ಭಾರತದಲ್ಲಿ ಫೆಬ್ರವರಿ ತಿಂಗಳಿನಲ್ಲಿ ಬೇರೆ ತಿಂಗಳುಗಳಿಗೆ ಹೋಲಿಕೆ ಮಾಡಿದಾಗ ಕೊಂಚ ಕಡಿಮೆ ಬ್ಯಾಂಕ್ ರಜೆಗಳು ಇದೆ. ವಾರದ ರಜೆಗಳನ್ನು ಹೊರತುಪಡಿಸಿ ಉಳಿದ ಬ್ಯಾಂಕ್ ರಜೆಗಳು ಆಯಾ ರಾಜ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಫೆಬ್ರವರಿಯಲ್ಲಿ ಮುಖ್ಯವಾಗಿ ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ಭಾರತೀಯ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಮಹಾ ಶಿವರಾತ್ರಿಯು ಶಿವನನ್ನು ಪೂಜಿಸುವ ವಾರ್ಷಿಕ ಹಿಂದೂ ಆಚರಣೆಯಾಗಿದೆ.
ಭಾರತದಲ್ಲಿ ನಾಳೆ ಅಂದರೆ ಫೆಬ್ರವರಿ 18ರಂದು ಮಹಾಶಿವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ಕಾಶ್ಮೀರದಿಂದ ತಮಿಳುನಾಡಿನವರೆಗೂ ಹಲವಾರು ರಾಜ್ಯಗಳಲ್ಲಿ ಜನವರು ಮಹಾಶಿವರಾತ್ರಿ ದಿನದಂದು ಸಾಂಪ್ರಾದಾಯಿಕ ಆಚರಣೆಗಳನ್ನು ಮಾಡುತ್ತಾರೆ. ಈ ದಿನದಂದು ಬ್ಯಾಂಕ್‌ಗಳಲ್ಲಿ ರಜೆ ಇರಲಿದೆ.
ಸಾಮಾನ್ಯವಾಗಿ ಖಾಸಗೀ ಬ್ಯಾಂಕುಗಳು ಹಾಗೂ ಸಾರ್ವಜನಿಕ ಬ್ಯಾಂಕ್‌ಗಳು ಸಾರ್ವಜನಿಕ ರಜಾದಿನಗಳು, ಹಬ್ಬ-ಸಮಾರಂಭಗಳ ಸಂದರ್ಭದಲ್ಲಿ ಬಂದ್ ಆಗಿರುತ್ತದೆ. ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇದ್ದರೆ, ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇರಲಿದೆ. ಅಂದರೆ ರಜೆಯು ರಾಜ್ಯದ ಮೇಲೆ ನಿರ್ಧರಿತವಾಗುತ್ತದೆ. ಇದನ್ನು ಹೊರತುಪಡಿಸಿ ಗಣರಾಜ್ಯೋತ್ಸವ ದಿನ, ಸ್ವಾತಂತ್ರ್ಯೋತ್ಸವ ದಿನ, ಗಾಂಧಿ ಜಯಂತಿ ದಿನ ಬ್ಯಾಂಕ್‌ಗಳು ದೇಶದಾದ್ಯಂತ ಬಂದ್ ಆಗಿರುತ್ತದೆ. ಮಹಾಶಿವರಾತ್ರಿ ದಿನದಂದು ಯಾವೆಲ್ಲ ರಾಜ್ಯಗಳು ಬಂದ್ ಆಗಿರುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ....
