ಪ್ರಸ್ತುತ ದೇಶದಾದ್ಯಂತ ಮಾತ್ರವಲ್ಲ ವಿಶ್ವದಾದ್ಯಂತ ನಗದು ರಹಿತ ವಹಿವಾಟಿಗೆ ಅಧಿಕ ಆದ್ಯತೆಯನ್ನು ನೀಡಲಾಗುತ್ತಿದೆ. ಹಾಗಿರುವಾಗಲೂ ನಮಗೆ ತೀರಾ ಅಗತ್ಯವಾದ ಸಂದರ್ಭದಲ್ಲಿ ನಗದು ಬಳಕೆ ಮಾಡಬೇಕಾಗುತ್ತದೆ. ಕೆಲವೆಡೆ ಈಗಲೂ ನಗದನ್ನೇ ಸ್ವೀಕರಿಸಲಾಗುತ್ತದೆ. ಈ ನಡುವೆ ಎಟಿಎಂನಲ್ಲಿ ಯುಪಿಐ ಬಳಸಿ ನಗದು ವಿತ್‌ಡ್ರಾ ಮಾಡಬಹುದು ಎಂಬುವುದು ನಿಮಗೆ ತಿಳಿದಿದೆಯೆ?
ಹೌದು ಈ ವ್ಯವಸ್ಥೆಯನ್ನು ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ವಿತ್‌ಡ್ರಾವಲ್ (ಐಸಿಸಿಡಬ್ಲ್ಯೂ) ವ್ಯವಸ್ಥೆಯನ್ನು ಆರಂಭ ಮಾಡಿದ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಎಂಬ ಹೆಗ್ಗಳಿಕೆಯನ್ನು ಬ್ಯಾಂಕ್ ಆಫ್ ಬರೋಡಾ ಪಡೆದುಕೊಂಡಿದೆ. ಈ ನೂತನ ವ್ಯವಸ್ಥೆಯ ಮೂಲಕ ಗ್ರಾಹಕರು ತಮ್ಮ ಎಟಿಎಂ ಮೂಲಕ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಬಳಕೆ ಮಾಡಿ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದಾಗಿದೆ.

ಈ ಬಗ್ಗೆ ಬ್ಯಾಂಕ್ ಆಫ್ ಬರೋಡಾ ಮಾಹಿತಿಯನ್ನು ನೀಡಿದೆ. "ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಆರಂಭ ಮಾಡಿದ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಆಗಿದೆ. ಈ ಸೇವೆಯನ್ನು ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ಮತ್ತು ಇತರೆ ಗ್ರಾಹಕರು ಪಡೆಯಬಹುದಾಗಿದೆ," ಎಂದು ಹೇಳಿಕೆಯಲ್ಲಿ ಬ್ಯಾಂಕ್ ಆಫ್ ಬರೋಡಾ ತಿಳಿಸಿದೆ.
"ಭೀಮ್ ಯುಪಿಐ, ಬಿಒಬಿ ವರ್ಲ್ಡ್ ಯುಪಿಐ, ಅಥವಾ ಇತರೆ ಯುಪಿಐ ಅಪ್ಲಿಕೇಷನ್‌ಗಳನ್ನು ಬಳಸಿಕೊಂಡು ಬ್ಯಾಂಕ್ ಆಫ್ ಬರೋಡಾ ಗ್ರಾಹಕರು ಮತ್ತು ಇತರೆ ಗ್ರಾಹಕರು ಈ ಯುಪಿಐ ಆಧಾರಿತ ಎಟಿಎಂ ನಗದು ವಿತ್‌ಡ್ರಾ ವ್ಯವಸ್ಥೆಯನ್ನು ಬಳಕೆ ಮಾಡಬಹುದಾಗಿದೆ," ಎಂದು ಬ್ಯಾಂಕ್ ಆಫ್ ಬರೋಡಾ ಹೇಳಿದೆ.
