ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಕೇವಲ ಮಹಿಳಾ ಮಣಿಯರಿಗೆ ಮಾತ್ರವಲ್ಲ, ಸಾರಿಗೆ ನಿಗಮಕ್ಕೂ ಕೂಡಾ ಭರ್ಜರಿ ಬೇಡಿಕೆ ತರ್ತಿದೆ. ಈ ಹಿಂದೆ ಬೆಂಗಳೂರಿನ ಕೆಲ ಮಾರ್ಗಗಳಲ್ಲಿ ಜನರೇ ಬರ್ತಿಲ್ಲ ಅಂತಾ ಬಿಎಂಟಿಸಿ ಕೆಲ ಟ್ರಿಪ್‌ಗಳಿಗೆ ಕತ್ತರಿ ಹಾಕಿತ್ತು. ಆದ್ರೆ ಶಕ್ತಿ ಯೋಜನೆ ಬಳಿಕ ಜನವೇ ಬಾರದ ರೂಟ್‌ಗಳು ಹೌಸ್ ಫುಲ್ ಆಗ್ತಾ ಇದ್ದು, ಬಸ್‌ಗಳೇ ಸಾಕಾಗದ ಪರಿಸ್ಥಿತಿ ನಿರ್ಮಾಣ ಆಗಿದಿಯಂತೆ.
ಶಕ್ತಿ ಯೋಜನೆ ಬಿಎಂಟಿಸಿ ಬಸ್‌ಗಳ ಡಿಮ್ಯಾಂಡ್ ಅನ್ನು ಹೆಚ್ಚಸಿದಿಯಂತೆ. ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಕೆಲ ಭಾಗಗಳಲ್ಲಿ ಪ್ರಯಾಣಿಕರ ಕೊರತೆ ಹಿನ್ನೆಲೆ ಒಂದಷ್ಟು ಭಾಗಗಳಿಗೆ ನಿತ್ಯದ ಟ್ರಿಪ್‌ಗಳಿಗೆ ಕತ್ತರಿ ಹಾಕಲಾಗಿತ್ತು. ಆದರೆ ಜನವೇ ಇಲ್ಲದೇ ನಿಂತಿದ್ದ ಟ್ರಿಪ್‌ಗಳಲ್ಲಿ ಸದ್ಯ ಜಾಗವೇ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿದಿಯಂತೆ. ಈ ಬಗ್ಗೆ ಖುದ್ದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಬಿಎಂಟಿಸಿ ತನ್ನ ಟ್ರಿಪ್‌ಗಳ ಸಂಖ್ಯೆಯನ್ನು 5 ಸಾವಿರ ಹೆಚ್ಚಿಸಿದೆ. ಜುಲೈ ತಿಂಗಳಿಂದ ಅಂದರೆ ಶಕ್ತಿ ಯೋಜನೆ ಜಾರಿ ಬಳಿಕ ಬೆಂಗಳೂರು ನಗರದಲ್ಲಿ ಸಿಟಿ ಬಸ್‌ಗಳ ಟ್ರಿಪ್‌ಗಳ ಸಂಖ್ಯೆ ಭಾರೀ ಏರಿಕೆ ಮಾಡಲಾಗಿದೆ. ಪ್ರಯಾಣಿಕರ ಕೊರತೆ ಕಾರಣದಿಂದ ಸುಮಾರು 1.5 ಲಕ್ಷ ಕಿಲೋ ಮೀಟರ್‌ಗೆ ಈ ಹಿಂದೆ ಬಿಎಂಟಿಸಿ ಕತ್ತರಿ ಹಾಕಿತ್ತು.
