ಬ್ಯಾಂಕ್ ಆಫ್ ಬರೋಡಾ ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ದೇಶದ ಎರಡನೇ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೇಶದ ಅತೀ ದೊಡ್ಡ ಬ್ಯಾಂಕ್ ಆಗಿದೆ. ಅದರ ನಂತರದ ಸ್ಥಾನದಲ್ಲಿ ಬ್ಯಾಂಕ್ ಆಫ್ ಬರೋಡಾ ಇದೆ ಎಂದು ಲಿವ್‌ಮಿಂಟ್ ವರದಿ ಮಾಡಿದೆ. ಬ್ಯಾಂಕ್ ಆಫ್ ಬರೋಡಾದ ಮಾರುಕಟ್ಟೆ ಮೌಲ್ಯವು 1,00,169.29 ಕೋಟಿ ರೂಪಾಯಿ ಆಗಿದೆ.
ಮೊದಲ ಸ್ಥಾನದಲ್ಲಿರುವ ಎಸ್‌ಬಿಐನ ಮಾರುಕಟ್ಟೆ ಮೌಲ್ಯವು 5.07 ಲಕ್ಷ ಕೋಟಿ ರೂಪಾಯಿ ಆಗಿದೆ. ಇನ್ನು ರಿಲಯನ್ಸ್ ಇಂಡಿಯಾವು ಮಾರುಕಟ್ಟೆ ಮೌಲ್ಯದ ಲೆಕ್ಕಾಚಾರದಲ್ಲಿ ಇಂದಿಗೂ ಮೊದಲ ಸ್ಥಾನದಲ್ಲಿಯೇ ಉಳಿದಿದೆ. ಅದಾದ ಬಳಿಕ ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಐಟಿಸಿ, ಇನ್ಫೋಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಮತ್ತು ಭಾರ್ತಿ ಏರ್‌ಟೆಲ್ ಇದೆ.

ಷೇರು ಮಾರುಕಟ್ಟೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಮೌಲ್ಯ ಎಷ್ಟಿದೆ?
ಬ್ಯಾಂಕ್ ಆಫ್ ಬರೋಡಾ ಸೋಮವಾರ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 189 ರೂಪಾಯಿಯೊಂದಿಗೆ ವಹಿವಾಟು ಆರಂಭ ಮಾಡಿದೆ. ಇದಕ್ಕೂ ಮುಂಚಿನ ವಹಿವಾಟಿನ ಅಂತ್ಯದ ಮೌಲ್ಯವನ್ನು ನೋಡಿದಾಗ ಇಂದು ಬ್ಯಾಂಕ್ ಆಫ್ ಬರೋಡಾ ಸ್ಟಾಕ್ ಏರಿಕೆಯನ್ನು ಕಂಡಿದೆ. ವಹಿವಾಟಿನ ಮಧ್ಯದಲ್ಲಿ ಬ್ಯಾಂಕ್‌ನ ಸ್ಟಾಕ್ 194.85 ರೂಪಾಯಿಗೆ ಜಿಗಿತ ಕಂಡಿದೆ. ಬಿಎಸ್‌ಇಯಲ್ಲಿ ಶೇಕಡ 3ರಷ್ಟು ಹೆಚ್ಚಳವಾಗಿ, 193.75 ರೂಪಾಯಿಗೆ ತಲುಪಿದೆ.
ಹೂಡಿಕೆದಾರರು ಹೆಚ್ಚಿನ ಮಟ್ಟದಲ್ಲಿ ಲಾಭವನ್ನು ಕಂಡ ಕಾರಣದಿಂದಾಗಿ ದೇಶೀಯ ಸೂಚ್ಯಂಕಗಳು ಸೋಮವಾರ ಭಾರೀ ಏರಿಕೆಯನ್ನು ಕಂಡಿದೆ. ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ ದಿನದ ಅವಧಿಯಲ್ಲಿ ಗರಿಷ್ಠ 63,574.69 ಕ್ಕೆ ತಲುಪಿದೆ. ಇದು ದಾಖಲೆಯ ಗರಿಷ್ಠ 63,583 ರಿಂದ ಕೇವಲ 8 ಪಾಯಿಂಟ್‌ಗಳಷ್ಟೆ ಕಡಿಮೆಯಾಗಿದೆ. ಅಂತಿಮವಾಗಿ, 216 ಪಾಯಿಂಟ್‌ಗಳು ಅಥವಾ ಶೇಕಡಾ 0.34 ರಷ್ಟು ಕುಸಿದು 63,168 ಕ್ಕೆ ಮುಕ್ತಾಯವಾಯಿತು.
