ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ್ ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ಮಾಡಿದ್ದು, ಕೊರೊನಾ ಲಾಕ್ ಡೌನ್ ಅವಧಿಯಲ್ಲಿನ ಕೆಲಸ ಮತ್ತು ಜೀವನ ಶೈಲಿ ಬಗ್ಗೆ ತಮ್ಮ ಆಲೋಚನೆಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಆಲೋಚನೆಗಳನ್ನು ಭಾರತದ ಯುವ ಜನರ ಜತೆ ಹಂಚಿಕೊಂಡಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಕೊರೊನಾ ನಂತರ ಯಾವುದೇ ವ್ಯವಹಾರದ ಮಾದರಿಗೆ ಇವುಗಳು ಅಗತ್ಯವಾಗಿ ಇರಲಿವೆ ಎಂದು ಪಟ್ಟಿಯೊಂದನ್ನು ಮಾಡಿದ್ದು, ಅವುಗಳ ವಿವರ ಹೀಗಿದೆ.
ಹೊಂದಿಕೊಳ್ಳುವುದು:
ಈಗಿನ ಸನ್ನಿವೇಶದಲ್ಲಿ ಯಾವುದೇ ವ್ಯಾಪಾರ ಅಥವಾ ಜೀವನಶೈಲಿ ಮಾದರಿ ಸುಲಭವಾಗಿ ಹೊಂದಿಕೊಳ್ಳುವಂತೆ ಇರಬೇಕು. ಈ ರೀತಿ ಮಾಡುವ ಮೂಲಕ ಬಿಕ್ಕಟ್ಟಿನ ಸಮಯದಲ್ಲಿ ನಮ್ಮ ಕಚೇರಿ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆ ವೇಗವಾಗಿ ಮುಂದುವರಿಯುತ್ತದೆ; ಅದು ಕೂಡ ಯಾವುದೇ ಜೀವ ಹಾನಿ ಇಲ್ಲದಂತೆ.
ಡಿಜಿಟಲ್ ಪಾವತಿಗೆ ಮುಂದಾಗಿರುವುದು ಅಂಥ ಮೊದಲ ಉದಾಹರಣೆ. ಅಂಗಡಿ ದೊಡ್ಡದಿರಲಿ ಅಥವಾ ಸಣ್ಣದಿರಲಿ, ಡಿಜಿಟಲ್ ವ್ಯವಹಾರದ ಮೇಲೆ ಹೂಡಿಕೆ ಮಾಡಬೇಕು. ಈಗಾಗಲೇ ಭಾರತದಲ್ಲಿ ಡಿಜಿಟಲ್ ವ್ಯವಹಾರ ಹೆಚ್ಚಾಗಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಇದು ಇನ್ನೂ ಬಹಳ ಮುಖ್ಯ.
ಮತ್ತೊಂದು ಉದಾಹರಣೆ ಟೆಲಿ ಮೆಡಿಸಿನ್. ಆಸ್ಪತ್ರೆ ಅಥವಾ ಕ್ಲಿನಿಕ್ ಗೆ ಹೋಗದೆ ಹಲವು ಕನ್ಸಲ್ಟೇಷನ್ ಗಳಲ್ಲಿ ಈಗಾಗಲೇ ನೋಡ್ತಿದ್ದೀವಿ. ಇದು ಸಕಾರಾತ್ಮಕ ಬೆಳವಣಿಗೆ. ಈ ಬಿಜಿನೆಸ್ ಮಾದರಿ ಮೂಲಕ ಜಗತ್ತಿನಾದ್ಯಂತ ತಲುಪಬಹುದಾ ಎಂದು ಯೋಚಿಸಬಹುದಲ್ಲವಾ?
ಕ್ಷಮತೆ:
ಈ ಪದದ ಅರ್ಥವನ್ನು ಮತ್ತೊಮ್ಮೆ ಆಲೋಚಿಸಬೇಕಿದೆ. ಏಕೆಂದರೆ, ಕಚೇರಿಯಲ್ಲಿ ಎಷ್ಟು ಸಮಯ ಕಳೆದೆವು ಎಂಬುದು ಕ್ಷಮತೆ ಅಲ್ಲ. ನಮ್ಮ ಉತ್ಪಾದಕತೆ ಹಾಗೂ ಕ್ಷಮತೆಯನ್ನು ಪರಿಣಾಮಕಾರಿಯಾಗಿಸುವ ಮಾದರಿ ಕಡೆಗೆ ನೋಡಬೇಕು. ಅದಕ್ಕೆ ಶ್ರಮ ಹಾಕಬೇಕು. ನಿರ್ದಿಷ್ಟ ಸಮಯದಲ್ಲಿ ಗುರಿ ನಿಗದಿ ಮಾಡಿದ ಕೆಲಸ ಪೂರ್ಣಗೊಳಿಸುವ ಕಡೆಗೆ ಗಮನ ಹರಿಸಬೇಕು.
