ಭಾರತದ ಶ್ರೀಮಂತ ಉದ್ಯಮಿ ಎಂದು ಖ್ಯಾತಿ ಪಡೆದಿರುವ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಗಳ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಶೀಘ್ರದಲ್ಲೇ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಇವರಿಬ್ಬರ ಮದುವೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಂಬಾನಿಯವರ ಅಳಿಯ ಮತ್ತು ಸೊಸೆಯಂದಿರ ಕೌಟುಂಬಿಕ, ಶೈಕ್ಷಣಿಕ ಹಿನ್ನಲೆಯ ಬಗ್ಗೆ ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಅನೇಕರು ಆಸಕ್ತಿಯನ್ನು ಹೊಂದಿದ್ದಾರೆ.
ಈ ನವ ಜೋಡಿಯ ವಿವಾಹ ಪೂರ್ವದ ಕಾರ್ಯಕ್ರಮಗಳು ಮಾರ್ಚ್ 1 ರಂದು ಪ್ರಾರಂಭವಾಗಿ ಮಾರ್ಚ್ 3ರವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ಮುಂದುವರೆಯಲಿದೆ. ಆದರೆ ಇವರ ವಿವಾಹದ ದಿನಾಂಕವನ್ನು ಇನ್ನೂ ಖಚಿತವಾಗಿ ಬಹಿರಂಗವಾಗಿಲ್ಲ.

ಆಕಾಶ್ ಅಂಬಾನಿಯನ್ನು ವಿವಾಹವಾದ ಶ್ಲೋಕಾ ಮೆಹ್ತಾ ಮತ್ತು ಇಶಾ ಅಂಬಾನಿ ಅವರನ್ನು ವಿವಾಹವಾದ ಆನಂದ್ ಪಿರಾಮಲ್ ಅವರಂತೆಯೇ ರಾಧಿಕಾ ಶ್ರೀಮಂತ ಕುಟುಂಬದಿಂದ ಬಂದವರು. ಇಬ್ಬರೂ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರುವುದು ಮಾತ್ರವಲ್ಲದೇ ಸದೃಢವಾದ, ಶ್ರೀಮಂತ ಕುಟುಂಬಗಳಿಗೆ ಸೇರಿದವರು.
ಆನಂದ್ ಪಿರಾಮಲ್:
ಅಜಯ್ ಮತ್ತು ಡಾ. ಸ್ವಾತಿ ಎ. ಪಿರಾಮಲ್ ಅವರ ಪುತ್ರನಾಗಿರುವ ಆನಂದ್ ಪಿರಾಮಲ್ ಅವರು ಪಿರಾಮಲ್ ಗ್ರೂಪ್ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಅವರ ಪೋಷಕರು ಪಿರಾಮಲ್ ಗ್ರೂಪ್‌ನಲ್ಲಿ ಕ್ರಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದಾರೆ. ಕುಟುಂಬದ ವ್ಯವಹಾರದ ನಿರ್ಣಾಯಕ ಸದಸ್ಯರಾಗಿ, ಆನಂದ್ ಪಿರಮಲ್ ಗ್ರೂಪ್ ಬೋರ್ಡ್‌ನಲ್ಲಿ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ.
ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತುಬೋಸ್ಟನ್‌ನ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಆನಂದ್ ಪಿರಾಮಲ್ 2018 ರಲ್ಲಿ ಇಶಾ ಅಂಬಾನಿಯೊಂದಿಗೆ ಸಪ್ತಪದಿ ತುಳಿದ್ದು ಈ ದಂಪತಿಗಳು 2022 ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಶ್ಲೋಕ ಮೆಹ್ತಾ
ರಸೆಲ್ ಮೆಹ್ತಾ ಮತ್ತು ಮೋನಾ ಮೆಹ್ತಾ ದಂಪತಿಗಳ ಪುತ್ರರಾಗಿರುವ ಶ್ಲೋಕಾ ಮೆಹ್ತಾ ಆಕಾಶ್ ಅಂಬಾನಿ ಅವರ ಪತ್ನಿಯಾಗಿದ್ದಾರೆ. ಶ್ಲೋಕಾ ಅವರ ಪೋಷಕರು ರೋಸಿ ಬ್ಲೂ ಇಂಡಿಯಾದ ಪ್ರಮುಖ ಕಾರ್ಯನಿರ್ವಾಹಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಶ್ಲೋಕಾ ಅವರು ರೋಸಿ ಬ್ಲೂ ಇಂಡಿಯಾ ಕಂಪನಿಯ ಮಂಡಳಿಯಲ್ಲಿ ನಿರ್ದೇಶಕಿಯಾಗಿದ್ದಾರೆ.
ಇವರು ನ್ಯೂಜೆರ್ಸಿಯ ಐವಿ ಲೀಗ್ ವಿಶ್ವವಿದ್ಯಾನಿಲಯವಾದ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಅಂತ್ರೋಪಾಲಜಿ ವಿಷಯದಲ್ಲಿ ತನ್ನ ಪದವಿಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದ್ದು, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ (LSE) ನಿಂದ ಲಾ, ಅಂತ್ರೋಪಾಲಜಿ, ಅಂಡ್ ಸೊಸೈಟಿಯಲ್ಲಿ ವಿಹಯದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದು, ಇವರ ಕೂಡಾ ಬಲವಾದ ಶೈಕ್ಷಣಿಕ ಹಿನ್ನೆಲೆ ಉಳ್ಳವರು. ಆಕಾಶ್ ಅಂಬಾನಿ ಮತ್ತು ಶ್ಲೋಕಾ 2019 ರಲ್ಲಿ ವಿವಾಹವಾಗಿದ್ದುಈ ದಂಪತಿಗಳಿಗೆ ಪೃಥ್ವಿ ಅಂಬಾನಿ ಮತ್ತು ಮಗಳು ವೇದಾ ಅಂಬಾನಿ ಎಂಬ ಇಬ್ಬರು ಮಕ್ಕಳಿದ್ದಾರೆ.
ರಾಧಿಕಾ ಮರ್ಚೆಂಟ್
ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿಯಾಗಿರುವ ರಾಧಿಕಾ ಅವರು ಎನ್‌ಕೋರ್ ಹೆಲ್ತ್‌ಕೇರ್ (ಇಎಚ್‌ಪಿಎಲ್) ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ. ಇವರ ಪೋಷಕರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಓ ಆಗಿದ್ದಾರೆ. ಶೀಘ್ರದಲ್ಲೇ ಅನಂತ್ ಅಂಬಾನಿಯನ್ನು ವರಿಸಲಿರುವ ರಾಧಿಕಾ, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
ಮುಕೇಶ್ ಮತ್ತು ನೀತಾ ಅಂಬಾನಿ ಅವರ ಅಳಿಯ ಮತ್ತು ಸೊಸೆಯಂದಿರು, ತಮ್ಮ ಕುಟುಂಬದ ಉದ್ಯಮದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದ್ದು, ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಪಡೆದುಕೊಂಡಿದ್ದು, ಶೈಕ್ಷಣಿಕವಾಗಿ ಮತ್ತು ವೃತ್ತಿಪರವಾಗಿ ಯಶಸ್ಸು ಪಡೆಯಲು ಸಮರ್ಪಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.


Click it and Unblock the Notifications