ಈ ಹಿಂದೆ ನಾವು ಹಣವನ್ನು ನಮ್ಮ ಖಾತೆಯಿಂದ ವಿತ್‌ಡ್ರಾ ಮಾಡಿಕೊಳ್ಳಬೇಕಾದರೆ ಬ್ಯಾಂಕ್‌ಗೆ ಭೇಟಿ ನೀಡಬೇಕಾಗಿತ್ತು. ಆದರೆ ಈಗ ಡೆಬಿಟ್ ಕಾರ್ಡ್ ಮೂಲಕವೇ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ಹಣವಿಲ್ಲದಿದ್ದರೂ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಸಹಾಯಕವಾದ ಕ್ರೆಡಿಟ್ ಕಾರ್ಡ್ ಕೂಡಾ ಈಗ ಇದೆ. ಪ್ರಸ್ತುತ ಹಲವಾರು ಮಂದಿ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡುತ್ತಿದ್ದಾರೆ. ತಮ್ಮಲ್ಲಿ ಹಣವಿಲ್ಲದ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡುತ್ತಿದ್ದಾರೆ. ಬಳಿಕ ಮರುಪಾವತಿ ಮಾಡುತ್ತಿದ್ದಾರೆ.
ಪ್ರಸ್ತುತ ಕೆಲವು ಮಂದಿಗೆ ಕ್ರೆಡಿಟ್ ಕಾರ್ಡ್ ಇಲ್ಲವಾದರೆ ತಮ್ಮ ಜೀವನವೇ ಇಲ್ಲ ಎಂಬಂತಾಗಿದೆ. ಪ್ರತಿ ನಿತ್ಯದ ವಹಿವಾಟಿಗೂ ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರು ಅದೆಷ್ಟೋ ಮಂದಿ ಇದ್ದಾರೆ. ಇನ್ನು ಕೆಲವರು ಕ್ರೆಡಿಟ್ ಕಾರ್ಡ್‌ನಲ್ಲಿ ರಿವಾರ್ಡ್‌ಗಳು ಲಭ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ಕಾರ್ಡ್ ಪಡೆಯುವವರು ಇದ್ದಾರೆ. ಕ್ರೆಡಿಟ್ ಕಾರ್ಡ್ ಬಳಕೆ ಸಹಾಯಕವಾದರೂ ಕೂಡಾ ಅದರಿಂದ ಕೆಲವು ತೊಂದರೆ ಕೂಡಾ ಇದೆ. ನಾವು ಸಾಲದ ಬಲೆಗೆ ಬೀಳುವ ಸಾಧ್ಯತೆ ಇದೆ.
ನೀವು ಹೊರಗಿನ ಸಾಲಕ್ಕೆ ಬೀಳದೆ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದು ಅದನ್ನು ಮಾಸಿಕವಾಗಿ ಮರುಪಾವತಿ ಮಾಡುವುದರಿಂದಾಗಿ ನಿಮಗೆ ಸಾಲ ಹೊರೆ ಇಲ್ಲ ಎಂದು ಅನಿಸಬಹುದು. ಆದರೆ ಕ್ರೆಡಿಟ್ ಕಾರ್ಡ್ ಸಾಲದ ಬಲೆಯಲ್ಲಿ ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡ ಬಳಿಕವೇ ನಿಮಗೆ ತಿಳಿಯುತ್ತದೆ. ಈ ಕ್ರೆಡಿಟ್ ಕಾರ್ಡ್ ಸಾಲ ಎಂದರೇನು, ಆ ಸುಳಿಗೆ ನಾವು ಸಿಲುಕದಿರುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....
ಕ್ರೆಡಿಟ್ ಕಾರ್ಡ್ ಸಾಲ ಎಂದರೇನು?
ಕ್ರೆಡಿಟ್ ಕಾರ್ಡ್ ಸಾಲ ಎಂದರೆ ನೀವು ಒಂದು ಸಂಸ್ಥೆಗೆ ಪಾವತಿ ಮಾಡಬೇಕಾದ ಮೊತ್ತವಾಗಿದೆ. ಇದನ್ನು ಹೊಣೆಗಾರಿಕೆ ಎಂದೇ ಪರಿಗಣನೆ ಮಾಡಲಾಗುತ್ತದೆ. ಕ್ರೆಡಿಟ್ ಕಾರ್ಡ್ ಸಾಲ ಎಂದರೆ ನೀವು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕಾದ ಮೊತ್ತವಾಗಿದೆ. ಸಾಮಾನ್ಯವಾಗಿ 12 ತಿಂಗಳ ಅವಧಿಯಲ್ಲಿ ನೀವು ಪಾವತಿ ಮಾಡಬೇಕಾಗುತ್ತದೆ.
