು 85.9 ಬಿಲಿಯನ್ ಡಾಲರ್‌ಗೆ ತಲುಪಿದೆ. ಮಂಗಳವಾರದಂದು ಬಿಲಿಯನೇರ್‌ಗಳ ಪೈಕಿ ಅತಿ ಹೆಚ್ಚು ಗಳಿಸಿದವರಲ್ಲಿ ಅದಾನಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.
ಅಮೆರಿಕದ ಅನುಭವಿ ಹೂಡಿಕೆದಾರರಾದ ವಾರೆನ್ ಬಫೆಟ್ ಆದಾಯದಲ್ಲಿ 1.56 ಬಿಲಿಯನ್ ಡಾಲರ್ ಏರಿಕೆ ಕಂಡು ಬಂದಿದೆ. ಇದರಿಂದಾಗಿ ಅಗ್ರ 10 ಶ್ರೀಮಂತರ ಪೈಕಿ ಆದಾಯದಲ್ಲಿ ಏರಿಕೆ ಕಂಡ ಏಕೈಕ ಬಿಲಿಯನೇರ್ ಎಂಬ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ವರ್ಷದ ಮೊದಲ ವ್ಯವಹಾರ ದಿನದಂದು 1.85 ಬಿಲಿಯನ್ ಡಾಲರ್ ನಷ್ಟವನ್ನು ಕಂಡಿದ್ದಾರೆ. ಇದರ ಹೊರತಾಗಿಯೂ, ಮಸ್ಕ್‌ನ ನಿವ್ವಳ ಆದಾಯವು ಹೆಚ್ಚಾಗಿಯೇ ಇದೆ. ಅಂದರೆ 227 ಬಿಲಿಯನ್ ಡಾಲರ್ ಆಗಿ ಉಳಿದಿದೆ.
ಬಿಲ್ ಗೇಟ್ಸ್, ಸ್ಟೀವ್ ಬಾಲ್ಮರ್, ಮಾರ್ಕ್ ಜುಕರ್‌ಬರ್ಗ್, ಲ್ಯಾರಿ ಪೇಜ್, ಲ್ಯಾರಿ ಎಲಿಸನ್, ವಾರೆನ್ ಬಫೆಟ್ ಮತ್ತು ಸೆರ್ಗೆ ಬ್ರಿನ್ ಕ್ರಮವಾಗಿ ನಾಲ್ಕರಿಂದ ಹತ್ತನೇ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ನಿವ್ವಳ ಮೌಲ್ಯದಲ್ಲಿ ಏರಿಳಿತಗಳನ್ನು ಕಾಣುತ್ತಿದ್ದಾರೆ.
ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿ ನಿವ್ವಳ ಆದಾಯದಲ್ಲಿ 86.7 ಮಿಲಿಯನ್ ಡಾಲರ್ ಸೇರ್ಪಡೆಯಾಗಿದ್ದು, ಆದಾಯವು 97.2 ಬಿಲಿಯನ್ ಡಾಲರ್‌ಗೆ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿ, ಅಂಬಾನಿ ಜಾಗತಿಕ ಬಿಲಿಯನೇರ್‌ಗಳ ಪಟ್ಟಿಯಲ್ಲಿ 13 ನೇ ಸ್ಥಾನವನ್ನು ಹೊಂದಿದ್ದಾರೆ.


Click it and Unblock the Notifications