ದೇಶದ ಅತೀ ಶ್ರೀಮಂತ ವ್ಯಕ್ತಿಯಾದ ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಹಾಗೆಯೇ ಭಾರತದ ಜನಪ್ರಿಯ ಉದ್ಯಮಿಯಾದ ರತನ್ ಟಾಟಾರ ಟಾಟಾ ಗ್ರೂಪ್‌ನಂತಹ ಬಹುಕೋಟಿ ಸಂಘಟಿತ ಸಂಸ್ಥೆಗಳ ಬಗ್ಗೆ ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಹಾಗೆಯೇ ನಮಗೆ ತಿಳಿದದೆಯೇ ನಾವು ದೈನಂದಿನವಾಗಿ ಈ ಬ್ರ್ಯಾಂಡ್‌ಗಳ ಬಳಕೆಯನ್ನು ಮಾಡುತ್ತಿರುತ್ತೇವೆ. ಆದರೆ ಆ ಬ್ರ್ಯಾಂಡ್‌ಗಳು ಯಾವ ಸಂಸ್ಥೆಯದ್ದು ಎಂಬ ಬಗ್ಗೆ ನಮಗೆ ತಿಳಿದಿರುವುದಿಲ್ಲ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾಗಿದೆ. ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಶನ್ ಅನ್ನು 1958 ರಲ್ಲಿ ಧೀರೂಭಾಯಿ ಅಂಬಾನಿ ಸ್ಥಾಪಿಸಿದರು. ಮುಕೇಶ್ ಅಂಬಾನಿ ಪ್ರಸ್ತುತ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಕೆಲವು ಬ್ರ್ಯಾಂಡ್‌ಗಳ ಬಗ್ಗೆ ಇಲ್ಲಿದೆ ವಿವರ.

ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ಕೆಲವು ಬ್ರ್ಯಾಂಡ್‌ಗಳಿವು
ಜಿವಾಮೆ: ಆನ್‌ಲೈನ್ ಒಳ ಉಡುಪು ಬ್ರ್ಯಾಂಡ್ ಜಿವಾಮೆ ಅನ್ನು ರಿಲಯನ್ಸ್ ರಿಟೇಲ್ 2020 ರಲ್ಲಿ ಸ್ವಾಧೀನಪಡಿಸಿಕೊಂಡಿತು.
ಅರ್ಬನ್ ಲ್ಯಾಡರ್: 2020 ರಲ್ಲಿ, ರಿಲಯನ್ಸ್ ರಿಟೇಲ್ ಅರ್ಬನ್ ಲ್ಯಾಡರ್‌ನಲ್ಲಿ ಬಹುಪಾಲು ಶೇಕಡ 96 ರಷ್ಟು ಪಾಲನ್ನು ಖರೀದಿಸಿತು. ಇದು ಆನ್‌ಲೈನ್ ಪೀಠೋಪಕರಣ ಬ್ರ್ಯಾಂಡ್ ಆಗಿದ್ದು, 182 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದಲ್ಲಿ ಇದರ ಪಾಲನ್ನು ಖರೀದಿ ಮಾಡಲಾಗಿದೆ.
ಜಸ್ಟ್ ಡಯಲ್: 2021 ರಲ್ಲಿ, ರಿಲಯನ್ಸ್ ರಿಟೇಲ್ ಜಸ್ಟ್ ಡಯಲ್ ಅನ್ನು 3,497 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿದೆ.
ಕ್ಲೋವಿಯಾ: ರಿಲಯನ್ಸ್ ರಿಟೇಲ್, ಮಾರ್ಚ್ 2022 ರಲ್ಲಿ, ಕ್ಲೋವಿಯಾ ಒಡೆತನದ ಪರ್ಪಲ್ ಪಾಂಡಾ ಫ್ಯಾಶನ್ಸ್‌ನಲ್ಲಿ ಬಹುಪಾಲು ಶೇಕಡ 89 ರಷ್ಟು ಈಕ್ವಿಟಿ ಪಾಲನ್ನು ಸ್ವಾಧೀನಪಡಿಸಿಕೊಂಡಿತು.
ನಿಕೆಲೋಡಿಯನ್: ಭಾರತದಲ್ಲಿ, ನಿಕೆಲೋಡಿಯನ್ ವಿಯಾಕಾಮ್18 ಒಡೆತನದಲ್ಲಿದೆ. ಇದು ಪ್ಯಾರಾಮೌಂಟ್ ಗ್ಲೋಬಲ್ ಮತ್ತು ಟಿವಿ18 (ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ) ನಡುವಿನ ಜಂಟಿ ಉದ್ಯಮವಾಗಿದೆ.
