ಕೆಲವು ದಿನಗಳ ಹಿಂದೆ ಬೈಜೂಸ್‌ನ ಸಿಇಒ ಬೈಜು ರವೀಂದ್ರನ್‌ರ ಬೆಂಗಳೂರಿನಲ್ಲಿರುವ ಕಚೇರಿ ಮತ್ತು ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದು ಶೋಧ ಕಾರ್ಯಚರಣೆಯನ್ನು ನಡೆಸಲಾಗಿದೆ. ವಿದೇಶಿ ಹೂಡಿಕೆ ಕಾನೂನುಗಳನ್ನು ಉಲ್ಲಂಘಣೆ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ದಾಳಿಯನ್ನು ನಡೆಸಿದೆ. ಈ ನಡುವೆ ಸಂಸ್ಥೆಯ ಭವಿಷ್ಯದ ವಿಚಾರಕ್ಕೆ ಬಂದಾಗ ಬೈಜು ರವೀಂದ್ರನ್ ಮತ್ತು ಅವರ ಪತ್ನಿ ದಿವ್ಯಾ ಗೋಕುಲನಾಥ್ ಇಕ್ಕಟ್ಟಿನಲ್ಲಿದ್ದಾರೆ.
ದಿವ್ಯಾ ಗೋಕುಲನಾಥ್ ಅವರು ಬೈಜು ರವೀಂದ್ರನ್ ಪತ್ನಿ ಮತ್ತು ಎಡ್‌ಟೆಕ್ ದೈತ್ಯ ಬೈಜೂಸ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಇದು ಈಗ ಒಂದು ದಶಕದಿಂದ ಉದ್ಯಮದಲ್ಲಿ ಪ್ರಾಬಲ್ಯ ಸಾಧಿಸಿದೆ. ಪ್ರಾರಂಭದ ಆರಂಭಿಕ ಕೆಲವು ವರ್ಷಗಳಲ್ಲಿ ನಟ ಶಾರುಖ್ ಖಾನ್ ಅದರ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 'ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್' ನ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೈಜು ರವೀಂದ್ರನ್ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. ಈ ನಡುವೆ ಬೈಜು ರವೀಂದ್ರನ್ ಪತ್ನಿ ಆದಾಯ, ವೇತನದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಬೈಜೂ ರವೀಂದ್ರನ್‌ರ ದಿವ್ಯಾ ಗೋಕುಲ್‌ನಾಥ್ ಯಾರು?
ದಿವ್ಯಾ ಗೋಕುಲನಾಥ್ ಎಡ್‌ಟೆಕ್ ಪ್ಲಾಟ್‌ಫಾರ್ಮ್ ಬೈಜುಸ್‌ನ ಸಹ-ಸಂಸ್ಥಾಪಕಿಯಾಗಿದ್ದಾರೆ. ಹಾಗೆಯೇ ಮಲ್ಟಿಬಿಲಿಯನ್ ಕಂಪನಿಯ ಸಿಇಒ ಆಗಿರುವ ಬೈಜು ರವೀಂದ್ರನ್‌ರ ಪತ್ನಿಯಾಗಿದ್ದಾರೆ. ದಿವ್ಯಾ ಗೋಕುಲನಾಥ್ ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ದಿವ್ಯಾ ಗೋಕುಲನಾಥ್ ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಹಾಗೆಯೇ ದೇಶದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು.
ದಿವ್ಯಾ ಗೋಕುಲನಾಥ್ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಬೈಜು ರವೀಂದ್ರನ್ ಶಿಕ್ಷಕರಾಗಿದ್ದ ಟ್ಯೂಷನ್ ತರಗತಿಗಳಿಗೆ ಹಾಜರಾಗಿದ್ದರು. ಅಲ್ಲಿ ಕೆಲವು ವರ್ಷಗಳ ನಂತರ ಶಿಕ್ಷಕಿಯಾದರು. ಇಬ್ಬರು ಸೇರಿ ಎಡ್‌ಟೆಕ್ ಕಂಪನಿ ಬೈಜೂಸ್ ಅನ್ನು ಸ್ಥಾಪನೆ ಮಾಡಿದರು.
ಬೈಜೂ ರವೀಂದ್ರನ್ ಮತ್ತು ಅವರ ವಿದ್ಯಾರ್ಥಿ-ಪತ್ನಿ ದಿವ್ಯಾ ಗೋಕುಲನಾಥ್ ಸ್ಥಾಪಿಸಿದ ಸಂಸ್ಥೆಯ ಮೌಲ್ಯ 22 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ಅಂದರೆ ಭಾರತದ ಮೌಲ್ಯದಲ್ಲಿ 1,89,000 ಕೋಟಿ ರೂಪಾಯಿ ಆಗಿದೆ. 2021 ರಲ್ಲಿ 573 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಿನ ನಷ್ಟವನ್ನು ಕಂಡಿದೆ. ಇದಾದ ಬಳಿಕ ಫೆಫಾ ತನಿಖೆಯನ್ನು ಆರಂಭ ಮಾಡಿದೆ.
ದಿವ್ಯಾ ಗೋಕುಲ್‌ನಾಥ್ ನಿವ್ವಳ ಆದಾಯ, ವೇತನ
ಬೈಜೂಸ್‌ನ ಸಹ ಸಂಸ್ಥಾಪಕಿ ದಿವ್ಯಾ ಗೋಕುಲ್‌ನಾಥ್ ಭಾರತದಲ್ಲೇ ಅತೀ ಶ್ರೀಮಂತ ಮಹಿಳೆಯರಾಗಿದ್ದಾರೆ. ಕೋಟಕ್ ಹುರುನ್ ಸಮೀಕ್ಷೆ ಪ್ರಕಾರ ದಿವ್ಯಾ ಗೋಕುಲ್‌ನಾಥ್ ನಿವ್ವಳ ಆದಾಯವು 4,550 ಕೋಟಿ ರೂಪಾಯಿ ಆಗಿದೆ. ಬೈಜೂ ಸಂಸ್ಥೆಯ ಸಹ ಸಂಸ್ಥಾಪಕಿ ಮತ್ತು ನಿರ್ದೇಶಕಿ ಆಗಿರುವ ದಿವ್ಯಾ ಸಂಸ್ಥೆಯಲ್ಲಿ ಷೇರುದಾರರು ಕೂಡಾ ಹೌದು.
ಮಾಧ್ಯಮದ ವರದಿ ಪ್ರಕಾರ ದಿವ್ಯಾ ಗೋಕುಲ್‌ನಾಥ್ ಅತ್ಯಧಿಕ ಪಾವತಿಯನ್ನು ಪಡೆಯುವ ಎಡೆಕೆಟ್ ಉದ್ಯೋಗಿಯಾಗಿದ್ದಾರೆ. ಹಣಕಾಸು ವರ್ಷ 2020ರಲ್ಲಿ ದಿವ್ಯಾ ಗೋಕುಲ್‌ನಾಥ್ 1.94 ಕೋಟಿ ರೂಪಾಯಿ ವೇತನವನ್ನು ಹೊಂದಿದ್ದರು. ಬೈಜು ಮತ್ತು ದಿವ್ಯಾ 2009 ರಲ್ಲಿ ವಿವಾಹವಾಗಿದ್ದು, ಈ ದಂಪತಿಗಳು ಇಬ್ಬರು ಮುದ್ದಾದ ಗಂಡುಮಕ್ಕಳ ಪೋಷಕರಾಗಿದ್ದಾರೆ.


Click it and Unblock the Notifications