ಈ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಅತೀ ಮುಖ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕಾರ್ಯವನ್ನು ನಾವು ನಡೆಸಲು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಅನ್ನು ಎಲ್ಲ ಹಣಕಾಸು ವಹಿವಾಟು, ಇತರೆ ವಹಿವಾಟಿನ ವೇಳೆ ಕಡ್ಡಾಯಗೊಳಿಸಿದೆ. ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಮುಖ್ಯವಾಗಿದೆ. ಹಾಗೆಯೇ ದಂಡವನ್ನು ತಪ್ಪಿಸಬೇಕಾದರೆ ಪ್ಯಾನ್ ಕಾರ್ಡ್‌ಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಾಗುತ್ತದೆ.
ಆಧಾರ್ ಕಾರ್ಡ್ ಬರೀ ನಮ್ಮ ವಿಳಾಸ ಪುರಾವೆಯಾಗಿರುವುದಿಲ್ಲ. ಬದಲಾಗಿ ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಅತೀ ಮುಖ್ಯವಾಗುತ್ತದೆ. ಇನ್ನು ಪ್ರಮುಖವಾಗಿ ಭಾರತೀಯರಿಗೆ ಮಾತ್ರವಲ್ಲದೇ ನಾನ್ ರೆಸಿಡೆಂಟ್ ಇಂಡಿಯನ್ಸ್‌ಗಳು (ಎನ್‌ಆರ್‌ಐ) ಕೂಡಾ ಆಧಾರ್ ಕಾರ್ಡ್ ಅನ್ನು ಪಡೆಯಬಹುದೇ?, ಹೌದು ಈ ವಿಚಾರದಲ್ಲಿ ಹಲವಾರು ಎನ್‌ಆರ್‌ಐಗಳಿಗೆ ಗೊಂದಲವಿದೆ. ನಾವು ಆಧಾರ್ ಕಾರ್ಡ್ ಅನ್ನು ಪಡೆಯಬಹುದೇ, ಇಲ್ಲವೇ ಎಂಬುವುದು ಎನ್‌ಆರ್‌ಐಗಳಿಗೆ ತಿಳಿದಿಲ್ಲ. ಈ ಬಗ್ಗೆ ಯುಐಡಿಎಐ ಮಾರ್ಗಸೂಚಿಯನ್ನು ನೀಡಿದೆ.

ಆಧಾರ್ ಕಾರ್ಡ್‌ಗೆ ಎನ್‌ಆರ್‌ಐಗಳು ಅರ್ಜಿ ಸಲ್ಲಿಸುವುದು ಹೇಗೆ?
* ನಿಮ್ಮ ಪ್ರದೇಶದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ
* ನಿಮ್ಮ ಪ್ರಸ್ತುತ ಭಾರತೀಯ ಪಾಸ್‌ಪೋರ್ಟ್ ಅನ್ನು ಇಟ್ಟುಕೊಳ್ಳಿ
* ಎಲ್ಲ ಅಗತ್ಯ ದಾಖಲೆಗಳನ್ನು ರಿಜಿಸ್ಟ್ರೇಷನ್ ಫಾರ್ಮ್‌ನಲ್ಲಿ ಭರ್ತಿ ಮಾಡಿ. ನೀವು ರಿಜಿಸ್ಟ್ರೇಷನ್‌ನಲ್ಲಿ ಭರ್ತಿ ಮಾಡುವ ಮಾಹಿತಿಗಳು ಪಾಸ್‌ಪೋರ್ಟ್‌ನಲ್ಲಿ ಇರುವಂತೆಯೇ ಇರಬೇಕು. ಅದರಲ್ಲಿ ಯಾವುದೇ ಬದಲಾವಣೆ ಇರಬಾರದು.
* ಫಾರ್ಮ್‌ನಲ್ಲಿ ಅಭ್ಯರ್ಥಿಗಳು ತಮ್ಮ ಇಮೇಲ್ ವಿಳಾಸವನ್ನು ಹಾಕಲೇಬೇಕು.
* ನಿಮ್ಮನ್ನು ಎನ್‌ಆರ್‌ಐ ಆಗಿ ಪರಿಗಣಿಸಲು ವಿನಂತಿಯನ್ನು ಮಾಡಿ
* ಎನ್‌ಆರ್‌ಐ ಅರ್ಜಿದಾರರು ಆಧಾರ್ ಕಾರ್ಡ್ ಅರ್ಜಿಯ ಜೊತೆಗೆ ಡಿಕ್ಲೆರೇಷನ್ ಅನ್ನು ಸಲ್ಲಿಸಬೇಕಾಗುತ್ತದೆ. ಎನ್‌ಆರ್‌ಐಗಳಿಗೆ ಡಿಕ್ಲೆರೇಷನ್ ಸ್ವಲ್ಪ ವಿಭಿನ್ನವಾಗಿದೆ. ಅದನ್ನು ಎಚ್ಚರಿಕೆಯಿಂದ ಓದಿ ಮತ್ತು ಅದನ್ನು ಪೂರ್ಣಗೊಳಿಸಿ.
