PM PRANAM Scheme: ಪಿಎಂ ಪ್ರಣಾಮ್ ಅನುಮೋದನೆಗೆ ಸಂಸತ್ತು ಸಜ್ಜು, ಏನಿದು ಯೋಜನೆ ತಿಳಿಯಿರಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-24ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲೇ ಹಲವಾರು ಯೋಜನೆಗಳನ್ನು ಸರ್ಕಾರವು ಜಾರಿ ಮಾಡಿದೆ. ಕೆಲವು ಯೋಜನೆಗಳಿಗೆ ನಿಧಿ ಹಂಚಿಕೆಯನ್ನು ಕೂಡಾ ಮಾಡಿದೆ. ಈ ಪೈಕಿ ಪ್ರಧಾನ ಮಂತ್ರಿ ಪ್ರಣಾಮ (ಪಿಎಂ ಪ್ರಣಾಮ್) ಯೋಜನೆ ಕೂಡಾ ಒಂದಾಗಿದೆ.

ಪಿಎಂ ಪ್ರೋಮೋಷನ್ ಆಫ್ ಆಲ್ಟರ್‌ನೆಟಿವ್ ನ್ಯೂಟಿಯೆಂಟ್ ಫಾರ್ ಅಗ್ರಿಕಲ್ಚಚರ್ ಮ್ಯಾನೆಜ್‌ಮೆಂಟ್ ಯೋಜನೆ ಅಥವಾ ಪಿಎಂ ಪ್ರಣಾಮ್ ಯೋಜನೆಯನ್ನು ಸಂಸತ್ತು ಇಂದು (ಜೂನ್ 14) ಅನುಮೋದನೆ ಮಾಡುವ ಸಾಧ್ಯತೆ ಇದೆ. ಪ್ರಮುಖವಾಗಿ ರೈತರಿಗೆ ರಾಸಾಯನಿಕ ಗೊಬ್ಬರಗಳ ಮೇಲಿನ ಸಬ್ಸಿಡಿ ಹೊರೆಯನ್ನು ನಿವಾರಿಸಲು ಪಿಎಂ ಪ್ರಣಾಮ್ ಯೋಜನೆಯನ್ನು ಪರಿಚಯಿಸಲಾಗಿದೆ. ಈ ಯೋಜನೆಯ ಬಗ್ಗೆ ಇತರೆ ಮಾಹಿತಿ ಇಲ್ಲಿದೆ ಮುಂದೆ ಓದಿ...

 ಪಿಎಂ ಪ್ರಣಾಮ್ ಅನುಮೋದನೆಗೆ ಸಂಸತ್ತು ಸಜ್ಜು, ಏನಿದು ಯೋಜನೆ?

ಪಿಎಂ ಪ್ರಣಾಮ ಯೋಜನೆ ಎಂದರೇನು?

ಪ್ರಧಾನ ಮಂತ್ರಿ ಪ್ರಣಾಮ ಯೋಜನೆಯು ಪರ್ಯಾಯ ರಸಗೊಬ್ಬರಗಳ ಬಳಕೆಗೆ ಉತ್ತೇಜನ ನೀಡಲು ಆರಂಭ ಮಾಡಲಾಗಿದೆ. ಭೂಮಿಯನ್ನು ಕಾಪಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದಾಗಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪ್ರದೇಶದಲ್ಲಿ ರೈತರು ಪರ್ಯಾಯ ರಸಗೊಬ್ಬರವನ್ನು ಬಳಸಲು ಪ್ರೋತ್ಸಾಹ ನೀಡಬೇಕು ಮತ್ತು ರಾಸಾಯನಿಕ ರಸಗೊಬ್ಬರದ ಮಿತ ಬಳಕೆಯ ಅರಿವನ್ನು ಕೂಡಾ ಮೂಡಿಸಬೇಕು ಎಂಬುವುದು ಈ ಯೋಜನೆಯ ಉದ್ದೇಶವಾಗಿದೆ.

ಯೋಜನೆಯ ಬಗ್ಗೆ ಪ್ರಮುಖ ಮಾಹಿತಿ

* ರಾಸಾಯನಿಕ ರಸಗೊಬ್ಬರದ ಮೇಲಿನ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುವುದು ಯೋಜನೆಯ ಗುರಿಯಾಗಿದೆ. 2022-2023ರ ಹಣಕಾಸು ವರ್ಷದಲ್ಲಿ ಸಬ್ಸಿಡಿಯನ್ನು ಶೇಕಡ 39ರಷ್ಟು ಏರಿಸಿ, 2.25 ಲಕ್ಷ ಕೋಟಿ ರೂಪಾಯಿಷ್ಟು ಮಾಡುವ ಉದ್ದೇಶವನ್ನು ಹೊಂದಿದೆ. ಈ ಹಿಂದಿನ ವರ್ಷ 1.62 ಲಕ್ಷ ಕೋಟಿ ರೂಪಾಯಿ ಆಗಿತ್ತು.
* ರಾಸಾಯನಿಕ ರಸಗೊಬ್ಬರದ ಬಳಕೆಗೆ ಅಧಿಕ ಉತ್ತೇಜನ ನೀಡದಿರುವುದು ಈ ಯೋಜನೆಯ ಗುರಿಯಾಗಿದೆ.

ಯೋಜನೆಯ ಪ್ರಯೋಜನಗಳೇನು?

ಪಿಎಂ ಪ್ರಣಾಮ್ ಯೋಜನೆಯು ಕಡಿಮೆ ರಾಸಾಯನಿಕ ರಸಗೊಬ್ಬರವನ್ನು ಬಳಸುವಂತೆ ಅರಿವುದು ಮೂಡಿಸುತ್ತದೆ. ಕೋಟ್ಯಾಂತರ ರೈತರುಗಳಿಗೆ ಈ ಯೋಜನೆಯಿಂದ ಸಹಾಯವಾಗಲಿದೆ. ಪರ್ಯಾಯ ಪೋಷಕಾಂಶಗಳು ಮತ್ತು ರಸಗೊಬ್ಬರಗಳ ಬಳಕೆಗೆ ಉತ್ತೇಜನ ನೀಡುತ್ತದೆ. ಮಣ್ಣಿನ ಗುಣಮಟ್ಟವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ರಾಸಾಯನಿಕ ರಸಗೊಬ್ಬರದ ಬಳಕೆ ಮಾಡಬಾರದು ಎಂಬ ಅರಿವನ್ನು ರೈತರಲ್ಲಿ ಮೂಡಿಸಲಾಗುತ್ತದೆ.

ಇತರ ಪ್ರಮುಖ ಅಂಶಗಳು

ಇದಲ್ಲದೆ, ವರದಿಯ ಪ್ರಕಾರ, ಪಿಎಂ ಪ್ರಣಾಮ್ ಯೋಜನೆಯಡಿಯಲ್ಲಿ ನಿಗದಿಪಡಿಸಿದ ಹಣದ ಶೇಕಡ 70ರಷ್ಟು ಮೊತ್ತವನ್ನು ಗ್ರಾಮ, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಪರ್ಯಾಯ ರಸಗೊಬ್ಬರಗಳು ಮತ್ತು ಪರ್ಯಾಯ ರಸಗೊಬ್ಬರ ಉತ್ಪಾದನಾ ಘಟಕಗಳ ತಾಂತ್ರಿಕ ಅಳವಡಿಕೆಗೆ ಸಂಬಂಧಿಸಿದ ಆಸ್ತಿ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ.

ಉಳಿದ ಶೇಕಡ 30ರಷ್ಟು ಪಿಎಂ ಪ್ರಣಾಮ್ ಯೋಜನೆಯ ನಿಧಿಯನ್ನು ರೈತರು, ಪಂಚಾಯತ್‌ಗಳು, ರೈತ ಉತ್ಪಾದಕ ಸಂಸ್ಥೆಗಳು ಮತ್ತು ರಸಗೊಬ್ಬರ ಕಡಿತ ಮತ್ತು ಜಾಗೃತಿ ಮೂಡಿಸುವಲ್ಲಿ ಸಕ್ರಿಯವಾಗಿರುವ ಸ್ವ-ಸಹಾಯ ಗುಂಪುಗಳನ್ನು ಪ್ರೋತ್ಸಾಹಿಸಲು ಮತ್ತು ಜಾಗೃತಿ ಮೂಡಿಸಲು ಬಳಸಿಕೊಳ್ಳಬಹುದು.

ಪ್ರಧಾನ ಮಂತ್ರಿ ಪ್ರಣಾಮ ಯೋಜನೆಯು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಪರ್ಯಾಯ ರಸಗೊಬ್ಬರಗಳನ್ನು ತಮ್ಮ ರಾಜ್ಯದಲ್ಲಿ ಪರಿಚಯಿಸಲು ಸಹಕಾರಿಯಾದ ಯೋಜನೆ ಇದಾಗಿದೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯು ಈ ಪ್ರಧಾನ ಮಂತ್ರಿ ಪ್ರಣಾಮ ಯೋಜನೆಯನ್ನು ಜಾರಿ ಮಾಡಿದೆ. 2022ರ ಸೆಪ್ಟೆಂಬರ್ 7ರಂದು ರಾಬಿ ಕ್ಯಾಂಪೇನ್‌ಗಾಗಿ ನಡೆಸಲಾದ ನ್ಯಾಷನಲ್ ಕಾನ್ಫೆರೆನ್ಸ್‌ನಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+