ಏಷ್ಯಾಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತ 10 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿ ಐದು ವರ್ಷಗಳ ನಂತರ ಏಷ್ಯಾ ಕಪ್ ವಿಜೇತರಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ವೇಗಿ ಮೊಹಮ್ಮದ್ ಸಿರಾಜ್‌ರ ಚೆಂಡಿಗೆ 50 ರನ್‌ಗಳಿಗೆ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ಭಾರತ 6.1 ಓವರ್‌ಗಳಲ್ಲಿ ಸುಲಭವಾಗಿ ಗುರಿ ಮುಟ್ಟಿ ಏಷ್ಯಾ ಕಪ್ ಅನ್ನು ಗೆದ್ದಿದೆ.
ಏಷ್ಯಾ ಕಪ್ ಯಾವಾಗಲೂ ಮಹತ್ವದ ಕ್ರಿಕೆಟ್ ಪಂದ್ಯಾಟವಾಗಿದೆ. ವಿಜೇತರ ಬಹುಮಾನವು ಅಗಾಧವಾಗಿರುತ್ತದೆ. ಏಷ್ಯಾ ಕಪ್ ವಿಜೇತರಾಗಿರುವ ಭಾರತವು ಎಷ್ಟು ಮೊತ್ತವನ್ನು ಬಹುಮಾನವಾಗಿ ಪಡೆಯುತ್ತದೆ. ಭಾರತದ ವಿಜೇತ ಮೊತ್ತ ಎಷ್ಟಿದೆ, ಸಂಭಾವಣೆ ಎಷ್ಟಿದೆ ಮೊದಲಾದ ಮಾಹಿತಿಗಳು ಇಲ್ಲಿದೆ ಮುಂದೆ ಓದಿ....

ಭಾರತ ಗಳಿಸಿದ ಬಹುಮಾನ ಮೊತ್ತ ಎಷ್ಟಿದೆ?
ಏಷ್ಯಾ ಕಪ್‌ನಲ್ಲಿ ಭಾರತವು ಭಾರೀ ಪ್ರಮಾಣದಲ್ಲಿ ಬಹುಮಾನವನ್ನು ಪಡೆದಿದೆ. ಬಿಸಿಸಿಐ ಅಧ್ಯಕ್ಷ ರೋಗರ್ ಬಿನ್ನಿ ಭಾರತ ತಂಡದ ನಾಯಕ ರೋಹಿತ್ ಶರ್ಮಾರಿಗೆ 150000 ಯುಎಸ್ ಡಾಲರ್ ಚೆಕ್ ಅನ್ನು ನೀಡಿದ್ದಾರೆ. ಅಂದರೆ ಏಷ್ಯಾ ಕಪ್ 2023 ರ ಭಾರತದ ಬಹುಮಾನವು 12463552.50 ರೂಪಾಯಿ (ಒಂದು ಕೋಟಿ 24 ಲಕ್ಷ 63 ಸಾವಿರದ ಐನ್ನೂರ ಐವತ್ತೆರಡು ರೂಪಾಯಿ) ಆಗಿದೆ ಎಂದು ವರದಿಯಾಗಿದೆ.
ಅನ್‌ಸಂಗ್ ಹೀರೋಸ್‌ಗೆ ಬಹುಮಾನ ಹಣ
ಎಸಿಸಿ ಮುಖ್ಯಸ್ಥ ಜಯ್ ಶಾ ಅವರು ಏಷ್ಯಾ ಕಪ್ 2023 ರ 'ಅನ್‌ಸಂಗ್ ಹೀರೋಸ್' ಗೆ ಬಹುಮಾನದ ಹಣವನ್ನು ಘೋಷಣೆ ಮಾಡಿದರು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಕೊಲಂಬೊ ಮತ್ತು ಕ್ಯಾಂಡಿಯಲ್ಲಿ ಏಷ್ಯಾ ಕಪ್ 2023 ಕ್ಯುರೇಟರ್‌ಗಳು ಮತ್ತು ಗ್ರೌಂಡ್ಸ್‌ಮನ್‌ಗಳಿಗೆ 50,000 ಯುಎಸ್ ಡಾಲರ್ ಅನ್ನು ಬಹುಮಾನವಾಗಿ ಘೋಷಣೆ ಮಾಡಲು ನಿರ್ಧರಿಸಿದೆ. ಈ ಸುದ್ದಿಯನ್ನು ಎಸಿಸಿ ಅಧ್ಯಕ್ಷ ಜಯ್ ಶಾ ಅವರು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ.
ಭಾರತದ ಆಟಗಾರರು ಗಳಿಸುವುದೆಷ್ಟು?
ಭಾರತವು ಏಷ್ಯಾ ಕಪ್‌ನಲ್ಲಿ ಕನಿಷ್ಠ ಐದು ಪಂದ್ಯಗಳಲ್ಲಿ ಭಾಗವಹಿಸುವುದು ಮೊದಲೇ ನಿರ್ಧರಿತವಾದುದ್ದು. ಈ ಐದು ಪಂದ್ಯಗಳಲ್ಲಿ ಆಟವಾಡುವ ಆಟಗಾರರು ಪಂದ್ಯಾವಳಿಯಿಂದ ಕನಿಷ್ಠ 30 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಇನ್ನು ಫೈನಲ್ ಪಂದ್ಯಕ್ಕೆ ಬರುತ್ತಿದ್ದಂತೆ ಆಟಗಾರರ ಗಳಿಕೆ ಗಣನೀಯವಾಗಿ ಏರಿಕೆ ಕಾಣಲಿದೆ.


Click it and Unblock the Notifications