For Quick Alerts
ALLOW NOTIFICATIONS  
For Daily Alerts

ಉಳಿತಾಯ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಇಲ್ಲದಿದ್ದರೆ ಬೀಳಲಿದೆ ಭಾರೀ ದಂಡ

|

ಬ್ಯಾಂಕುಗಳು ತಮ್ಮ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿವೆ. ಉಳಿತಾಯ ಖಾತೆಯಲ್ಲಿ ಕನಿಷ್ಟ ಮೊತ್ತ ಇಲ್ಲದಿದ್ದರೆ ದಂಡ ವಿಧಿಸಲಿವೆ. ನೀವೇನಾದರೂ ಯಾವುದಾದರೂ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಬಳಸದೇ ಜೀರೋ ಬ್ಯಾಲೆನ್ಸ್ ಇದ್ದರೆ ದೊಡ್ಡ ಮಟ್ಟದ ದಂಡ ತೆರಬೇಕಾಗುತ್ತದೆ.

 

ಹೆಚ್‌ಡಿಎಫ್‌ಸಿ ಬ್ಯಾಂಕ್ ಕೂಡ ಉಳಿತಾಯ ಖಾತೆಯಲ್ಲಿ ಕನಿಷ್ಟ ಮೊತ್ತವನ್ನು ಉಳಿಸಿಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುವುದು. hdfcbank. com ಪ್ರಕಾರ ಮಹಾನಗರ ಹಾಗೂ ನಗರ ಪ್ರದೇಶಗಳಲ್ಲಿನ ಶಾಖೆಗಳಲ್ಲಿ ಗ್ರಾಹಕರು ಕನಿಷ್ಟ 10,000 ರುಪಾಯಿಗಳನ್ನ ತಮ್ಮ ಉಳಿತಾಯ ಖಾತೆಯಲ್ಲಿ ಇರಿಸಿಕೊಳ್ಳಬೇಕು. ಉಪನಗರ ಶಾಖೆಗಳಲ್ಲಿ ಕನಿಷ್ಟ 5 ಸಾವಿರ ರುಪಾಯಿ ಸರಾಸರಿ ಉಳಿಸಿಕೊಂಡಿರಬೇಕು.

 
ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ಬೀಳಲಿದೆ ಭಾರೀ ದಂಡ

ಮಹಾನಗರ, ಉಪನಗರಗಳಂತೆ, ಗ್ರಾಮೀಣ ಪ್ರದೇಶಗಳಲ್ಲಿನ ಶಾಖೆಗಳಿಗೂ ಈ ನಿಯಮ ಅನ್ವಯವಾಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಬ್ಯಾಂಕ್‌ನಲ್ಲಿ ಕನಿಷ್ಟ 2,500 ರುಪಾಯಿ ಇರಿಸಿಕೊಂಡಿದ್ದಲ್ಲಿ ದಂಡದಿಂದ ಮುಕ್ತವಾಗಿರಬಹುದು.

ಇಲ್ಲವೆ 10 ಸಾವಿರ ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಕನಿಷ್ಟ 1 ವರ್ಷಕ್ಕೆ ಸ್ಥಿರ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಮಾಡಿದರೂ ಯಾವುದೇ ದಂಡ ಅನ್ವಯಿಸುವುದಿಲ್ಲ.

ಹೆಚ್‌ಡಿಎಫ್‌ಸಿ ಉಳಿತಾಯ ಖಾತೆಯಲ್ಲಿ ಕನಿಷ್ಟ ಮೊತ್ತ ಇಲ್ಲದಿದ್ದರೆ ಎಷ್ಟು ದಂಡ ವಿಧಿಸಲಾಗುವುದು ಎಂಬುದರ ವಿವರಣೆ ಕೆಳಗಿದೆ

ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ಬೀಳಲಿದೆ ಭಾರೀ ದಂಡ

ಮಹಾನಗರ/ನಗರ ಶಾಖೆಗಳಲ್ಲಿ
ಮಹಾನಗರ ಮತ್ತು ನಗರದ ಬ್ಯಾಂಕ್‌ ಶಾಖೆಗಳಲ್ಲಿ ಉಳಿತಾಯ ಖಾತೆಯಲ್ಲಿ ಕನಿಷ್ಟ 10 ಸಾವಿರ ರುಪಾಯಿ ಇರಬೇಕು. ತಿಂಗಳಿನಲ್ಲಿ 10 ಸಾವಿರದಿಂದ ಕೆಳಗೆ 7,500 ಒಳಗೆ ಹಣವಿದ್ದರೆ 150 ರುಪಾಯಿ ದಂಡ ಅನ್ವಯಿಸುತ್ತದೆ.

7,500 ರಿಂದ 5,000 ರುಪಾಯಿ ಒಳಗೆ ಬ್ಯಾಲೆನ್ಸ್ ಇದ್ದರೆ 300 ರುಪಾಯಿ ದಂಡ ಹಾಗೂ 5,000 ದಿಂದ 2,500 ಒಳಗಿದ್ದ ಉಳಿತಾಯ ಖಾತೆಗೆ 450 ರುಪಾಯಿ ದಂಡ ವಿಧಿಸಲಾಗುವುದು. ಇನ್ನೂ ಜೀರೋ ಬ್ಯಾಲೆನ್ಸ್ ಹೊಂದಿರುವವರು ತೆರಿಗೆ ಹೊರತುಪಡಿಸಿ 600 ರುಪಾಯಿ ದಂಡ ತೆರಬೇಕಾಗುತ್ತದೆ.

ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ ಬೀಳಲಿದೆ ಭಾರೀ ದಂಡ

ಗ್ರಾಮೀಣ ಪ್ರದೇಶದ ಶಾಖೆಗಳಲ್ಲಿ
ಹೆಚ್‌ಡಿಎಫ್‌ಸಿ ಗ್ರಾಮೀಣ ಪ್ರದೇಶದ ಶಾಖೆಗಳಲ್ಲಿ ಗ್ರಾಹಕರು ಉಳಿತಾಯ ಖಾತೆಯಲ್ಲಿ ಕನಿಷ್ಟ 2,500 ರುಪಾಯಿ ಇರಿಸಿಕೊಂಡಿರಬೇಕು ಎಂಬ ನಿಯಮವಿದೆ. ತಿಂಗಳಿನಲ್ಲಿ 2,500 ರಿಂದ 1,000 ಬ್ಯಾಲೆನ್ಸ್ ಇರುವ ಖಾತೆಗಳಿಗೆ 270 ರುಪಾಯಿ ದಂಡ ಅನ್ವಯವಾಗುವುದು.

ಖಾತೆಯಲ್ಲಿ ಜೀರೋ ಬ್ಯಾಲೆನ್ಸ್ ಇದ್ದರೆ 450 ರುಪಾಯಿ ದಂಡ ಬೀಳಲಿದೆ. ಈ ಮೇಲಿನ ಎಲ್ಲಾ ಶುಲ್ಕಗಳು ತೆರಿಗೆ ಹೊರತುಪಡಿಸಿ ವಿಧಿಸಲಾಗುವ ಮೊತ್ತವಾಗಿದ್ದು, ಕನಿಷ್ಟ ಮೊತ್ತ ಉಳಿಸಿಕೊಳ್ಳದಿದ್ದರೆ ತೆರಿಗೆಯನ್ನು ಸೇರಿಸಿ ದಂಡ ಪಾವತಿಸಬೇಕು.

English summary

Bank Charges Penalty For Insufficient Balance In These Savings Accounts

Bank Charges a fee of tune of 150-600 rupees for Insufficient balance in savings accounts
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X