* ಇನ್ನು ನಿರ್ವಾಹಕರು ನಿಮ್ಮ ಮಾಹಿತಿಯನ್ನು ನಮೂದಿಸಲು ಅಗತ್ಯ ಸಹಕಾರವನ್ನು ನೀವು ಮಾಡಿ.
* ಸಹಾಯಕರು ನಿಮ್ಮ ಪಾಸ್‌ಪೋರ್ಟ್ ಅನ್ನು ಸ್ಕ್ಯಾನ್ ಮಾಡುತ್ತಾರೆ ಮತ್ತು ಅದನ್ನು ಅಪ್ಲಿಕೇಶನ್‌ನಲ್ಲಿ ಗುರುತಿನ ರೂಪದಲ್ಲಿ ನಮೂದಿಸಿ.
* ಬಯೋಮೆಟ್ರಿಕ್ ಕ್ಯಾಪ್ಚರ್ ಪ್ರಕ್ರಿಯೆ ಪೂರ್ಣಗೊಳಿಸಲು ನಿಮ್ಮ ಡಿಜಿಟ್ಸ್‌ಗಳು ಮತ್ತು ಐ ಸ್ಕ್ಯಾನ್‌ಗಳನ್ನು ಮಾಡಿಕೊಳ್ಳಿ.
* ಅರ್ಜಿಯಲ್ಲಿ ತಮ್ಮ ಮಾಹಿತಿಯನ್ನು ನಮೂದಿಸಿದ ಬಳಿಕ ಎಚ್ಚರಿಕೆಯಿಂದ ಎಲ್ಲ ಮಾಹಿತಿಯನ್ನು ಪರಿಶೀಲನೆ ಮಾಡಿ, ಇದು ಅತೀ ಮುಖ್ಯವಾಗಿದೆ.
* ಅಪ್ಲಿಕೇಶನ್ ಪ್ರಕ್ರಿಯೆಯು ಪೂರ್ಣಗೊಂಡ ನಂತರ ನೀವು ಅರ್ಜಿದಾರರ 14-ಅಂಕಿಯ ದಾಖಲಾತಿ ಐಟಿ ಮತ್ತು ದಿನಾಂಕ ಮತ್ತು ಸಮಯದ ಸ್ಟ್ಯಾಂಪ್ ಅನ್ನು ಒಳಗೊಂಡಿರುವ ಸ್ವೀಕೃತಿ ಪತ್ರವನ್ನು ಪಡೆಯಬೇಕು.
ಎನ್‌ಆರ್‌ಐ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಎನ್‌ಆರ್‌ಐಗಳು ಭಾರತದ ನಾಗರಿಕತೆ ಹೊಂದಿದ್ದರೆ, 49A ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ 2: ಬೇರೆ ದೇಶದ ನಾಗರಿಕತೆಯನ್ನು ಹೊಂದಿರುವ ಎನ್‌ಆರ್‌ಐಗಳಾದರೆ 49AA ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ 3: UTIITSL ಅಥವಾ NDSL ವೆಬ್‌ಸೈಟ್ ಮೂಲಕ ಫಾರ್ಮ್ ಅನ್ನು ಸಬ್‌ಮಿಟ್ ಮಾಡಬೇಕಾಗುತ್ತದೆ.
ಹಂತ 4: ಫಾರ್ಮ್ ಸಬ್‌ಮಿಟ್ ಆದ ಬಳಿಕ ಅಕ್ನಾಲಜೆಮೆಂಟ್ ಪ್ರತಿಯೊಂದಿಗೆ 15 ಡಿಜಿಟ್ ಸಂಖ್ಯೆಯು ನಿಮ್ಮ ವಿಳಾಸಕ್ಕೆ ಬರಲಿದೆ.
ಹಂತ 5: ಭಾರತದ ಒಳಗಿನ ವಿಳಾಸಕ್ಕೆ ಅಕ್ನಾಲಜೆಮೆಂಟ್ ಪ್ರತಿ ಕಳುಹಿಸಲು 107 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಹಂತ 6: ವಿದೇಶಕ್ಕೆ ಅಕ್ನಾಲಜೆಮೆಂಟ್ ಪ್ರತಿ ಕಳುಹಿಸಲು 989 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಹಂತ 7: ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.


Click it and Unblock the Notifications