Digital Life Certificate: ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಅನ್ನು ಆನ್‌ಲೈನ್‌ ಮೂಲಕ ಪಡೆಯುವುದು ಹೇಗೆ?

ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಅನ್ನು ಜೀವನ್‌ ಪ್ರಮಾಣ ಪತ್ರವೆಂದು ಕರೆಯಲಾಗುತ್ತಿದ್ದು, ಇದೊಂದು ಪಿಂಚಣಿದಾರರಿಗೆ ಸಂಬಂಧಿಸಿದ ಪ್ರಮುಖ ದಾಖಲೆಯಾಗಿದೆ. ಪ್ರತಿ ವರ್ಷವೂ ಬ್ಯಾಂಕ್‌, ಅಂಚೆ ಕಚೇರಿಗಳಿಗೆ ತಿಂಗಳ ಪಿಂಚಣಿ ಪಡೆಯುವುದಕ್ಕೆ ಸಲ್ಲಿಸಬೇಕಾದ ದಾಖಲೆಯಾಗಿರುತ್ತದೆ. ಈ ದಾಖಲೆಗಳನ್ನು ಆನ್‌ಲೈನ್‌ ಹಾಗೂ ಆಫ್‌ಲೈನ್‌ ಮೂಲಕ ಸಲ್ಲಿಸಬಹುದು.

ಜೀವನ್‌ ಪ್ರಮಾಣ ಪತ್ರ ಅಂದರೆ ಏನು?: ಜೀವನ್‌ ಪ್ರಮಾಣ ಪತ್ರ ಎನ್ನುವುದು ಪಿಂಚಣಿದಾರರು ಪಿಂಚಣಿ ಪಡೆಯಲು ಜೀವಂತವಾಗಿದ್ದಾರೆ ಎನ್ನುವುದನ್ನು ದೃಢೀಕರಿಸುವುದಕ್ಕೆ ಪಿಂಚಣಿ ವಿತರಣಾ ಅಧಿಕಾರಿಗಳಿಗೆ ಅಥವಾ ಸಂಸ್ಥೆಗೆ ಸಲ್ಲಿಸುವ ಒಂದು ದಾಖಲೆಯಾಗಿದೆ.

 ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಅನ್ನು ಆನ್‌ಲೈನ್‌ ಮೂಲಕ ಪಡೆಯಿರಿ

ಪ್ರತಿ ವರ್ಷವೂ ಪಿಂಚಣಿದಾರರು ಕಡ್ಡಾಯವಾಗಿ ಸಲ್ಲಿಸಬೇಕಾದ ಪ್ರಮಾಣ ಪತ್ರವಾಗಿದ್ದು, ನವೆಂಬರ್‌ ತಿಂಗಳಿನೊಳಗೆ ಸಲ್ಲಿಸುವುದಕ್ಕೆ ಗಡುವು ನಿಗದಿಪಡಿಸಲಾಗಿದೆ. ಒಂದುವೇಳೆ ಅಷ್ಟರೊಳಗೆ ಈ ಪ್ರಮಾಣ ಪತ್ರವನ್ನು ಸಲ್ಲಿಸದಿದ್ದರೆ ಪಿಂಚಣಿ ವಿತರಣಾ ಸಂಸ್ಥೆಯು ಪಿಂಚಣಿ ಮೊತ್ತವನ್ನು ಬಿಡುಗಡೆ ಮಾಡುವುದಿಲ್ಲ.

ಬಯೋಮೆಟ್ರಿಕ್ಸ್‌ ಮೂಲಕ ಜೀವನ್‌ ಪ್ರಮಾಣಪತ್ರ ಪಡೆಯುವುದು ಹೇಗೆ?

ಸಾಫ್ಟ್‌ವೇರ್‌ ಪ್ರೋಗ್ರಾಮ್‌ ಅನ್ನು ಬಳಸಿಕೊಂಡು ಪಿಂಚಣಿದಾರರು ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಅನ್ನು ಸೃಷ್ಟಿಸಬಹುದು. ಇದರಡಿ ಆಧಾರ್‌ ಕಾರ್ಡ್‌ ಮೂಲಕ ಸುರಕ್ಷಿತ ಬಯೋಮೆಟ್ರಿಕ್‌ ದೃಢೀಕರಣವನ್ನು ಮಾಡಿಸಿಕೊಳ್ಳಬಹುದು. ಆನ್‌ಲೈನ್‌ ಮೂಲಕ ಜೀವನ್‌ ಪ್ರಮಾಣ ಪತ್ರವನ್ನು ಪಡೆಯುವುದು ಹಾಗೂ ಸಲ್ಲಿಸುವ ಹಂತಗಳು ಈ ರೀತಿ ಇವೆ-

