ಮನೆ ಕಟ್ಟಿ ನೋಡು, ಒಂದು ಮದುವೆ ಮಾಡಿ ನೋಡು ಎಂಬ ಗಾದೆಯೇ ಇದೆ. ಮದುವೆ ಎನ್ನುವುದು ಗಂಡು-ಹೆಣ್ಣು ಬದುಕಿನಲ್ಲಿ ಅತ್ಯಂತ ಪ್ರಮುಖ ಘಟ್ಟ. ಬಹುತೇಕ ಜನರಿಗೆ ಅದ್ಧೂರಿಯಾಗಿ ಮದುವೆಯಾಗಬೇಕು ಅನ್ನೋದು ಕನಸಾಗಿರುತ್ತದೆ. ಆದರೆ ಈ ಕನಸು ನನಸು ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಕೈ ತುಂಬ ಹಣವಿದ್ದರೆ ಮಾತ್ರ ಅದ್ಧೂರಿ ಮದುವೆ ಸಾಧ್ಯ.
ಮದುವೆ ಅಂದಮೇಲೆ ಖರ್ಚು ಕೂಡ ಹೆಚ್ಚಾಗಿಯೇ ಇರುತ್ತದೆ. ಆದರೆ ಮದುವೆ ಹಣ ಹೊಂದಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹೇಗೆ ಹಣವನ್ನು ಹೊಂದಿಸುವುದು, ಯಾರು ಸಾಲ ಕೊಡುತ್ತಾರೆ ಎಂಬೆಲ್ಲ ಪ್ರಶ್ನೆಗಳು ಎದುರಾಗುತ್ತವೆ. ಇದಕ್ಕೆಲ್ಲಾ ಉತ್ತರ ಆನ್‌ಲೈನ್‌ನಲ್ಲಿ ಸಿಗುತ್ತದೆ.
24 ಗಂಟೆಗಳಲ್ಲಿ 25 ಲಕ್ಷದವರೆಗೂ ಸಾಲ
ಮದುವೆಯ ಖರ್ಚಿಗೆ ಹಣವನ್ನು ಹೇಗಪ್ಪಾ ಸಾಲ ಪಡೆಯುವುದು ಎಂದು ಯೋಚಿಸುವ ಅಗತ್ಯವಿಲ್ಲ. ಅಂತವರ ಪಾಲಿಗೆ ವರದಾನವಾಗಿದೆ ಈ ವೈಯಕ್ತಿಕ ಸಾಲ.
24 ಗಂಟೆಗಳಲ್ಲಿ 25 ಲಕ್ಷ ರುಪಾಯಿವರೆಗೂ ಮದುವೆ ಸಾಲ ನೀಡುವ ವ್ಯವಸ್ಥೆ ಬಜಾಜ್ ಫಿನ್ಸರ್ವ್ ನಲ್ಲಿದೆ. ಸರಳ ಮತ್ತು ಶೀಘ್ರವಾಗಿ ಕೈತುಂಬ ಹಣ ಸಿಗುವ ವ್ಯವಸ್ತೆ ಇದಾಗಿದೆ.
EMI ಕಂತುಗಳ ಮೂಲಕ ಸಾಲ ಮರುಪಾವತಿ ವ್ಯವಸ್ಥೆ
ಅದ್ದೂರಿಯಾಗಿ ಮದುವೆಯಾಗಬೇಕು ಎಂದು ಬಯಸುವವರಿಗೆ ಬಜಾಜ್ ಫಿನ್ಸರ್ವ್ ವೈಯಕ್ತಿಕ ಸಾಲದಡಿ ಮದುವೆಗೆ 25 ಲಕ್ಷ ರುಪಾಯಿವರೆಗೂ ಸಾಲ ನೀಡುತ್ತದೆ.
ದೊಡ್ಡ ಮಟ್ಟದ ಸಾಲವನ್ನು ಒಂದೇ ಸಮಯಕ್ಕೆ ಪಡೆದ ಮಾತ್ರಕ್ಕೆ ಒಟ್ಟಿಗೆ ತೀರಿಸಬೇಕಾಗಿಲ್ಲ. ನೀವು ಪಡೆದ ಸಾಲವನ್ನು ತಿಂಗಳ EMI ಕಂತುಗಳ ಮೂಲಕ ಹಿಂತಿರುಗಿಸಬೇಕಿದೆ.
ಗರಿಷ್ಟ 60 ತಿಂಗಳು ಕಾಲಾವಕಾಶ
ನೀವು ಪಡೆದ ಸಾಲವನ್ನು ಗರಿಷ್ಟ 60 ತಿಂಗಳುವರೆಗೂ ತೀರಿಸುವ ಅವಕಾಶ ಬಜಾಜ್ ಫಿನ್ಸರ್ವ್ ನಲ್ಲಿದೆ. ನೀವು ಪಡೆದ ಸಾಲದ ಮೊತ್ತದ ಆಧಾರದ ಮೇಲೆ ತಿಂಗಳ EMI ನಿರ್ಧಾರವಾಗುತ್ತದೆ.
ಪಡೆದ ಸಾಲ ಹಿಂದಿರುಗಿಸಲು ಗರಿಷ್ಟ 60 ತಿಂಗಳು ಅಂದರೆ 5 ವರ್ಷಗಳ ಕಾಲಾವಕಾಶ ಇಲ್ಲಿದೆ. ಸಾಲದ ಮೇಲಿನ ಬಡ್ಡಿ ದರ ಶೇಕಡಾ 12.99 ರಿಂದ ಆರಂಭಗೊಳ್ಳುವುದು. ಮತ್ತು ಪ್ರಕ್ರಿಯೆ ಶುಲ್ಕ ಗರಿಷ್ಟ 4.1% ಆಗಿದೆ.
ಸಾಲ ಪಡೆಯಲು ಅರ್ಹತೆ ಮತ್ತು ದಾಖಲೆಗಳು
ಯಾವುದೇ ಅರ್ಹ ನಗರಗಳಲ್ಲಿ ನೀವು ಸಂಬಳ ಪಡೆಯುವ ವೃತ್ತಿಪರರಾಗಿದ್ದರೆ ನೀವು ಮದುವೆಗಾಗಿ ವೈಯಕ್ತಿಕ ಸಾಲಕ್ಕೆ ಅರ್ಜಿ ಹಾಕಬಹುದು. ಕಳೆದ 2 ತಿಂಗಳ ಸಂಬಳದ ಚೀಟಿ ಜೊತೆಗೆ ನಿಮಗೆ ಸಂಬಳ ಬರುವ ಬ್ಯಾಂಕ್ ಅಕೌಂಟ್‌ನ ಕಳೆದ 3 ತಿಂಗಳ ಸ್ಟೇಟ್‌ಮೆಂಟ್ ಸಲ್ಲಿಸಬೇಕು. ಬಳಿಕ ಅರ್ಜಿಯೊಂದಿಗೆ ಸರಳ ಹಂತಗಳನ್ನು ಪೂರೈಸಿ, ಕೆಲವು ಮೂಲಭೂತ ದಾಖಲೆಗಳನ್ನು ಪೂರೈಸುವ ಮೂಲಕ 24 ಗಂಟೆಗಳೊಳಗೆ ಸಾಲ ಪಡೆಯಬಹುದಾಗಿದೆ.



Click it and Unblock the Notifications