Dubai's expensive house: ದುಬೈನ ಅತೀ ದುಬಾರಿ ಮನೆ ಮಾರಾಟಕ್ಕೆ, ಖರೀದಿದಾರರ ಪಟ್ಟಿಯಲ್ಲಿ ಭಾರತೀಯರು

ಭಾರತೀಯರು ಹೆಚ್ಚಾಗಿ ಉದ್ಯೋಗವನ್ನು ಹುಡುಕಿಕೊಂಡು ಹೋಗಿ ನೆಲೆಯಾಗಿರುವ ದೇಶ ದುಬೈ ಆಗಿದೆ. ದುಬೈನಲ್ಲಿ ಐಷಾರಾಮಿ ರಿಯಲ್‌ ಎಸ್ಟೇಟ್‌ಗಳಿಗೆ ಅಧಿಕ ಬೇಡಿಕೆಯಿದೆ. ಈಗ ದುಬೈನ ಅತೀ ದುಬಾರಿ ಮನೆಯು ಮಾರಾಟಕ್ಕಿದೆ. ವರ್ಸೈಲ್ಸ್‌ನ ಅರಮನೆಯು ಈಗ 750 ಮಿಲಿಯನ್ ದಿರ್ಹಮ್‌ಗಳಿಗೆ (204 ಮಿಲಿಯನ್ ಡಾಲರ್ ಅಥವಾ ರೂ 1,600 ಕೋಟಿ ರೂಪಾಯಿಗೆ) ಮಾರಾಟಕ್ಕಿದೆ. ಇದು ದುಬೈನ ಅತೀ ದುಬಾರಿ ಮನೆಯಾಗಿದೆ.

ಈ ದುಬಾರಿ ಮನೆಯು ಕೇವಲ ಐದು ಮಲಗುವ ಕೋಣೆಗಳನ್ನು ಹೊಂದಿದೆ. ಆದರೂ ಸಹ ಅಸ್ಕರ್ ಎಮಿರೇಟ್ಸ್ ಹಿಲ್ಸ್ ನೆರೆಹೊರೆಯಲ್ಲಿರುವ ಮನೆಯು 60,000 ಸ್ಕ್ವೇರ್‌ ಫೀಟ್ ಇಂಟಿರಿಯರ್ ಜಾಗವನ್ನು ಹೊಂದಿದೆ. ಮಾಸ್ಟರ್ ಬೆಡ್‌ರೂಮ್ ಇಡೀ ಮನೆಯ ಅಧಿಕ ಜಾಗವನ್ಮು ಆವರಿಸಿದೆ. ಇದು ಸುಮಾರುನ 4,000 ಸ್ಕ್ವೇರ್‌ ಫೀಟ್‌ಗೂ ಅಧಿಕ ವಿಸ್ತಾರವಾಗಿದೆ. ಮನರಂಜನೆ ಮತ್ತು ಊಟಕ್ಕೆ ಸ್ಥಳಗಳಿವೆ. ಈ ದುಬಾರಿ ಮನೆಯ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ.....

 ದುಬೈನ ದುಬಾರಿ ಮನೆ ಮಾರಾಟಕ್ಕೆ, ಖರೀದಿದಾರರ ಪಟ್ಟಿಯಲ್ಲಿ ಭಾರತೀಯರು

ದುಬೈನ ಅತೀ ದುಬಾರಿ ಮನೆ ಹೇಗಿದೆ?

15-ಕಾರು ಗ್ಯಾರೇಜ್‌ಗಳು, 19 ವಿಶ್ರಾಂತಿ ಕೊಠಡಿಗಳು, ಒಳಾಂಗಣ ಮತ್ತು ಹೊರಾಂಗಣ ಪೂಲ್‌ಗಳು, ಎರಡು ಛಾವಣಿಗಳು, 80,000 ಲೀಟರ್ (21,000 ಗ್ಯಾಲನ್) ಕೋರಲ್ ರೀಫ್ ಅಕ್ವೇರಿಯಂ, ವಿದ್ಯುತ್ ಸಬ್‌ಸ್ಟೇಷನ್ ಮತ್ತು ತುರ್ತು ಕೋಣೆಗಳು ಮೊದಲಾದವುಗಳು ಈ ಮನೆಯಲ್ಲಿದೆ. ಇದು ಗಾಲ್ಫ್ ಕೋರ್ಸ್‌ ಅನ್ನು ನೋಡಲು ಸಾಧ್ಯವಾಗುವ 70,000 ಚದರ ಅಡಿ ಆಸ್ತಿಯ ನೆರೆಹೊರೆಯನ್ನು ಹೊಂದಿದೆ.

ಡೆವಲಪರ್ ಸುಮಾರು 6,000 ಚದರ ಅಡಿ ವಿಸ್ತೀರ್ಣದ ಹತ್ತಿರದ ಆಸ್ತಿಯನ್ನು ಮಾರಾಟ ಮಾಡಬಹುದು ಅಥವಾ ಬಾಡಿಗೆಗೆ ನೀಡಬಹುದು, ಅದನ್ನು ಟೆನಿಸ್ ಅಥವಾ ಪ್ಯಾಡೆಲ್ ಬಾಲ್ ಕೋರ್ಟ್‌ಗೆ ಬಳಸುವ ಸಾಧ್ಯತೆಯಿದೆ. ಈ ಮನೆ ಕಟ್ಟಿಸಿದವರ ವಿಶ್ರಾಂತಿ ಕೊಠಡಿಗಳನ್ನು ಮುಖ್ಯ ಕೋಣೆಗಳಾಗಿದೆ.

ಪ್ರತಿ ಅತಿಥಿ ಕೊಠಡಿಯು ಸುಮಾರು 1,000 ಚದರ ಅಡಿಗಳನ್ನು ಹೊಂದಿದೆ. ಎರಡನೇ ಅತಿ ದೊಡ್ಡ ಮಲಗುವ ಕೋಣೆ 2,500 ಚದರ ಅಡಿಗಳನ್ನು ಹೊಂದಿದೆ. ಅತಿಥಿ ಕೊಠಡಿಗಳಲ್ಲಿ ಒಂದನ್ನು ಈಗ ವೈನ್ ಸೆಲ್ಲಾರ್ ಆಗಿ ಪರಿವರ್ತನೆ ಮಾಡಲಾಗಿದೆ. ಎರಡು ಬ್ಯಾಂಕ್ ವಾಲ್ಟ್‌ಗಳು, 25 ಜನರಿಗೆ ಸಾಕಾಗುವಂತಹ 12 ಸಿಬ್ಬಂದಿ ಕೊಠಡಿಗಳು ಇದೆ.

ಅದ್ಭುತವಾದ ಮಾರ್ಬಲ್ ಪ್ಯಾಲೇಸ್

ರಿಯಲ್ ಎಸ್ಟೇಟ್ ಏಜೆಂಟ್‌ಗಳು ಈ ಮನೆಯನ್ನು "ಮಾರ್ಬಲ್ ಪ್ಯಾಲೇಸ್" ಎಂದು ಕರೆಯುತ್ತಾರೆ. ಈ ಕಟ್ಟಡವನ್ನು ಇಟಾಲಿಯನ್ ಮಾರ್ಬಲ್ ಕಲ್ಲಿನಿಂದ ನಿರ್ಮಿಸಲಾಗಿದ್ದು ಇದರ ಬೆಲೆ 80 ರಿಂದ 100 ಮಿಲಿಯನ್ ದಿರ್ಹಮ್‌ಗಳಾಗಿದೆ. ಆಸ್ತಿಯನ್ನು ಲಕ್ಸಾಬಿಟಾಟ್ ಸೋಥೆಬೈಸ್ ಇಂಟರ್‌ನ್ಯಾಷನಲ್ ರಿಯಾಲ್ಟಿ ಮಾರಾಟ ಮಾಡುತ್ತಿದೆ. ಸುಮಾರು 12 ವರ್ಷಗಳ ಕಾಲವು ಇದರ ನಿರ್ಮಾಣಕ್ಕೆ ತೆಗೆದುಕೊಂಡಿದೆ. 2018 ರಲ್ಲಿ ಪೂರ್ಣಗೊಂಡಿದೆ.

ಮಾರ್ಬಲ್ ಪ್ಯಾಲೇಸ್ ಎಮಿರೇಟ್ಸ್ ಹಿಲ್ಸ್‌ನಲ್ಲಿರುವ ಹೋಲಿಸಬಹುದಾದ ನಿವಾಸಗಳಿಗಿಂತ ಪ್ರತಿ ಚದರ ಅಡಿಗೆ ಎರಡು ಪಟ್ಟು ಹೆಚ್ಚು ದುಬಾರಿಯಾಗಿದೆ. ಇದರ ಪ್ರತಿ ಚದರ ಅಡಿ 12,500 ದಿರ್ಹಮ್‌ಗಳಿಗೆ ಮಾರಾಟವಾಗಿದೆ. ದುಬೈ ಆಸ್ತಿ ದಾಖಲೆಗಳ ಪ್ರಕಾರ, ಈ ಪ್ರದೇಶದಲ್ಲಿ ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಮನೆ 210 ಮಿಲಿಯನ್ ದಿರ್ಹಮ್‌ಗಳಿಗಾಗಿದೆ. ಆಗಸ್ಟ್ 2022 ರಲ್ಲಿ ಈ ಡೀಲ್ ನಡೆದಿದ್ದು ಪ್ರತಿ ಚದರ ಅಡಿಗೆ 5,614 ದಿರ್ಹಮ್‌ಗಳಿಗಾಗಿದೆ.

ಸಂಭಾವ್ಯ ಖರೀದಿದಾರರು

ಬ್ರೋಕರ್ ಕುನಾಲ್ ಸಿಂಗ್ ಅವರ ಅಂದಾಜಿನ ಪ್ರಕಾರ ಕೇವಲ ಐದರಿಂದ ಹತ್ತು ನಿರೀಕ್ಷಿತ ಖರೀದಿದಾರರು ಇದ್ದಾರೆ. ಈ ಪೈಕಿ ಹಲವಾರು ಮಂದಿ ಶ್ರೀಮಂತರು ಆಗಿದ್ದು, ಮಾರ್ಬಲ್ ಅರಮನೆಯನ್ನು ನೋಡಿಯೇ ಖರೀದಿಗೆ ಮುಂದಾಗಿದ್ದಾರೆ. ಸಿಂಗ್ ಪ್ರಕಾರ, ಕಳೆದ ಮೂರು ವಾರಗಳಲ್ಲಿ ಕೇವಲ ಇಬ್ಬರು ವ್ಯಕ್ತಿಗಳು ಮನೆಯನ್ನು ನೋಡಿದ್ದಾರೆ. ಈ ಪೈಕಿ ಒಬ್ಬರು ರಷ್ಯಾದವರಾಗಿದ್ದು, ಮತ್ತೋರ್ವರು ಭಾರತೀಯರಾಗಿದ್ದದಾರೆ. ಎಮಿರೇಟ್ಸ್ ಹಿಲ್ಸ್‌ನಲ್ಲಿ ಈಗಾಗಲೇ ಮೂರು ನಿವಾಸಗಳನ್ನು ಹೊಂದಿರುವ ಭಾರತೀಯರೋರ್ವರು ಖರೀದಿಗೆ ಮುಂದಾಗಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+