ಕೇವಲ ಸಾವಿರ ರೂಪಾಯಿಯಲ್ಲಿ ಒಂದೇ ದಿನದಲ್ಲಿ ತಿರುಪತಿ ದರ್ಶನ ಮಾಡಿಕೊಂಡು ಬರಬಹುದೇ?

ಬೆಂಗಳೂರಿನಿಂದ ತಿರುಪತಿಗೆ ಹೋಗುವ ಈ ರೋಡ್ ಟ್ರಿಪ್ ಪ್ರತಿ ತಿರುವಿನಲ್ಲಿಯೂ ಅಚ್ಚರಿಗಳಿಂದ ಕೂಡಿದೆ. ನೀವು ಬಿಡುವಿಲ್ಲದ ನಗರವಾದ ಬೆಂಗಳೂರನ್ನು ತೊರೆದ ತಕ್ಷಣ, ನೀವು ದಕ್ಷಿಣ ಭಾರತದ ಸುಂದರ ಗ್ರಾಮಾಂತರ ಪ್ರದೇಶದಲ್ಲಿರುತ್ತೀರಿ. ಪ್ರವಾಸವು ಹಚ್ಚ ಹಸಿರು, ಆಕರ್ಷಕ ಪಟ್ಟಣಗಳು ಮತ್ತು ಬೆರಗುಗೊಳಿಸುವ ನೋಟಗಳೊಂದಿಗೆ ಸುಂದರವಾದ ಭೂದೃಶ್ಯದ ಮೂಲಕ ಹೋಗುತ್ತದೆ.

ನೀವು ತಿರುಚುವ ರಸ್ತೆಗಳಲ್ಲಿ ಸವಾರಿ ಮಾಡುವಾಗ, ನೀವು ಸಣ್ಣ ಪಟ್ಟಣಗಳಲ್ಲಿ ನಿಲ್ಲಿಸಲು, ಸ್ಥಳೀಯ ವಿಶೇಷತೆಗಳನ್ನು ಪ್ರಯತ್ನಿಸಲು ಮತ್ತು ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಪ್ರವಾಸದ ಪ್ರಮುಖ ಭಾಗವೆಂದರೆ ತಿರುಪತಿಯ ಆಧ್ಯಾತ್ಮಿಕ ಸ್ಥಳವಾಗಿದೆ, ಅಲ್ಲಿ ನೀವು ಪವಿತ್ರ ದೇವಾಲಯಗಳಿಗೆ ಭೇಟಿ ನೀಡಬಹುದು ಮತ್ತು ಆಧ್ಯಾತ್ಮಿಕ ವಾತಾವರಣವನ್ನು ನೆನೆಸಬಹುದು.

 ಕೇವಲ 1000 ರೂ.ನಲ್ಲಿ ಒಂದೇ ದಿನ ತಿರುಪತಿ ದರ್ಶನ ಮಾಡಬಹುದೇ?

ಬೆಂಗಳೂರಿನಿಂದ ತಿರುಪತಿಗೆ ರೋಡ್ ಟ್ರಿಪ್ ಮಾಡುವುದು ಕೇವಲ ಪ್ರವಾಸಕ್ಕಿಂತ ಹೆಚ್ಚು; ಇದು ನಿಮ್ಮ ಜೀವನದುದ್ದಕ್ಕೂ ನೀವು ನೆನಪಿನಲ್ಲಿಟ್ಟುಕೊಳ್ಳುವ ಘಟನೆಯಾಗಿದೆ. ಸುಸಜ್ಜಿತ ರಸ್ತೆಗಳು ಮತ್ತು ಸ್ಪಷ್ಟವಾಗಿ ಗುರುತಿಸಲಾದ ಮಾರ್ಗಗಳು ಸವಾರಿ ಸುಗಮ ಮತ್ತು ಆನಂದದಾಯಕವಾಗಿದೆ ಎಂದು ಖಚಿತಪಡಿಸುತ್ತದೆ.

