ಭಾರತದಲ್ಲಿ ಅನೇಕ ಬಿಲಿಯನೇರ್ ಉದ್ಯಮಿಗಳಿದ್ದು, ಇವರೆಲ್ಲರೂ ದುಬಾರಿ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ರಾಜ್ಯ ರಾಜಧಾನಿ ದೆಹಲಿಯೊಂದನ್ನೇ ತೆಗೆದುಕೊಂಡರೆ ಜಿಂದಾಲ್ ಕುಟುಂಬದ ಒಡೆತನದ ಜಿಂದಾಲ್ ಮ್ಯಾನ್ಷನ್ ದೆಹಲಿಯ ಅತ್ಯಂತ ದುಬಾರಿ ಮನೆಯಾಗಿದೆ.
ಈ ಮನೆ 150 ಕೋಟಿ ರೂಪಾಯಿಗಿಂತಲೂ ಹೆಚ್ಚು ಬೆಳೆಬಾಳುತ್ತದೆ. ಇನ್ನು ದೆಹಲಿಯಲ್ಲಿರುವ ಎರಡನೇಯ ಅತ್ಯಂತ ದುಬಾರಿ ಮನೆ ರುಯಾ ಮ್ಯಾನ್ಷನ್ ಆಗಿದ್ದು, ಈ ಮನೆ ಬಿಲಿಯನೇರ್ ಗಳಾಗಿರುವ ರುಯಾ ಸಹೋದರರ ಒಡೆತನದಲ್ಲಿದೆ.
ಶಶಿ ಮತ್ತು ರವಿ ರುಯಾ ಸಹೋದರರಾಗಿದ್ದು, ಇವರು ದೆಹಲಿಯ ಶ್ರೀಮಂತ ಕುಟುಂಬಗಳ ಹಿನ್ನಲೆಯಿಂದ ಬಂದವರಾಗಿದ್ದಾರೆ. ಸಹೋದರರಿಬ್ಬರು ಟೀಸ್ ಜನವರಿ ಮಾರ್ಗದಲ್ಲಿ ಬೃಹತ್ ಮತ್ತು ಐಷಾರಾಮಿ ರುಯಾ ಮ್ಯಾನ್ಷನ್ ನಿರ್ಮಾಣ ಮಾಡಿದ್ದಾರೆ.

'ಬ್ಯುಸಿನೆಸ್ ಇನ್‌ಸೈಡರ್' ಪ್ರಕಾರ, ದೆಹಲಿಯ ಎರಡನೇ ಅತ್ಯಂತ ದುಬಾರಿ ಮನೆಯಾಗಿರುವ ರೂಯಾ ಮಹಲು 92 ಕೋಟಿ ರೂಪಾಯಿ ಬೆಳೆಬಾಳುತ್ತದೆ. ರೂಯಾ ಮ್ಯಾನ್ಷನ್ ರೂಯಾ ಸಹೋದರರ ಒಡೆತನದ ಅತ್ಯಂತ ದುಬಾರಿ ಮತ್ತು ಭವ್ಯ ಬಂಗಲೆಗಳಲ್ಲಿ ಒಂದಾಗಿದೆ.
ಹೆಸರಿಗೆ ತಕ್ಕಂತೆ ಇದು ಐಷಾರಾಮಿ ಮಹಲಾಗಿದ್ದು, ಇದು ಸುಮಾರು 2.2 ಎಕರೆ ಭೂಮಿಯ ವಿಸ್ತೀರ್ಣದಲ್ಲಿದ್ದು ಇದರ ಪ್ರವೇಶ ದ್ವಾರ ತೆರೆದಾಗ ಹಸಿರು ಹುಲ್ಲುಹಾಸು ಮತ್ತು ಬೃಹತ್ ಈಜುಕೊಳ ಕಾಣಸಿಗುತ್ತದೆ. ಶಶಿ ಮತ್ತು ರವಿ ರುಯಾ ಸಹೋದರರ ರುಯಾ ಮಹಲು ರಾಯಲ್ ವೈಟ್ ಸ್ಟೋನ್ ಮತ್ತು ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿದೆ.
ಈ ದುಬಾರಿ ಮನೆಯ ಎತ್ತರದ ಕಂಬಗಳು ಮತ್ತು ತೆರೆದ ಅಂಗಣವೂ ವಸಾಹತುಶಾಹಿ ಕಾಲ ಚಿತ್ರಣವನ್ನು ನೆನಪಿಸುತ್ತದೆ. ಮನೆಯ ಮುಖ್ಯ ದ್ವಾರದ ಹೊರಗೆ ಮತ್ತೊಂದು ಈಜುಕೊಳವಿದ್ದು, ಹಳದಿ ಮತ್ತು ಚಿನ್ನದ ದೀಪಗಳೊಂದಿಗೆ ಬಿಳಿ ಹೊರಂಗಣದೊಂದಿಗೆ ಹೊಳೆಯುತ್ತವೆ.
ಇಂತಹ ಅದ್ದೂರಿ ಮನೆ ಹೊಂದಿದ್ದರೂ ರೂಯಾ ಸಹೋದರರ ಒಡೆತನದಲ್ಲಿರುವ ಮನೆಗಳ ಪೈಕಿ ಇದು ಅತ್ಯಂತ ದುಬಾರಿ ಮನೆಯಲ್ಲ ಯಾಕೆಂದರೆ ಇತ್ತೀಚಿನ ವರದಿಗಳ ಪ್ರಕಾರ, ವ್ಯಾಪಾರ ಉದ್ಯಮಿ ರವಿ ರುಯಾ ಅವರು ಲಂಡನ್‌ನಲ್ಲಿ 1188 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಐಷಾರಾಮಿ ಪ್ಯಾಲೆಸ್ ನ ಖರೀದಿ ಮಾಡಿದ್ದಾರೆ.
ರವಿ ರುಯಾ ಮತ್ತು ಶಶಿ ರುಯಾ ಅವರು ಎಸ್ಸಾರ್ ಗ್ರೂಪ್ (Essar Group) ಅನ್ನು ಮುನ್ನಡೆಸುತ್ತಿದ್ದಾರೆ. ಇದು ಇನ್ಫ್ರಾಸ್ಟ್ರಕ್ಚರ್, ಮೆಟಲ್ಸ್, ತೈಲ ಸಂಸ್ಕರಣಾಗಾರಗಳು, ಗಣಿಗಾರಿಕೆಯಲ್ಲಿ ಆಸಕ್ತಿ ಹೊಂದಿರುವ ಬೃಹತ್ ಸಮೂಹವಾಗಿದೆ. ಇತ್ತೀಚೆಗೆ, ಅವರ ಕಂಪನಿ ಎಸ್ಸಾರ್ ಸ್ಟೀಲ್ ಅನ್ನು ಲಕ್ಷ್ಮಿ ಮಿತ್ತಲ್ ಅವರ ಸ್ಟೀಲ್ ಕಂಪನಿ ಖರೀದಿಸಿದೆ.
ಫೋರ್ಬ್ಸ್ ಪ್ರಕಾರ, ಶಶಿ ಮತ್ತು ರವಿ ರುಯಾ ಅವರ ಎಸ್ಸಾರ್ ಗ್ರೂಪ್ ಪ್ರಬಲ ಮತ್ತು ಲಾಭದಾಯಕವಾಗಿ ಮುಂದುವರಿಯುತ್ತಿದ್ದು, ಇಬ್ಬರೂ ಸಹೋದರರ ಒಟ್ಟು ನಿವ್ವಳ ಮೌಲ್ಯವು ಈಗ 2.2 ಬಿಲಿಯನ್ ಯುಎಸ್ ಡಾಲರ್ (18,185 ಕೋಟಿ ರೂಪಾಯಿ) ಮೀರಿದೆ.


Click it and Unblock the Notifications