ನೈಕಾ(Nykaa) ಸಂಸ್ಥಾಪಕಿ ಫಲ್ಗುಣಿ ನಾಯರ್ ತಮ್ಮ ಸ್ವಂತ ಪ್ರತಿಭೆ ಹಾಗೂ ಕಠಿಣ ಪರಿಶ್ರಮದಿಂದಾಗಿ ಬಹು ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯನ್ನು ಕಟ್ಟಿ ಬೆಳೆಸಿದವರು. ಇವರು ಭಾರತದ ಅತ್ಯಂತ ಶ್ರೀಮಂತ ಮಹಿಳಾ ಉದ್ಯಮಿಯೂ ಆಗಿದ್ದಾರೆ. ಅಧಿಕ ವೇತನವಿದ್ದ ಕೆಲಸ ತ್ಯಜಿಸಿ ತಮ್ಮದೇ ಆದ ಶತಕೋಟಿ ಡಾಲರ್‌ಗಳ ನಿವ್ವಳ ಮೌಲ್ಯದ ಸಂಸ್ಥೆ ಸ್ಥಾಪಿಸುವವವರೆಗೆ ಅವರ ಯಶಸ್ಸಿನ ಕಥೆ ಸ್ಪೂರ್ತಿದಾಯಕ.
ಈಗ ಅವರ ಮಕ್ಕಳಾದ ಅಂಚಿತ್ ನಾಯರ್ ಮತ್ತು ಅದ್ವೈತಾ ನಾಯರ್ ಅವರ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಬಿಲಿಯನೇರ್ ಉದ್ಯಮಿ ಫಲ್ಗುಣಿ ನಾಯರ್ ಅವರಿಗೆ ಅಂಚಿತ್ ನಾಯರ್ ಮತ್ತು ಅದ್ವೈತಾ ನಾಯರ್ ಎಂಬ ಇಬ್ಬರು ಅವಳಿ ಮಕ್ಕಳಿದ್ದಾರೆ.

ವ್ಯವಹಾರದ ವಿಚಾರಕ್ಕೆ ಬಂದರೆ ಸಹೋದರ-ಸಹೋದರಿ ಜೋಡಿಯು ಅವರ ತಾಯಿಯನ್ನು ಹಿಂಬಾಲಿಸದೆ, ನೈಕಾವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದು, ಮುಖೇಶ್ ಅಂಬಾನಿ ಮತ್ತು ಇಶಾ ಅಂಬಾನಿಯವರ ಹೊಸ ಉದ್ಯಮ ಟಿರಾ ಬ್ಯೂಟಿಯೊಂದಿಗೆ ಸ್ಪರ್ಧಿಸುವ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ.
ಫಲ್ಗುಣಿ ನಾಯರ್ ಅವರ ಮಗಳು ಅದ್ವೈತಾ ನಾಯರ್ ಅಮೆರಿಕದ ಬೈನ್ ಅಂಡ್ ಕಂಪನಿಯಲ್ಲಿ ಕಾರ್ಪೊರೇಟ್ ಉದ್ಯೋಗವನ್ನು ತೊರೆದು ತನ್ನ ತಾಯಿಯೊಂದಿಗೆ ನೈಕಾದ ಸಹ-ಸಂಸ್ಥಾಪಕರಾದರು. ಮಾತ್ರವಲ್ಲದೇ ತಾಯಿ ಫಲ್ಗುಣಿಯವರಿಗೆ ನೈಕಾ ಆಫ್‌ಲೈನ್ ಸ್ಟೋರ್‌ಗಳನ್ನು ಸ್ಥಾಪಿಸಲು ಸಹಾಯ ಮಾಡಿದರು. ಇದು ಕಂಪನಿಯ ಆದಾಯಕ್ಕೆ ಪ್ರಮುಖ ಬೂಸ್ಟ್ ನೀಡಿದೆ.
ನೈಕಾ ಕಂಪನಿಯ ಇ-ರಿಟೇಲ್ ವಿಭಾಗದ ಜವಾಬ್ದಾರಿ
ಅಂಚಿತ್ ನಾಯರ್ ತಮ್ಮ ಅವಳಿ ಸಹೋದರಿ ಸಾಗಿದ ಹಾದಿಯಲ್ಲೇ ಸಾಗಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಹುದ್ದೆ ತೊರೆದು ನೈಕಾ ಕಂಪನಿಯ ಇ-ರಿಟೇಲ್ ವಿಭಾಗದ ಜವಾಬ್ದಾರಿ ವಹಿಸಿಕೊಂಡರು. ಅವಳಿ ಮಕ್ಕಳಿಬ್ಬರು ನೈಕಾ ಸಂಸ್ಥೆಯ ನಿರ್ದೇಶಕರ ಮಂಡಳಿಯಲ್ಲಿದ್ದು, ತಾಯಿ ಫಲ್ಗುಣಿ ನಾಯರ್ ಅವರನ್ನು ಭಾರತದ ಅತ್ಯಂತ ಶ್ರೀಮಂತ ಮಹಿಳಾ ಉದ್ಯಮಿಯನ್ನಾಗಿ ಮಾಡಲು ಇವರಿಬ್ಬರು ಶ್ರಮಿಸಿದ್ದಾರೆ.
ಅಂಚಿತ್ ನಾಯರ್ ಇಂದು ನೈಕಾದ ಬ್ಯೂಟಿ ಇ-ಕಾಮರ್ಸ್ ವಿಂಗ್ ಸಿಇಒ ಆಗಿದ್ದು, ಅವರ ಅವಳಿ ಸಹೋದರಿ ಅದ್ವೈತಾ ನಾಯರ್ ಸಂಸ್ಥೆಯ ಫ್ಯಾಶನ್ ವಿಭಾಗ ನೈಕಾ ಫ್ಯಾಶನ್ ಅನ್ನು ಮುನ್ನಡೆಸುತ್ತಾರೆ. ಇಬ್ಬರೂ ತಮ್ಮ ತಾಯಿ ಫಲ್ಗುಣಿ ನಾಯರ್ ಅವರ ನಿವ್ವಳ ಮೌಲ್ಯವನ್ನು 2.7 ಶತಕೋಟಿ USD (22,443 ಕೋಟಿ ರೂ.)ಗೆ ಏರಿಸಲು ಸಹಾಯ ಮಾಡಿದರು.
ನೈಕಾ ಮೌಲ್ಯವು 13 ಶತಕೋಟಿ ಡಾಲರ್
2022ರ ನವೆಂಬರ್ ನಲ್ಲಿ ನೈಕಾ ಮೌಲ್ಯವು 13 ಶತಕೋಟಿ USD (Rs 1.08 ಲಕ್ಷ ಕೋಟಿ) ನಲ್ಲಿದೆ. ಅದ್ವೈತಾ ಮತ್ತು ಅಂಚಿತ್ ನಾಯರ್ ಕೂಡ 2022 ರಲ್ಲಿ ಫಾರ್ಚೂನ್‌ನ 40 ಅಂಡರ್ 40 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ನೈಕಾ ಇಂದು ಬ್ಯೂಟಿ ಇ-ಕಾಮರ್ಸ್ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಇಶಾ ಅಂಬಾನಿಯವರ ಟಿರಾ ಬ್ಯೂಟಿ, Tata Cliq ಮತ್ತು ಪರ್ಪಲ್ ನಂತಹ ದೊಡ್ಡ- ದೊಡ್ಡ ಕಂಪನಿಗಳಿಗೂ ನೈಕಾವನ್ನು ಮಾರುಕಟ್ಟೆಯಲ್ಲಿ ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ.


Click it and Unblock the Notifications