ದಾರಿಯುದ್ದಕ್ಕೂ, ಬೆಂಗಳೂರಿನ ಜನನಿಬಿಡ ನಗರದಿಂದ ಶಾಂತಿಯುತ ಕೃಷಿಭೂಮಿ ಮತ್ತು ಅಂತಿಮವಾಗಿ ಪವಿತ್ರ ಪಟ್ಟಣವಾದ ತಿರುಪತಿಯವರೆಗೆ ನೀವು ವಿವಿಧ ರೀತಿಯ ದೃಶ್ಯಾವಳಿಗಳನ್ನು ನೋಡುತ್ತೀರಿ. ಇದು ನಿಮ್ಮ ಮೊದಲ ರೋಡ್ ಟ್ರಿಪ್ ಆಗಿರಲಿ ಅಥವಾ ನಿಮ್ಮ ಹತ್ತನೇ ಪ್ರಯಾಣವಾಗಿರಲಿ, ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುವ ಅನುಭವಗಳನ್ನು ನೀವು ಪಡೆಯುತ್ತೀರಿ.

ಬನ್ನಿ ಇನ್ನೇಕೆ ತಡ ಮಾಡುವುದು ಕೇವಲ ಒಂದು ದಿನದಲ್ಲಿ ಕಾರ್ ಮೂಲಕ ಬೆಂಗಳೂರಿನಿಂದ ಹೊರಟು ತಿರುಪತಿಯಲ್ಲಿ ವೆಂಕಟೇಶ್ವರನ ದಿವ್ಯ ದರ್ಶನ ಮಾಡಿಕೊಂಡು ವಾಪಸು ಬರುವುದು ಹೇಗೆಂದು ನೋಡೋಣ...

ತಿರುಪತಿಗೆ ಹೋಗಿ ಒಮ್ಮೆಯಾದರೂ ತಿಮ್ಮಪ್ಪನ ದರ್ಶನ ಮಾಡಬೇಕೆಂಬುದು ಹಲವರ ಕನಸಾಗಿರುತ್ತೆ ಆದರೆ ತುಂಬ ಜನ ಅಲ್ಲಿನ ಜನಸಂದಣಿ ಮತ್ತು ದರ್ಶನ ಮಾಡುವುದಕ್ಕೆ ಆಗುವ ಧೀರ್ಘ ಸಮಯದ ಕಾರಣದಿಂದಾಗಿ ತಿರುಪತಿಗೆ ಹೋಗುವ ಯೋಜನೆಯನ್ನು ಮುಂದೂಡುತ್ತಲೇ ಇರುತ್ತಾರೆ. ಆದರೆ ನಾವು ಸ್ನೇಹಿತರು ಕೇವಲ ಒಂದೇ ದಿನದಲ್ಲಿ ಕಡಿಮೆ ವೆಚ್ಚದಲ್ಲಿ ಹೇಗೆ ತಿರುಪತಿ ಪ್ರವಾಸ ಮುಗಿಸಿದೆವು ಎಂಬ ಅನುಭವವನ್ನು ಹಂಚಿಕೊಳ್ತೀವಿ ಬನ್ನಿ.

ಹೊರಡುವ ಸಮಯ

ಎಲ್ಲರು ಸರಿಯಾಗಿ ಒಂದೆಡೆ ಸೇರಿ ಎಲ್ಲ ಅಗತ್ಯ ಸಾಮಗ್ರಿಗಳೊಂದಿಗೆ ಬೆಂಗಳೂರಿನ ಟಿನ್ ಫ್ಯಾಕ್ಟರಿ ಏರಿಯಾ ವನ್ನು ಸುಮಾರು ರಾತ್ರಿ 11 ಘಂಟೆಗೆ ಬಿಟ್ಟೆವು ಸ್ವಂತ ಕಾರಿನಲ್ಲಿ ಅದು ವೈಟ್ ಬೋರ್ಡ್ ಕಾರಿನಲ್ಲಿ ಹೋಗುವುದು ಉತ್ತಮ ಏಕೆಂದೆರೆ ಟ್ಯಾಕ್ಸ್ ಕಟ್ಟುವುದನ್ನು ತಪ್ಪಿಸಬಹುದು.

