ದೇಶದಲ್ಲಿ ಹಲವಾರು ಮಂದಿ ಶ್ರೀಮಂತ ಮಹಿಳೆಯರು ಇದ್ದಾರೆ. ಆ ಪೈಕಿ ಭೋಪಾಲ್‌ನ ಈ ಶ್ರೀಮಂತ ಮಹಿಳೆಯು ಒಬ್ಬರಾಗಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ ಹತ್ತು ಪ್ರೈವೇಟ್ ಜೆಟ್‌ಗಳನ್ನು ಹೊಂದಿದ್ದಾರೆ. ದೇಶದ ಈ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಕನಿಕಾ ಟೆಕ್ರಿವಾಲ್ ಜೆಟ್‌ಸೆಟ್‌ಗೋನ ಸಿಇಒ ಆಗಿದ್ದಾರೆ. ಕನಿಕಾ ಟೆಕ್ರಿವಾಲ್ ನಿವ್ವಳ ಆದಾಯವು 420 ಕೋಟಿ ರೂಪಾಯಿ ಆಗಿದೆ.
33 ವರ್ಷದ ಕನಿಕಾ ಟೆಕ್ರಿವಾಲ್ 2012ರಲ್ಲಿ ಜೆಟ್‌ಸೆಟ್‌ಗೋ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ. ಅಂದರೆ ತನ್ನ 22ನೇ ವಯಸ್ಸಿನಲ್ಲಿಯೇ ಕನಿಕಾ ಟೆಕ್ರಿವಾಲ್ ಈ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ. ಜೆಟ್‌ಸೆಟ್‌ಗೋ ಒಂದು ಪ್ಲೇನ್ ಅಗ್ರಿಗೇಟರ್ ಸ್ಟಾರ್ಟ್ಅಪ್ ಆಗಿದೆ. ಈ ಸಂಸ್ಥೆಯು ಚಾರ್ಟರ್ಡ್ ಪ್ಲೇನ್‌ಗಳು ಮತ್ತು ಹೆಲಿಕಾಪ್ಟರ್‌ಗಳ ಹಾರಾಟವನ್ನು ನಿರ್ವಹಣೆ ಮಾಡುವ ಸಂಸ್ಥೆಯಾಗಿದೆ.

ಕನಿಕಾ ಟೆಕ್ರಿವಾಲ್ ಬಗ್ಗೆ ತಿಳಿಯಿರಿ
ಕನಿಕಾ ಟೆಕ್ರಿವಾಲ್ ಕ್ಯಾನ್ಸರ್ ವಿರುದ್ಧ ಹೋರಾಡಿ ಬದುಕುಳಿದ ವ್ಯಕ್ತಿಯಾಗಿದ್ದಾರೆ. ಕನಿಕಾ ಟೆಕ್ರಿವಾಲ್ ಪ್ರಯಾಣವು ನಿಜವಾಗಿಯೂ ನಂಬಲು ಅಸಾಧ್ಯವಾಗಿದೆ. ಪ್ರಾರಂಭದಲ್ಲಿ ತನ್ನದೇ ಆದ ಸ್ವಂತ ವಾಯುಯಾನ ಸ್ಟಾರ್ಟ್‌ಅಪ್ ಸಂಸ್ಥೆಯನ್ನು ಸ್ಥಾಪನೆ ಮಾಡಲು ಮುಂದಾದ ಕನಿಕಾ ಟೆಕ್ರಿವಾಲ್ ಈಗ ಸುಮಾರು ಒಂದಲ್ಲ ಎರಡಲ್ಲ ಬರೋಬ್ಬರಿ 10 ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ.
ಕನಿಕಾ ಟೆಕ್ರಿವಾಲ್ ಅವರ ಜೆಟ್‌ಸೆಟ್‌ಗೋ ಭಾರತದ ಮೊದಲ ವಿಮಾನ ಗುತ್ತಿಗೆ ಸಂಸ್ಥೆಯಾಗಿದೆ. ಇದು ಸುಮಾರು 1,00,000 ಫ್ಲೈಯರ್‌ಗಳನ್ನು ನಿರ್ವಹಿಸುತ್ತದೆ. ಕನಿಕಾ ಟೆಕ್ರಿವಾಲ್ ಭೋಪಾಲ್‌ನಲ್ಲಿ ಜನಿಸಿದರು ಮತ್ತು ಅವರು ಮಾರ್ವಾಡಿ ಕುಟುಂಬಕ್ಕೆ ಸೇರಿದವರು. ಕನಿಕಾ ಟೆಕ್ರಿವಾಲ್ ಅವರು ತಮ್ಮ ಶಾಲಾ ಶಿಕ್ಷಣವನ್ನು ಲಾರೆನ್ಸ್ ಶಾಲೆ, ಲವ್‌ಡೇಲ್‌ನಿಂದ ಪೂರ್ಣಗೊಳಿಸಿದರು.
