ಮುಕೇಶ್ ಅಂಬಾನಿಯ ರಿಲಯನ್ಸ್ ಗ್ರೂಪ್ ಮತ್ತು ರತನ್ ಟಾಟಾರ ಟಾಟಾ ಗ್ರೂಪ್‌ನಂತಹ ಬಹುಕೋಟಿ ಸಂಸ್ಥೆಗಳ ಬಗ್ಗೆ ನಾವು ಆಗಾಗ್ಗೆ ಕೇಳುತ್ತೇವೆ. ಹಾಗೆಯೇ ಗೌತಮ್ ಅದಾನಿಯ ಅದಾನಿ ಗ್ರೂಪ್ ಬಗ್ಗೆ ನಾವು ಕೇಳುತ್ತೇವೆ. ಆದರೆ ಈ ಸಂಸ್ಥೆಗಳು ಹೊಂದಿರುವ ಜನಪ್ರಿಯ ಬ್ರ್ಯಾಂಡ್‌ಗಳ ಬಗ್ಗೆ ನಿಮಗೆ ತಿಳಿದಿದೆಯೇ?
ನಾವು ಈ ಗ್ರೂಪ್‌ಗಳ ಹೆಸರನ್ನು ಆಗಾಗೇ ಕೇಳುತ್ತೇವೆ ಆದರೂ ಕೂಡಾ ನಾವು ಈ ಸಂಸ್ಥೆಗಳ ಜನಪ್ರಿಯ ಬ್ರ್ಯಾಂಡ್‌ಗಳ ಬಗ್ಗೆ ತಿಳಿದಿಲ್ಲ. ಒಂದು ಜನಪ್ರಿಯ ಬ್ರ್ಯಾಂಡ್ ಬಗ್ಗೆ ತಿಳಿದಿದ್ದರೂ ಅದು ಯಾವ ಗ್ರೂಪ್‌ಗೆ ಸೇರಿದ್ದು ಎಂದು ನಮಗೆ ತಿಳಿದಿರುವುದಿಲ್ಲ. ಆದರೆ ನಾವು ಅದನ್ನು ದೈನಂದಿನವಾಗಿ ಬಳಕೆ ಮಾಡುತ್ತೇವೆ. ಟಾಟಾ ಗ್ರೂಪ್ ಒಡೆತನದ ಜನಪ್ರಿಯ ಬ್ರ್ಯಾಂಡ್‌ಗಳ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

ಟಾಟಾ ಗ್ರೂಪ್‌ನ ಜನಪ್ರಿಯ ಬ್ರ್ಯಾಂಡ್‌ಗಳಿವು
ವೆಸ್ಟ್‌ಸೈಡ್: ವೆಸ್ಟ್‌ಸೈಡ್ ಎಂಬುದು ಟಾಟಾ ಗ್ರೂಪ್‌ನ ಒಡೆತನದಲ್ಲಿರುವ ಭಾರತೀಯ ರಿಟೇಲ್ ಕಂಪನಿಯಾದ ಟ್ರೆಂಟ್ ಲಿಮಿಟೆಡ್‌ನ ಪ್ರಮುಖ ರಿಟೇಲ್ ಶಾಪ್ ಆಗಿದೆ.
ಸ್ಟಾರ್‌ಬಕ್ಸ್ ಇಂಡಿಯಾ: ಸ್ಟಾರ್‌ಬಕ್ಸ್ ಅನ್ನು ಅಕ್ಟೋಬರ್ 2012 ರಲ್ಲಿ ಭಾರತದಲ್ಲಿ ಸ್ಟಾರ್‌ಬಕ್ಸ್ ಕಾಫಿ ಕಂಪನಿ ಮತ್ತು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಜಂಟಿ ಉದ್ಯಮವಾಗಿ ಪ್ರಾರಂಭಿಸಲಾಯಿತು.
ಜಾಗ್ವಾರ್: ಟಾಟಾ ಮೋಟಾರ್ಸ್, 2008 ರಲ್ಲಿ, ಫೋರ್ಡ್‌ನಿಂದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಅನ್ನು ಖರೀದಿಸಿತು ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಜಾರಿ ಮಾಡಿತು.
