Taj Hotel: ಮುಂಬೈನ ಐತಿಹಾಸಿಕ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ಮಾಣ ವೆಚ್ಚವೆಷ್ಟು ಗೊತ್ತಾ?

ಭಾರತದ ಐಷಾರಾಮಿ ಹೋಟೆಲ್‌ಗಳ ಬಗ್ಗೆ ಯೋಚಿಸುವಾಗ ನಮಗೆ ಥಟ್ಟನೆ ನೆನಪಾಗುವುದು ತಾಜ್ ಮಹಲ್ ಪ್ಯಾಲೇಸ್ ಹೋಟೆಲ್. ಟಾಟಾ ಗ್ರೂಪ್‌ನ ಸಂಸ್ಥಾಪಕ ಮತ್ತು ಹೆಸರಾಂತ ಭಾರತೀಯ ಉದ್ಯಮಿ, ಲೋಕೋಪಕಾರಿ ಮತ್ತು ಕೈಗಾರಿಕೋದ್ಯಮಿ ಜಮ್‌ಸೆಟ್‌ಜಿ ಟಾಟಾ ಈ ಹೊಟೇಲ್ ನ ನಿರ್ಮಾತೃ ಆಗಿದ್ದಾರೆ.

ಈ ಐಷಾರಾಮಿ ಕಟ್ಟಡವನ್ನು "ಮುಂಬೈನ ವಾಸ್ತುಶಿಲ್ಪದ ಆಭರಣ" ಎಂದೇ ಕರೆಯುತ್ತಾರೆ. ತಾಜ್ ಹೊಟೇಲ್ ನಿರ್ಮಾಣಕ್ಕೆ 1898 ರಲ್ಲಿ ಅಡಿಪಾಯವನ್ನು ಹಾಕಲಾಯಿತು. ಇದು 1903 ರಲ್ಲಿ ಪೂರ್ಣಗೊಂಡು ವ್ಯವಹಾರಕ್ಕೆ ಸಿದ್ಧವಾಯಿತು. ಈ ತಾಜ್ ಹೊಟೇಲ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 ಐತಿಹಾಸಿಕ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ಮಾಣ ವೆಚ್ಚವೆಷ್ಟು?

ತಾಜ್ ಮಹಲ್ ಪ್ಯಾಲೇಸ್‌ನ ಕನಿಷ್ಠ ವೆಚ್ಚ

ಇಂದು ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ಉಳಿಯಲು ಕನಿಷ್ಠ ವೆಚ್ಚವೆಂದರೆ 22000 ರೂಪಾಯಿ ಬೇಕು. ಅಂದು ಮುಂಬೈನಲ್ಲಿ 4,21,00000 ರೂಪಾಯಿಗಳ ದೊಡ್ಡ ವೆಚ್ಚದಲ್ಲಿ 1903ರ ಡಿಸೆಂಬರ್ ನಲ್ಲಿ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಸಿದ್ಧವಾಯಿತು.

ತಾಜ್ ಮಹಲ್ ಪ್ಯಾಲೇಸ್ ಅಂದಿನ ಬಾಂಬೆಯಲ್ಲಿ ವಿದ್ಯುಚ್ಛಕ್ತಿಯಿಂದ ಬೆಳಗಿದ ಮೊದಲ ಕಟ್ಟಡವಾಗಿದೆ. ಇಷ್ಟು ಮಾತ್ರವಲ್ಲ ಅಂದಿನ ಕಾಲದಲ್ಲಿ ದೂರವಾಣಿ, ಎಲೆಕ್ಟ್ರಿಕ್ ಲಿಫ್ಟ್ ಮತ್ತು ರೆಫ್ರಿಜರೇಟರ್‌ನಂತಹ ಸೌಕರ್ಯಗಳನ್ನು ಹೊಂದಿರುವ ಮೊದಲ ಕಟ್ಟಡವೂ ಇದಾಗಿತ್ತು.

ಮುಂಬೈನ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ತನ್ನ ಮೊದಲ ಕಾರ್ಯಚಟುವಟಿಕೆ ತೆರೆದುಕೊಂಡಾಗ, ರೂಮ್ ಚಾರ್ಜ್ ಕೇವಲ 30 ರೂಪಾಯಿ ಆಗಿತ್ತು. ಆದರೆ ಅಂದಿಗೆ ಆ ಹಣ ಅಧಿಕ ಹೌದು. ಇದು ಅಂದು ಮೊದಲ ಪರವಾನಗಿ ಪಡೆದ ಬಾರ್, ಹಾರ್ಬರ್ ಬಾರ್ ಮತ್ತು ಭಾರತದ ಮೊದಲ ದಿನಪೂರ್ತಿ ಭೋಜನ ಲಭ್ಯವಾಗುವ ರೆಸ್ಟೋರೆಂಟ್ ಅನ್ನು ಒಳಗೊಂಡಿತ್ತು.

ಇಂದು, ಮುಂಬೈನಲ್ಲಿರುವ ತಾಜ್ ಹೋಟೆಲ್ ವಿಶ್ವದ ಅತ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಟಾಟಾ ಗ್ರೂಪ್‌ನ ತಾಜ್ ಹೋಟೆಲ್ ಗಳು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ತನ್ನ ಅತ್ಯುತ್ತಮ ಸೇವೆಗಳಿಗಾಗಿ ಹೆಸರುವಾಸಿಯಾಗಿದೆ.

