ಬಾಲಿವುಡ್ ಸ್ಟಾರ್‌ಗಳು ಆಗಾಗ ವಿವಿಧ ಕಾರಣಗಳಿಗೆ ಸುದ್ದಿ ಮಾಡುತ್ತಿರುತ್ತಾರೆ. ಆದರೆ, ಅವರೆಲ್ಲರ ಸುರಕ್ಷತೆಗೆ ಸಂಬಂಧಿಸಿದಂತೆ ಅಂಗರಕ್ಷಕರು ಅಥವಾ ಬಾಡಿಗಾರ್ಡ್‌ಗಳು ಅತಿಹೆಚ್ಚಿನ ಪರಿಶ್ರಮಪಡುತ್ತಿರುತ್ತಾರೆ. ಹಲವಾರು ಬಿ-ಟೌನ್ ಸೆಲೆಬ್ರಿಟಿಗಳೊಂದಿಗೆ ಅವರ ಅಂಗರಕ್ಷಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಅವರಿಗೆ ಸದಾ ನಿಷ್ಠರಾಗಿದ್ದಾರೆ. ಅಭಿಮಾನಿಗಳು, ಹಿತೈಷಿಗಳು ನಟ-ನಟಿಯರ ಮೇಲೆ ಮುಗಿಬಿದ್ದ ಹಲವಾರು ಘಟನೆಗಳು ಈ ಹಿಂದೆ ನಡೆದಿವೆ.
ಹೀಗಾಗಿ, ಈ ಸ್ಟಾರ್‌ಗಳು ಎಲ್ಲೇ ಹೋದರೂ ಯಾವುದೇ ಅಪಾಯ ಅಥವಾ ಗಾಯಗಳು ಆಗದಂತೆ ಅವರ ಅಂಗರಕ್ಷಕರು ರಕ್ಷಣೆ-ಭದ್ರತೆಗೆ ಜತೆಯಲ್ಲಿರುತ್ತಾರೆ. ಆದರೆ, ಭಾರತದಲ್ಲಿ ಈ ಬಾಡಿಗಾರ್ಡ್‌ಗಳು ಹೆಚ್ಚಿನ ಸಿಇಒಗಳು ಪಡೆಯುವುದಕ್ಕಿಂತ ಅಧಿಕ ವೇತನವನ್ನು ಪಡೆಯುತ್ತಿದ್ದಾರೆ. ಹಾಗಾದರೆ ಅವರ ಆಕರ್ಷಕ ವೇತನ ಹಾಗೂ ಖಾಸಗಿ ಭದ್ರತೆ ವಿವರಗಳನ್ನು ತಿಳಿದುಕೊಳ್ಳೋಣ.
ಶಾರುಖ್ ಖಾನ್ ಅಂಗರಕ್ಷಕ
ಶಾರುಖ್ ಖಾನ್ ದೇಶದ ಅತಿದೊಡ್ಡ ಸೂಪರ್‌ಸ್ಟಾರ್ ಆಗಿದ್ದು, ತಮ್ಮ ಶೂಟಿಂಗ್ ಹಾಗೂ ಸಿನಿಮಾ ಪ್ರಮೋಷನ್ಸ್‌ಗಾಗಿ ಸಾಕಷ್ಟು ಪ್ರಯಾಣ ಮಾಡುತ್ತಿರುತ್ತಾರೆ. ಇದಕ್ಕೆಲ್ಲ ಯಾವುದೇ ತೊಂದರೆಯಾಗದಂತೆ ಅವರ ಬಾಡಿಗಾರ್ಡ್ ರವಿ ಸಿಂಗ್ ಸದಾ ಜತೆಯಲ್ಲಿರುತ್ತಾರೆ. ಸಿನಿ ಇಂಡಸ್ಟ್ರಿಯಲ್ಲಿ ರವಿ ಸಿಂಗ್ ಅತಿಹೆಚ್ಚು ಸಂಭಾವನೆ ಪಡೆಯುವ ಅಂಗರಕ್ಷರಾಗಿದ್ದಾರೆ. ಅವರು ವಾರ್ಷಿಕ 2-3 ಕೋಟಿ ರೂ. ಸಂಪಾದನೆ ಮಾಡುತ್ತಿದ್ದಾರೆ.
ಸಲ್ಮಾನ್ ಖಾನ್ ಅಂಗರಕ್ಷಕ
ಹಾಗೆಯೇ ಸಲ್ಮಾನ್ ಖಾನ್ ಅವರು ಕೂಡ ಬಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರು. ಅವರ ಅಂಗರಕ್ಷಕ ಗುರ್ಮೀತ್ ಸಿಂಗ್ ಜಾಲಿ ಅಕಾ ಶೇರಾ ಕೂಡ ವಾರ್ಷಿಕ ಸುಮಾರು 2 ಕೋಟಿ ರೂ. ಗಳಿಸುವ ಮೂಲಕ ಅತಿಹೆಚ್ಚು ಸಂಭಾವನೆ ಪಡೆಯುವ ಬಾಡಿಗಾರ್ಡ್ ಆಗಿದ್ದಾರೆ. ಜಸ್ಟಿನ್ ಬೈಬರ್ ಅವರು ಮುಂಬೈನಲ್ಲಿ ಸಂಗೀತ ಕಛೇರಿ ನಡೆಸಿದ್ದಾಗ ಅವರಿಗೆ ಬೆಂಗಾವಲು ನಿಂತಿದ್ದರು.
