ವ್ಯಾಪಾರ, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಭಾರತವು ವರ್ಷಗಳಲ್ಲಿ ಮನಾರ್ಹ ಬೆಳವಣಿಗೆಯನ್ನು ಹೊಂದಿದೆ. ಯುವ, ಮಹತ್ವಾಕಾಂಕ್ಷಿ ಉದ್ಯಮಿಗಳು ಹಿರಿಯ ಉದ್ಯಮಿಗಳಂತೆ ತಾವು ಕೂಡಾ ಬೆಳವಣಿಗೆ ಕಾಣುತ್ತಾ ಬರುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ನಾವು ನಮ್ಮ ಮಹಾನ್ ಸಾಧಕರ ಯಶಸ್ಸಿನ ಕಥೆಗಳನ್ನು ತಿಳಿಯದಿದ್ದರೆ ಹೇಗೆ ನೋಡಿ. ಸಣ್ಣ ಕುಟುಂಬದ ವ್ಯಾಪಾರವನ್ನು ಗುರುತಿಸಿದ ಜಾಗತಿಕ ಬ್ರ್ಯಾಂಡ್ ಆಗಿ ಪರಿವರ್ತಿಸಿದ ಯಶಸ್ವಿ ಉದ್ಯಮಿಗಳು ರಮೇಶ್ ಕುಮಾರ್ ದುವಾ ಮತ್ತು ಮುಕಂದ್ ಲಾಲ್ ದುವಾ ಆಗಿದ್ದಾರೆ, ಇವರ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಮುಕಂದ್ ಲಾಲ್ ದುವಾ ಮತ್ತು ರಮೇಶ್ ಕುಮಾರ್ ಯಾರು?
ದೆಹಲಿಯ ರಮೇಶ್ ಕುಮಾರ್ ದುವಾ ಮತ್ತು ಮುಕಂದ್ ಲಾಲ್ ದುವಾ ಸಹೋದರರು 1976 ರಲ್ಲಿ ರಿಲಾಕ್ಸೊವನ್ನು ಸ್ಥಾಪಿಸಿದರು. ಇದು ಭಾರತೀಯ ಪಾದರಕ್ಷೆಗಳ ಉದ್ಯಮದಲ್ಲಿ ಅತ್ಯಂತ ಗುರುತಿಸಬಹುದಾದ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. 1971 ರಲ್ಲಿ ವ್ಯಾಪಾರದಲ್ಲಿ ಆರ್ಥಿಕ ತೊಂದರೆಗಳು ಉಂಟಾದ ಬಳಿಕ 1976 ರಲ್ಲಿ ದುವಾ ಸಹೋದರರು ಪಿತ್ರಾರ್ಜಿತ ಉದ್ಯಮವನ್ನು ನಿಲ್ಲಿಸಿ, ಪಾದರಕ್ಷೆಗಳ ಉದ್ಯಮವನ್ನು ಆರಂಭಿಸಿದರು.
ಮಾಧ್ಯಮ ವರದಿಗಳ ಪ್ರಕಾರ, ರಿಲಾಕ್ಸೊವನ್ನು 10,000 ರೂಪಾಯಿ ಹೂಡಿಕೆ ಮಾಡುವ ಮೂಲಕ ಆರಂಭ ಮಾಡಿದರು. ಟೈಮ್ಲೆಸ್ "ಹವಾಯಿ ಚಪ್ಪಲ್" ಅನ್ನು ಹೊರತಂದರು. ಆರಂಭಿಕ ವರ್ಷಗಳಲ್ಲಿ ಹಲವಾರು ಸವಾಲುಗಳನ್ನು ಈ ಸಂಸ್ಥೆಯು ಹೊಂದಿದ್ದವು, ಮುಖ್ಯವಾಗಿ ಕಾರ್ಪೊರೇಟ್ ಕಾರ್ಯಾಚರಣೆಗಳನ್ನು ನಿರ್ಬಂಧಿಸಿದ ಸರ್ಕಾರಿ ನಿಯಮಗಳ ಪರಿಣಾಮವಾಗಿ ಹಲವಾರು ಸವಾಲುಗಳನ್ನು ಸಂಸ್ಥೆ ಅನುಭವಿಸಿದರು.
ಆದರೆ ದುವಾ ಸಹೋದರುಗಳು ಅಡೆತಡೆಗಳ ನಡುವೆಯು ಅವಕಾಶವನ್ನು ಕಂಡುಕೊಂಡರು. ವಿಶಿಷ್ಟವಾದ ಗುರುತನ್ನು ಸ್ಥಾಪಿಸಲು ಅಂತಿಮವಾಗಿ "ರಿಲಾಕ್ಸೊ" ಹೆಸರಿನಲ್ಲಿ ಸಂಸ್ಥೆ ಆರಂಭಿಸಿದ್ದಾರೆ. ಅದಕ್ಕೂ ಮೊದಲು ಹಲವಾರು ಘಟಕಗಳನ್ನು ದುವಾ ಸಹೋದರರು ಪ್ರಾರಂಭ ಮಾಡಿದ್ದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ, ವ್ಯವಹಾರಗಳು ತಮ್ಮ ದಾಸ್ತಾನು ಇರಿಸಿರುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವು ಪ್ರಮುಖವಾಗಿತ್ತು.
ರಿಲಾಕ್ಸೊ 1995 ರಲ್ಲಿ ರೂಪಾಂತರವನ್ನು ಹೊಂದಿತ್ತು. ಪ್ರತಿ ದಿನ 50,000 ಜೋಡಿಗಳನ್ನು ಸಿದ್ಧಪಡಿಸಲು 7.5 ಕೋಟಿ ರೂಪಾಯಿಯನ್ನು ಖರ್ಚು ಮಾಡಿದರು. ವರದಿ ಪ್ರಕಾರ ಅದೇ ಸಮಯದಲ್ಲಿ ರಾಷ್ಟ್ರಗಳ ಆರ್ಥಿಕತೆಯು ಅಭಿವೃದ್ಧಿ ಹೊಂದುತ್ತಿರುವ ಮತ್ತು ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಸರ್ಕಾರದ ನೀತಿಯಲ್ಲಿನ ಬದಲಾವಣೆಗಳನ್ನು ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡರು. ಇಂದು ರಿಲಾಕ್ಸೊ ಜಾಗತಿಕವಾಗಿ ವ್ಯಾಪಿಸಿಕೊಂಡಿದೆ.
ಕಂಪನಿಯು ಫ್ಲಿಫ್‌ಕಾರ್ಟ್, ಮಿಂತ್ರಾ, ಅಮೆಜಾನ್ ಇಂಡಿಯಾ ಸೇರಿದಂತೆ ಅದರ ನಾಲ್ಕು ಪ್ರಸಿದ್ಧ ಬ್ರ್ಯಾಂಡ್‌ಗಳಾದ ಬಹಾಮಾಸ್, ಸ್ಪಾರ್ಕ್ಸ್, ಫ್ಲಿಟ್, ಸ್ಕೂಲ್‌ಮೇಟ್ ಸೇರಿದಂತೆ ಇ-ಕಾಮರ್ಸ್ ಸೈಟ್‌ಗಳೊಂದಿಗೆ ಬಲವಾದ ಸಂಬಂಧವನ್ನು ಹೊಂದಿದೆ. ಇದು ವಿದೇಶಿ ಮಾರುಕಟ್ಟೆಯನ್ನು ಕೂಡಾ ಹೊಂದಿದೆ. ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಅಧಿಕವಾಗಿ ರಫ್ತು ಮಾಡುತ್ತದೆ. ಒಟ್ಟು ಆದಾಯದ ಸುಮಾರು ಶೇಕಡ 5ರಷ್ಟು ಆದಾಯವನ್ನು ಈ ವಿದೇಶಿ ಮಾರುಕಟ್ಟೆಯಿಂದ ಪಡೆಯುತ್ತದೆ.
ಇತ್ತೀಚಿನ ಹಣಕಾಸಿನ ಮಾಹಿತಿಯು ಪಾಸಿಟಿವ್ ಪರಿಣಾಮವನ್ನು ತೋರಿಸುತ್ತದೆ. ರಿಲಾಕ್ಸೊ ಫುಟ್‌ವೇರ್ಸ್ ಲಿಮಿಟೆಡ್ (RLXO.NS), ಭಾರತೀಯ ಪಾದರಕ್ಷೆಗಳ ರಿಟೇಲ್ ವ್ಯಾಪಾರಿ ನಾಲ್ಕನೇ ತ್ರೈಮಾಸಿಕ ಆದಾಯದಲ್ಲಿ ಶೇಕಡ 9.6ರಷ್ಟು ಆದಾಯ ಏರಿಕೆಯನ್ನು ಕಂಡಿದೆ. 2022-23ರ ಆರ್ಥಿಕ ವರ್ಷದಲ್ಲಿ ಒಟ್ಟಾರೆ ಆದಾಯವು ವರ್ಷಕ್ಕೆ ಶೇಕಡ 4.6 ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷ 2676.99 ಕೋಟಿ ರೂಪಾಯಿಯಿಂದ 2801.34 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ರಮೇಶ್ ಕುಮಾರ್ ದುವಾ 2023 ರ ಹೊತ್ತಿಗೆ 1 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಫೋರ್ಬ್ಸ್ ಇಂಡಿಯಾದಿಂದ ಗುರುತಿಸಲ್ಪಟ್ಟರು. ಫೋರ್ಬ್ಸ್ ಪ್ರಕಾರ, ರಮೇಶ್ ಕುಮಾರ್ ಮತ್ತು ಮುಕುಂದ್ ಲಾಲ್ ದುವಾ ಅವರ ಒಟ್ಟು ನಿವ್ವಳ ಮೌಲ್ಯ 2.32 ಬಿಲಿಯನ್ ಡಾಲರ್ ಅಥವಾ 19,000 ಕೋಟಿ ರೂಪಾಯಿ ಆಗಿದೆ.
More From GoodReturns

Fixed Deposit: 8.3% ಲಾಭದೊಂದಿಗೆ ಪ್ರವಾಸ ನಿಧಿ ಕಟ್ಟಿ, ಪ್ರವಾಸದ ಕನಸು ನನಸಾಗಿಸಲು 5 ಸರಳ ಮಾರ್ಗ

LPG Shortage: ರಾಜ್ಯದಲ್ಲಿ ಇನ್ನೂ 10 ದಿನ ಸಿಗಲ್ಲ ಎಲ್ಪಿಜಿ; ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದೇನು?

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG Crisis: ಭಯಪಡಬೇಡಿ, ಅವಸರದಲ್ಲಿ ಬುಕ್ ಮಾಡ್ಬೇಡಿ; ಗೃಹಬಳಕೆಯ ಎಲ್ಪಿಜಿ ಬಳಕೆದಾರರಿಗೆ ಕೇಂದ್ರ ಭರವಸೆ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

Eid-ul-Fitr 2026: ಭಾರತದಲ್ಲಿ ರಂಜಾನ್ ಹಬ್ಬ ಯಾವಾಗ? ಇದೇ ದಿನ ಕಾಣಿಸಲಿದೆ ಚಂದ್ರ

Silver Rate Today: ಬೆಳ್ಳಿ ಪ್ರಿಯರಿಗೆ ಜಾಕ್ ಪಾಟ್! ಶನಿವಾರ ಬೆಲೆ ಭರ್ಜರಿ ಕುಸಿತ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Today: ಚಿನ್ನದಂತೆ ಬೆಳ್ಳಿ ದರವೂ ಭಾರೀ ಕುಸಿತ; ಒಂದೇ ದಿನ 10,000 ರೂ. ಇಳಿಕೆ

Adani Total Gas SHareಷೇರು ಮಾರುಕಟ್ಟೆ ಕುಸಿದರೂ, ನಷ್ಟ ಕಾಣದ ಷೇರು ಇದು; ಯಾವುದು ಗೊತ್ತಾ?

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?



Click it and Unblock the Notifications