ಈ ರಾಜ್ಯಗಳಲ್ಲಿ ಬ್ಯಾಂಕ್ ಬಂದ್
ಅಹಮದಾಬಾದ್ (ಗುಜರಾತ್), ಬೆಲಾಪುರ, ಬೆಂಗಳೂರು (ಕರ್ನಾಟಕ), ಭುವನೇಶ್ವರ (ಒಡಿಶಾ), ಡೆಹ್ರಾಡೂನ್ (ಉತ್ತರಾಖಂಡ), ಹೈದಾರಾಬಾದ್ (ಆಂಧ್ರಪ್ರದೇಶ, ತೆಲಂಗಾಣ), ಜಮ್ಮು, ಕಾನ್ಪುರ (ಉತ್ತರ ಪ್ರದೇಶ), ಕೊಚ್ಚಿ (ಕೇರಳ), ಲಕ್ನೋ (ಉತ್ತರ ಪ್ರದೇಶ), ಮುಂಬೈ (ಮಹಾರಾಷ್ಟ್ರ), ನಾಗ್ಪುರ (ಮಹಾರಾಷ್ಟ್ರ), ರಾಯಪುರ (ಛತ್ತೀಸ್‌ಗಢ), ರಾಂಚಿ (ಜಾರ್ಖಾಂಡ್), ಶಿಮ್ಲಾ (ಹಿಮಾಚಲ ಪ್ರದೇಶ), ಶ್ರೀನಗರ (ಜಮ್ಮು-ಕಾಶ್ಮೀರ), ತಿರುವನಂತಪುರದಲ್ಲಿ (ಕೇರಳ) ಬ್ಯಾಂಕ್‌ಗಳು ಬಂದ್ ಆಗಿರುತ್ತದೆ.
ಯಾವೆಲ್ಲ ರಾಜ್ಯಗಳಲ್ಲಿ ಬ್ಯಾಂಕ್ ಬಂದ್ ಆಗಲ್ಲ
ದೆಹಲಿ, ಗೋವಾ, ಬಿಹಾರ, ಮೇಘಾಲಯ, ತ್ರಿಪುರಾ, ಮಿಜೋರಾಂ, ಚಂಡೀಗಢ, ತಮಿಳುನಾಡು, ಸಿಕ್ಕಿಂ, ಅಸ್ಸಾಂ, ಮನಿಪುರ, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿ ಮಹಾಶಿವರಾತ್ರಿ ದಿನದಂದು ಬ್ಯಾಂಕ್‌ಗಳು ಬಂದ್ ಆಗಿರುವುದಿಲ್ಲ.
ಫೆಬ್ರವರಿಯ ಸಂಪೂರ್ಣ ಬ್ಯಾಂಕ್ ರಜಾ ಪಟ್ಟಿ
ಫೆಬ್ರವರಿ 5: ಭಾನುವಾರ, ವಾರದ ರಜೆ (ದೇಶಾದ್ಯಂತ)
ಫೆಬ್ರವರಿ 11: ಎರಡನೇ ಶನಿವಾರ (ದೇಶಾದ್ಯಂತ)
ಫೆಬ್ರವರಿ 12: ಭಾನುವಾರ, ವಾರದ ರಜೆ (ದೇಶಾದ್ಯಂತ)
ಫೆಬ್ರವರಿ 15: ಬುಧವಾರ, ಲೂಯಿ-ನ್ಗಾಯ್-ನಿ (ಹೈದರಾಬಾದ್)
ಫೆಬ್ರವರಿ 18: ಶನಿವಾರ, ಮಹಾಶಿವರಾತ್ರಿ (ಅಹಮದಾಬಾದ್, ಬೇಲಾಪುರ, ಬೆಂಗಳೂರು, ಹೈದರಾಬಾದ್, ಕಾನ್ಪುರ, ಲಕ್ನೋ, ಮುಂಬೈ, ನಾಗ್ಪುರ, ರಾಯ್‌ಪುರ, ರಾಂಚಿ, ಶಿಮ್ಲಾ, ತಿರುವನಂತಪುರಂ)
ಫೆಬ್ರವರಿ 19: ಭಾನುವಾರ, ವಾರದ ರಜೆ (ದೇಶಾದ್ಯಂತ)
ಫೆಬ್ರವರಿ 20: ಸೋಮವಾರ, ರಾಜ್ಯ ದಿನ (ಅಜ್ವಾಲ್)
ಫೆಬ್ರವರಿ 21: ಮಂಗಳವಾರ, ಲೂಸರ್ (ಗಾಂಗ್ಟಾಕ್)
ಫೆಬ್ರವರಿ 25: ಮೂರನೇ ಶನಿವಾರ (ದೇಶಾದ್ಯಂತ)
ಫೆಬ್ರವರಿ 26: ಭಾನುವಾರ, ವಾರದ ರಜೆ (ದೇಶಾದ್ಯಂತ)


Click it and Unblock the Notifications