ತಿರುಪತಿ ತಲುಪಿದ ಸಮಯ

ಡ್ರೈವರ್‌ಗೆ ನಿದ್ದೆ ಬರುವ ಕಾರಣದಿಂದಾಗಿ ಹಲವು ಕಡೆ ಕಾರನ್ನು ನಿಲ್ಲಿಸಿ ಕಾಫಿ ಟೀ ಅನ್ನು ಆಸ್ವಾದಿಸುತ್ತ ನಮ್ಮ ಪಯಣ ಸಾಗಿ ಕೊನೆಗೂ ಮುಂಜಾನೆ 4 ಘಂಟೆಗೆ ತಿರುಪತಿ ಬಸ್ ನಿಲ್ದಾಣದ ಹತ್ತಿರ ಶ್ರೀನಿವಾಸಂ ಕಾಂಪ್ಲೆಕ್ಸ್‌ನಲ್ಲಿ ಸರ್ವ ದರ್ಶನ ಟಿಕೆಟ್ ಕೊಡುವ ಸಾಲಿನಲ್ಲಿ ಬಂದು ನಿಂತೆವು ಮತ್ತು ಆ ಉದ್ದನೆಯ ಸಾಲು ಕಂಡು ಗಾಬರಿಯಾಗಿದಂತೂ ನಿಜ, ಆದರೂ ಛಲ ಬಿಡದೆ ಕಿಲೋಮೀಟರು ಸಾಲಿನಲ್ಲಿ ನಿಂತು ಎಲ್ಲರು ಸರ್ವದರ್ಶನ್ ಟಿಕೆಟ್‌ಗಳನ್ನು ಪಡೆದುಕೊಂಡೆವು. ಆದರೆ ನಮಗೆ ಸಿಕ್ಕಿದ ಟಿಕೆಟ್‌ಗೆ ದರ್ಶನದ ಸಮಯವು ಸಂಜೆ 6 ಘಂಟೆ ಆಗಿತ್ತು.

ತಿರುಮಲ ತಲುಪಿದ ಸಮಯ

ಸರ್ವದರ್ಶನ ಟಿಕೆಟ್ಗಳನ್ನು ತಗೊಂಡು ಅಂತೂ ಇಂತೂ ಅಲಿಪಿರಿ ಹತ್ತಿರ ನಡೆಸುವ ಎಲ್ಲ ಚೆಕಿಂಗ್‌ಗಳನ್ನು ಮುಗಿಸಿಕೊಂಡು ಸುಮಾರು 6.30 ಗೆ ತಿರುಮಲಕ್ಕೆ ಬಂದು ಕಾರ್ ಪಾರ್ಕ್ ಮಾಡಿ ರೂಮ್‌ಗೆ ಟಿಕೆಟ್ ತೆಗೆದುಕೊಳ್ಳುವ ಸಾಲಿನಲ್ಲಿ ಇಬ್ಬರು ಸ್ನೇಹಿತರನ್ನು ನಿಲ್ಲಿಸಿ ಉಳಿದವರು ಕಾರ್ ನಲ್ಲೆ ವಿಶ್ರಾಂತಿ ತೆಗೆದುಕೊಳ್ಳಲು ಹೋದೆವು.

ರೂಮ್ ಗೆ ತಲುಪಿದ ಸಮಯ

ಕೊನೆಗೂ ನಮಗೆ ರೂಮ್ ಹಂಚಿಕೆಯಾಗಿ ನಾವು ರೂಮ್ ಕೀ ತೆಗೆದುಕೊಂಡು 9.30 ಗೆ ರೂಮ್‌ಗೆ ಹೋಗಿ ತಮ್ಮ ದಿನನಿತ್ಯ ಕರ್ಮಗಳನ್ನು ಮುಗಿಸಿಕೊಳ್ಳುವುದರೊಳೊಗೆ ತಲೆ ಮುಡಿ ಕೊಡುವುದಕ್ಕೆ ಹೋಗಿದ್ದ ಗೆಳೆಯರು ಮುಡಿ ಕೊಟ್ಟು ರೂಮ್‌ಗೆ ಬಂದರು ನಂತರ ಎಲ್ಲರು ಸ್ನಾನ ಮುಗಿಸಿ ತಿಂಡಿ ತಿನ್ನುವುದಕ್ಕೆ ಅನ್ನಪ್ರಸಾದ ಕೊಡುವ ಜಾಗಕ್ಕೆ ಹೋಗಿ ಹೊಟ್ಟೆ ತುಂಬ ತಿಂದೆವು, ಮತ್ತು ನಮ್ಮ ದರ್ಶನದ ಸಮಯವು ಸಾಯಂಕಾಲ 6 ಘಂಟೆಗೆ ಇರುವುದರಿಂದ ನಾವು ಇತರ ದೇವಾಲಯಗಳ ದರ್ಶನ ಮಾಡಬೇಕೆಂದು ಹೊರಟೆವು.

