ಏಷ್ಯಾದ ಶ್ರೀಮಂತ ವ್ಯಕ್ತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಕೇಶ್ ಅಂಬಾನಿ ಹಲವಾರು ಕ್ಷೇತ್ರಗಳಲ್ಲಿ ತನ್ನ ಉದ್ಯಮವನ್ನು ವಿಸ್ತರಣೆ ಮಾಡುತ್ತಾ ಬಂದಿದ್ದಾರೆ. ಮುಕೇಶ್ ಅಂಬಾನಿ 9470 ಕೋಟಿ ಡಾಲರ್‌ನಷ್ಟು ಅಂದಾಜು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಮುಕೇಶ್ ಅಂಬಾನಿ ತನ್ನದೇ ಆದ ಸಂಸ್ಥೆಯನ್ನು ಹೊಂದಿರುವುದು ಮಾತ್ರವಲ್ಲದೆ ಭಾರತದ ಸ್ಟಾರ್ಟ್ ಅಪ್ ಉದ್ಯಮದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಭಾರತದ ಸ್ಟಾರ್ಟ್ ಅಪ್ ಉದ್ಯಮದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಹಲವಾರು ಸ್ಟಾರ್ಟ್‌ಅಪ್‌ಗಳಲ್ಲಿ ಮುಕೇಶ್ ಅಂಬಾನಿ ಹೂಡಿಕೆ ಮಾಡಿದ್ದಾರೆ, ಹಾಗೆಯೇ ಸ್ವಾಧೀನ ಪಡಿಸಿಕೊಂಡಿದ್ದಾರೆ. ಅಂಬಾನಿ ಬೆಂಬಲಿತ, ಸ್ವಾಧೀನ ಪಡಿಸಿದ ಟಾಪ್ 15 ಸ್ಟಾರ್ಟ್‌ಅಪ್‌ಗಳಿವು ನೋಡಿ....

ಮುಕೇಶ್ ಅಂಬಾನಿ ಬೆಂಬಲಿತ ಸ್ಟಾರ್ಟ್‌ಅಪ್‌ಗಳ ಪಟ್ಟಿ
1. ಡೊನ್ಜೊ: ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಜನವರಿ 2022 ರಲ್ಲಿ ಡೊನ್ಜೊದಲ್ಲಿ 1490 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಕಂಪನಿಯಲ್ಲಿ ಶೇಕಡ 25.8ರಷ್ಟು ಮಾಲೀಕತ್ವವನ್ನು ಪಡೆದುಕೊಂಡಿದೆ. ಅಮೆಜಾನ್ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮಾರುಕಟ್ಟೆಯಲ್ಲಿ ಡೊನ್ಜೊದೊಂದಿಗೆ ಸ್ಪರ್ಧಿಸುವ ಎರಡು ಕಂಪನಿಗಳಾಗಿವೆ.
2. ನೆಟ್‌ಮೆಡ್ಸ್: ನೆಟ್‌ಮೆಡ್ಸ್ ಆನ್‌ಲೈನ್‌ನಲ್ಲಿ ಪ್ರಿಸ್ಕ್ರಿಪ್ಷನ್ ಔಷಧಿಗಳ ವಿತರಣೆಗಾಗಿ ಇರುವ ಸ್ಟಾರ್ಟ್ಅಪ್ ಆಗಿದೆ. ವಿಟಾಲಿಕ್ ಒಡೆತನದಲ್ಲಿದೆ. 620 ಕೋಟಿ ರೂಪಾಯಿಗೆ ಆಗಸ್ಟ್ 2020 ರಲ್ಲಿ ರಿಲಯನ್ಸ್ ರಿಟೇಲ್ ವೆಂಚರ್ಸ್ ವಿಟಾಲಿಕ್‌ನ ಷೇರನ್ನು ಖರೀದಿಸಿದೆ.
3. ಆಸ್ಟರಿಯಾ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬೆಂಗಳೂರು ಮೂಲದ ಕಂಪನಿಯಾದ ಆಸ್ಟರಿಯಾದಲ್ಲಿ ಸುಮಾರು ಶೇಕಡ 51.78ರಷ್ಟು ಪಾಲನ್ನು ಹೊಂದಿದ್ದು, ಸುಮಾರು 23.12 ಕೋಟಿ ರೂಪಾಯಿಗೆ ಪಾಲನ್ನು ಖರೀದಿಸಿದೆ. ಆಸ್ಟರಿಯಾ ಎಂಬ ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ವ್ಯವಹಾರವು ಡ್ರೋನ್‌ಗಳನ್ನು ಉತ್ಪಾದಿಸಲು ಹೆಸರುವಾಸಿಯಾಗಿದೆ. ಇದನ್ನು ಭಾರತದ ಪೊಲೀಸ್, ಮಿಲಿಟರಿ ಮತ್ತು ಅರೆಸೇನಾ ಪಡೆಗಳು ಹೆಚ್ಚಾಗಿ ಬಳಸುತ್ತವೆ.
4. ಎಂಬಿಬ್: ಎಂಬಿಬೆ ಎಐ- ಚಾಲಿತ ಕಲಿಕೆಯ ವೇದಿಕೆಯಾಗಿದ್ದು, ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಜೀವನದ ಫಲಿತಾಂಶಗಳನ್ನು ತಲುಪಿಸಲು ವಿನ್ಯಾಸಗೊಳಿಸಲಾಗಿದೆ. 2018 ರಲ್ಲಿ, ಆರ್‌ಐಎಲ್ 1,340 ಕೋಟಿ ರೂಪಾಯಿ ಹೂಡಿಕೆ ಮಾಡಿ ಈ ಸಂಸ್ಥೆಯ ಶೇಕಡ 73ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಂಡಿದೆ.
5. ನೌಫ್ಲೋಟ್ಸ್: ರಿಲಯನ್ಸ್ ಇಂಡಸ್ಟ್ರೀಸ್‌ನ ವಿಭಾಗವಾದ ರಿಲಯನ್ಸ್ ಸ್ಟ್ರಾಟೆಜಿಕ್ ಬ್ಯುಸಿನೆಸ್ ವೆಂಚರ್ಸ್ ಲಿಮಿಟೆಡ್, ಹೈದರಾಬಾದ್ ಮೂಲದ ದೇಶೀಯ ಸ್ಟಾರ್ಟ್ ಅಪ್ ನೌಫ್ಲೋಟ್ಸ್ ಟೆಕ್ನಾಲಜೀಸ್ ಅನ್ನು 2019 ರಲ್ಲಿ 141 ಕೋಟಿ ರೂಪಾಯಿಗೆ ಖರೀದಿಸಿತು.
6. ಆಡ್ವರ್ಬ್: ಇದು ಭಾರತದ ಹೊರಗೆ ನೆಲೆಗೊಂಡಿರುವ ಜಾಗತಿಕ ರೊಬೊಟಿಕ್ಸ್ ಕಂಪನಿಯಾಗಿದ್ದು, ಜನವರಿಯಲ್ಲಿ ರಿಲಯನ್ಸ್ ರೀಟೇಲ್ 4132 ಮಿಲಿಯನ್ ರೂಪಾಯಿಎಗ ಸ್ವಾಧೀನಪಡಿಸಿಕೊಂಡಿದೆ.
7. ರಾಡಿಸಿಸ್: ರಾಡಿಸಿಸ್ ಎಂಬ ಮುಕ್ತ ಟೆಲಿಕಾಂ ಪ್ಲಾಟ್‌ಫಾರ್ಮ್ ಯುಎಸ್ ಆಧಾರಿತ ಮಾರಾಟಗಾರರನ್ನು ರಿಲಯನ್ಸ್ ಇಂಡಸ್ಟ್ರೀಸ್ ಜೂನ್ 2018 ರಲ್ಲಿ 74 ಮಿಲಿಯನ್ ಡಾಲರ್‌ಗೆ ಖರೀದಿಸಿತು.
8. ಕ್ಲೋವಿಯಾ: ಕ್ಲೋವಿಯಾ ಒಂದು ಓಮ್ನಿಚಾನಲ್ ಮಹಿಳೆಯರ ಒಳ ಉಡುಪು ಬ್ರ್ಯಾಂಡ್ ಆಗಿದೆ, ಇದನ್ನು ರಿಲಯನ್ಸ್ ರಿಟೇಲ್ 2022 ರಲ್ಲಿ 950 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿದೆ.
9. ಫೈಂಡ್: ಫೈಂಡ್ ರಿಟೇಲ್ ವ್ಯಾಪಾರಗಳ ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುವ ಓಮ್ನಿಚಾನಲ್ ವೇದಿಕೆಯಾಗಿದೆ. ಇದು ರಿಲಯನ್ಸ್ ಒಡೆತನದ ಸ್ಟಾರ್ಟಪ್ ಆಗಿದೆ. 2019ರಲ್ಲಿ 190 ಕೋಟಿ ರೂಪಾಯಿಗೆ ಇದನ್ನು ಖರೀದಿ ಮಾಡಲಾಗಿದೆ.
