ಭಾರತವು ಒಂದು ಕಾಲದಲ್ಲಿ ರಾಜರಿಂದ ನಡೆಸಲ್ಪಟ್ಟ ದೇಶವಾಗಿದೆ. ಮಹಾರಾಣಾ ಪ್ರತಾಪ್ ಮತ್ತು ಶಿವಾಜಿ ಮಹಾರಾಜರಂತಹ ಮಹಾನ್ ನಾಯಕರು ಇಂದಿಗೂ ಭಾರತದಲ್ಲಿ ಸ್ಮರಿಸಲಾಗುವ ರಾಜರು ಆಗಿದ್ದಾರೆ. ಆದರೆ ಭಾರತದಲ್ಲಿ ಇಂದಿಗೂ ಹಲವಾರು ರಾಜಮನೆತನದ ಕುಟುಂಬಗಳು ಇದೆ. ಅದು ಕೂಡಾ ಅತೀ ಶ್ರೀಮಂತವಾಗಿದೆ ಎಂಬುವುದು ನಿಮಗೆ ತಿಳಿದಿದೆಯೇ?
ಭಾರತವು 200 ವರ್ಷಗಳ ಸುದೀರ್ಘ ವಸಾಹತುಶಾಹಿ ಆಳ್ವಿಕೆಯಿಂದ ತನ್ನ ಸ್ವಾತಂತ್ರ್ಯವನ್ನು ಮರಳಿ ಪಡೆದ ನಂತರ, ದೇಶವು ಈಗ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿದೆ. ಆದರೆ ರಾಜಪ್ರಭುತ್ವದ ಕುರುಹುಗಳು ಮತ್ತು ಅವರ ವಂಶಾವಳಿಗಳು ಇಂದಿಗೂ ನಮ್ಮ ನಡುವೆ ಇದೆ. ಭಾರತದಲ್ಲಿ ಅತೀ ಶ್ರೀಮಂತ, ರೋಯಲ್ ಕುಟುಂಬಗಳ ವಿವರ ಇಲ್ಲಿದೆ ಮುಂದೆ ಓದಿ....

ಮೇವಾರ್ ರಾಜವಂಶ
ಮೇವಾರ್ ರಾಜವಂಶವು ಅದರ ಪ್ರಬಲ ಆಡಳಿತಗಾರ ಮಹಾರಾಣಾ ಪ್ರತಾಪ್‌ಗೆ ಹೆಸರುವಾಸಿಯಾಗಿದೆ. ಮೇವಾರ್ ವಂಶಸ್ಥರು ಇಂದು ರಾಜಸ್ಥಾನದ ಉದಯಪುರದಲ್ಲಿ ವಾಸಿಸುತ್ತಿದ್ದಾರೆ. ರಾಜವಂಶವು ಪ್ರಸ್ತುತ ಅರವಿಂದ್ ಸಿಂಗ್ ಮೇವಾರ್ ನೇತೃತ್ವದಲ್ಲಿದೆ. ಅರವಿಂದ್ ಸಿಂಗ್ ರಾಜ ಮತ್ತು ಅತ್ಯಂತ ಯಶಸ್ವಿ ಉದ್ಯಮಿಯಾಗಿದ್ದಾರೆ. ಹೆಚ್‌ಆರ್‌ಎಚ್ ಗ್ರೂಪ್ ಆಫ್ ಹೋಟೆಲ್‌ಗಳ ಮುಖ್ಯಸ್ಥರಾಗಿದ್ದಾರೆ. ಅದರ ಅಡಿಯಲ್ಲಿ 10 ಕ್ಕೂ ಹೆಚ್ಚು ಹೋಟೆಲ್‌ಗಳನ್ನು ಹೊಂದಿದ್ದಾರೆ. ಮೇವಾರ್ ರಾಜವಂಶವು ಭಾರತದ ಅತ್ಯಂತ ಶ್ರೀಮಂತ ರಾಜ ಕುಟುಂಬವಾಗಿದೆ.
ಒಡೆಯರ್ ರಾಜವಂಶ
ಒಡೆಯರ್ ರಾಜವಂಶದ ಇತಿಹಾಸವು ಶ್ರೀಕೃಷ್ಣನ ಯದುವಂಶಿ ವಂಶಕ್ಕೆ ಹಿಂದಿನದು. ಪ್ರಸ್ತುತ, 27 ವರ್ಷದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ರಾಜವಂಶದ ಮುಖ್ಯಸ್ಥರಾಗಿದ್ದಾರೆ. ಸುಂದರವಾದ ಮೈಸೂರು ಅರಮನೆಯ ರಾಜನಾಗಿದ್ದಾರೆ. ಅವರ ಕುಟುಂಬ ಮೈಸೂರಿನ ರಾಯಲ್ ಸಿಲ್ಕ್ ಅನ್ನು ಉತ್ಪಾದಿಸುತ್ತದೆ.
