ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಪಡುಕೋಣೆ ಕೂಡ ಒಬ್ಬ ಚಾಣಾಕ್ಷ ಹೂಡಿಕೆದಾರರಾಗಿದ್ದಾರೆ ಎಂದು ತಿಳಿಯುವುದು ಅತೀ ಮುಖ್ಯವಾಗುತ್ತದೆ. ಪಡುಕೋಣೆ ಕಳೆದ ಕೆಲವು ವರ್ಷಗಳಿಂದ ಸದ್ದಿಲ್ಲದೆ ತನ್ನ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದಾರೆ.
2014 ರಲ್ಲಿ ತಮ್ಮ ಕುಟುಂಬದ ಕಛೇರಿ ಕೆಎ ಎಂಟರ್‌ಪ್ರೈಸಸ್ ಅನ್ನು ಸ್ಥಾಪಿಸಿದರು. ಸ್ವಲ್ಪ ಸಮಯದ ನಂತರ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು. ದೀಪಿಕಾರ ಕೆಲವು ಪ್ರಮುಖ ಸಂಸ್ಥೆಗಳಾದ ಎಪಿಗಾಮಿಯಾ, ಫರ್ಲೆಂಕೊ, ಬ್ಲೂ ಸ್ಮಾರ್ಟ್, ಬೆಲ್ಲಾಟ್ರಿಕ್ಸ್, ಅಟೊಂಬರ್ಗ್ ಟೆಕ್ನಾಲಜೀಸ್, ಫ್ರಂಟ್ ರೋ, ಮೊಕೊಬರಾ, ಸೂಪರ್‌ಟೇಲ್ಸ್, ನುವಾ, ಇತ್ಯಾದಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಎಪಿಗಾಮಿಯಾ ಮತ್ತು ನುವಾದಂತಹ ಕೆಲವು ಬ್ರ್ಯಾಂಡ್‌ಗಳಲ್ಲಿ ದೀಪಿಕಾ ಪಡುಕೋಣೆ ಹೂಡಿಕೆಯನ್ನು ಮಾಡಿದ್ದಾರೆ, ಜೊತೆಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡಾ ಆಗಿದ್ದಾರೆ. 2020 ರಿಂದ ಕೆಎ ಎಂಟರ್‌ಪ್ರೈಸಸ್‌ನಲ್ಲಿರುವ ಜಿಗರ್ ಕೆ ಶಾ ಪಡುಕೋಣೆ ಅವರ ಎಲ್ಲಾ ಹಣಕಾಸು ಆಸ್ತಿಗಳನ್ನು ಲೀಸ್ಟ್ ಮಾಡಿದ, ಲೀಸ್ಟ್ ಮಾಡದ, ಸ್ಥಿರ ಆದಾಯ ಎಲ್ಲವನ್ನು ನಿರ್ವಹಣೆ ಮಾಡುತ್ತಾರೆ.
"ನಾವು ಕೆಎ ಎಂಟರ್‌ಪ್ರೈಸಸ್ ಅನ್ನು ವಿಶಿಷ್ಟವಾದ ಸಾಹಸೋದ್ಯಮ ಸ್ಟೋರ್‌ನಂತೆ ನಡೆಸುತ್ತೇವೆ. ಸರಾಸರಿ ಚೆಕ್ ಗಾತ್ರ 3 ಕೋಟಿ ರೂಪಾಯಿಯಿಂದ 5 ಕೋಟಿ ರೂಪಾಯಿ ನಡುವೆ ಇದೆ. ಆದರೆ ಹೂಡಿಕೆ ವಿಚಾರಕ್ಕೆ ಬಂದಾಗ ಕಂಪನಿಯ ಮೌಲ್ಯ ಲೆಕ್ಕಾಚಾರಕ್ಕೆ ಬರುತ್ತದೆ," ಎಂದು ತಿಳಿಸಿದರು.
ನಿವ್ವಳ ಆದಾಯ, ಆಸ್ತಿ, ತೆರಿಗೆ ವಿವರ
ದೀಪಿಕಾ ಪಡುಕೋಣೆ ಅವರ ನಿವ್ವಳ ಆದಾಯ ಸುಮಾರು 500 ಕೋಟಿ ರೂಪಾಯಿ ಆಗಿದೆ. 2016-2017ರ ಆರ್ಥಿಕ ವರ್ಷದಲ್ಲಿ ನಟಿ ಸುಮಾರು 10 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದ್ದಾರೆ. ಭಾರತದ ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಕಾಣಿಸಿಕೊಂಡ ಏಕೈಕ ಮಹಿಳಾ ನಟಿ ಇವರಾಗಿದ್ದಾರೆ.
ಭಾರತದಲ್ಲಿ ಅತೀ ಬೇಡಿಕೆಯಲ್ಲಿರುವ ಅಂಬಾಸಿಡರ್‌ಗಳಲ್ಲಿ ಇವರು ಒಬ್ಬರಾಗಿದ್ದಾರೆ. ಲೂಯಿ ವಿಟಾನ್, ಲೆವಿಸ್, ಜಿಯೋ, ಪೆಪ್ಸಿ, ಅಡೀಡಸ್, ಆಕ್ಸಿಸ್ ಬ್ಯಾಂಕ್, ಟಿಸ್ಸಾಟ್, ಒಪ್ಪೋ, ವಿಸ್ತಾರಾ, ಚೋಪರ್ಡ್, ಡಾಬರ್ ಸೇರಿದಂತೆ ಕೆಲವು ಬ್ರ್ಯಾಂಡ್‌ಗಳನ್ನು ಸೇರಿದಂತೆ ಕೆಲವು ಬ್ರ್ಯಾಂಡ್‌ಗಳ ಅಂಬಾಸಿಡರ್ ಆಗಿದ್ದಾರೆ.
ಪಡುಕೋಣೆ ಮುಂಬೈನ ಬ್ಯೂಮೊಂಡೆ ಟವರ್ಸ್‌ನ ಟವರ್ ಬಿ ಯ 26 ನೇ ಮಹಡಿಯಲ್ಲಿ 4ಬಿಎಚ್‌ಕೆ ಫ್ಲಾಟ್ ಅನ್ನು ಹೊಂದಿದ್ದಾರೆ. 2021 ರಲ್ಲಿ, ದೀಪಿಕಾ ಮತ್ತು ಪತಿ ರಣವೀರ್ ಸಿಂಗ್ ಅಲಿಬಾಗ್‌ನಲ್ಲಿ 22 ಕೋಟಿ ರೂಪಾಯಿಗಳಿಗೆ ಎರಡನೇ ಬಂಗಲೆಯನ್ನು ಖರೀದಿಸಿದರು. ಅದೇ ವರ್ಷ, ದೀಪಿಕಾ ಮತ್ತು ಅವರ ತಂದೆ ಪ್ರಕಾಶ್ ಪಡುಕೋಣೆ ಬೆಂಗಳೂರಿನಲ್ಲಿ 6.79 ಕೋಟಿ ರೂಪಾಯಿಗೆ ಸರ್ವಿಸ್ಡ್ ಅಪಾರ್ಟ್‌ಮೆಂಟ್‌ನ ರಿಜಿಸ್ಟ್ರೇಷನ್ ಮಾಡಿಕೊಂಡರು.
ಪಡುಕೋಣೆ ವ್ಯಾಪಾರ ಆಸಕ್ತಿ ಕೇವಲ ಕುಟುಂಬದ ಕಚೇರಿ ಅಥವಾ ಮನೆ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಮೇ 2021 ರಲ್ಲಿ, ಹೊಸ ಕಂಪನಿ ಡಿಪಿಕೆಎ ಯುನಿವರ್ಸಲ್ ಕನ್ಸ್ಯೂಮರ್ ವೆಂಚರ್ಸ್ ಪ್ರೈ.ಲಿ. ಮುಂಬೈನಲ್ಲಿ ಆರಂಭಿಸಿದರು. ಟೋಫ್ಲರ್ ಪ್ರಕಾರ ದೀಪಿಕಾ ಹಾಗೂ ತಂದೆ ಪ್ರಕಾಶ್ ಪಡುಕೋಣೆಯನ್ನು ಈ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.


Click it and Unblock the Notifications