10. ಹಪ್ಟಿಕ್: ರಿಲಯನ್ಸ್ ಜಿಯೋ ಡಿಜಿಟಲ್ ಸರ್ವಿಸಸ್ ಎಐ ವೇದಿಕೆಯಾದ ಹಪ್ಟಿಕ್ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್‌ಗೆ 100 ಮಿಲಿಯನ್ ಡಾಲರ್ (700 ಕೋಟಿ ರೂಪಾಯಿ) ಪಾವತಿಸಲು ಒಪ್ಪಿಕೊಂಡಿದೆ. ಈ ಕಂಪನಿಯ ಸುಮಾರು ಶೇಕಡ 87ರಷ್ಟು ಷೇರನ್ನು ಹೊಂದಿದೆ. ಉಳಿದ ಭಾಗವನ್ನು ಹಪ್ಟಿಕ್‌ನ ಸಂಸ್ಥಾಪಕರು ಮತ್ತು ಉದ್ಯೋಗಿಗಳು ನಿಯಂತ್ರಿಸುತ್ತಾರೆ.
11. ರೆವೆರಿ: ಏಪ್ರಿಲ್ 2019 ರಲ್ಲಿ, ಸ್ಥಳೀಯ ಭಾಷಾ ತಂತ್ರಜ್ಞಾನದ ಪೂರೈಕೆದಾರ ರೆವೆರಿ ಆರ್‌ಐಎಲ್ ಸಮುದಾಯವನ್ನು ಸೇರಿಕೊಂಡಿದೆ. 190 ಕೋಟಿ ರೂಪಾಯಿಗೆ ರೆವರಿ ತನ್ನ ಬಹುಪಾಲು ಷೇರನ್ನು ರಿಲಯನ್ಸ್‌ಗೆ ಮಾರಾಟ ಮಾಡಿತು.
12. ಗ್ರಾಬ್: ಹೊಸ ಹೂಡಿಕೆ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದ ಷೇರುಗಳನ್ನು ಖರೀದಿಸುವ ಮೂಲಕ ಮುಂಬೈ ಮೂಲದ ಹೈಪರ್-ಲೋಕಲ್ ಲಾಜಿಸ್ಟಿಕ್ಸ್ ಸ್ಟಾರ್ಟ್ಅಪ್ ಗ್ರ್ಯಾಬ್ ಎ ಗ್ರಬ್ ಸರ್ವಿಸಸ್‌ನಲ್ಲಿ ಶೇಕಡ 83ರಷ್ಟು ಪಾಲನ್ನು ರಿಲಯನ್ಸ್ ಇಂಡಸ್ಟ್ರೀಸ್ 146 ಕೋಟಿ ರೂಪಾಯಿಗೆ ಪಡೆದುಕೊಂಡಿದೆ.
13. ಸಿ-ಸ್ಕ್ವೇರ್: ಸುಮಾರು 82 ಕೋಟಿ ರೂಪಾಯಿಗಳಿಗೆ ಸಾಫ್ಟ್‌ವೇರ್ ಕಂಪನಿ ಸಿ-ಸ್ಕ್ವೇರ್‌ನಲ್ಲಿ ರಿಲಯನ್ಸ್ ಸರಿಸುಮಾರು ಶೇಕಡ 82 ಇಕ್ವಿಟಿಯನ್ನು ಪಡೆದುಕೊಂಡಿದೆ.
14. ಫಂಟೂಟ್: 2019 ರಲ್ಲಿ 71.64 ಕೋಟಿ ರೂಪಾಯಿಗೆ ಇ-ಲರ್ನಿಂಗ್ ಸರಕುಗಳು ಮತ್ತು ಸೇವೆಗಳ ನಿರ್ಮಾಪಕರಾದ ಬೆಂಗಳೂರು ಮೂಲದ ಫಂಟೂಟ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಶೇಕಡ 90.5ರಷ್ಟು ಪಾಲನ್ನು ಖರೀದಿಸಿದೆ.
15. ಮಿಮೋಸಾ ನೆಟ್‌ವರ್ಕ್ಸ್: ಮಿಮೋಸಾ ನೆಟ್‌ವರ್ಕ್ಸ್ ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಸಂವಹನ ಸೇವೆಗಳನ್ನು ಒದಗಿಸುತ್ತದೆ. ಇದು 5ಜಿ ಸ್ಥಿರ ವೈರ್‌ಲೆಸ್ ಸಂಪರ್ಕವನ್ನು ನೀಡುತ್ತದೆ. ಇದನ್ನು ರಾಡಿಸಿಸ್ ಕಾರ್ಪೊರೇಷನ್ ಮೂಲಕ ಜಿಯೋ 60 ಮಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿದೆ.


Click it and Unblock the Notifications