ಸಮಸ್ಯೆ ಏನಿದೆ ಎಂದು ನೋಡಿಕೊಳ್ಳಿ
ನೀವು ಮಾಸಿಕವಾಗಿ ಕನಿಷ್ಠ ಎಷ್ಟು ಪಾವತಿ ಮಾಡುತ್ತೀರಿ ಎಂಬುವುದನ್ನು ಪಟ್ಟಿ ಮಾಡಿಕೊಳ್ಳಿ. ಹಾಗೆಯೇ ಅದರ ಕೊನೆಯ ದಿನಾಂಕವನ್ನು ಕೂಡಾ ಪಟ್ಟಿ ಮಾಡಿಕೊಳ್ಳಿ. ಇದು ನೀವು ಎಷ್ಟು ಮೊತ್ತವನ್ನು ಎಷ್ಟು ಸಮಯದ ಒಳಗೆ ಮರುಪಾವತಿ ಮಾಡಬೇಕು ಎಂಬ ಲೆಕ್ಕಾಚಾರವನ್ನು ನೀಡುತ್ತದೆ. ಹಾಗೆಯೇ ಸಾಲವನ್ನು ಹೇಗೆ ಮರುಪಾವತಿ ಮಾಡುವುದು ಎಂಬುವುದನ್ನು ನಿರ್ಧಾರ ಮಾಡಿಕೊಳ್ಳಿ. ಇದು ನೀವು ಕ್ರೆಡಿಟ್ ಕಾರ್ಡ್ ಸಾಲದ ಹೊರೆಯಲ್ಲಿ ಸಿಲುಕದಂತೆ ಮಾಡುವ ವಿಧಾನವಾಗಿದೆ.
ಬೇಡಿಕೆಗೆ ಹಾಕಿ ಬ್ರೇಕ್
ನೀವು ದುಂದು ವೆಚ್ಚಕ್ಕೆ ಬ್ರೇಕ್ ಹಾಕುವುದು ಕೂಡಾ ಕ್ರೆಡಿಟ್ ಕಾರ್ಡ್ ಸಾಲದಿಂದ ತಪ್ಪಿಸಿಕೊಳ್ಳಲು ಸಹಾಯಕ. ನಿಮ್ಮ ವೈಯಕ್ತಿಕ ಬಜೆಟ್ ಅನ್ನು ನಿರ್ವಹಣೆ ಮಾಡಿಕೊಳ್ಳಿ. ನೀವು ಎಷ್ಟು ಬೇಡಿಕೆಯಲ್ಲಿ ಕಡಿತ ಮಾಡಿಕೊಳ್ಳುತ್ತೀರೋ ಅಷ್ಟು ನಿಮಗೆ ಸಹಾಯವಾಗಲಿದೆ. ಐಷಾರಾಮಿ ವಸ್ತುಗಳು ನಿಮ್ಮ ಜೀವನಕ್ಕೆ ತೀರಾ ಅಗತ್ಯವಾಗಿರುವುದೇನಲ್ಲ. ಆದ್ದರಿಂದಾಗಿ ದುಬಾರಿ ವೆಚ್ಚಕ್ಕೆ ಬ್ರೇಕ್ ಹಾಕಿಕೊಳ್ಳಿ.
ಗಡುವನ್ನು ವಿಸ್ತರಣೆ ಮಾಡಿಕೊಳ್ಳಿ
ನೀವು ಯಾವುದೇ ಪ್ಲ್ಯಾನ್ ಮಾಡದ, ಅನಿರೀಕ್ಷಿತ ಖರ್ಚುಗಳು ಸಾಮಾನ್ಯವಾಗಿದೆ. ಹಾಗಿರುವಾಗ ನಿಮಗೆ ಸಮಯಕ್ಕೆ ಸರಿಯಾಗಿ ದೊಡ್ಡ ಮೊತ್ತದ ಕ್ರೆಡಿಟ್ ಕಾರ್ಡ್ ಮೊತ್ತ ಮರುಪಾವತಿ ಮಾಡಲು ಸಾಧ್ಯವಾಗದು. ಆ ತೊಂದರೆಯನ್ನು ನೀವು ಅನುಭವಿಸುತ್ತಿದ್ದರೆ, ಅದಕ್ಕೆ ಉತ್ತಮ ಪರಿಹಾರ ಗಡುವು ವಿಸ್ತರಣೆ. ನೀವು ಕ್ರೆಡಿಟ್ ಕಾರ್ಡ್ ಸಂಸ್ಥೆಗೆ ಮನವಿ ಮಾಡಿ ಗಡುವು ವಿಸ್ತರಿಸಬಹುದು.