ಫೋರ್ಬ್ಸ್ ಇಂಡಿಯಾ: ಫೋರ್ಬ್ಸ್ ಇಂಡಿಯಾ, ಹೆಸರಾಂತ ಫೋರ್ಬ್ಸ್ ಮ್ಯಾಗಜೀನ್‌ನ ಭಾರತೀಯ ಆವೃತ್ತಿಯನ್ನು ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ ನೆಟ್‌ವರ್ಕ್ 18 ನಡೆಸುತ್ತಿದೆ.
ಹ್ಯಾಮ್ಲೀಸ್: 2019 ರಲ್ಲಿ ಸಂಪೂರ್ಣ ನಗದು ವ್ಯವಹಾರದಲ್ಲಿ, ರಿಲಯನ್ಸ್ ರಿಟೇಲ್ ಹ್ಯಾಮ್ಲೀಸ್ ಅನ್ನು ಸ್ವಾಧೀನಪಡಿಸಿಕೊಂಡಿತು. ಇದು ಬ್ರಿಟಿಷ್ ಬಹು-ರಾಷ್ಟ್ರೀಯ ಆಟಿಕೆ ಸ್ಟೋರ್ ಆಗಿದೆ.
ಕಲರ್ಸ್ ಟಿವಿ: ಕಲರ್ಸ್ ಟಿವಿ ವಿಯಾಕಾಮ್18 ಒಡೆತನದಲ್ಲಿದೆ. ಇದು ಪ್ಯಾರಾಮೌಂಟ್ ಗ್ಲೋಬಲ್ ಮತ್ತು ಟಿವಿ18 (ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದ) ನಡುವಿನ ಜಂಟಿ ಉದ್ಯಮವಾಗಿದೆ.
ನೆಟ್‌ಮೆಡ್ಸ್: ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ 620 ಕೋಟಿ ರೂಪಾಯಿಗಳಿಗೆ ನೆಟ್‌ಮೆಡ್ಸ್‌ನಲ್ಲಿ ಬಹುಪಾಲು ಪಾಲನ್ನು ಖರೀದಿಸಿತು.
ಮ್ಯಾಂಡರಿನ್ ಓರಿಯಂಟಲ್, ನ್ಯೂಯಾರ್ಕ್: ಜನವರಿ 2022 ರಲ್ಲಿ, ನ್ಯೂಯಾರ್ಕ್‌ನಲ್ಲಿರುವ ಐಷಾರಾಮಿ ಹೋಟೆಲ್ ಅನ್ನು ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ 98.15 ಮಿಲಿಯನ್ ಡಾಲರ್‌ಗೆ (811 ಕೋಟಿ ರೂಪಾಯಿ) ಸ್ವಾಧೀನಪಡಿಸಿಕೊಂಡಿತು.
ಅಮಾಂಟೆ: ಝಿವಾಮೆ ಮತ್ತು ಕ್ಲೋವಿಯಾ ಜೊತೆಗೆ, ರಿಲಯನ್ಸ್ ರೀಟೇಲ್ ಅಮಾಂಟೆ ಎಂಬ ಒಳಉಡುಪು ಬ್ರ್ಯಾಂಡ್ ಅನ್ನು ಶ್ರೀಲಂಕಾ ಮೂಲದ ಎಂಎಎಸ್ ಹೋಲ್ಡಿಂಗ್ಸ್‌ನಿಂದ 2021 ರಲ್ಲಿ ಸ್ವಾಧೀನಪಡಿಸಿಕೊಂಡಿದೆ.
ಮುಕೇಶ್ ಅಂಬಾನಿ, ನೀತಾ ಅಂಬಾನಿಯನ್ನು ವಿವಾಹವಾಗಿದ್ದಾರೆ. ಹಾಗೆಯೇ ಆಕಾಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ಇಶಾ ಅಂಬಾನಿ ಅವರಿಗೆ ಮೂವರು ಮಕ್ಕಳಿದ್ದಾರೆ. ಮುಕೇಶ್ ಅಂಬಾನಿ ವಿಶ್ವದ ಎರಡನೇ ಅತಿ ದೊಡ್ಡ ಮನೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಇದರ ಹೆಸರು ಆಂಟಿಲಿಯಾ ಎಂದಾಗಿದೆ.


Click it and Unblock the Notifications