ಗಮನಿಸಿ: ಎಟಿಎಂ ವಹಿವಾಟು ಪ್ರಕ್ರಿಯೆ ಬದಲಾವಣೆ

ಎಟಿಎಂ ಕಾರ್ಡ್ ಬಳಕೆ ಮಾಡಿ ಹಲವಾರು ವಂಚನೆಗಳು ನಡೆದಿರುವುದು ಈ ಹಿಂದೆ ಬೆಳಕಿಗೆ ಬಂದಿದೆ. ಎಟಿಎಂ ಪಿನ್ ಅನ್ನು ತಿಳಿದುಕೊಂಡು ಹಣವನ್ನು ದೋಚುವ ತಂತ್ರಗಳನ್ನು ಕೂಡಾ ವಂಚಕರು ತಿಳಿದಿದ್ದಾರೆ. ಈ ಎಲ್ಲಾ ವಂಚನೆಯಿಂದ ಜನರನ್ನು ತನ್ನ ಗ್ರಾಹಕರನ್ನು ರಕ್ಷಿಸುವ ನಿಟ್ಟಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಟಿಎಂ ವಿತ್‌ಡ್ರಾನಲ್ಲಿ ಹೊಸ ಪ್ರಕ್ರಿಯೆ ಜಾರಿಗೆ ತಂದಿದೆ. ಅದುವೇ ಒಟಿಪಿ ವ್ಯವಸ್ಥೆಯಾಗಿದೆ.

ಈ ವಿಧಾನದಲ್ಲಿ ಹಣವನ್ನು ವಿತ್‌ಡ್ರಾ ಮಾಡಲು ಒಟಿಪಿ ಅತೀ ಮುಖ್ಯವಾಗಿದೆ. ಇನ್ನು ಎಸ್‌ಬಿಐನ ಈ ವಿಧಾನವನ್ನು ಹಲವಾರು ಬ್ಯಾಂಕ್‌ಗಳು ಪಾಲನೆ ಮಾಡುವ ಸಾಧ್ಯತೆ ಇದೆ. ಅನಧಿಕೃತ ವಹಿವಾಟಿನಿಂದ ರಕ್ಷಿಸುವ ನಿಟ್ಟಿನಲ್ಲಿ ಎಸ್‌ಬಿಐ ಈ ಹೊಸ ವಿಧಾನ ಸಹಾಯಕವಾಗಲಿದೆ.

ಎಸ್‌ಬಿಐ ಪ್ರಕಾರ, ಈ ಹೊಸ ಎಟಿಎಂ ವಿತ್‌ಡ್ರಾ ಪ್ರಕ್ರಿಯೆಯಲ್ಲಿ ಗ್ರಾಹಕರು ಹಣವನ್ನು ಹಿಂಪಡೆಯುವ ಸಂದರ್ಭದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಒಟಿಪಿಯನ್ನು ಹಾಕಬೇಕಾಗುತ್ತದೆ. ಇದು ಆ ಬ್ಯಾಂಕ್‌ ಖಾತೆಯಲ್ಲಿ ಲಿಂಕ್‌ ಆದ ಮೊಬೈಲ್ ಸಂಖ್ಯೆಗೆ ಬರಲಿದೆ.

ಗಮನಿಸಿ: ಎಟಿಎಂ ವಹಿವಾಟು ಪ್ರಕ್ರಿಯೆ ಬದಲಾವಣೆ

ಒಟಿಪಿ ಎಂದರೇನು?

ಒಟಿಪಿ (ವನ್‌ ಟೈಮ್ ಪಾಸ್‌ವರ್ಡ್) ಎಂಬುವುದು ನಾಲ್ಕು ಅಂಕಿಗಳ ಸಂಖ್ಯೆಯಾಗಿರುತ್ತದೆ. ನೀವು ಖಾತೆ ಹೊಂದಿರುವ ಬ್ಯಾಂಕ್ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಇದನ್ನು ಕಳುಹಿಸಿ ಕೊಡುತ್ತದೆ. ಒನ್ ಟೈಮ್ ಪಾಸ್ ವರ್ಡ್ (ಒಟಿಪಿ)ಯನ್ನು ಬಳಸಿಕೊಂಡು ಹಣ ವಿತ್‌ಡ್ರಾ ಮಾಡಬೇಕಾಗುತ್ತದೆ. ಇದು ಒಂದು ಬಾರಿ ಮಾತ್ರ ಬಳಕೆ ಮಾಡಲು ಸಾಧ್ಯವಾಗುವ ಸಂಖ್ಯೆಯಾಗಿದೆ.

