ದೆಹಲಿ ಬಜೆಟ್ ಸೆಷನ್ ಅನ್ನು ಮಾರ್ಚ್ 17ರಂದು ಮಂಡನೆ ಮಾಡಲಾಗುತ್ತದೆ, ಇದಕ್ಕೂ ಮುನ್ನವೇ ದೆಹಲಿ ಸರ್ಕಾರದ ಎಂಎಲ್‌ಎಗಳ ಮತ್ತು ಸಚಿವರ ವೇತನವನ್ನು, ಭತ್ಯೆಯನ್ನು ಶೇಕಡ 66ರಷ್ಟು ಏರಿಸಿದೆ. ದೆಹಲಿಯಲ ಕಾನೂನು ಇಲಾಖೆಯ ನೋಟಿಫಿಕೇಷನ್ ಪ್ರಕಾರ ಎಂಎಲ್‌ಎಗಳ ವೇತನ ಏರಿಕೆಯ ಬಳಿಕ ಪ್ರತಿ ತಿಂಗಳು 90,000 ರೂಪಾಯಿ ಆಗಿರಲಿದೆ. ಇದಕ್ಕೂ ಮುನ್ನ ವೇತನವು 54,000 ರೂಪಾಯಿ ಆಗಿದೆ.
ನೋಟಿಫಿಕೇಷನ್ ಪ್ರಕಾರ ಮುಖ್ಯಮಂತ್ರಿ, ಸಚಿವರುಗಳು, ಸ್ಪೀಕರ್‌ಗಳು, ಡೆಪ್ಯೂಟಿ ಸ್ಪೀಕರ್‌ಗಳು, ವಿಪಕ್ಷ ನಾಯಕರಿಗೆ ಇರುವ ಮಾಸಿಕ ವೇತನವು ಪ್ರಸ್ತುತ ಇರುವ 72,000 ರೂಪಾಯಿಯಿಂದ 1,70,000 ರೂಪಾಯಿಗೆ ತಲುಪಿದೆ. ಇನ್ನು ಶಾಸಕರುಗಳ ಮೂಲ ವೇತನವನ್ನು ಮಾಸಿಕ 12,000 ರೂಪಾಯಿಯಿಂದ 30,000 ರೂಪಾಯಿಗೆ ಏರಿಸಿದೆ. ಸಚಿವರ ವೇತನವು ಮಾಸಿಕವಾಗಿ 20,000 ರೂಪಾಯಿಯಿಂದ 60,000 ರೂಪಾಯಿಗೆ ಏರಿಕೆಯಾಗಿದೆ.

ದೈನಂದಿನ ಭತ್ಯೆಯು 1,000 ರೂಪಾಯಿಯಿಂದ 1,500 ರೂಪಾಯಿಗೆ ಹೆಚ್ಚಳವಾಗಿದೆ. 2022ರ ಜುಲೈನಲ್ಲಿ ದೆಹಲಿ ಸಂಸತ್ತಿನಲ್ಲಿ ಎಂಎಲ್‌ಎಗಳು ಮತ್ತು ಸಚಿವರ ವೇತನ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿತ್ತು. ಇದಕ್ಕೆ ರಾಷ್ಟ್ರಪತಿಗಳ ಅನುಮೋದನೆಯನ್ನು ಪಡೆದ ಬಳಿಕ ವೇತನ ಹೆಚ್ಚಳವನ್ನು ಘೋಷಿಸಲಾಗಿದೆ. ರಾಷ್ಟ್ರಪತಿ ಅನುಮೋದನೆ ಮಾಡಿದ ದಿನವಾದ ಫೆಬ್ರವರಿ 14ರಿಂದ ಈ ನೂತನ ವೇತನ ಜಾರಿಗೆ ಬರಲಿದೆ.
