ಹಣದಿಂದ ಸಂತೋಷವನ್ನು ಖರೀದಿಸಬಹುದೇ ಎಂಬ ಹಳೆಯ ಪ್ರಶ್ನೆಯು ಎಂದಿಗೂ ಕೂಡಾ ಜನರನ್ನು ಆಲೋಚಿಸುವಂತೆ ಮಾಡುತ್ತದೆ, ಚರ್ಚೆ ಹುಟ್ಟುಹಾಕುತ್ತದೆ. ಜನರು ಜೀವನದಲ್ಲಿ ಆರ್ಥಿಕ ಯಶಸ್ಸಿಗೆ ಶ್ರಮಿಸುತ್ತಿರುವಾಗ, ಸಂತೋಷಕ್ಕೆ ಸಂಪತ್ತು ಅತೀ ಮುಖ್ಯ ಎಂದು ಪರಿಗಣಿಸಲಾಗುತ್ತದೆ.
ಇದರಿಂದಾಗಿ ಹಣ ಮತ್ತು ಸಂತೋಷದ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಮತ್ತು ನಮ್ಮ ಜೀವನವನ್ನು ನಿಜವಾಗಿಯೂ ಯಾವುದು ತೃಪ್ತಿ ನೀಡುವುದು ಎಂದು ಅರ್ಥಮಾಡಿಕೊಳ್ಳಲು ನಾವು ಪ್ರಯತ್ನ ಮಾಡಬೇಕಾಗುತ್ತದೆ. ಹಣದಿಂದ ಸಂತೋಷ ಖರೀದಿಸಬಹುದೇ ಎಂಬುವುದಕ್ಕೆ ಸಂಶೋಧಕರು ಏನು ಹೇಳುತ್ತಾರೆ, ಅಧ್ಯಯನ ಏನು ಹೇಳುತ್ತದೆ ಎಂಬ ವಿವರ ಮುಂದೆ ಓದಿ...

ಸಂಶೋಧನೆ ಏನು ಹೇಳುತ್ತದೆ?
ಸಂಶೋಧಕರಾದ ಡೇನಿಯಲ್ ಕಹ್ನೆಮನ್ ಮತ್ತು ಮ್ಯಾಥ್ಯೂ ಕಿಲ್ಲಿಂಗ್ಸ್‌ವರ್ತ್ ಅವರು ಇತ್ತೀಚೆಗೆ ನಡೆಸಿದ ಜಂಟಿ ಅಧ್ಯಯನವು ಒಂದು ನಿರ್ದಿಷ್ಟ ಆದಾಯದ ಮಿತಿಯನ್ನು ತಲುಪಿದ ನಂತರ ಸಂತೋಷವಾಗಿ ಬದುಕಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಮಾಡಿದೆ.
ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು, ಇಬ್ಬರೂ 33,000 ಕ್ಕೂ ಹೆಚ್ಚು ಜನರ ಡೇಟಾವನ್ನು ಸಂಗ್ರಹಿಸಿದ್ದಾರೆ. ಈ ಅಧ್ಯಯನವು ಆದಾಯ ಹೆಚ್ಚಳದೊಂದಿಗೆ ಸಂತೋಷವು ಹೆಚ್ಚುತ್ತಿದೆ ಎಂದು ಹೇಳಿದೆ. ಕಡಿಮೆ ಗಳಿಕೆಯನ್ನು ಹೊಂದಿರುವವರು ಹೆಚ್ಚಿನ ಆದಾಯದವರಿಗೆ ನಾವು ಹೋಲಿಸಿದರೆ ಹೆಚ್ಚಿನ ಆದಾಯದವರು ಹೆಚ್ಚಿನ ಸಂತೋಷವನ್ನು ಹೊಂದಿದ್ದಾರೆ ಎಂದು ಅಧ್ಯಯನ ಹೇಳುತ್ತದೆ.
ಹೆಚ್ಚು ಹಣವನ್ನು ಹೊಂದಿರುವ ವ್ಯಕ್ತಿಗಳು ಹೆಚ್ಚು ಪಾಸಿಟಿವ್ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿ ಹೇಳಿದೆ. ಆದಾಯದೊಂದಿಗೆ ಮಾನಸಿಕ ಯೋಗಕ್ಷೇಮವೂ ಅಧಿಕವಾಗಿದೆ. ಆದರೆ 75,000 ಡಾಲರ್ ಅಥವಾ 74 ಲಕ್ಷ ರೂಪಾಯಿ ವಾರ್ಷಿಕ ವೇತನದವರೆಗೆ ಮಾತ್ರ ಎಂದು ಅಧ್ಯಯನ ಹೇಳುತ್ತದೆ. ಹೆಚ್ಚಿನ ಆದಾಯವು ಸಂತಸದ ಜೀವನಕ್ಕೆ ಕೊಡುಗೆ ನೀಡುತ್ತದೆ. ಹಣ ಮತ್ತು ಯೋಗಕ್ಷೇಮದ ನಡುವಿನ ಸಂಬಂಧಕ್ಕೆ ಮಿತಿಯನ್ನು ಕೂಡಾ ಸೂಚಿಸುತ್ತದೆ.