ಬಿಗ್ ಬಾಸ್ಕೆಟ್: ಟಾಟಾ ಗ್ರೂಪ್ 2021 ರಲ್ಲಿ ಟೆಕ್ ಸ್ಟಾರ್ಟ್ಅಪ್ ಕಂಪನಿ ಬಿಗ್ ಬಾಸ್ಕೆಟ್ ಕಂಪನಿಯಲ್ಲಿ ಶೇಕಡ 64 ರಷ್ಟು ಪಾಲನ್ನು ಖರೀದಿಸಿದೆ.
ಜಿಂಜರ್ ಹೋಟೆಲ್ಸ್: ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ (ಐಎಚ್‌ಸಿಎಲ್) ಜಿಂಜರ್ ಹೋಟೆಲ್ ಚೈನ್ ಅನ್ನು ಹೊಂದಿದೆ.
ಝುಡಿಯೋ: ಭಾರತೀಯ ರಿಟೇಲ್ ಕಂಪನಿ ಟ್ರೆಂಟ್ ಲಿಮಿಟೆಡ್ ಟಾಟಾ ಗ್ರೂಪ್‌ನ ಒಡೆತನದಲ್ಲಿದೆ. ಇದರಲ್ಲಿ ವೆಸ್ಟ್‌ಸೈಡ್, ಝುಡಿಯೋ ಮತ್ತು ಉತ್ಸಾ ಮುಂತಾದ ಬ್ರ್ಯಾಂಡ್‌ಗಳು ಸೇರಿವೆ.
ಜರಾ ಇಂಡಿಯಾ: ಇಂಡಿಟೆಕ್ಸ್ ಟ್ರೆಂಟ್ ಎಂಬುದು ಸ್ಪ್ಯಾನಿಷ್ ಫ್ಯಾಶನ್ ಬ್ರ್ಯಾಂಡ್ ಇಂಡಿಟೆಕ್ಸ್ ಮತ್ತು ಟಾಟಾದ ಟ್ರೆಂಟ್ ನಡುವಿನ ಜಂಟಿ ಉದ್ಯಮವಾಗಿದ್ದು ಅದು ಭಾರತದಲ್ಲಿ 21 ಜರಾ ಸ್ಟೋರ್‌ಗಳನ್ನು ನಡೆಸುತ್ತಿದೆ.
ಫಾಸ್‌ಟ್ರ್ಯಾಕ್: ಫಾಸ್‌ಟ್ರ್ಯಾಕ್ ಟಾಟಾ ಗ್ರೂಪ್ ಮತ್ತು ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ನಿಗಮ (ಟಿಡ್ಕೊ) ನಡುವಿನ ಜಂಟಿ ಉದ್ಯಮವಾಗಿದೆ.
ವೋಲ್ಟಾಸ್: ವೋಲ್ಟಾಸ್ ಅನ್ನು 1954 ರಲ್ಲಿ ಟಾಟಾ ಸನ್ಸ್ ಮತ್ತು ವೋಲ್ಕಾರ್ಟ್ ಬ್ರದರ್ಸ್ ಸಹಯೋಗದಲ್ಲಿ ಪ್ರಾರಂಭಿಸಲಾಯಿತು.
ಏರ್ ಇಂಡಿಯಾ: ಟಾಟಾ ಗ್ರೂಪ್ ಭಾರತ ಸರ್ಕಾರದಿಂದ ಏರ್ ಇಂಡಿಯಾವನ್ನು ಖರೀದಿಸಿತು. ಅದರ ಕಾರ್ಯಾಚರಣೆಯನ್ನು 2022 ರಲ್ಲಿ ಆರಂಭ ಮಾಡಿದೆ.
ರೇಂಜ್ ರೋವರ್: ಟಾಟಾ ಮೋಟಾರ್ಸ್, 2008 ರಲ್ಲಿ, ಫೋರ್ಡ್‌ನಿಂದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಅನ್ನು ಖರೀದಿಸಿತು. ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಆರಂಭಿಸಿದೆ. ವಾಹನವು ಟಾಟಾ ಸಮೂಹದ ಭಾಗವಾಗಿದೆ.


Click it and Unblock the Notifications