ಭೋಪಾಲ್‌ನ ಜವಾಹರಲಾಲ್ ನೆಹರು ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರು. ಕನಿಕಾ ಟೆಕ್ರಿವಾಲ್ ಕೋವೆಂಟ್ರಿ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿದ್ದಾರೆ. ಭಾರತದಲ್ಲಿ ಚಾರ್ಟರ್ ಪ್ಲೇನ್ ವಲಯವನ್ನು ಪರಿವರ್ತಿಸಿದ ಎಲ್ಲಾ ಶ್ರೇಯಸ್ಸು ಕನಿಕಾ ಟೆಕ್ರಿವಾಲ್ ಅವರಿಗೆ ಸಲ್ಲುತ್ತದೆ.
ಕನಿಕಾ ಟೆಕ್ರಿವಾಲ್ ಏನು ಹೇಳುತ್ತಾರೆ?
"ನನ್ನ ತಲೆಯಲ್ಲಿ ಸುಮಾರು ಮೂರು ವರ್ಷಗಳವರೆಗೆ ಒಂದು ಸ್ವಂತ ವಾಯುಯಾನ ಸ್ಟಾರ್ಟ್‌ಅಪ್ ಸಂಸ್ಥೆಯನ್ನು ಆರಂಭ ಮಾಡುವ ಆಲೋಚನೆಯಿತ್ತು. ಆದರೆ ಅಷ್ಟರಲ್ಲೆ ನನಗೆ ಕ್ಯಾನ್ಸರ್ ಇರುವುದು ತಿಳಿಯಿತು. ಅದರ ಚಿಕಿತ್ಸೆಗಾಗಿ ಒಂದು ವರ್ಷಗಳ ಕಾಲ ಕಳೆದುಹೋಯಿತು. ಅಂದರೆ ನನ್ನ ಈ ಐಡಿಯಾ ಕಾರ್ಯರೂಪಕ್ಕೆ ಬರಲು ಒಂದು ವರ್ಷಗಳ ಹಿನ್ನಡೆಯಾಗಿತ್ತು," ಎಂದು ಈ ಹಿಂದೆ ಕನಿಯಾ ಟೆಕ್ರಿವಾಲ್ ಹೇಳಿದ್ದರು.
"ನನ್ನ ಕ್ಯಾನ್ಸರ್ ಚಿಕಿತ್ಸೆ ಮುಗಿಯುವವರೆಗೂ ಯಾರು ಕೂಡಾ ಇಂತಹ ಆಲೋಚನೆಯನ್ನು ಜಾರಿಗೆ ತರದಿರುವುದು ನನ್ನ ಅದೃಷ್ಟವಾಗಿದೆ. ನನ್ನ ಎಲ್ಲ ಚಿಕಿತ್ಸೆಯನ್ನು ಮುಗಿಸಿದ ಬಳಿಕ ನಾನು ನನ್ನ ಈ ಐಡಿಯಾವನ್ನು ಕಾರ್ಯರೂಪಕ್ಕೆ ತಂದಿದ್ದೇನೆ," ಎಂದು ಕೂಡಾ ಕನಿಕಾ ಟೆಕ್ರಿವಾಲ್ ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಉದ್ಯಮಿಯನ್ನು ಮದುವೆಯಾಗಿರುವ ಕನಿಕಾ ಟೆಕ್ರಿವಾಲ್, ಕೋಟಾಕ್ ಖಾಸಗಿ ಬ್ಯಾಂಕಿಂಗ್ ಹುರುನ್ 2021 ರ ಪ್ರಮುಖ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಕಾಣಿಸಿಕೊಂಡ ಭಾರತದ ಅತ್ಯಂತ ಕಿರಿಯ ಸ್ವಯಂ ನಿರ್ಮಿತ ಉದ್ಯಮಿ ಎಂದು ಕನಿಕಾ ಟೆಕ್ರಿವಾಲ್ ಹೆಸರಿಸಲ್ಪಟ್ಟಿದ್ದಾರೆ.
ಕನಿಕಾ ಟೆಕ್ರಿವಾಲ್ ಭಾರತ ಸರ್ಕಾರದಿಂದ ರಾಷ್ಟ್ರೀಯ ವಾಣಿಜ್ಯೋದ್ಯಮ ಪ್ರಶಸ್ತಿ ಮತ್ತು ವರ್ಲ್ಡ್ ಎಕನಾಮಿಕ್ ಫೋರಮ್‌ನಿಂದ ಯುವ ಜಾಗತಿಕ ನಾಯಕಿ ಎಂಬ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ತಮ್ಮ ವ್ಯಾಪಾರ ಕೌಶಲ್ಯಕ್ಕಾಗಿ ಪಡೆದುಕೊಂಡಿದ್ದಾರೆ. ಕನಿಕಾರನ್ನು ವಾಣಿಜ್ಯೋದ್ಯಮಿಗಳು "ದಿ ಸ್ಕೈ ಕ್ವೀನ್" ಎಂಬ ಬಿರುದನ್ನು ನೀಡಿ ಗೌರವಿಸಿದ್ದಾರೆ.


Click it and Unblock the Notifications