ಎಟಿಎಂ ವಹಿವಾಟುಗಳನ್ನು ಮಾಡುವಾಗ, ಎಟಿಎಂಗಳಿಂದ ರೂ 10,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡುವ ವ್ಯಕ್ತಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬ್ಯಾಂಕ್ ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ಕಳುಹಿಸುತ್ತದೆ. ಎಟಿಎಂ ಕೌಂಟರ್‌ಗಳಲ್ಲಿ ಸುರಕ್ಷಿತವಾಗಿರಲು ಬಳಕೆದಾರರು ಬ್ಯಾಂಕ್‌ನ ಒಟಿಪಿ ಆಧಾರಿತ ಕ್ಯಾಷ್ ವಿತ್‌ಡ್ರಾ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳಬಹುದು.

ಎಸ್‌ಬಿಐನ ಒಟಿಪಿ ಆಧಾರಿತ ಕ್ಯಾಷ್ ವಿತ್ ಡ್ರಾ ಸೌಲಭ್ಯವನ್ನು ಜನವರಿ 1, 2020 ರಿಂದ ಆರಂಭ ಮಾಡಲಾಗಿದೆ. "ಎಸ್‌ಬಿಐ ಎಟಿಎಂ ವಹಿವಾಟುಗಳಿಗಾಗಿ ನಮ್ಮ ಒಟಿಪಿ ಆಧಾರಿತ ನಗದು ಹಿಂಪಡೆಯುವ ವ್ಯವಸ್ಥೆಯು ವಂಚನೆ-ತಡೆಗಟ್ಟುವಿಕೆ ಲಸಿಕೆಯಾಗಿದೆ. ನಿಮ್ಮನ್ನು ವಂಚನೆಯಿಂದ ಸುರಕ್ಷಿತವಾಗಿರಿಸುವುದು ನಮ್ಮ ಮೊದಲ ಗುರಿಯಾಗಿದೆ," ಎಂದು ಎಸ್‌ಬಿಐ ಟ್ವೀಟ್ ಮಾಡಿದೆ.

ಎಸ್‌ಬಿಐನ ಒಟಿಪಿ ಆಧಾರಿತ ಎಟಿಎಂ ಕ್ಯಾಷ್ ವಿತ್‌ಡ್ರಾ ಮಾಡುವುದು ಹೇಗೆ?

* ನೀವು ಹಣವನ್ನು ವಿತ್‌ಡ್ರಾ ಮಾಡುವ ಸಂದರ್ಭದಲ್ಲಿ ಎಟಿಎಂ ಡೆಬಿಟ್ ಕಾರ್ಡ್ ಅನ್ನು ಕೈಯಲ್ಲಿ ಹೊಂದಿರಬೇಕಾಗುತ್ತದೆ
* ನಿಮ್ಮ ಎಸ್‌ಬಿಐ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್‌ ಸಂಖ್ಯೆ ಇರುವ ಮೊಬೈಲ್ ಕೂಡಾ ನೀವು ಹಣ ವಿತ್‌ ಡ್ರಾ ಮಾಡುವ ಸಂದರ್ಭದಲ್ಲಿ ನೀವು ಕೈಯಲ್ಲಿ ಹೊಂದಿರಬೇಕಾಗುತ್ತದೆ.
* ನೀವು ಡೆಬಿಟ್ ಕಾರ್ಡ್ ಅನ್ನು ಎಟಿಎಂ ಮಿಷನ್‌ಗೆ ಹಾಕಿದ ಬಳಿಕ ಎಂದಿನಂತೆ ಎಟಿಎಂ ಪಿನ್ ಅನ್ನು ಹಾಕಬೇಕು
* ನೀವು ಎಷ್ಟು ಹಣವನ್ನು ವಿತ್‌ಡ್ರಾ ಮಾಡಲು ಬಯಸುತ್ತೀರಿ ಎಂದು ಕೂಡಾ ಉಲ್ಲೇಖ ಮಾಡಬೇಕು
* ಆ ಬಳಿಕ ನೀವು ಒಟಿಪಿ ಹಾಕುವಂತೆ ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತದೆ.
* ಒಟಿಪಿಯು ನಿಮ್ಮ ಬ್ಯಾಂಕ್‌ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಬರಲಿದೆ.
* ನೀವು ಈ ಒಟಿಪಿಯನ್ನು ಎಟಿಎಂನಲ್ಲಿ ಉಲ್ಲೇಖ ಮಾಡಬೇಕಾಗುತ್ತದೆ.
* ಈಗ ನಿಮ್ಮ ವಹಿವಾಟು ಸಂಪೂರ್ಣವಾಗಿ ನೀವು ಉಲ್ಲೇಖ ಮಾಡಿದ ಮೊತ್ತ ನಿಮಗೆ ಲಭ್ಯ ಆಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+