ಮುಂಬೈನ ಐತಿಹಾಸಿಕ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್ ಅನ್ನು ಮೊದಲ ಮಹಾಯುದ್ಧದ ಸಮಯದಲ್ಲಿ 600 ಹಾಸಿಗೆಗಳ ಆಸ್ಪತ್ರೆಯಾಗಿ ಪರಿವರ್ತಿಸಲಾಯಿತು. ಈ ಹೊಟೇಲ್ 2008 ರಲ್ಲಿ ನಡೆದ ಭಯೋತ್ಪಾದಕ ದಾಳಿ ಕಹಿ ನೆನೆಪಿಗೂ ಸಾಕ್ಷಿಯಾಗಿದೆ.

ಜಮ್‌ಸೆಟ್‌ಜಿ ಟಾಟಾ ಅವರು ಭಾರತದಲ್ಲಿದ್ದ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ಜೊತೆಗೆ ಯೂರೋಪಿನ ಹೋಟೆಲ್‌ಗಳಲ್ಲಿಯೂ ಭಾರತೀಯರಿಗೆ ತಾರತಮ್ಯಕ್ಕೆ ಮಾಡುತ್ತಿರುವುದನ್ನು ಕಂಡಿದ್ದರು, ಆ ಕಾಲದಲ್ಲಿ, 'ಬಿಳಿಯರಿಗೆ ಮಾತ್ರ' ಹೊಟೇಲ್ ಗಳು ಸೀಮಿತಗೊಂಡಿದ್ದವು.

ಬ್ರಿಟಿಷರ ಕಾಲದ ಶ್ರೇಷ್ಠ ಹೋಟೆಲ್‌ಗಳಲ್ಲಿ ಒಂದಾದ ವ್ಯಾಟ್ಸನ್ ಹೋಟೆಲ್‌ನಲ್ಲಿ 'ಬಿಳಿಯರಿಗೆ ಮಾತ್ರ' ಸೀಮಿತವಾಗಿದ್ದು, ಅಲ್ಲಿ ಭಾರತೀಯರಾದ ಜಮ್‌ಸೆಟ್‌ಜಿ ಅವರಿಗೆ ಪ್ರವೇಶ ನಿರಾಕರಿಸಿದ್ದು, ತಾಜ್ ಹೊಟೇಲ್ ನಿರ್ಮಿಸಲು ಪ್ರೇರಣೆ ಎಂದೇ ಹೇಳಲಾಗುತ್ತದೆ.

ಟಾಟಾ ಇದನ್ನು ಭಾರತೀಯರಿಗೆ ಅವಮಾನವೆಂದು ಪರಿಗಣಿಸಿ ಅವರು ಯಾವುದೇ ನಿರ್ಬಂಧ, ತಾರತಮ್ಯಗಳಿಲ್ಲದೆ ಭಾರತೀಯರು ಮಾತ್ರವಲ್ಲದೆ ವಿದೇಶಿಯರೂ ಉಳಿಯಲು ಅನುಕೂಲವಾಗುವಂತಹ ಹೋಟೆಲ್ ನಿರ್ಮಿಸಲು ನಿರ್ಧರಿಸಿದರು. ಇದಕ್ಕಾಗಿ ಭವ್ಯವಾದ ತಾಜ್ ಹೋಟೇಲ್ ನಿರ್ಮಿಸಿ ಅಲ್ಲಿ ಎಲ್ಲರಿಗೂ ಸೇವೆ ನೀಡಿದರು. ಈಗ ತಾಜ್ ಮಹಲ್ ಅರಮನೆಯು ಭಾರತ ಮಾತ್ರವಲ್ಲದೆ ಪ್ರಪಂಚದ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಸೀತಾರಾಮ್ ಖಂಡೇರಾವ್ ವೈದ್ಯ ಮತ್ತು ಡಿ.ಎನ್. ಮಿರ್ಜಾ ತಾಜ್ ಹೊಟೇಲ್ ನ ಪ್ರಮುಖ ಭಾರತೀಯ ವಾಸ್ತುಶಿಲ್ಪಿಗಳಾಗಿದ್ದು, ಇಂಗ್ಲಿಷ್ ಇಂಜಿನಿಯರ್ ಡಬ್ಲ್ಯೂ.ಎ. ಚೇಂಬರ್ಸ್ ಇವರ ಜೊತೆ ಸೇರಿದ್ದರು. ಹೋಟೆಲ್ ಆರು ಅಂತಸ್ತಿನ ಕಟ್ಟಡವಾಗಿದ್ದು, ಸೆಂಟ್ರಲ್ ಮೂರಿಶ್ ಗುಮ್ಮಟ ಮತ್ತು ಇಂಡೋ-ಸಾರ್ಸೆನಿಕ್ ಶೈಲಿಯ ಭವ್ಯವಾದ ವಾಸ್ತುಶಿಲ್ಪವನ್ನು ಹೊಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+