ನಿಮ್ಮ ಜೀವನಶೈಲಿ ಬದಲಾವಣೆಯೂ ಉತ್ತಮ
ನೀವು ನಿಮ್ಮ ಜೀವನಶೈಲಿಯಲ್ಲಿ ಮಾಡುವ ಸಣ್ಣ ಬದಲಾವಣೆಯೂ ಕೂಡಾ ಹಣ ಉಳಿತಾಯ ಮಾಡಲು ಸಹಾಯಕವಾಗಲಿದೆ. ನೀವು ಸಾಲವನ್ನು ಕಡಿಮೆ ಮಾಡಬೇಕಾದರೆ ದೊಡ್ಡ ದೊಡ್ಡ ರೆಸ್ಟೋರೆಂಟ್, ಹೋಟೆಲ್‌ಗಳಲ್ಲಿ ಪ್ರತಿದಿನ ಅಥವಾ ಹೆಚ್ಚಾಗಿ ಆಹಾರ ಸೇವನೆ ಮಾಡುವುದಕ್ಕೆ ಬ್ರೇಕ್ ಹಾಕಬೇಕು. ನೀವು ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವನೆ ಮಾಡುವುದರಿಂದ ನಿಮ್ಮ ಹಣವು ಉಳಿತಾಯವಾಗಲಿದೆ, ಹಾಗೆಯೇ ಆರೋಗ್ಯಕ್ಕೂ ಕೂಡಾ ಉತ್ತಮ. ಮಾಸಿಕವಾಗಿ ಬಜೆಟ್ ಮಾಡಿಕೊಳ್ಳಿ, ಇದರಿಂದಾಗಿ ನೀವು ಎಷ್ಟು ಹಣವನ್ನು ಉಳಿತಾಯ ಮಾಡಲು ಸಾಧ್ಯ ಎಂಬುವುದು ತಿಳಿಯಲಿದೆ.
ತುರ್ತು ಹಣ ಇರಲಿ
ಹಣವನ್ನು ಉಳಿತಾಯ ಮಾಡುವುದು ಉತ್ತಮ ಅಭ್ಯಾಸ. ನೀವು ಹಣವನ್ನು ಉಳಿತಾಯ ಮಾಡುವುದರ ಜೊತೆಗೆಯೇ ಕೊಂಚ ಹಣವನ್ನು ಯಾವುದಾದರೂ ತುರ್ತು ಸಂದರ್ಭದಲ್ಲಿ ಖರ್ಚು ಮಾಡಲೆಂದು ಎತ್ತಿಟ್ಟುಕೊಳ್ಳಿ. ಹಣಕಾಸು ತುರ್ತು ಸಂದರ್ಭದಲ್ಲಿ ನೀವು ಸಾಲವನ್ನು ಮಾಡದೆಯೇ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲು ಈ ಉಳಿತಾಯ ಸಹಾಯವಾಗಲಿದೆ. ನೀವು ತುರ್ತು ಸಂದರ್ಭಕ್ಕಾಗಿ ಉಳಿತಾಯ ಮಾಡುವುದಾದರೆ, ನಿಮ್ಮ ಆರು ತಿಂಗಳ ವೇತನದಷ್ಟು ಮೊತ್ತವನ್ನಾದರೂ ಉಳಿಸುವುದು ಉತ್ತಮ. ಈ ಹಣವು ನೀವು ಉದ್ಯೋಗವನ್ನು ಕಳೆದುಕೊಂಡರೂ ಕೂಡಾ ಸಹಾಯಕವಾಗಲಿದೆ. ಹಾಗೆಯೇ ನಿಮಗೆ ಆರೋಗ್ಯ ಸಮಸ್ಯೆ ಉಂಟಾದರೂ ಸಹಾಯಕ್ಕೆ ಬರಲಿದೆ.
ಕ್ರೆಡಿಟ್ ಕಾರ್ಡ್‌ಗೆ ಮಿತಿ ಇರಲಿ
ನೀವು ಅಧಿಕ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಅದನ್ನು ನಿರ್ವಹಣೆ ಮಾಡುವುದು ಕಷ್ಟವಾಗಬಹುದು. ನೀವು ಕ್ರೆಡಿಟ್ ಕಾರ್ಡ್ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದರೆ ಸಾಲದ ಹೊರೆ ನಿಮ್ಮನ್ನು ಕುಗ್ಗಿಸಬಹುದು. ಸರಿಯಾದ ಸಮಯಕ್ಕೆ ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ, ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಹೆಚ್ಚು ಕಾರ್ಡ್ ಇದ್ದಾಗ ನಿಮಗೆ ಎಲ್ಲವನ್ನು ಪಾವತಿ ಮಾಡುವುದು ಕಷ್ಟವಾಗಲಿದೆ.
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications