ವರ್ಷದ ಕೊನೆಯ ತಿಂಗಳೆಂದರೆ ಒಂದು ಹಬ್ಬದ ತಿಂಗಳೆಂದರೆ ತಪ್ಪಾಗಲಾರದು. ತಿಂಗಳ ಆರಂಭದಲ್ಲಿಯೇ ಬೇರೆ ಬೇರೆ ಕಚೇರಿಗಳಲ್ಲಿ ವರ್ಷಾಂತ್ಯದ ಪಾರ್ಟಿಗಳನ್ನು ಮಾಡಲಾಗುತ್ತದೆ. ಇನ್ನು ಕ್ರಿಸ್‌ಮಸ್ ಹಬ್ಬದ ಸಂಭ್ರಮವೂ ಎಲ್ಲೆಡೆ ಮನೆ ಮಾಡಿರುತ್ತದೆ. ಹೀಗಿರುವಾಗ ಕ್ರಿಸ್‌ಮಸ್ ಖಾದ್ಯಗಳನ್ನು ನಾವು ಸವಿಯದಿದ್ದರೆ ಹೇಗೆ?.
ಕ್ರಿಸ್‌ಮಸ್ ಎಂದಾಗ ಮನಸಿಗೆ ಬರುವುದು ವೈನ್, ಕೇಕ್, ಮಾಂಸದೂಟ. ಬೆಂಗಳೂರಿನ ಹಲವಾರು ರೆಸ್ಟೋರೆಂಟ್‌ಗಳಲ್ಲಿ ವಿಶೇಷವಾಗಿ ಕ್ರಿಸ್‌ಮಸ್ ಖಾದ್ಯಗಳನ್ನು ತಯಾರಿ ಮಾಡಲಾಗುತ್ತಿದೆ. ಯಾವೆಲ್ಲ ರೆಸ್ಟೋರೆಂಟ್‌ಗಳು, ಯಾವ ಸ್ಥಳದಲ್ಲಿದೆ ಎಂಬ ವಿವರ ಇಲ್ಲಿದೆ ಮುಂದೆ ಓದಿ...

ಟಾಯ್ಟ್, ಇಂದಿರಾನಗರ
ಟಾಯ್ಟ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ತಯಾರಿ ಈಗಲೇ ಆರಂಭವಾಗಿದೆ. ಇಲ್ಲಿ ನೀವು ರುಚಿ ರುಚಿಯಾದ ಖಾದ್ಯಗಳನ್ನು ಸವಿಯಬಹುದಾಗಿದೆ. ಕ್ರಿಸ್‌ಮಸ್ ಮೆನ್ಯೂ ನಿಮಗೆ ಲಭ್ಯವಿದೆ. ಕ್ರಾನ್‌ಬೆರಿ ಸಲಾಡ್, ಟೋಸ್ಟೆಡ್ ಟರ್ಕಿ, ವೈನ್ ಇಲ್ಲಿ ಪ್ರಮುಖವಾದ ಕ್ರಿಸ್‌ಮಸ್ ಖಾದ್ಯಗಳಿದೆ.
ವಿಳಾಸ: ಇಂದಿರಾನಗರ, 100 ft ರಸ್ತೆ, ಡ್ರಾಪ್ಸ್ ಟೋಟಲ್ ಸ್ಪಿರಿಟ್ಸ್ ಬಳಿ, ಬೆಂಗಳೂರು
ಲೇಝಿ ಸುಝಿ, ಇಂದಿರಾನಗರ
ಪ್ರತಿ ವರ್ಷವೂ ಕೂಡಾ ಕ್ರಿಸ್‌ಮಸ್ ಆಚರಣೆ ಮಾಡುವ ಬೆಂಗಳೂರಿಗರಿಗೆ ಇರುವ ಉತ್ತಮ ರೆಸ್ಟೋರೆಂಟ್‌ಗಳಲ್ಲಿ ಲೇಝಿ ಸುಝಿ ಕೂಡಾ ಒಂದಾಗಿದೆ. ಈ ವರ್ಷ ಲೇಝಿ ಸುಝಿ ಅದ್ಭುತವಾದ ಕ್ರಿಸ್‌ಮಸ್ ವಿಶೇಷ ಮೆನ್ಯೂವನ್ನು ತಯಾರಿಸಿದೆ. ಪಾಮ್ ಪುಡ್ಡಿಂಗ್, ಬೇಕ್ಡ್ ಟಾರ್ಟ್ ಮೊದಲಾದವುಗಳು ಇದೆ. ಕ್ರಿಸ್‌ಮಸ್ ದಿನದಂದು ಮೂರು ಅಥವಾ ಐದು ಖಾದ್ಯಗಳನ್ನು ಒಳಗೊಂಡ ಟರ್ಕಿ ಊಟ ಸವಿಯಬಹುದು.
ವಿಳಾಸ: 36, 80 ಫೀಟ್ ರೋಡ್, ಹಾಲ್, ಇಂದಿರಾನಗರ, ಬೆಂಗಳೂರು
ಸ್ಲೈ ಗ್ರಾನಿ, ಇಂದಿರಾನಗರ ಮತ್ತು ಫಾರಂ ಮಾಲ್
ಬೆಂಗಳೂರಿಗರು ಸಾಮಾನ್ಯವಾಗಿ ಯಾವುದೇ ಸಂದರ್ಭದಲ್ಲಾದರೂ ಹೋಗಲು ಬಯಸುವ ರೆಸ್ಟೋರೆಂಟ್‌ಗಳಲ್ಲಿ ಸ್ಲೈ ಗ್ರಾನಿ ಕೂಡಾ ಒಂದಾಗಿದೆ. ಆದರೆ ಇಲ್ಲಿ ಕ್ರಿಸ್‌ಮಸ್ ಸಂದರ್ಭದಲ್ಲಿ ಟೇಬಲ್ ಲಭ್ಯವಾಗುವುದೇ ಕಷ್ಟವಾಗಿದೆ. ಚಿಕನ್ ರುಲಾಡ್, ಮಾಶ್ಡ್ ಪೊಟಾಟಾ, ಸಿನಾಮನ್ ಡ್ರಿಂಕ್‌ನಂತಹ ವಿಶೇಷ ಖಾದ್ಯಗಳು ಇಲ್ಲಿದೆ. ಲೈವ್ ಮ್ಯೂಸಿಕ್‌ನೊಂದಿಗೆ ಕ್ರಿಸ್‌ಮಸ್ ಸಂಭ್ರಮದಲ್ಲಿ ನೀವು ಮುಳುಗಬಹುದು.
ವಿಳಾಸ: 3ನೇ ಪ್ಲೋರ್, 618, 12ನೇ ಮುಖ್ಯ ರಸ್ತೆ, ಚಿಕ್ಕೋ ಸಮೀಪ, 7ನೇ ಕ್ರಾಸ್, ಹಾಲ್ 2ನೇ ಸ್ಟೇಜ್, ಇಂದಿರಾನಗರ ಬೆಂಗಳೂರು, ಕರ್ನಾಟಕ 560038
ಶಿರೋ, ವಿಟ್ಟಲ್ ಮಲ್ಯ ರೋಡ್
ನೀವು ಸಾಮಾನ್ಯವಾದ ಕ್ರಿಸ್‌ಮಸ್ ಖಾದ್ಯಗಳನ್ನು ಸವಿಯಲು ಬಯಸಿದರೆ ನಿಮಗೆ ಶಿರೋ ಉತ್ತಮ ಆಯ್ಕೆಯಾಗಿದೆ. ಎಗ್‌ನಾಗ್ ಮಾರ್ಟಿನಿಸ್, ವಿಸ್ಕಿ ಜಿಂಜರ್, ಥಾಯ್ ಹರ್ಬ್ ಚಿಕನ್ ಸಲಾಡ್, ಬೀನ್ ಸಾಸ್ ಸೇರಿದಂತೆ ಹಲವಾರು ಖಾದ್ಯಗಳು ಇಲ್ಲಿದೆ.
ವಿಳಾಸ: 222, 3ನೇ ಫ್ಲೋರ್, ಕಾಮೆಟ್ ಯುಬಿ ಸಿಟಿ, ವಿಟ್ಟಲ್ ಮಲ್ಯ ರೋಡ್, ಬೆಂಗಳೂರು, ಕರ್ನಾಟಕ
ಬೈಜ್ ಬ್ರಿವ್‌ಸ್ಕಿ ಬ್ರಿವೀಂಗ್ ಕಂಪನಿ, ಹೆಣ್ಣೂರು ಬಗಳೂರು ರಸ್ತೆ
ಬಿಯರ್‌ಗಳಿಗೆ, ಕ್ರಿಸ್‌ಮಸ್ ಸಂಭ್ರಮಕ್ಕೆ ಇನ್ನೊಂದು ಉತ್ತಮ ಸ್ಥಳ ಬೈಜ್ ಬ್ರಿವ್‌ಸ್ಕಿ ಬ್ರಿವೀಂಗ್ ಕಂಪನಿ ಆಗಿದೆ. ಹಬ್ಬದ ವಿಶೇಷ ಆಹಾರಗಳ ಜೊತೆಗೆ ಹಬ್ಬದ ಆಫರ್‌ಗಳು ಕೂಡಾ ಇಲ್ಲಿ ಇರುತ್ತದೆ.
ವಿಳಾಸ: ಹೆಣ್ಣೂರು ಬಗಳೂರು ರಸ್ತೆ, ಎಕ್ಸ್‌ಎಲ್‌ಆರ್8 ಇಂಡೋರ್ ಸ್ಟೇಡಿಯಂ ವಿರುದ್ಧ, ವಿಸ್ತಾರ್ ಬೆಂಗಳೂರು
ಹಾಪ್ಸ್ ಹಾಸ್, ವೈಟ್‌ಫೀಲ್ಡ್ ಮುಖ್ಯ ರಸ್ತೆ
ಕ್ರಿಸ್‌ಮಸ್ ಸಂಭ್ರಮಕ್ಕೆ ಬೆಸ್ಟ್ ಆದ ಸಿನಿಮಾಗಳಲ್ಲಿ ಹಾಪ್ಸ್ ಹಾಸ್ ಕೂಡಾ ಒಂದಾಗಿದೆ. ಡಿಸೆಂಬರ್ 19 ರಿಂದ 31ರವರೆಗೆ ಹಬ್ಬದ ಮೆನ್ಯೂ ಇರಲಿದೆ. ಚೆಫ್ ವಿಕಾಸ್ ಸೇತ್ ಮುಂದಾಳತ್ವದಲ್ಲಿ ಆಹಾರ ತಯಾರಿ ಆಗಲಿದೆ.
ವಿಳಾಸ: #101 & 45, ವೈಟ್‌ಫೀಲ್ಡ್ ಮುಖ್ಯ ರಸ್ತೆ, ವೈಟ್‌ಫೀಲ್ಡ್ ನಾರಾಯಣಪ್ಪ ಗಾರ್ಡನ್ ಬೆಂಗಳೂರು
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!



Click it and Unblock the Notifications