ತಿರುಮಲದಲ್ಲಿ ಹೆಚ್ಚು ಭೇಟಿ ನೀಡುವ ಪವಿತ್ರ ಸ್ಥಳಗಳು ಮತ್ತು ಆಸಕ್ತಿದಾಯಕ ಸ್ಥಳಗಳನ್ನು ಕೆಳಗೆ ನೀಡಲಾಗಿದೆ.

ಆಕಾಶಗಂಗಾ ತೀರ್ಥಂ.
ಜಪಾಲಿ ಹನುಮಾನ್ ದೇವಸ್ಥಾನ.
ಜಪಾಲಿ ತೀರ್ಥಂ.
ಸಿಲತೋರಣಂ.
ಪಾಪವಿನಾಸಂ.
ವೇಣುಗೋಪಾಲ ಸ್ವಾಮಿ ದೇವಸ್ಥಾನ.
ವರಾಹ ಸ್ವಾಮಿ ದೇವಸ್ಥಾನ.
ಚಕ್ರತೀರ್ಥಂ.
ಶ್ರೀವಾರಿ ಪಾದಗಳು.

ಈ ಎಲ್ಲ ಸ್ಥಳಗಳನ್ನು ವೀಕ್ಷಿಕೊಂಡು ದರ್ಶನಕ್ಕೆಂದು ಸರ್ವದರ್ಶನದ ದ್ವಾರದ ಬಳಿ ಬಂದಾಗ ಸುಮಾರು 5 ಘಂಟೆಯಾಗಿತ್ತು. ಅಲ್ಲಿ ಹೇಗೋ ಸೆಕ್ಯೂರಿಟಿ ಜೊತೆ ಮಾತಾಡಿ 5 ಘಂಟೆಗೆ ಒಳಗೆ ಹೋದೆವು.

ಶ್ರೀವಾರಿ ದರ್ಶನದ ಸಮಯ

ಸಂಜೆ 5 ಘಂಟೆಗೆ ಒಳಗೆ ಹೋದ ನಮ್ಮನ್ನು 9 ನೇ ಕೊಠಡಿಯೊಳಗೆ ಕೂಡಿಹಾಕಿದರು, ಸುಮಾರು 2 ಘಂಟೆ ಅದೇ ಕೊಠಡಿಯೊಳಗೆ ಇದ್ದರು ಯಾವುದೇ ರೀತಿಯ ಬೇಜಾರು ಇರಲಿಲ್ಲ, ಕುಡಿಯೋದಕ್ಕೆ ಬಿಸಿ ಹಾಲು, ಹಾಗು ತಿನ್ನುವುದಕ್ಕೆ ಪೊಂಗಲ್ ಅನ್ನು ದೇವಸ್ಥಾನದವರೇ ನೀಡಿದರು, ಕೊನೆಗೂ ರಾತ್ರಿ 8.30 ಗೆ ತಿಮ್ಮಪ್ಪನ ದರ್ಶನವಾಯಿತು.

ನಿಜ ಹೇಳಬೇಕೆಂದರೆ ಶ್ರೀವಾರಿಯ ದರ್ಶನವು ನಮಗೆ ಎಷ್ಟು ಮುದ ಮತ್ತು ಚೈತನ್ಯ ನೀಡಿತೆಂದರೆ ಬೆಳಿಗ್ಗೆಯಿಂದ ಪಟ್ಟಿದ್ದ ಎಲ್ಲ ಕಷ್ಟಗಳು ಮಾಯವಾಗಿ ಏನೋ ಒಂದು ರೀತಿಯ ಹೊಸ ಚೈತನ್ಯವನ್ನು ನೀಡಿತು, ದರ್ಶನ ಮುಗಿಸಿಕೊಂಡು ಮತ್ತೆ ರೂಮ್‌ಗೆ ಬಂದಾಗ ಸುಮಾರು 10 ಘಂಟೆಯಾಗಿತ್ತು ಮತ್ತೆ ಎಲ್ಲರು ರೆಡಿ ಆಗಿ ಬೆಂಗಳೂರಿಗೆ ಹೊರಟೆವು ಮತ್ತು ಬೆಂಗಳೂರಿಗೆ ಮುಂಜಾನೆ ೫ ಘಂಟೆಗೆ ತಲುಪಿದೆವು.

ಖರ್ಚಿನ ವಿವರ

ಡಿಸೇಲ್ - 4500
ಟೋಲ್ - 1300
ಇತರೆ ವೆಚ್ಚ - 2000
ಒಟ್ಟು - 7800
ಪ್ರತಿ ವ್ಯಕ್ತಿಗೆ - 975

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+