ಜೈಪುರದ ರಾಜ ಕುಟುಂಬ
ಪ್ರಸ್ತುತ, ಪದ್ಮನಾಭ ಸಿಂಗ್ ಜೈಪುರದ ರಾಜನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಷ್ಟ್ರಮಟ್ಟದ ಪೊಲೊ ಆಟಗಾರರಾಗಿರುವ ಪದ್ಮನಾಭ ಕ್ರೀಡಾ ಸಮುದಾಯದ ಸಕ್ರಿಯ ಸದಸ್ಯರಾಗಿದ್ದಾರೆ. ಕ್ರೀಡೆಯ ಬಗ್ಗೆ ಹೆಚ್ಚಿನ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಜೋಧಪುರದ ರಾಥೋರ್‌ಗಳು
ರಾಥೋಡ್ ಕುಟುಂಬವು ಜೋಧ್‌ಪುರದ ಮೆಹ್ರಾನ್‌ಗಡ್ ಕೋಟೆ ಮತ್ತು ಉಮೈದ್ ಭವನ ಅರಮನೆಯಲ್ಲಿ ವಾಸಿಸುತ್ತಿದ್ದಾರೆ. ಅರಮನೆಯ ಒಂದು ಭಾಗದಲ್ಲಿ ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಉಳಿದ ಭಾಗವನ್ನು ತಾಜ್ ಗ್ರೂಪ್ ಆಫ್ ಹೋಟೆಲ್ಸ್ ನಿರ್ವಹಿಸುತ್ತದೆ. ಉಮೈದ್ ಭವನ್ ಅರಮನೆಯು ಮದುವೆಗಳಿಗೆ ಹೆಚ್ಚು ಬೇಡಿಕೆಯಿರುವ ಸ್ಥಳಗಳಲ್ಲಿ ಒಂದಾಗಿದೆ. ಈ ಅರಮನೆಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ವಿವಾಹವಾದರು.
ಬರೋಡಾದ ಗಾಯಕ್‌ವಾಡಾ
ಬರೋಡಾದ ಗಾಯಕ್‌ವಾಡಾ ಮೂಲತಃ ಪುಣೆಯವರಾಗಿದ್ದಾರೆ. 18 ನೇ ಶತಮಾನದ ಆರಂಭದಿಂದ ಬರೋಡಾದಲ್ಲಿ (ವಡೋದರಾ) ಆಳಿದ ಕುಟುಂಬ ಇವರದ್ದಾಗಿದೆ. ಪ್ರಸ್ತುತ, 52 ವರ್ಷದ ಸಮರ್ಜಿತ್ ಸಿಂಗ್ ಗಾಯಕ್‌ವಾಡಾ ಬರೋಡಾದ ರಾಜಮನೆತನದ ಮುಖ್ಯಸ್ಥರಾಗಿದ್ದಾರೆ. ಸಮರ್ಜಿತ್ ಸಿಂಗ್ ಗಾಯಕ್‌ವಾಡ್ ಸಿಂಹಾಸನವನ್ನು ಏರಿದಾಗ 20,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆದರು.
ಬರೋಡಾದ ಗಾಯಕ್‌ವಾಡ್‌ಗಳು ಲಕ್ಷ್ಮಿ ವಿಲಾಸ್ ಅರಮನೆಯನ್ನು ಹೊಂದಿದ್ದಾರೆ. ಇದು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಾಗಿದೆ. ರಾಜಾ ರವಿವರ್ಮಾ ಅವರ ಹಲವಾರು ವರ್ಣಚಿತ್ರಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳಂತಹ ಹಲವಾರು ಆಸ್ತಿಗಳನ್ನು ರಾಜಮನೆತನವು ಅನುವಂಶಿಕವಾಗಿ ಪಡೆದಿದೆ. ಅವರು ಗುಜರಾತ್ ಮತ್ತು ಬನಾರಸ್‌ನ 17 ದೇವಾಲಯಗಳ ಟ್ರಸ್ಟ್‌ನ ನಿರ್ವಹಣೆಯಂತಹ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅರಮನೆಯಲ್ಲಿ ವೈಯಕ್ತಿಕ 10-ಹೋಲ್ ಗಾಲ್ಫ್ ಕೋರ್ಸ್ ಅನ್ನು ನಿರ್ಮಿಸಿದ್ದಾರೆ.


Click it and Unblock the Notifications