ಒಳಗೊಳ್ಳುವಿಕೆ:
ನಾವು ರೂಪಿಸುವ ವ್ಯಾಪಾರವು ಬಡವರು, ಅಶಕ್ತರ ಬಗ್ಗೆ ಕಾಳಜಿ ವಹಿಸುವಂಥದ್ದಾಗಿರಲಿ. ಹವಾಮಾನ ಬದಲಾವಣೆಯಲ್ಲಿ ಪ್ರಮುಕ ಬೆಳವಣಿಗೆ ಸಾಧಿಸಿದ್ದೇವೆ. ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭವಿಷ್ಯ ರೂಪಿಸಿಕೊಳ್ಳುವ ಅವಕಾಶ ಇದೆ. ಕಡಿಮೆ ಸಂಪನ್ಮೂಲಗಳ ಮೂಲಕ ಗರಿಷ್ಠವಾದದ್ದನ್ನು ಸಾಧಿಸಲು ಯತ್ನಿಸಿ. ಕಡಿಮೆ ಖರ್ಚಿನಲ್ಲಿ, ದೊಡ್ಡ ಪ್ರಮಾಣದಲ್ಲಿ ಪರಿಷ್ಕಾರ ಕಂಡುಕೊಳ್ಳುವ ಅಗತ್ಯವನ್ನು ಕೊರೊನಾ ಕಲಿಸಿದೆ. ಆರೋಗ್ಯದ ವಿಚಾರಕ್ಕೆ ನಾವು ಇಡೀ ಜಗತ್ತಿಗೆ ಮಾದರಿಯಾಗಬಹುದು. ನಮ್ಮ ರೈತರಿಗೆ ಮಾಹಿತಿ, ಯಂತ್ರ ಹಾಗೂ ಅದೆಂಥ ಸನ್ನಿವೇಶದಲ್ಲೂ ಮಾರ್ಕೆಟ್ ಗಳಿಗೆ ಸುಲಭವಾಗಿ ತಲುಪಲು ಹೊಸ ಆವಿಷ್ಕಾರಗಳ ಮೇಲೆ ಹೂಡಿಕೆ ಮಾಡಬೇಕಿದೆ.

ಅವಕಾಶ:
ಪ್ರತಿ ಬಿಕ್ಕಟ್ಟು ಅವಕಾಶವನ್ನು ತರುತ್ತದೆ. ಇದರಿಂದ ಕೊರೊನಾ ಕೂಡ ಹೊರತಲ್ಲ. ಬೆಳವಣಿಗೆಗೆ ಹೊಸ ಅವಕಾಶಗಳು ಯಾವುವು ಎಂದು ನಾವು ಅಳೆದು ತೂಗಿ ನೋಡೋಣ. ಅವಕಾಶ ಇರುವ ಕ್ಷೇತ್ರಗಳಲ್ಲಿ ಬೆಳೆಯೋಣ. ನಮ್ಮ ಜನರು, ಅವರ ಕೌಶಲ, ಸಾಮರ್ಥ್ಯವನ್ನು ಕೊರೊನಾ ನಂತರದ ದಿನಗಳಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂದು ಯೋಚಿಸೋಣ.
ಸಾರ್ವತ್ರಿಕತೆ:
ಕೊರೊನಾ ದಾಳಿ ಮಾಡುವುದಕ್ಕೆ ಮುನ್ನ ಯಾವುದೇ ವರ್ಣ, ಧರ್ಮ, ಬಣ್ಣ, ಜಾತಿ, ನಂಬಿಕೆ, ಭಾಷೆ ಅಥವಾ ಗಡಿ ನೋಡುವುದಿಲ್ಲ. ಆದರೆ ಅದು ಬಂದ ನಂತರ ನಮ್ಮ ಪ್ರತಿಕ್ರಿಯೆ, ನಡವಳಿಕೆ ಒಗ್ಗಟ್ಟಿನಿಂದ ಕೂಡಿರಬೇಕು, ಸಹೋದರತ್ವ ಭಾವ ಇರಬೇಕು.


Click it and Unblock the Notifications