ಕಳೆದ ತಿಂಗಳು ಮಾರ್ಗಸೂಚಿ ಬಿಡುಗಡೆ
ಮೇ ತಿಂಗಳಿನಲ್ಲಿ ಎನ್‌ಸಿಆರ್ ಕಾರ್ಪೊರೇಷನ್ ಯುಪಿಐ ಪ್ಲಾಟ್‌ಫಾರ್ಮ್‌ಗಳಲ್ಲಿ ಮೊದಲ ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ವಿತ್‌ಡ್ರಾವಲ್ (ಐಸಿಸಿಡಬ್ಲ್ಯು) ಅನ್ನು ಪರಿಚಯಿಸಿದೆ. ಇದು ಬಳಕೆದಾರರು ಎಟಿಎಂ ಕಾರ್ಡ್ ಇಲ್ಲದೆಯೇ ಹಣವನ್ನು ಹಿಂದಕ್ಕೆ ಪಡೆಯಲು ಸಹಾಯಕವಾಗಿದೆ. ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಹಣವನ್ನು ಹಿಂಪಡೆಯಬಹುದಾಗಿದೆ.
"ಇಂಟರ್‌ಚೇಂಜ್ ಶುಲ್ಕಗಳು ಮತ್ತು ಗ್ರಾಹಕರ ಶುಲ್ಕಗಳ ಮೇಲೆ ಸುತ್ತೋಲೆಯ ಅಡಿಯಲ್ಲಿ ಸೂಚಿಸಲಾದ ಶುಲ್ಕಗಳನ್ನು ಹೊರತುಪಡಿಸಿ ಯಾವುದೇ ಶುಲ್ಕಗಳನ್ನು ವಿಧಿಸದೆ ಅಂತಹ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲಾಗುತ್ತದೆ," ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೇಳಿದೆ.
ಈ ಯೋಜನೆಯನ್ನು ಬಳಸುವುದು ಹೇಗೆ?
ಹಂತ 1: ಬ್ಯಾಂಕ್ ಆಫ್ ಬರೋಡಾದ ಹತ್ತಿರದ ಎಟಿಎಂಗೆ ಹೋಗಿ UPI Cash Withdrawal ಅನ್ನು ಆಯ್ಕೆ ಮಾಡಿ
ಹಂತ 2: ನೀವು ವಿತ್‌ಡ್ರಾ ಮಾಡಲು ಬಯಸುವ ಮೊತ್ತವನ್ನು ನಮೂದಿಸಿ.
ಹಂತ 3: ಎಟಿಎಂನಲ್ಲಿ ಕ್ಯೂಆರ್ ಕೋಡ್ ಕಾಣುತ್ತದೆ. ಐಸಿಸಿಡಬ್ಲ್ಯೂ ನಡೆಸಲು ನಿಮ್ಮ ಯುಪಿಐ ಅಪ್ಲಿಕೇಷನ್ ಮೂಲಕ ಸ್ಕ್ಯಾನ್ ಮಾಡಬೇಕಾಗುತ್ತದೆ.
ಹಂತ 4: ನಿಮ್ಮ ಫೋನ್‌ನಲ್ಲಿ ನಿಮ್ಮ ಯುಪಿಐ ಪಿನ್ ಅನ್ನು ಟೈಪ್ ಮಾಡಿ ಮತ್ತು ನಂತರ ನೀವು ನಿಮ್ಮ ಹಣವನ್ನು ವಿತ್‌ಡ್ರಾ ಮಾಡಬಹುದು.
ನೀವು ಪಾಲಿಸಬೇಕಾದ ನಿಯಮಗಳು
* ನಿಮ್ಮ ಯುಪಿಐಗೆ ನೀವು ಬಹು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಿದ್ದರೆ, ನೀವು ಹಣವನ್ನು ವಿತ್‌ಡ್ರಾ ಮಾಡಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಲು ಐಸಿಸಿಡಬ್ಲ್ಯೂ ನಿಮಗೆ ಆಯ್ಕೆಗಳನ್ನು ನೀಡುತ್ತದೆ.
* ನೀವು ಪ್ರತಿ ಖಾತೆಯಿಂದ ಗರಿಷ್ಠ ಎರಡು ವಹಿವಾಟುಗಳನ್ನು ಮಾಡಬಹುದು.
* ಪ್ರತಿ ವಹಿವಾಟಿನಲ್ಲಿ ನೀವು ವಿತ್‌ಡ್ರಾ ಮಾಡಬಹುದಾದ ಗರಿಷ್ಠ ಮೊತ್ತ 5 ಸಾವಿರ ರೂಪಾಯಿ ಆಗಿದೆ.
* ಈ ನಗದು ವಿತ್‌ಡ್ರಾ ಮಾಡುವ ಸೌಲಭ್ಯವನ್ನು ಬಳಸಲು ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್‌ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್‌ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್‌ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications