ಸಕ್ರಿಯವಾಗಿರುವ ಮತ್ತು ಮಾನ್ಯವಾದ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್ ಕಾರ್ಡ್ ಅನ್ನು ನಾವು ಭಾರತದಲ್ಲಿ ನಮ್ಮ ಹಣಕಾಸು ವಹಿವಾಟನ್ನು ನಡೆಸುವ ಸಂದರ್ಭದಲ್ಲಿ ಬಳಕೆ ಮಾಡುವುದು ಅತೀ ಮುಖ್ಯವಾಗುತ್ತದೆ. ಪ್ಯಾನ್ ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗಿರುವ ಒಂದು ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು, ನಿಮ್ಮ ಎಲ್ಲ ಹಣಕಾಸು ವಹಿವಾಟುಗಳ ಮೇಲೆ ನಿಗಾ ವಹಿಸಲು ಸರ್ಕಾರವು ಇದನ್ನು ಆರಂಭ ಮಾಡಿದೆ.
ಆದರೆ ಈ ಪ್ಯಾನ್ ಕಾರ್ಡ್ ಅನ್ನು ನಾವು ಬಳಕೆ ಮಾಡುವಾಗ ಅದರ ಮಾನ್ಯತೆ ಇದೆಯೇ ಅಥವಾ ಸಕ್ರಿಯವಾಗಿದೆಯೇ ಎಂದು ತಿಳಿಯುವುದು ಅತೀ ಮುಖ್ಯವಾಗುತ್ತದೆ. ಅದು ಕೂಡಾ ಇತ್ತೀಚೆಗೆ ಪ್ಯಾನ್ ಆಧಾರ್ ಲಿಂಕ್ ಗಡುವು ಕೊನೆಯಾಗಿದೆ. ಆಧಾರ್ ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ನಿಷ್ಕ್ರೀಯವಾಗಲಿದೆ ಎಂದು ಈಗಾಗಲೇ ಇಲಾಖೆ ತಿಳಿಸಿದೆ. ಆದ್ದರಿಂದಾಗಿ ನಿಷ್ಕ್ರೀಯವಾದ ಪ್ಯಾನ್ ಬಳಸಿ ದಂಡ ತೆರುವ ಬದಲು ಮೊದಲು ಪ್ಯಾನ್‌ಕ ವ್ಯಾಲಿಟಿಡಿ ಚೆಕ್ ಮಾಡುವುದು ಉತ್ತಮ.

ಜನರು ಅಥವಾ ಯಾವುದೇ ಒಂದು ಉದ್ಯಮವು ಪ್ಯಾನ್ ಕಾರ್ಡ್‌ನ ಸಿಂಧುತ್ವವನ್ನು ಪರಿಶೀಲನೆ ಮಾಡಬಹುದಾಗಿದೆ. ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್‌ನ ಹೆಸರು, ತಂದೆಯ ಹೆಸರು, ಜನ್ಮ ದಿನಾಂಕ, ಪ್ಯಾನ್ ಸಂಖ್ಯೆ ನಮೂದಿಸಿ ವ್ಯಾಲಿಡಿಟಿ ಚೆಕ್ ಮಾಡಬಹುದು. ಪ್ಯಾನ್ ಅರ್ಜಿದಾರರು ತಮ್ಮ ಪ್ಯಾನ್ ಮಾಹಿತಿಯನ್ನು ತಿಳಿಯಲು ಈ ಫೀಚರ್ ಅನ್ನು ಬಳಕೆ ಮಾಡಬಹುದಾಗಿದೆ. ವ್ಯಾಲಿಡಿಟಿ ಚೆಕ್ ಮಾಡುವುದು ಹೇಗೆ, ಪ್ಯಾನ್ ಕಾರ್ಡ್ ಅತೀ ಮುಖ್ಯವೇಕೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ ವ್ಯಾಲಿಡಿಟಿ ಚೆಕ್ ಮಾಡಿ
ಹಂತ 1: ಆದಾಯ ತೆರಿಗೆ ಇಲಾಖೆಯ incometaxindiaefiling.gov.in/home ಸೈಟ್‌ಗೆ ಭೇಟಿ ನೀಡಿ
ಹಂತ 2: "Verify Your PAN Details" ಲಿಂಕ್ ಅನ್ನು ಆಯ್ಕೆ ಮಾಡಿ
ಹಂತ 3: ಪ್ಯಾನ್ ನಂಬರ್ ಅನ್ನು ನಮೂದಿಸಿ
ಹಂತ 4: ಪ್ಯಾನ್ ಕಾರ್ಡ್‌ನಲ್ಲಿ ಇರುವಂತೆಯೇ ಹೆಸರನ್ನು ನಮೂದಿಸಿ
ಹಂತ 5: ಪೇಜ್‌ನಲ್ಲಿರುವಂತೆಯೇ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ
ಹಂತ 6: submit ಕ್ಲಿಕ್ ಮಾಡಿ
ಹಂತ 7: ನಿಮ್ಮ ಪ್ಯಾನ್ ಕಾರ್ಡ್‌ನ ಸ್ಟೇಟಸ್, ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಿದೆಯೇ, ಸಕ್ರಿಯವಾಗಿದೆಯೇ ಎಂಬ ಮಾಹಿತಿ ಈಗ ಲಭ್ಯವಾಗಲಿದೆ.
ಎಸ್‌ಎಂಎಸ್ ಮೂಲಕ ಪ್ಯಾನ್ ವ್ಯಾಲಿಡಿಟಿ ವೆರಿಫೈ ಮಾಡುವುದು ಹೇಗೆ?
ಹಂತ 1: 567678 ಅಥವಾ 56161 ಗೆ ಎಸ್‌ಎಂಎಸ್ ಮಾಡುವ ಮೂಲಕ ನೀವು ಪ್ಯಾನ್ ಕಾರ್ಡ್‌ನ ವ್ಯಾಲಿಡಿಟಿ ಅನ್ನು ಚೆಕ್ ಮಾಡಬಹುದಾಗಿದೆ.
ಹಂತ 2: ನಿಮ್ಮ ಪ್ಯಾನ್ ನಂಬರ್ ABCDE1234F ಆಗಿದೆ ಎಂದುಕೊಳ್ಳಿ. ಆಗ ನೀವು PAN NSDL ABCDE1234F ಎಂದು ಎಸ್‌ಎಂಎಸ್ ಮಾಡಬೇಕಾಗುತ್ತದೆ.
ಹಂತ 3: ನಿಮ್ಮ ಪ್ಯಾನ್ ಕಾರ್ಡ್‌ನ ಸ್ಟೇಟಸ್ ಸಂಬಂಧಿತ ಎಸ್‌ಎಂಎಸ್ ನಿಮಗೆ ಲಭ್ಯವಾಗಲಿದೆ. ನಿಮ್ಮ ಪ್ಯಾನ್ ಕಾರ್ಡ್ ಸಕ್ರಿಯವಾಗಿದೆಯೇ, ನಿಷ್ಕ್ರೀಯವಾಗಿದೆಯೇ ಎಂಬ ಮಾಹಿತಿಯೂ ಎಸ್‌ಎಂಎಸ್ ಮೂಲಕ ಲಭ್ಯವಾಗಲಿದೆ.
ಪ್ಯಾನ್ ಕಾರ್ಡ್ ಯಾಕೆ ಮುಖ್ಯ?
ಭಾರತದ ಆದಾಯ ತೆರಿಗೆ ಇಲಾಖೆಯು ಪ್ರತಿ ವ್ಯಕ್ತಿ, ವ್ಯವಹಾರ ಮತ್ತು ಇತರ ಘಟಕಗಳಿಗೆ ವಿಶಿಷ್ಟವಾದ ಹತ್ತು-ಅಂಕೆ ಸಂಖ್ಯೆಯ ಗುರುತಿನ ಸಂಖ್ಯೆಯನ್ನು ನೀಡುತ್ತದೆ. ಅದುವೇ ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪ್ಯಾನ್ ಕಾರ್ಡ್ ಆಗಿದೆ. ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯು ನಡೆಯುವ ಎಲ್ಲ ಹಣಕಾಸಿನ ವಹಿವಾಟುಗಳಿಗೆ ಒಂದು ಗುರುತಿನ ಸಂಖ್ಯೆಯಾಗಿ ಈ ಪ್ಯಾನ್ ಕಾರ್ಡ್ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಎಲ್ಲ ವಹಿವಾಟುಗಳನ್ನು ಸರ್ಕಾರಕ್ಕೆ ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.
ಪ್ರಮುಖವಾಗಿ ತೆರಿಗೆ ವಿಧಿಸಬಹುದಾದ ಹಣಕಾಸು ವಹಿವಾಟುಗಳನ್ನು ಆದಾಯ ತೆರಿಗೆ ಇಲಾಖೆಯು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಆದಾಯ ತೆರಿಗೆ ಇಲಾಖೆಯು ಈ ಪ್ಯಾನ್ ಕಾರ್ಡ್ ಅನ್ನು ಜಾರಿ ಮಾಡಿದೆ. ಪ್ರಸ್ತುತ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಜೂನ್ 30ಕ್ಕೆ ಗಡುವು ಅಂತ್ಯವಾಗಿದ್ದು, ಇನ್ನೂ ಲಿಂಕ್ ಮಾಡದಿದ್ದರೆ ಪ್ಯಾನ್ ನಿಷ್ಕ್ರೀಯವಾಗಲಿದೆ.


Click it and Unblock the Notifications