ನಾವು ನಮ್ಮ ನಿವೃತ್ತಿ ಸಂದರ್ಭದಲ್ಲಿ ಆರಾಮವಾಗಿ ಜೀವನವನ್ನು ನಡೆಸಲು ಬಯಸುವುದು ಸಾಮಾನ್ಯವಲ್ಲವೇ?. ಅದಕ್ಕಾಗಿ ನಾವು ಈಗಲೇ ಪ್ಲ್ಯಾನ್ ಮಾಡಿಕೊಳ್ಳಬೇಕಾಗುತ್ತದೆ. ನಿವೃತ್ತಿ ನಿಧಿ ಸಂಸ್ಥೆಯಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕಳೆದ ತಿಂಗಳು ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಉದ್ಯೋಗಿ ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಅದನ್ನು ಜಾರಿಗೊಳಿಸುವ ಆಂತರಿಕ ಕಾರ್ಯವಿಧಾನಗಳ ವಿವರಗಳನ್ನು ಸೂಚಿಸಿದೆ.
ಈ ಹಿಂದೆ ನಿವೃತ್ತಿ ನಿಧಿಯನ್ನು ಒದಗಿಸುವ ಸಂಸ್ಥೆಯಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ನಿವೃತ್ತಿ ಬಳಿಕ ಅಧಿಕ ಪಿಂಚಣಿಯನ್ನು ಪಡೆಯುವ ಪ್ರಕ್ರಿಯೆಯ ಮಾರ್ಗಸೂಚಿಯನ್ನು ಜಾರಿ ಮಾಡಿದೆ. ಈ ಮಾರ್ಗಸೂಚಿ ಪ್ರಕಾರ ನಿವೃತ್ತಿ ಬಳಿಕ ಅಧಿಕ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ. ಈ ಅರ್ಜಿ ಸಲ್ಲಿಕೆಗೆ ನಾಳೆಯೇ ಅಂದರೆ ಮೇ 3 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆ, ಅರ್ಹತೆ ಇತರೆ ಮಾಹಿತಿ ಇಲ್ಲಿದೆ...

ಇಪಿಎಸ್ ಅಧಿಕ ಪಿಂಚಣಿ ಯೋಜನೆಯ ಅರ್ಹತೆ
ಸುಪ್ರೀಂ ಕೋರ್ಟ್ ತೀರ್ಪು ಮತ್ತು ಇಪಿಎಫ್‌ಒ ಸುತ್ತೋಲೆಯ ಪ್ರಕಾರ, ಕೆಳಗಿನ ಉದ್ಯೋಗಿಗಳು ಹೆಚ್ಚಿನ ವೇತನದ ಮೇಲೆ ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
* ಏಪ್ರಿಲ್ 2014ರಿಂದ 5000 ರೂಪಾಯಿ ಅಥವಾ 6500 ರೂಪಾಯಿ ಮಿತಿಯನ್ನು ಮೀರಿದ ಮೂಲ ವೇತನದ ಮೇಲೆ ಕೊಡುಗೆ ನೀಡಿದ ಉದ್ಯೋಗಿಗಳು ಮತ್ತು ಉದ್ಯೋಗದಾತರು
* ಏಪ್ರಿಲ್ 1, 2014 ರ ಮೊದಲು ಹೆಚ್ಚಿನ ವೇತನದ ಮೇಲೆ ಪಿಂಚಣಿಗಾಗಿ ಯಾರು ಜಂಟಿ ಆಯ್ಕೆ ಮಾಡಿಲ್ಲ ಅವರು ಅರ್ಹರು
* ಏಪ್ರಿಲ್ 1, 2014 ಕ್ಕಿಂತ ಮೊದಲು ಇಪಿಎಫ್/ ಇಪಿಎಸ್ ಸದಸ್ಯರಾಗಿದ್ದ ಉದ್ಯೋಗಿ ಮತ್ತು ಏಪ್ರಿಲ್ 1, 2014 ರಂದು ಅಥವಾ ನಂತರ ಸದಸ್ಯರಾಗಿ ಮುಂದುವರೆದವರು
ಅರ್ಹ ಉದ್ಯೋಗಿಗಳು ಅರ್ಜಿ ಸಲ್ಲಿಬಹುದು
1. ನಿಗದಿತ ಫಾರ್ಮ್, ವಿಧಾನದಲ್ಲಿ ಅರ್ಜಿ ಸಲ್ಲಿಸಬಹುದು
2. ಜಾಯಿಂಟ್ ಆಯ್ಕೆಯು ಡಿಸ್ಕ್ಲೈಮರ್ ಮತ್ತು ಡಿಕ್ಲೆರೇಷನ್ ಅನ್ನು ಹೊಂದಿರುತ್ತದೆ.
3. ಪ್ರಾವಿಡೆಂಟ್ ಫಂಡ್‌ನಿಂದ ಪಿಂಚಣಿ ನಿಧಿಗೆ ಷೇರುಗಳ ಅಗತ್ಯವಿದ್ದರೆ, ಫಂಡ್‌ಗೆ ಯಾವುದೇ ರಿ-ಡೆಪಾಸಿಟ್ ಮಾಡಬೇಕಾದರೆ, ಜಂಟಿ ಆಯ್ಕೆ ಮಾಡಬಹುದು.
4. ನಿಮ್ಮ ಇಪಿಎಫ್‌ಒ ಪ್ರಾವಿಡೆಂಟ್ ಫಂಡ್ ಖಾತೆಯಿಂದ ಪಿಂಚಣಿ ಖಾತೆಗೆ ಹಣ ವರ್ಗಾವಣೆ ಮಾಡಬಹುದು.
5. ಇಪಿಎಫ್ ಯೋಜನೆ 1952 ರ ಪ್ಯಾರಾ 60 ರ ಅಡಿಯಲ್ಲಿ ಘೋಷಿಸಲಾದ ದರದಲ್ಲಿ ಬಡ್ಡಿಯೊಂದಿಗೆ ಠೇವಣಿ ಇಡಬೇಕು.
6. ಅರ್ಹರು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಗರಿಷ್ಠ ಪಿಂಚಣಿ ಬಗ್ಗೆ ಮಾಹಿತಿ
ನೀವು ಉದ್ಯೋಗದಿಂದ ಪ್ರತಿ ತಿಂಗಳು 40,000 ರೂಪಾಯಿ ಬೇಸಿಕ್ ಪಾವತಿ ಪಡೆದುಕೊಳ್ಳುತ್ತಿದ್ದೀರಿ ಎಂದುಕೊಳ್ಳಿ, ಆಗ ನೀವು ಮಾಸಿಕವಾಗಿ ಇಪಿಎಫ್‌ಗೆ ಶೇಕಡ 12ರಷ್ಟು ಅಂದರೆ 4800 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಉದ್ಯೋಗಿಗಳ ಪಿಂಚಣಿ ಯೋಜನೆಗೆ ಶೇಕಡ 12ರಷ್ಟು ಎಂದಾದರೆ ಉದ್ಯೋಗಿಗಳು 1250 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಉಳಿದಂತೆ 3550 ರೂಪಾಯಿ ಜಮೆಯಾಗಲಿದೆ.
ನೀವು ಅಧಿಕ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ, ನೀವು ನಿವೃತ್ತಿ ಬಳಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮ ಬೇಸಿಕ್ ಸ್ಯಾಲರಿ ಸೇರಿದಂತೆ ತುಟ್ಟಿಭತ್ಯೆ (ಅನ್ವಯವಾಗುವುದಾದರೆ) ನಿಮಗೆ ಲಭ್ಯವಾಗುತ್ತದೆ. ಅಂದರೆ ನಿಮಗೆ 18,857 [(40000 ರೂ*33)/70] ರೂಪಾಯಿ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಕಳೆದ 60 ತಿಂಗಳುಗಳಲ್ಲಿ 40,000 ರೂಪಾಯಿ ಆದಾಯವನ್ನು ಹೊಂದಿರಬೇಕಾಗುತ್ತದೆ.


Click it and Unblock the Notifications