ಜನಪ್ರಿಯ ಶೈಕಣಿಕ ಆಪ್ ಬೈಜುಸ್ ಸಹ - ಸಂಸ್ಥಾಪಕ ಬೈಜು ರವೀಂದ್ರನ್ ಮತ್ತು ದಿವ್ಯಾ ಗೋಕುಲ್ ನಾಥ್ ತಮ್ಮ ಲವ್ ಸ್ಟೋರಿಯನ್ನು ಮಾ.18ರ ಶನಿವಾರ ಬಿಚ್ಚಿಟ್ಟಿದ್ದಾರೆ. ಮಾತ್ರವಲ್ಲದೇ ಪ್ರೀತಿಸುತ್ತಿದ್ದ ಸಮಯದಲ್ಲಿ ಬೈಜು ರವೀಂದ್ರನ್ ಅವರ ವಿದ್ಯಾರ್ಥಿಗಳಲ್ಲಿ ದಿವ್ಯಾ ಗೋಕುಲ್ ನಾಥ್ ಕೂಡಾ ಒಬ್ಬರಾಗಿದ್ದರು ಎಂದು ಕುತೂಹಕಾರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಬೈಜು ರವೀಂದ್ರನ್ ಮತ್ತು ದಿವ್ಯಾ ಗೋಕುಲ್ ನಾಥ್ ದಂಪತಿಗಳು ತಮ್ಮ ಇಂಟ್ರಿಸ್ಟಿಂಗ್ ಪ್ರೇಮ್ ಕಹಾನಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಬೈಜು ರವೀಂದ್ರನ್, ವಿದ್ಯಾರ್ಥಿನಿಯಾಗಿದ್ದ ದಿವ್ಯಾ ಗೋಕುಲ್ ನಾಥ್ ತುಂಬಾ ಪ್ರಶ್ನೆಗಳನ್ನು ಕೇಳುತ್ತಿದ್ದರಿಂದ ತಮ್ಮ ಗಮನ ಸೆಳೆದಿದ್ದರು ಎಂದು ಹೇಳಿದ್ದಾರೆ.

ಪ್ರೀತಿ ಹುಟ್ಟಿದ್ದು ಹೇಗೆ: "ನಾನು ಹೆಚ್ಚಾಗಿ ಇಲ್ಲಿರುವ ಆಡಿಟೋರಿಯಂ ನಂತ ಸ್ಥಳಗಳಲ್ಲಿ ಅಥವಾ ಇದಕ್ಕಿಂತ ದೊಡ್ಡದಾದ ಕ್ರೀಡಾಂಗಣಗಳಲ್ಲಿ ಬೋಧಿಸುತ್ತಿದೆ. ಹೀಗಾಗಿ ಯಾವುದೇ ನಿರ್ದಿಷ್ಟ ವಿದ್ಯಾರ್ಥಿಯನ್ನು ಗಮನಿಸುವುದು ತುಂಬಾ ಕಷ್ಟ ಎಂದು ನಾನು ಹೇಳಬಲ್ಲೆ ದಿವ್ಯಾ ಬಹಳ ಹಿಂದೆ ಕುಳಿತುಕೊಳ್ಳುತ್ತಿದ್ದರೂ ತುಂಬಾ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಹೀಗಾಗಿ ಅವಳು ನನ್ನ ಗಮನ ಸೆಳೆದಿದ್ದಳು. ಆದರೆ ಇದು ಯಾವಾಗ ಪ್ರೀತಿಯಾಗಿ ಬದಲಾಯಿತೆಂದು ಇಂದು ಜೀವನ ಸಂಗಾತಿಗಳಾಗಿರುವ ನಮಗೆ ತಿಳಿದಿಲ್ಲ" ಎಂದು ವಿವರಿಸಿದ್ದಾರೆ.
"ಬೈಜುಸ್ ನಲ್ಲಿ ಪಾಲುದಾರರಾಗಿ ಸೇರಿಕೊಂಡವರು ಸಹ ಹಿಂದೆ ತಮ್ಮ ವಿದ್ಯಾರ್ಥಿಗಳಾಗಿದ್ದರು. ಅವರೆಲ್ಲರೂ ಇಂದಿಗೂ ನಮ್ಮೊಂದಿಗೆ ಇದ್ದು, ನಾವು ನಮ್ಮ ಧ್ಯೇಯವನ್ನು ಬದಲಾಯಿಸಿಕೊಂಡಿಲ್ಲ ಆದರೆ ಮೌಲ್ಯೀಕರಣಕೊಂಡಿದೆ. ನಾವು ನಮ್ಮ ಬಿಸಿನೆಸ್ ಮಾಡೆಲ್ ಗಳನ್ನು ಬದಲಾಯಿಸಿದ್ದೇವೆ. ಆದರೆ ವಿದ್ಯಾರ್ಥಿಗಳ ಮೇಲೆ ಇಂಪ್ಯಾಕ್ಟ್ ಆಗುವ ನಮ್ಮ ದ್ಯೇಯಕ್ಕೆ ದೃಢವಾಗಿದ್ದೇವೆ. ಈ ವಲಯದಲ್ಲಿ ದೊಡ್ಡ ಪ್ರಯೋಜನವೆಂದರೆ ಪ್ರತಿಭಾವಂತರನ್ನು ಆಕರ್ಷಿಸಿ ಉಳಿಸುಕೊಳ್ಳುವುದು ತುಂಬಾ ಸುಲಭವಾಗಿದೆ" ಎಂದಿದ್ದಾರೆ.
ತಮ್ಮ ಕಡೆಯಿಂದ ನೋಡಿದಾಗ ಅದು ಇಬ್ಬರ ನಡುವೆ ಕೇವಲ ವಿರುದ್ಧ ದಿಕ್ಕಿನ ಆಕರ್ಷಣೆಯ ಸಂದರ್ಭ ಮಾತ್ರ ಆಗಿರಲಿಲ್ಲ ಎನ್ನುತ್ತಾರೆ ದಿವ್ಯಾ ಗೋಕುಲನಾಥ್. "ಮೊದಲು ಏನಾಯಿತ್ತು ಎಂದು ನಮಗೆ ಗೊತ್ತಿರಲಿಲ್ಲ. ಅದು ನಮ್ಮ ಪಾಲಿಗೆ ಚೆನ್ನಾಗಿ ಕೆಲಸ ಮಾಡಿದೆ. ವಿರುದ್ಧ ದಿಕ್ಕಿನ ಆಕರ್ಷಣೆಯ ಈ ಸಂಪೂರ್ಣ ಕಲ್ಪನೆ ಬಗ್ಗೆ ನಿಮಗೆ ಗೊತ್ತು. ನಾನು ಹೇಳುತ್ತೇನೆ ಇದು ರೀಲ್-ಲೈಫ್ ವಿದ್ಯಮಾನವೆಂದು, ಆದರೆ ನಿಜ ಜೀವನದ ಸನ್ನಿವೇಶವಲ್ಲ," ಎಂದು ದಿವ್ಯಾ ಹೇಳಿದ್ದಾರೆ.
ಬೈಜು ಮತ್ತು ದಿವ್ಯಾ 2009 ರಲ್ಲಿ ವಿವಾಹವಾಗಿದ್ದು, ಈ ದಂಪತಿಗಳು ಇಬ್ಬರು ಮುದ್ದಾದ ಗಂಡುಮಕ್ಕಳ ಪೋಷಕರಾಗಿದ್ದಾರೆ. ಬೈಜೂಸ್ ಈಗ ಒಂದು ಯಶಸ್ವಿ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಇದರ ಮೌಲ್ಯ 32 ಯುಎಸ್ ಡಿ ಬಿಲಿಯನ್ ಆಗಿದೆ. ಬೈಜು ರವೀಂದ್ರನ್ ಬೈಜುಸ್‌ನ ಸಿಇಒ ಆಗಿದ್ದರೆ, ದಿವ್ಯಾ ಗೋಕುಲನಾಥ್ ಬೈಜುಸ್ ನಿರ್ದೇಶಕರಾಗಿದ್ದಾರೆ. ಆನ್ ಲೈನ್ ಶಿಕ್ಷಣ ಸಂಸ್ಥೆಯನ್ನು ಕಂಪನಿಯನ್ನು 2012 ರಲ್ಲಿ ಸ್ಥಾಪಿಸಲಾಯಿತು.
ಬೈಜುಸ್ ವಿರುದ್ಧ ಆರೋಪ
ಈ ಹಿಂದೆ ಬೈಜೂಸ್ ಆಪ್‌ನಲ್ಲಿ ಪೋಷಕರಿಗೆ ಆಮಿಷ ಒಡ್ಡಲಾಗಿದೆ ಹಾಗೂ ಸಾಲ ಒಪ್ಪಂದಗಳನ್ನು ಕೂಡಾ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿ ಭಾರತದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೈಜೂಸ್‌ನ ಸಿಇಒ ರವೀಂದ್ರನ್‌ಗೆ ಸಮನ್ಸ್ ನೀಡಿದೆ. ಬೈಜೂಸ್ ಆರ್ಥಿಕ ನಷ್ಟ ಕಾಣುತ್ತಿರುವ ನಡುವೆಯೇ ಸಂಸ್ಥೆಯ ವಿರುದ್ಧ ಹಲವಾರು ಆರೋಪಗಳು ಕೇಳಿಬಂದಿದೆ. ಬೈಜೂಸ್‌ನಲ್ಲಿ ಸಾಲ ನೀಡುವ ಒಪ್ಪಂದಗಳನ್ನು ಮಾಡಲಾಗುತ್ತಿದೆ. ಪೋಷಕರಿಗೆ ಆಮಿಷ ಒಡ್ಡಲಾಗುತ್ತಿದೆ. ಹಾಗೆಯೇ ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.


Click it and Unblock the Notifications