ಆದ್ರೆ ಈಗ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಬೆಂಗಳೂರಿನಲ್ಲಿ 11.5 ಲಕ್ಷ ಕಿಮೀ ಬಸ್‌ಗಳ ಓಡಾಟ ಮಾಡಲಾಗುತ್ತಿದೆ. ನಿತ್ಯ 5,680 ಬಸ್‌ಗಳಲ್ಲಿ 58.300 ಟ್ರಿಪ್‌ಗಳಲ್ಲಿ ಸಂಚಾರ ಮಾಡಲಾಗುತ್ತಿದೆ. ಶಕ್ತಿ ಯೋಜನೆಗೂ ಮುನ್ನ ಕೇವಲ 53 ಸಾವಿರ ಟ್ರಿಪ್‌ಗಳು ಮಾತ್ರ ಓಡಾಟ ಮಾಡಲಾಗುತ್ತಿತ್ತು. ಈಗ ಬೇಡಿಕೆ ಹೆಚ್ಚಿದ ಹಿನ್ನಲೆ ಟ್ರಿಪ್ ಸಂಖ್ಯೆ ಏರಿಕೆ ಮಾಡಲಾಗಿದೆ.
ಫ್ರೀ ಸಂಚಾರ ಬಳಿಕ ಬೆಂಗಳೂರು ಉತ್ತರ,ಪಶ್ಚಿಮ ಭಾಗದಲ್ಲಿ ಟ್ರಿಪ್‌ಗಳ ಸಂಖ್ಯೆ ಹೆಚ್ಚಿಸಿದೆ. ಬೆಂಗಳೂರು ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ಮಹಿಳಾ ಪ್ರಯಾಣಿಕರ ಓಡಾಟ ಹೆಚ್ಚಾಗಿದ್ದು ಹೀಗಾಗಿ ಬಸ್ಸೇರುತ್ತಿರುವ ಸಂಖ್ಯೆ ಹೆಚ್ಚಳ ಬೆನ್ನಲ್ಲೇ ಟ್ರಿಪ್‌ಗಳ ಸಂಖ್ಯೆಯನ್ನ ನಿಗಮ ಹೆಚ್ಚಿಸಿದೆ. ಪ್ರಮುಖವಾಗಿ ನೆಲಮಂಗಲ, ಪೀಣ್ಯ ವಿಜಯನಗರ ಸುತ್ತ ಮುತ್ತ ಭಾರೀ ಪ್ರಮಾಣದಲ್ಲಿ ಟ್ರಿಪ್‌ಗಳ ಸಂಖ್ಯೆ ಏರಿಕೆ ಮಾಡಲಾಗಿದೆ.
ಈ ಒತ್ತಡವನ್ನ ನಿವಾರಿಸುವ ನಿಟ್ಟಿನಲ್ಲಿ ಸದ್ಯ ಹೆಚ್ಚುವರಿ 1800 ಹೊಸ ಬಸ್‌ಗಳನ್ನ ರಸ್ತೆಗಿಳಿಸಲು ನಿಗಮ ತಯಾರಿ ನಡೆಸಿದೆ. ಇದರಲ್ಲಿ ಒಟ್ಟು 900 ಎಲೆಕ್ಟ್ರಿಕ್ ಹಾಗೂ 900 ಡಿಸೇಲ್ ಬಸ್‌ಗಳನ್ನು ರಸ್ತೆಗಿಳಿಸುವ ಮೂಲಕ ಒತ್ತಡ ನಿವಾರಣೆಗೆ ಮುಂದಾಗಿದೆ. ಈಗಾಗಲೇ ಬಸ್ ಖರೀದಿ ಪ್ರಕ್ರಿಯೆ ಕೂಡ ಮುಕ್ತಾಯ ಹಂತ ತಲುಪಿದ್ದು, ಮುಂದಿನ 2 ತಿಂಗಳಲ್ಲಿಈ ಎಲ್ಲಾ ಬಸ್ಸುಗಳು ಸೇವೆ ನೀಡಲಿವೆ. ಒಂದು ಕಾಲದಲ್ಲಿ ಬಿಎಂಟಿಸಿ ಅಂದ್ರೆ ಸಾಕು ಸಾಕಷ್ಟು ಜನ ಹತ್ತೋದಕ್ಕೆ ಹಿಂದೇಟು ಹಾಕ್ತಾ ಇದ್ರು. ಆದರೆ ಈಗ ಬಿಎಂಟಿಸಿ ಬಸ್ ಅಂದ್ರೆ ಸಾಕು ಜನ ತಾ ಮುಂದು ನಾ ಮುಂದು ಅಂತ ಓಡ್ತಾ ಇದ್ದಾರೆ.


Click it and Unblock the Notifications