ಈ ನಡುವೆ ಎನ್‌ಎಸ್‌ಇ ನಿಫ್ಟಿ ಇಂಟ್ರಾ-ಡೇ ಗರಿಷ್ಠ 18,881.45 ಅನ್ನು ತಲುಪಿದೆ. ದಾಖಲೆಯ ಮಟ್ಟ 18,887.6ಕ್ಕಿಂತ ಸುಮಾರು ಆರು ಪಾಯಿಂಟ್‌ಗಳಷ್ಟೇ ಕಡಿಮೆ ಇದೆ. 71 ಅಂಕಗಳು ಅಥವಾ ಶೇಕಡಾ 0.37 ರಷ್ಟು ಕುಸಿದು 18,755 ರಲ್ಲಿ ವಹಿವಾಟು ಅಂತ್ಯ ಮಾಡಿದೆ. ಕಳೆದ ವಾರ, ಟಾಪ್-10 ಅತ್ಯಂತ ಮೌಲ್ಯಯುತ ದೇಶೀಯ ಸಂಸ್ಥೆಗಳಲ್ಲಿ ಆರರ ಒಟ್ಟು ಮಾರುಕಟ್ಟೆ ಮೌಲ್ಯವು 1,13,703.82 ಕೋಟಿ ರೂಪಾಯಿ ಆಗಿದೆ.
ಟಾಪ್ 10 ಸಂಸ್ಥೆಗಳ ಮಾರುಕಟ್ಟೆ ಮೌಲ್ಯ
ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯವು 63,259.05 ಕೋಟಿ ರೂಪಾಯಿ ಜಿಗಿತ ಕಂಡು, 17,42,412.47 ಕೋಟಿ ರೂಪಾಯಿಗೆ ತಲುಪಿದೆ. ಹಿಂದೂಸ್ತಾನ್ ಯೂನಿಲಿವರ್ ಮಾರುಕಟ್ಟೆ ಮೌಲ್ಯ 18,737.99 ಕೋಟಿ ರೂಪಾಯಿ ಏರಿಕೆ ಕಂಡು, 6,38,019.76 ಕೋಟಿ ರೂಪಾಯಿಗೆ ತಲುಪಿದೆ. ಐಟಿಸಿಯ ಮಾರುಕಟ್ಟೆ ಮೌಲ್ಯ 18,331.32 ಕೋಟಿ ರೂಪಾಯಿ ಜಿಗಿತ ಕಂಡು 5,63,237.76 ಕೋಟಿ ರೂಪಾಯಿ ಆಗಿದೆ.
ಇನ್ನು ಇನ್ಫೋಸಿಸ್ ಮಾರುಕಟ್ಟೆ ಮೌಲ್ಯವು 11,059.41 ಕೋಟಿ ರೂಪಾಯಿ ಜಿಗಿತ ಕಂಡು, 5,36,433.55 ಕೋಟಿ ರೂಪಾಯಿಗೆ ತಲುಪಿದೆ. ಭಾರ್ತಿ ಏರ್‌ಟೆಲ್ ಮಾರುಕಟ್ಟೆ ಮೌಲ್ಯವು 2,016.08 ಕೋಟಿ ರೂಪಾಯಿ ಏರಿಕೆ ಕಂಡು, 4,66,412.79 ಕೋಟಿ ರೂಪಾಯಿ ಆಗಿದೆ. ಎಚ್‌ಡಿಎಫ್‌ಸಿ ಮೌಲ್ಯವು 299.97 ಕೋಟಿ ರೂಪಾಯಿ ಹೆಚ್ಚಳವಾಗಿ 4,89,496.34 ಕೋಟಿ ರೂಪಾಯಿ ಆಗಿದೆ.
ಟಿಸಿಎಸ್ ಮಾರುಕಟ್ಟೆ ಮೌಲ್ಯವು 12,879.86 ಕೋಟಿ ರೂಪಾಯಿ ಇಳಿಕೆ ಕಂಡು, 11,61,840.29 ಕೋಟಿ ರೂಪಾಯಿ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾರುಕಟ್ಟೆ ಮೌಲ್ಯವು 6,514.97 ಕೋಟಿ ರೂಪಾಯಿ ಕುಸಿತ ಕಂಡು, 5,09,863.08 ಕೋಟಿ ರೂಪಾಯಿಗೆ ತಲುಪಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಮೌಲ್ಯವು 4,722.95 ಕೋಟಿ ರೂಪಾಯಿ ಇಳಿದು, 8,95,458.57 ಕೋಟಿ ರೂಪಾಯಿ ಆಗಿದೆ. ಐಸಿಐಸಿಐ ಬ್ಯಾಂಕ್ ಮಾರುಕಟ್ಟೆ ಮೌಲ್ಯವು 1,882.67 ಕೋಟಿ ರೂಪಾಯಿ ಕುಸಿದು, 6,53,980.16 ಕೋಟಿ ರೂಪಾಯಿ ಆಗಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?



Click it and Unblock the Notifications