ಯುಎಸ್‌ನ ಸಂಸ್ಥೆಯಾದ ಹಿಂಡನ್‌ಬರ್ಗ್ ಹೊಸ ಸಂಶೋಧನಾ ವರದಿಯನ್ನು ಮಾಡಿದೆ. ನಿನ್ನೆ ಬೆಳಿಗ್ಗೆಯಷ್ಟೇ ಟ್ವಿಟ್ಟರ್ ಮೂಲಕ ಹೊಸ ವಂಚನೆ ಪ್ರಕರಣವನ್ನು ಬಯಲಿಗೆ ತರಲಾಗುವುದು ಎಂದು ಹೇಳಿಕೊಂಡಿದ್ದ ಹಿಂಡನ್‌ಬರ್ಗ್ ಸಂಜೆಯ ವೇಳೆಗೆ ಬ್ಲಾಕ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡ ವರದಿ ಮಾಡಿದೆ. ಈ ಪ್ರಕರಣದಲ್ಲಿ ಟ್ವಿಟ್ಟರ್‌ನ ಮಾಜಿ ಸಿಇಒ ಜ್ಯಾಕ್ ಡಾರ್ಸಿ ಪ್ರಮುಖ ಆರೋಪಿ ಎಂದು ಉಲ್ಲೇಖಿಸಲಾಗಿದೆ. ಈ ನಡುವೆ ಸಂಸ್ಥೆಯ ಸಿಎಫ್‌ಒ, ಭಾರತ ಮೂಲದ ಅಮೃತಾ ಅಹುಜಾ ಹೆಸರು ಕೂಡಾ ಈ ವಂಚನೆ ಪ್ರಕರಣದಲ್ಲಿ ಕಂಡು ಬಂದಿದೆ.
ಜ್ಯಾಕ್ ಡಾರ್ಸಿ ಹಾಗೂ ಜೇಮ್ಸ್ ಮ್ಯಾಕೆಲ್ವಿ ಜೊತೆಯಾಗಿ ಒಂದು ಬಿಲಿಯನ್ ಡಾಲರ್‌ಗೂ ಹೆಚ್ಚಿನ ಸ್ಟಾಕ್‌ಗಳನ್ನು ಕೋವಿಡ್ ಸಂದರ್ಭದಲ್ಲಿ ಮಾರಾಟ ಮಾಡಿದ್ದಾರೆ. ಹಗರಣದ ಬೆಂಬಲದಿಂದಾಗಿ ಬ್ಲಾಕ್ ಸಂಸ್ಥೆಯ ಸ್ಟಾಕ್‌ಗಳು ಏರಿಕೆಯಾಗಿದೆ ಎಂದು ಆರೋಪ ಮಾಡಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಸಿಎಫ್‌ಒ ಅಮೃತಾ ಅಹುಜಾ, ಕ್ಯಾಷ್ ಆಪ್‌ನ ಮುಖ್ಯ ನಿರ್ವಾಹಕ ಬ್ರಿಯಾನ್ ಗ್ರಾಸ್ಸಡೊನಿಯಾ ಹೆಸರು ಕೂಡಾ ಉಲ್ಲೇಖ ಮಾಡಲಾಗಿದೆ. ಅಮೃತಾ ಅಹುಜಾ ಕೂಡಾ ಸ್ಟಾಕ್‌ನಲ್ಲಿ ಮಿಲಿಯನ್ ಡಾಲರ್ ಹಾಕಿದ್ದಾರೆ ಎಂದು ಆರೋಪ ಮಾಡಲಾಗಿದೆ.

ತಾನು ಶೋಷಣೆ ಮಾಡುವ ಜನರ ಮೇಲೆ ಕಾಳಜಿ ಇದೆ ಎಂಬಂತೆ ತೋರ್ಪಡಿಸಿಕೊಳ್ಳುವ ಜ್ಯಾಕ್ ವೈಯಕ್ತಿಕವಾಗಿ ಬಿಲಿಯನ್ ಡಾಲರ್ ಸಂಪತ್ತು ವೃದ್ಧಿಸಿಕೊಂಡಿದ್ದಾರೆ. ಡಾರ್ಸಿ ಹಾಗೂ ಮುಖ್ಯ ಅಧಿಕಾರಿಗಳು ಈಗಾಗಲೇ ಸಾಂಕ್ರಾಮಿಕ ಸಂದರ್ಭದಲ್ಲಿ ಒಂದು ಬಿಲಿಯನ್ ಡಾಲರ್ ಈಕ್ವಿಟಿ ಮಾರಾಟ ಮಾಡಿದ್ದಾರೆ. ಉಳಿದ ಜನರಿಗೆ ಏನಾಗುತ್ತದೆ ಎಂಬ ಚಿಂತನೆ ನಡೆಸದೆ ತಮ್ಮನ್ನು ತಾವು ಉಳಿಸಿಕೊಳ್ಳುವ ಆಟವಾಡಿದ್ದಾರೆ ಎಂದು ಹಿಂಡನ್‌ಬರ್ಗ್ ವರದಿಯು ಆರೋಪಿಸಿದೆ. ಈ ಇತರೆ ಅಧಿಕಾರಿಗಳ ಹೆಸರಲ್ಲಿ ಕ್ಯಾಷ್ ಆಪ್‌ನ ಮುಖ್ಯ ನಿರ್ವಾಹಕ ಬ್ರಿಯಾನ್ ಗ್ರಾಸ್ಸಡೊನಿಯಾ, ಸಿಎಫ್‌ಒ ಅಮೃತಾ ಅಹುಜಾ ಹೆಸರು ಕಾಣಿಸಿಕೊಂಡಿದೆ. ಭಾರತ ಮೂಲದ ಅಮೃತಾ ಅಹುಜಾ ಯಾರು ಎಂದು ತಿಳಿಯೋಣ ಮುಂದೆ ಓದಿ..