- ಮೊದಲು ಗೂಗಲ್‌ ಪ್ಲೇಸ್ಟೋರ್‌ ಅಥವಾ ಐಒಎಸ್‌ ಸ್ಟೋರ್‌ನಿಂದ ಅಪ್ಲಿಕೇಷನ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕು.
- ನಂತರ ನೋಂದಣಿ ಮಾಡಿಕೊಳ್ಳುವ ಮೂಲಕ ಲಾಗಿನ್‌ ವಿವರಗಳನ್ನು ಭರ್ತಿ ಮಾಡಬೇಕು.
- ಮುಂದೆ ಐಡಿ ಹಾಗೂ ಪಾಸ್‌ವರ್ಡ್‌ ಬಳಸಿಕೊಂಡು ಆಪ್‌ಗೆ ಲಾಗಿನ್‌ ಆಗಬೇಕು.
- ನಂತರ ಡ್ಯಾಶ್‌ಬೋರ್ಡ್‌ನಲ್ಲಿ ಜೀವನ್‌ ಪ್ರಮಾಣ ರಚನೆ ಆಪ್ಶನ್‌ನ್ನು ನೋಡಬಹುದು. ಅಲ್ಲಿ ಕ್ಲಿಕ್‌ ಮಾಡಿ ಆಧಾರ್‌ ಕಾರ್ಡ್‌ ನಂಬರ್‌, ಮೊಬೈಲ್‌ ನಂಬರ್‌ ಮತ್ತಿತರ ಮಾಹಿತಿಯನ್ನು ಭರ್ತಿ ಮಾಡಬೇಕು.
- ಇಲ್ಲಿ ಒಟಿಪಿ ಜನರೇಟ್‌ ಆಯ್ಕೆ ಕ್ಲಿಕ್‌ ಮಾಡಿ ಒನ್‌-ಟೈಮ್‌ ಪಾಸ್‌ವರ್ಡ್‌ ಪಡೆದುಕೊಳ್ಳಬೇಕು.
- ಒಟಿಪಿ ದೃಢೀಕರಣ ಪಡೆದುಕೊಂಡ ಬಳಿಕ ನಿಮ್ಮ ಪಿಪಿಒ ನಂಬರ್‌ ಸೇರಿದಂತೆ ಅಗತ್ಯ ಮಾಹಿತಿ ದಾಖಲಿಸಬೇಕು.
- ಇತರೆ ಅಗತ್ಯ ಮಾಹಿತಿ ನಮೂದಿಸಿದ ಬಳಿಕ, ಆಧಾರ್‌ ಕಾರ್ಡ್‌ ನಂಬರ್‌ ಮೂಲಕ ಬೆರಳಚ್ಚು ಅಥವಾ ದೃಷ್ಟಿ ದೃಢೀಕರಣವನ್ನು ಮಾಡಿಸಿಕೊಳ್ಳಬೇಕು.
- ಈ ಹಂತಗಳನ್ನು ಪೂರ್ಣಗೊಳಿಸಿದ ಕೂಡಲೇ ಜೀವನ್‌ ಪ್ರಮಾಣ ಪತ್ರವನ್ನು ಜನರೇಟ್‌ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಅದನ್ನು ಖಚಿತಪಡಿಸುವ ಇ-ಮೇಲ್‌ ಅಥವಾ ಸಂದೇಶ ಬರುತ್ತದೆ.

ಆನ್‌ಲೈನ್‌ ಮೂಲಕ ಜೀವಿತ ಪ್ರಮಾಣ ಪತ್ರ ಸಲ್ಲಿಸುವ ವಿಧಾನ:

- ಮೊದಲು ಆಧಾರ್‌ ಫೇಸ್‌ ಐಡಿ ಆಪ್‌ ಅನ್ನು ಗೂಗಲ್‌ ಅಥವಾ ಐಒಎಸ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಬೇಕು.
- ನಂತರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಧಿಕೃತ ಬಯೋಮೆಟ್ರಿಕ್ಸ್‌ ಅಪ್ಲಿಕೇಷನ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು.
- ಸರಿಯಾದ ದೃಢೀಕರಣದ ಬಳಿಕ ಆಪರೇಟರ್‌ಗಳ ಫೇಸ್‌ ಸ್ಕ್ಯಾನ್‌ ಮಾಡುವ ಜತೆಗೆ ನಿಗದಿತ ಮಾಹಿತಿಯನ್ನು ಭರ್ತಿ ಮಾಡಬೇಕು.
- ನೀವು ನಿಮ್ಮ ಲೈವ್‌ ಫೋಟೊವನ್ನು ಸೆರೆ ಹಿಡಿದು ಸಲ್ಲಿಸಬೇಕು.
- ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನಿಮ್ಮ ಮೊಬೈಲ್‌ಗೆ ಲಿಂಕ್‌ವೊಂದನ್ನು ಪಡೆಯುತ್ತೀರಿ. ಅದನ್ನು ಡೌನ್‌ಲೋಡ್‌ ಮಾಡಿಕೊಂಡಾಗ ಡಿಜಿಟಲ್‌ ಲೈಫ್‌ ಸರ್ಟಿಫಿಕೇಟ್‌ ಪಡೆಯುತ್ತೀರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+