ಇತರೆ ರಾಜ್ಯಗಳಲ್ಲಿ ಎಂಎಲ್‌ಎಗಳ ವೇತನ ಎಷ್ಟಿದೆ ನೋಡಿ
ತೆಲಂಗಾಣ: ಮಾಸಿಕ ವೇತನ 50,000 ರೂಪಾಯಿ
ಉತ್ತರ ಪ್ರದೇಶ: ಮಾಸಿಕ ವೇತನ 50,000 ರೂಪಾಯಿ
ಮಹಾರಾಷ್ಟ್ರ: ಮಾಸಿಕ ವೇತನ 50,000 ರೂಪಾಯಿ
ಆಂಧ್ರ ಪ್ರದೇಶ: ಮಾಸಿಕ ವೇತನ 50,000 ರೂಪಾಯಿ
ಗುಜರಾತ್: ಮಾಸಿಕ ವೇತನ 50,000 ರೂಪಾಯಿ
ಹಿಮಾಚಲ ಪ್ರದೇಶ: ಮಾಸಿಕ ವೇತನ 50,000 ರೂಪಾಯಿ
ಹರಿಯಾಣ: ಮಾಸಿಕ ವೇತನ 50,000 ರೂಪಾಯಿ
ಜಾರ್ಖಾಂಡ್: ಮಾಸಿಕ ವೇತನ 50,000 ರೂಪಾಯಿ
ಮಧ್ಯಪ್ರದೇಶ: ಮಾಸಿಕ ವೇತನ 50,000 ರೂಪಾಯಿ
ಛತ್ತೀಸ್‌ಗಢ: ಮಾಸಿಕ ವೇತನ 50,000 ರೂಪಾಯಿ
ಪಂಜಾಬ್: ಮಾಸಿಕ ವೇತನ 50,000 ರೂಪಾಯಿ
ಗೋವಾ: ಮಾಸಿಕ ವೇತನ 50,000 ರೂಪಾಯಿ
ಬಿಹಾರ: ಮಾಸಿಕ ವೇತನ 50,000 ರೂಪಾಯಿ
ತಮಿಳುನಾಡು: ಮಾಸಿಕ ವೇತನ 50,000 ರೂಪಾಯಿ
ಕರ್ನಾಟಕ: ಮಾಸಿಕ ವೇತನ 50,000 ರೂಪಾಯಿ
ಸಿಕ್ಕಿಂ: ಮಾಸಿಕ ವೇತನ 50,000 ರೂಪಾಯಿ
ಕೇರಳ: ಮಾಸಿಕ ವೇತನ 50,000 ರೂಪಾಯಿ
ರಾಜಸ್ಥಾನ: ಮಾಸಿಕ ವೇತನ 50,000 ರೂಪಾಯಿ
ಉತ್ತರಾಖಂಡ: ಮಾಸಿಕ ವೇತನ 50,000 ರೂಪಾಯಿ
ಅಸ್ಸಾಂ: ಮಾಸಿಕ ವೇತನ 50,000 ರೂಪಾಯಿ
ಒಡಿಶಾ: ಮಾಸಿಕ ವೇತನ 1,00,000 ರೂಪಾಯಿ
ಮೇಘಾಲಯ: ಮಾಸಿಕ ವೇತನ 50,000 ರೂಪಾಯಿ
ಅರುಣಾಚಲ ಪ್ರದೇಶ: ಮಾಸಿಕ ವೇತನ 50,000 ರೂಪಾಯಿ
ಮಣಿಪುರ: ಮಾಸಿಕ ವೇತನ 50,000 ರೂಪಾಯಿ
ಪಾಂಡಿಚೇರಿ: ಮಾಸಿಕ ವೇತನ 50,000 ರೂಪಾಯಿ
ಪಶ್ಚಿಮ ಬಂಗಾಳ: ಮಾಸಿಕ ವೇತನ 50,000 ರೂಪಾಯಿ
ಮಿಜೋರಾಂ: ಮಾಸಿಕ ವೇತನ 50,000 ರೂಪಾಯಿ
ನಾಗಲ್ಯಾಂಡ್: ಮಾಸಿಕ ವೇತನ 50,000 ರೂಪಾಯಿ
ತ್ರಿಪುರ: ಮಾಸಿಕ ವೇತನ 50,000 ರೂಪಾಯಿ


Click it and Unblock the Notifications