ಅಮೃತಾ ಅಹುಜಾ ಯಾರು?
ಅಮೃತಾ ಅಹುಜಾ ಭಾರತೀಯ- ಅಮೇರಿಕನ್ 2019ರಲ್ಲಿ ಬ್ಲಾಕ್ ಇಂಕ್‌ಗೆ ಸೇರ್ಪಡೆಯಾಗಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಬ್ಲಾಕ್ ಇಂಕ್ ಸಂಸ್ಥೆಯ ಸಿಎಫ್‌ಒ ಆಗಿ ನೇಮಕಗೊಂಡಿದ್ದಾರೆ. ಅಮೃತಾ ಅಹುಜಾ ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್, ಡ್ಯೂಕ್ ಯೂನಿವರ್ಸಿಟಿ ಹಾಗೂ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನ ಹಳೆಯ ವಿದ್ಯಾರ್ಥಿನಿಯಾಗಿದ್ದಾರೆ. 2019ರಲ್ಲಿ ಬ್ಲಾಕ್‌ಗೆ ಸೇರ್ಪಡೆಯಾಗುವುದಕ್ಕೂ ಮುನ್ನ ಅಮೃತಾ ಅಹುಜಾ ಹಲವಾರು ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಏರ್‌ಬನ್ಬ್, ಮ್ಯಾಕಿನ್ಸಿ & ಕಂಪನಿ, ದಿ ವಾಲ್ಟ್ ಡಿಸ್ನಿ ಕಂಪನಿ ಮೊದಲಾದವುಗಳಲ್ಲಿ ಅಮೃತಾ ಅಹುಜಾ ಉದ್ಯೋಗಿಯಾಗಿದ್ದರು.
2001ರಲ್ಲಿ ಕನ್ಸಲ್ಟಿಂಗ್ ಸಂಸ್ಥೆಯಾದ ಮಾರ್ಗನ್ ಸ್ಟಾನ್ಲಿಯಲ್ಲಿ ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿ ತನ್ನ ಹೊಸ ವೃತ್ತಿ ಜೀವನವನ್ನು ಅಮೃತಾ ಅಹುಜಾ ಆರಂಭಿಸಿದ್ದಾರೆ. ವಾಲ್ ಸ್ಟ್ರೀಟ್‌ನ ವರದಿ ಪ್ರಕಾರ ಅಮೃತಾ ಅಹುಜಾ ಕ್ಲೀವ್ಲ್ಯಾಂಡ್‌ನಲ್ಲಿ ಡೇ ಕೇರ್ ಸೆಂಟರ್ ನಡೆಸುತ್ತಿದ್ದ ಭಾರತೀಯ ವಲಸಿಗರ ಪುತ್ರಿಯಾಗಿದ್ದಾರೆ. ಫಾಕ್ಸ್‌ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾಗ ಅಹುಜಾ ಸ್ಟ್ರೀಮಿಂಗ್ ಸೇವೆ ಹೂಲೂ ಆರಂಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇನ್ನು "ಕಾಲ್ ಆಫ್ ಡ್ಯೂಟಿ," "ಕ್ಯಾಂಡಿ ಕ್ರಷ್" ಮತ್ತು "ವರ್ಲ್ಡ್ ಆಫ್ ವಾರ್‌ಕ್ರಾಫ್ಟ್" ನಂತಹ ಗೇಮ್‌ಗಳ ತಯಾರಕ ಸಂಸ್ಥೆಯಾದ ಆಕ್ಟಿವಿಸನ್ ಬ್ಲಿಝಾರ್ಡ್‌ನಲ್ಲಿ ಅಮೃತಾ ಅಹುಜಾ ವೀಡಿಯೊ ಗೇಮಿಂಗ್ ಕಂಪನಿಯ ಪ್ರಾಬಲ್ಯ ಹೆಚ್ಚಿಸಲು ಸಹಾಯ ಮಾಡಿದ್ದಾರೆ. 2022ರ ಫಾರ್ಚ್ಯೂನ್ ಮೋಸ್ಟ್ ಪವರ್‌ಫುಲ್ ವುಮೆನ್ ಸಮ್ಮಿಟ್‌ನಲ್ಲಿ (ಅತೀ ಪ್ರಬಲ ಮಹಿಳೆ ಶೃಂಗಸಭೆ) ಅಮೃತಾ ಅಹುಜಾ ಕಾಣಿಸಿಕೊಂಡಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications