ಅತೀ ಅಧಿಕವಾಗಿ ವಿವಾದವನ್ನು ಹುಟ್ಟುಹಾಕುತ್ತಾ ಬಂದಿರುವ ಬಿಗ್ ಬಾಸ್ ರಿಯಾಲಿಟಿ ಶೋ ತನ್ನ ಹದಿನೇಳನೇ ಸೀಸನ್‌ನೊಂದಿಗೆ ಮತ್ತೆ ಆರಂಭವಾಗಿದೆ. ಡಚ್ ರಿಯಾಲಿಟಿ ಶೋನ ಭಾರತೀಯ ಆವೃತ್ತಿ ಹಲವಾರು ಭಾಷೆಗಳಲ್ಲಿ ಇದೆ. ಕನ್ನಡದ ಸೀಸನ್ ಅನ್ನು ಕಿಚ್ಚ ಸುದೀಪ್ ಹೋಸ್ಟ್ ಮಾಡಿದರೆ, ಹಿಂದಿ ವರ್ಜನ್ ಬಿಗ್‌ಬಾಸ್ ಅನ್ನು ಹಿಂದಿ ಚಲನಚಿತ್ರೋದ್ಯಮದಲ್ಲಿ ದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದ ಸಲ್ಮಾನ್ ಖಾನ್ ಹೋಸ್ಟ್ ಮಾಡುತ್ತಿದ್ದಾರೆ.
ಕಾರ್ಯಕ್ರಮದ ಜನಪ್ರಿಯತೆ ಆಗುತ್ತಿದ್ದಂತೆ ಬಿಗ್ ಬಾಸ್ ಪ್ರಾದೇಶಿಕ ವರ್ಜನ್‌ನಲ್ಲಿಯೂ ಆರಂಭ ಮಾಡಲಾಗಿದೆ. ಕನ್ನಡ, ಮರಾಠಿ, ತಮಿಳು, ಬೆಂಗಾಲಿ, ತೆಲುಗು ಮತ್ತು ಮಲಯಾಳಂನಲ್ಲಿ ಬಿಗ್ ಬಾಸ್ ಈಗ ಇದೆ. ಸೀಸನ್‌ನಿಂದ ಸೀಸನ್ ಕಳೆದಂತೆ ಸಲ್ಮಾನ್ ಖಾನ್ ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ ಎಂದು ನಿಮಗೆ ತಿಳಿದಿದೆಯೇ?

ಬಿಗ್ ಬಾಸ್ ಇತಿಹಾಸ
2006-07 ರಲ್ಲಿ, ಮುನ್ನಾ ಭಾಯ್ ಎಂಬಿಬಿಎಸ್ (2003), ಗೋಲ್‌ಮಾಲ್: ಫನ್ ಅನ್‌ಲಿಮಿಟೆಡ್ (2006), ಇಶ್ಕಿಯಾ (2010), ಜಾಲಿ ಎಲ್‌ಎಲ್‌ಬಿ (2013) ಸಿನಿಮಾದಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ಹೆಸರುವಾಸಿಯಾದ ಅರ್ಷದ್ ವಾರ್ಸಿ ಆರಂಭದಲ್ಲಿ ಬಿಗ್ ಬಾಸ್ ಅನ್ನು ಹೋಸ್ಟ್ ಮಾಡಿದರು. ಎರಡನೇ ಸೀಸನ್ ಅನ್ನು ಶಿಲ್ಪಾ ಶೆಟ್ಟಿ ನಡೆಸಿಕೊಟ್ಟರು, ನಂತರ ಅಮಿತಾಬ್ ಬಚ್ಚನ್ ಮತ್ತು ನಂತರ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸಲ್ಮಾನ್ ಖಾನ್ ಒಬ್ಬರಾಗಿದ್ದಾರೆ ಎಂಬುವುದು ಗಮನಾರ್ಹವಾಗಿದೆ.
ಸಲ್ಮಾನ್ ಖಾನ್ ನಿವ್ವಳ ಮೌಲ್ಯ, ಆದಾಯದ ಮೂಲ
ಸಲ್ಮಾನ್ ಖಾನ್ ಅಂದಾಜು ನಿವ್ವಳ ಮೌಲ್ಯವು 350 ಮಿಲಿಯನ್ ಡಾಲರ್ ಅಥವಾ ಸುಮಾರು 2914 ಕೋಟಿ ರೂಪಾಯಿ ಆಗಿದೆ. ವರದಿಗಳ ಪ್ರಕಾರ, ಸಲ್ಮಾನ್ ಖಾನ್ ವಾರ್ಷಿಕ ಆದಾಯ 220 ಕೋಟಿ ರೂಪಾಯು ಆಗಿದೆ. ಅಂದರೆ ತಿಂಗಳಿಗೆ ಅಂದಾಜು 16 ಕೋಟಿ ರೂಪಾಯಿ ಪಡೆಯುತ್ತಾರೆ.
ಸಲ್ಮಾನ್ ಖಾನ್ ಆದಾಯದ ಮುಖ್ಯ ಮೂಲವೆಂದರೆ ಚಲನಚಿತ್ರಗಳಲ್ಲಿನ ನಟನೆಯಾಗಿದೆ. ಇದರ ಬಳಿಕ ನಂತರದ ಮುಖ್ಯ ಮೂಲ ಬಿಗ್ ಬಾಸ್ ಹೋಸ್ಟ್ ಮಾಡುವುದು ಆಗಿದೆ. ಇದನ್ನು ಹೊರತುಪಡಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿಯೂ ಸಲ್ಮಾನ್ ಖಾನ್ ಸಂಭಾವನೆ ಪಡೆಯುತ್ತಾರೆ. ಬೀಯಿಂಗ್ ಹ್ಯೂಮನ್ ಎಂಬ ಬಟ್ಟೆ ಬ್ರಾಂಡ್ ಮತ್ತು ಪ್ರೊಡಕ್ಷನ್ ಹೌಸ್ ಅನ್ನು ಸಲ್ಮಾನ್ ಖಾನ್ ಹೊಂದಿದ್ದಾರೆ.
ಸಲ್ಮಾನ್ ಖಾನ್ ಬಿಗ್ ಬಾಸ್ ಶುಲ್ಕ
ಬಿಗ್ ಬಾಸ್ ಸೀಸನ್ 17 ರ ಹೋಸ್ಟ್ ಆಗಿ ವಾರಕ್ಕೆ ಸರಿಸುಮಾರು 12 ಕೋಟಿ ರೂಪಾಯಿಗಳನ್ನು ಸಲ್ಮಾನ್ ಖಾನ್ ಶುಲ್ಕವಾಗಿ ಪಡೆಯುತ್ತಾರೆ ಎಂದು ವರದಿಗಳು ಹೇಳುತ್ತದೆ. ಒಟ್ಟಾರೆಯಾಗಿ ನಾವು ನೋಡಿದಾಗ ಒಂದು ಸೀಸನ್‌ಗೆ 2.5 ಕೋಟಿ ರೂಪಾಯಿ ಸಂಭಾವನೆಯನ್ನು ಸಲ್ಮಾನ್ ಖಾನ್ ಪಡೆಯುತ್ತಾರೆ. ಇನ್ನು ಇತ್ತೀಚೆಗೆ ಬುಲೆಟ್‌ಪ್ರೂಫ್ ಹೊಂದಿರುವ ಅತೀ ದುಬಾರಿ ಎಸ್‌ಯುವಿ ಆಮದು ಮಾಡಿಕೊಳ್ಳುವ ಮೂಲಕ ಸಲ್ಮಾನ್ ಖಾನ್ ಸುದ್ದಿಯಾಗಿದ್ದಾರೆ.
ಬಿಗ್ ಬಾಸ್ 17 ರ ಬಗ್ಗೆ ಮಾಹಿತಿ
ಬಿಗ್ ಬಾಸ್ ಸೀಸನ್ 17 ಕಲರ್ಸ್ ಟಿವಿ ಮತ್ತು ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದೆ. ಪ್ರೀಮಿಯರ್ ಎಪಿಸೋಡ್ ಪ್ರೇಕ್ಷಕರಿಗೆ ಹೊಸ ಸ್ಪರ್ಧಿಗಳನ್ನು ಪರಿಚಯಿಸಿದೆ. ಅಂಕಿತಾ ಲೋಖಂಡೆ , ಅವರ ಪತಿ ವಿಕ್ಕಿ ಜೈನ್, ಹಾಸ್ಯನಟ ಮುನಾವರ್ ಫರುಕಿ, ಜಿಗ್ನಾ ವೋರಾ, ಅಭಿಷೇಕ್ ಕುಮಾರ್, ಇಶಾ ಮಾಳವಿಯಾ, ರಿಂಕು ಧವನ್, ಯೂಟ್ಯೂಬರ್ ಅರುಣ್ ಮಾಶೆಟ್ಟೆ, ಸನ್ನಿ ಆರ್ಯ, ಫಿರೋಜಾ ಖಾನ್, ಸೋನಿಯಾ ಬನ್ಸಾಲ್, ಜಿಗ್ನಾ ವೋರಾ ಮತ್ತು ಸನಾ ರಯೀಸ್ ಖಾನ್ ಈ ಪಟ್ಟಿಯಲ್ಲಿ ಸೇರಿದ್ದಾರೆ.


Click it and Unblock the Notifications