ಆದಾಗ್ಯೂ, ಈ ಸಂಶೋಧನೆಗಳಲ್ಲಿ ವಿರೋಧಾಭಾಸಗಳಿವೆ. ಕಿಲ್ಲಿಂಗ್ಸ್‌ವರ್ತ್ ಅವರ 2021 ರ ಅಧ್ಯಯನವು 500,000 ಡಾಲರ್ ಅಥವಾ 4 ಕೋಟಿ ರೂಪಾಯಿ ಆದಾಯದವರೆಗೆ ಸಂತೋಷದ ಮೇಲೆ ಹಣದ ಪಾಸಿಟಿವ್ ಪರಿಣಾಮವಿದೆ. ಆದರೆ 100,000 ಡಾಲರ್ ಅಥವಾ 83 ಲಕ್ಷ ರೂಪಾಯಿಗಿಂತ ಅಧಿಕ ಸಂಬಳ ಹೊಂದಿರುವವರು ಸಂಪತ್ತು ಅಧಿಕವಾಗಿದ್ದರೂ ನೆಮ್ಮದಿ, ಯೋಗ ಕ್ಷೇಮದಿಂದಿಲ್ಲ ಎಂದು ಅಧ್ಯಯನ ಹೇಳಿದೆ.
ಬರೀ ಹಣ ಸಾಕಾಗುವುದಿಲ್ಲ ನಿಮಗೆ ತಿಳಿದಿರಲಿ
ವಯಸ್ಕರ ಅಭಿವೃದ್ಧಿಯ ಹಾರ್ವರ್ಡ್ ಅಧ್ಯಯನ ಹೇಳುವಂತೆ ಸಂತೋಷ ಪಡೆಯಲು ಸಂಬಂಧ ಅತೀ ನಿರ್ಣಾಯಕವಾಗಿದೆ. ಉತ್ತಮ ಜೀವನಕ್ಕೆ ಸಂಬಂಧಗಳು ಅಗತ್ಯವೆಂದು ಪರಿಗಣಿಸಲಾಗುತ್ತದೆ. ಸಂಪತ್ತಿನ ಪ್ರಭಾವಕ್ಕೆ ಮಾತ್ರ ಮಿತಿಗಳಿವೆ. ಕೆಲವರು ತಮ್ಮ ಸಾಮಾಜಿಕ ಸಂಪರ್ಕಗಳು ಮತ್ತು ಸಂತೋಷವನ್ನು ಹೆಚ್ಚಿಸಲು ವಸ್ತು ಆಸ್ತಿಗಿಂತ ಪ್ರಯಾಣ, ಸಂಗೀತ ಕಚೇರಿಗಳು ಮತ್ತು ಸಮುದಾಯದಲ್ಲಿ ತೊಡಗಿಸಿಕೊಳ್ಳಲು ಅಧಿಕ ಆದ್ಯತೆ ನೀಡುತ್ತಾರೆ.
2008 ರಲ್ಲಿ ಎಲಿಜಬೆತ್ ಡನ್ ಮತ್ತು ಅವರ ಸಹೋದ್ಯೋಗಿಗಳು ನಡೆಸಿದ ಅಧ್ಯಯನದಲ್ಲಿ, ಕೆನಡಾದ ವ್ಯಾಂಕೋವರ್‌ನಲ್ಲಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವ ಜನರಿಗೆ 5 ಡಾಲರ್ ಅಥವಾ 20 ಡಾಲರ್ ನೋಟು ಇರುವ ಲಕೋಟೆ ನೀಡಲಾಗಿದೆ. ಭಾಗವಹಿಸುವವರನ್ನು ನಂತರ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
ಒಂದು ಗುಂಪಿಗೆ ಹಣವನ್ನು ಖರ್ಚು ಮಾಡಲು ಹೇಳಲಾಗಿದೆ, ಇನ್ನೊಂದು ಗುಂಪಿಗೆ ಬೇರೆಯವರಿಗೆ ಉಡುಗೊರೆಯನ್ನು ಖರೀದಿಸಲು ಅಥವಾ ಹಣವನ್ನು ದಾನ ಮಾಡಲು ಸೂಚಿಸಲಾಗಿದೆ. ಜನರು ಬೇರೆಯವರಿಗೆ ದಾನ ಮಾಡುವುದಕ್ಕಿಂತ ತನಗಾಗಿ ಖರ್ಚು ಅಧಿಕವಾಗಿ ಮಾಡಿದ್ದಾರೆ. ಇದರಿಂದಾಗಿ ಜನರು ತಮಗಾಗಿ ಲಭ್ಯವಾಗುವ ಹಣದಿಂದ ಹೆಚ್ಚು ಸಂತೋಷವಾಗಿರುತ್ತದೆ ಎಮದು ತೀರ್ಮಾನಿಸಲಾಗಿದೆ.


Click it and Unblock the Notifications