ಅಮಿರ್ ಖಾನ್ ಬಾಡಿಗಾರ್ಡ್
ಖಾನ್‌ಗಳ ಪಟ್ಟಿಯಲ್ಲಿ ಅಮಿರ್ ಖಾನ್ ಅವರು ತಮ್ಮ ಸರಳತೆ ಹಾಗೂ ಅದ್ಭುತ ಸಿನಿಮಾಗಳಿಗಾಗಿ ಸದಾ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಅಂಗರಕ್ಷಕ ಯುವರಾಜ್ ಘೋರ್ಪಡೆ, ಅಮಿರ್ ಖಾನ್ ಕಾಣಿಸಿದಾಗೆಲ್ಲ ಅವರಿಗೆ ನೆರಳಾಗಿ ಗೋಚರಿಸುತ್ತಾರೆ. ಯುವರಾಜ್ ಆರಂಭದಲ್ಲಿ ಬಾಡಿಬಿಲ್ಡಿಂಗ್ ಮಾಡಲು ಉದ್ದೇಶಿಸಿದ್ದರು. ಆದರೆ, ಅವರು ಭಾರತದ ಟಾಪ್ ಸ್ಟಾರ್‌ನ ಅಂಗರಕ್ಷಕರಾಗಿ ಗುರುತಿಸಿಕೊಂಡರು. ಯಾವುದೇ ಸಂದರ್ಭದಲ್ಲಿಯೂ ಬೆನ್ನುಬಿಡದೆ ಅಮಿರ್ ಖಾನ್ ಜತೆಗೆ ಇರುತ್ತಾರೆ. ಯುವರಾಜ್ ವಾರ್ಷಿಕ 1ರಿಂದ 2.5 ಕೋಟಿ ರೂ. ವರೆಗೆ ಸಂಬಳ ಪಡೆಯುತ್ತಿದ್ದಾರೆ.
ಅಕ್ಷಯ್ ಕುಮಾರ್ ಅಂಗರಕ್ಷಕ
ದೈಹಿಕವಾಗಿ ಬಹಳ ಬಲಿಷ್ಠರಾಗಿದ್ದರೂ ಅಕ್ಷಯ್ ಕುಮಾರ್‌ಗೆ ರಕ್ಷಣೆಯ ಅಗತ್ಯವಿದ್ದು, ಅದನ್ನು ಅವರ ಬಾಡಿಗಾರ್ಡ್ ಶ್ರೇಯಸ್ ಥೆಲೆ ಒದಗಿಸುತ್ತಿದ್ದಾರೆ. ಸೂರ್ಯವಂಶಿ ಸೆಲೆಬ್ರಿಟಿ ಜತೆಗೆ ಅವರ ಮಗ ಆರವ್ ಅವರ ಚಲನ-ವಲನದ ಮೇಲೂ ನಿಗಾ ವಹಿಸುತ್ತಾ ಅಗಾಗ ರಕ್ಷಣೆಯನ್ನು ಒದಗಿಸುತ್ತಾರೆ. ಶ್ರೇಯಸ್ ಕೂಡ ವಾರ್ಷಿಕ 1ರಿಂದ 2 ಕೋಟಿ ರೂ. ಮಧ್ಯೆ ಸಂಬಳ ಪಡೆಯುತ್ತಿರುವುದಾಗಿ ವರದಿಯಾಗಿದೆ.
ದೀಪಿಕಾ ಪಡುಕೋಣೆ ಬಾಡಿಗಾರ್ಡ್
ಬಾಲಿವುಡ್‌ನ ಅತ್ಯುತ್ತಮ ನಟಿಯಾಗಿರುವ ದೀಪಿಕಾ ಪಡುಕೋಣೆಗೆ ಜಲಾಲ್ ಅಂಗರಕ್ಷಕರಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಕುತೂಹಲದ ಸಂಗತಿಯೆಂದರೆ ತಮಗೆ ಖಾಸಗಿ ಭದ್ರತಾ ಸೇವೆಯನ್ನು ಒದಗಿಸುತ್ತಿರುವ 'ರಕ್ಷಾ ಬಂಧನ'ದ ಸಹೋದರನನ್ನು ಕುಟುಂಬದ ಸದಸ್ಯನಂತೆ ನೋಡಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಜಲಾಲ್ ಅವರ ವಾರ್ಷಿಕ ಆದಾಯವು 90 ಲಕ್ಷದಿಂದ 1.5 ಕೋಟಿ ರೂ.ನಷ್ಟು ಇದೆ.


Click it and Unblock the Notifications