ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿ ತಂತ್ರಜ್ಞಾನ ಸ್ಟಾರ್ಟಪ್‌ಗಳಲ್ಲಿ ಒಂದಾದ ಬೈಜೂಸ್ ಕಂಪೆನಿಯು ತನ್ನ ಹೊಸ ಹಣಕಾಸು ಅಧಿಕಾರಿ(ಸಿಎಫ್‌ಒ)ಯನ್ನಾಗಿ ಅಜಯ್ ಗೋಯೆಲ್ ಅವರನ್ನು ನೇಮಕಗೊಳಿಸಿದೆ. ಈ ಹಿಂದಿನ ಸಿಎಫ್‌ಒ ಪಿವಿ ರಾವ್ ಅವರು ನಿರ್ಗಮಿಸಿದ ಬಳಿಕ ಅಜಯ್ ಗೋಯೆಲ್ ಅವರು ಕಂಪೆನಿಯ ಹಣಕಾಸಿನ ಉಸ್ತುವಾರಿಯನ್ನು ವಹಿಸಿಕೊಂಡಿದ್ದು, ಈ ಬೈಜೂಸ್ ಕಂಪೆನಿಯಿ ಸುಮಾರು 1,89,000 ಕೋಟಿ ಸಂಪತ್ತಿನ ಮೌಲ್ಯವನ್ನು ಹೊಂದಿದೆ.
ಅಜಯ್ ಗೋಯೆಲ್ ಅವರು ಬೈಜೂಸ್ ಸೇರುವ ಮೊದಲು ವೇದಾಂತ, ಡಿಯಾಜಿಯೊ, ಕೋಕೊ-ಕೋಲಾ ಹಾಗೂ ನೆಸ್ಲೆ ಸೇರಿದಂತೆ ಹಲವು ಜಾಗತಿಕ ಮಟ್ಟದ ಪ್ರಸಿದ್ಧ ಕಂಪೆನಿಗಳಲ್ಲಿ ಕೆಲಸ ಮಾಡುವ ಮೂಲಕ ಇಪ್ಪತ್ತು ವರ್ಷಗಳ ಸುಧೀರ್ಘ ಹಣಕಾಸಿಗೆ ಸಂಬಂಧಿಸಿದ ಅನುಭವವನ್ನು ಹೊಂದಿದ್ದಾರೆ. ಅಜಯ್ ಗೋಯೆಲ್ ಅವರು ಲಿಂಕ್ಡ್ ಇನ್‌ನಲ್ಲಿ ಬರೆದುಕೊಂಡಿರುವ ಮಾಹಿತಿಯಂತೆ 1994ರಿಂದ 1997 ಸೇಂಟ್ ಕ್ಸೇವಿಯಾರ್ ಕಾಲೇಜಿನಲ್ಲಿ ಓದಿ ಬಿಕಾಂ ಪದವಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಅಜಯ್ ಗೋಯೆಲ್ ಅವರು ಕಂಪೆನಿ ಸೆಕ್ರೆಟೇರಿಯಾಗಿದ್ದು, ಚಾರ್ಟೆರ್ಡ್ ಅಕೌಂಟೆಂಟ್ ಕೂಡ ಆಗಿ ಗುರುತಿಸಿಕೊಂಡಿದ್ದಾರೆ.

ಅಜಯ್ ಗೋಯಲ್ 1997ರಿಂದ 1999ರವರೆಗೆ ಪ್ರತಿಷ್ಟಿತ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರೀಸ್ ಆಫ್ ಇಂಡಿಯಾದಲ್ಲಿ ಕಲಿತಿದ್ದರು. ಈ ನಡುವೆ 1996ರಿಂದ 1999ರವರೆಗೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದಲೂ ನಾನಾ ರೀತಿಯ ತರಬೇತಿ ಪಡೆದುಕೊಂಡಿದ್ದರು.
ಅಜಯ್ ಗೋಯೆಲ್ ವೃತ್ತಿ ಬದುಕು
ಅಜಯ್ ಗೋಯೆಲ್ ಅವರು 2021ರಿಂದ ವೇದಾಂತ ಕಂಪೆನಿಯಲ್ಲಿ ಗ್ರೂಪ್ ಸಿಎಫ್‌ಒ ಆಗಿ ಸೇವೆ ಸಲ್ಲಿಸಿದ್ದಾರೆ. ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅಜಯ್ ಗೋಯೆಲ್ ಅವರು ಕೋಕೊ-ಕೋಲಾದಲ್ಲಿ ಲೀಡ್ ಫೈನಾನ್ಶಿಯಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅಜಯ್ ಅವರು ಕಂಪೆನಿಗಳಲ್ಲಿ ನುರಿತ ತಂಡವನ್ನು ಕಟ್ಟಿ ಬೆಳೆಸುವಲ್ಲಿ ಪರಿಣತರಾಗಿದ್ದು, ಕಾಪಿಟಲ್ ಪುನರ್ ರಚನೆ, ಹಣಕಾಸಿನ ಪ್ಲ್ಯಾನಿಂಗ್, ಟ್ಯಾಕ್ಸ್ ಹಾಗೂ ಇತರೆ ಹಲವು ಹಣಕಾಸು ಉದ್ಯಮ ಕ್ಷೇತ್ರಗಳಲ್ಲಿ ಉತ್ತಮ ಅನುಭವವನ್ನು ಹೊಂದಿದ್ದಾರೆ. ಅವರು ಡಿಯಾಜಿಯೊದಲ್ಲಿ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಹಾಗೂ ಹಣಕಾಸು ಅಕೌಂಟೆಂಟ್ ಆಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಷ್ಟೇಅಲ್ಲದೆ ಅಜಯ್ ಗೋಯೆಲ್ ಅವರು ಜಿಒ ಕಂಪೆನಿಯಲ್ಲಿ ಇವಿಪಿ ಆಗಿಯೂ ಉನ್ನತ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ಅಜಯ್ ಅವರ ವೇತನ ಹಾಗೂ ಜವಾಬ್ದಾರಿಗಳು
ವಾಲ್‌ಮೈನ್ ಹೇಳುವ ಪ್ರಕಾರ, ಅಜಯ್ ಗೋಯೆಲ್ ಅವರು ವೇದಾಂತ ಕಂಪೆನಿಯಲ್ಲಿ ಚೀಫ್ ಫೈನಾನ್ಶಿಯಲ್ ಆಫೀಸರ್ ಆಗಿ 2,970,000 ರೂ. ವೇತನವನ್ನು ಪಡೆಯುತ್ತಿದ್ದರು. ಬೈಜೂಸ್ ಕಂಪೆನಿ ಹೇಳುವ ಪ್ರಕಾರ, ಅಜಯ್ ಗೋಯೆಲ್ ಅವರ ಹೊಸ ಹುದ್ದೆಯು ಕಂಪೆನಿಯ ದೀರ್ಘಾವಧಿಯ ವಾಣಿಜ್ಯ ಯೋಜನೆಗಳು ಹಾಗೂ ಹಣಕಾಸು ಕಾರ್ಯಾಚರಣೆಗಳಿಗೆ ಪ್ರಯೋಜನವನ್ನು ನೀಡಲಿದೆ. ಬೈಜೂಸ್‌ನ ನಿರ್ಮಾತೃಗಳಾದ ಬೈಜು ರವೀಂದ್ರನ್ ಹಾಗೂ ದಿವ್ಯಾ ಗೋಕುಲ್‌ನಾಥ್ ಅವರೊಂದಿಗೆ ಅಜಯ್ ಗೋಯೆಲ್ ಅವರು ನಿಕಟವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದಾರೆ.
ಬೈಜೂಸ್ ಈಗ ಒಂದು ಯಶಸ್ವಿ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಇದರ ಮೌಲ್ಯ 32 ಯುಎಸ್ ಡಿ ಬಿಲಿಯನ್ ಆಗಿದೆ. ಬೈಜು ರವೀಂದ್ರನ್ ಬೈಜುಸ್ ನ ಸಿಇಒ ಆಗಿದ್ದರೆ, ದಿವ್ಯಾ ಗೋಕುಲನಾಥ್ ಬೈಜುಸ್ ನಿರ್ದೇಶಕರಾಗಿದ್ದಾರೆ. ಆನ್ ಲೈನ್ ಶಿಕ್ಷಣ ಸಂಸ್ಥೆಯನ್ನು ಕಂಪನಿಯನ್ನು 2012 ರಲ್ಲಿ ಸ್ಥಾಪಿಸಲಾಯಿತು.


Click it and Unblock the Notifications