ನಿಮಗೆ ತುರ್ತಾಗಿ ಹಣದ ಅಗತ್ಯವಿದ್ದಾಗ ಅಥವಾ ನೀವು ದುಬಾರಿ ವಸ್ತುವನ್ನು ಖರೀದಿಸಲು ಬಯಸಿದರೆ ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಅನ್ನು ಬಳಕೆ ಮಾಡಲಾಗುತ್ತದೆ. ಆದರೆ ಹಲವಾರು ಮಂದಿಯಲ್ಲಿ ಕ್ರೆಡಿಟ್ ಕಾರ್ಡ್ ಇರುವುದಿಲ್ಲ. ಹಾಗಾದಾಗ ಏನು ಮಾಡುವುದು ಎಂಬುವುದು ಎಂದು ಈವರೆಗೆ ನೀವು ಆಲೋಚನೆ ಮಾಡಿರುವಿರಿ. ಆದರೆ ಈಗ ಬ್ಯಾಂಕ್ ನಿಮಗೆ ಡೆಬಿಟ್ ಕಾರ್ಡ್‌ನಲ್ಲೇ ಇಎಂಐ ಸೌಲಭ್ಯವನ್ನು ನೀಡುತ್ತಿದೆ.
ನಮಗೆ ಕೆಲವು ಅಗತ್ಯ ವಸ್ತುಗಳ ಖರೀದಿ ಮಾಡಬೇಕಾಗಬಹುದು. ಆದರೆ ನಮ್ಮ ಕೈಯಲ್ಲಿ ಮಾತ್ರ ಹಣವಿಲ್ಲದಿರಬಹುದು. ನಿಮ್ಮಲ್ಲಿ ಕ್ರೆಡಿಟ್ ಕಾರ್ಡ್ ಇಲ್ಲವೆಂದಾದರೆ ನೀವು ಯಾವುದೇ ಚಿಂತೆಯನ್ನು ಮಾಡಬೇಕಾಗಿಲ್ಲ. ಇನ್ಮುಂದೆ ಇಎಂಐ ಪಾವತಿಗಾಗಿ ನಿಮ್ಮ ಡೆಬಿಟ್ ಕಾರ್ಡ್ ಅನ್ನು ಕೂಡಾ ನೀವು ಬಳಕೆ ಮಾಡಬಹುದು.
ಬ್ಯಾಂಕ್‌ಗಳು ಈಗ ಡೆಬಿಟ್ ಕಾರ್ಡ್‌ಗಳಿಗೂ ಇಎಂಐ ನೀಡಲು ಆರಂಭಿಸಿವೆ. ಸೇವೆಯು ಡೆಬಿಟ್ ಕಾರ್ಡ್ ಬಳಕೆದಾರರಿಗೆ ಇಎಂಐ ಮತ್ತು ಕ್ರೆಡಿಟ್ ಆಯ್ಕೆಗಳನ್ನು ನೀಡುತ್ತದೆ. ಆದರೆ ಈ ಡೆಬಿಟ್ ಕಾರ್ಡ್ ಸೇವೆಯನ್ನು ಪಡೆಯಬೇಕಾದರೆ ಬ್ಯಾಂಕ್ ಸೂಚಿಸಿದ ಅರ್ಹತೆಯನ್ನು ನಾವು ಹೊಂದಿರುವುದು ಅತೀ ಮುಖ್ಯವಾಗಿದೆ. ಈ ಅರ್ಹತೆಗಳು ಏನು, ಅದನ್ನು ತಿಳಿಯುವುದು ಹೇಗೆ, ಈ ಸೌಲಭ್ಯವನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ. ಮುಂದೆ ಓದಿ...
ಡೆಬಿಟ್ ಕಾರ್ಡ್‌ನಲ್ಲಿ ಇಎಂಐ ಪಡೆಯುವುದು ಹೇಗೆ?
ನೀವು ಇಎಂಐ ಡೆಬಿಟ್ ಕಾರ್ಡ್ ಅನ್ನು ಬಳಸಲು ಸಾಧ್ಯವಾಗುತ್ತದೆಯೇ ಅಥವಾ ನಿಮಗೆ ಈ ಸೌಲಭ್ಯ ನೀಡಬಹುದೇ ಎಂಬುವುದನ್ನು ನಿಮ್ಮ ಬ್ಯಾಂಕ್ ನಿರ್ಧಾರ ಮಾಡುತ್ತದೆ. ನಿಮ್ಮ ನೋಂದಾಯಿತ ಫೋನ್ ಸಂಖ್ಯೆ ಮತ್ತು ಡೆಬಿಟ್ ಕಾರ್ಡ್ ಮಾಹಿತಿಯನ್ನು ಇದರಲ್ಲಿ ಬಳಕೆ ಮಾಡಲಾಗುತ್ತದೆ. ಗ್ರಾಹಕರು ತಮ್ಮ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದುವ ಅವಶ್ಯಕತೆ ಇಲ್ಲ. ಪ್ರತಿ ತಿಂಗಳು ಇಎಂಐ ಪಾವತಿ ಸರಿದೂಗಿಸಲು ತಮ್ಮ ಖಾತೆಗಳಲ್ಲಿ ಸಾಕಷ್ಟು ಹಣವನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು. ಬ್ಯಾಂಕ್‌ನಿಂದ ಬ್ಯಾಂಕ್‌ಗೆ, ಡೆಬಿಟ್ ಕಾರ್ಡ್‌ನಲ್ಲಿ ಮಾಡಿದ ಇಎಂಐ ಅನ್ನು ನೀವು ಪಡೆಯುವ ಮೊತ್ತದಲ್ಲಿ ವ್ಯತ್ಯಾಸಗಳಿವೆ.
ಡೆಬಿಟ್ ಕಾರ್ಡ್‌ನಲ್ಲಿ ಇಎಂಐ ಅರ್ಹತೆ ಪರಿಶೀಲನೆ ಹೇಗೆ?
ನೀವು ಡೆಬಿಟ್ ಕಾರ್ಡ್‌ನಲ್ಲಿ ಇಎಂಐ ಪಾವತಿ ಮಾಡುವ ಅರ್ಹತೆಯನ್ನು ಹೊಂದಿದ್ದೀರಾ ಎಂದು ಪರಿಶೀಲನೆ ಮಾಡಲು ನಿಮ್ಮ ಸಂಬಂಧಿತ ಬ್ಯಾಂಕ್ ಅನ್ನು ಸಂಪರ್ಕಿಸಿ ಅಥವಾ ಅವರಿಗೆ ಎಸ್‌ಎಂಎಸ್ ಕಳುಹಿಸಬಹುದಾಗಿದೆ. ಬ್ಯಾಂಕಿನ ಗ್ರಾಹಕ ಸೇವಾ ಕಾರ್ಯನಿರ್ವಾಹಕರನ್ನು ಸಂಪರ್ಕಿಸಿ ಕೂಡಾ ನೀವು ಈ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ನೀವು ಇ-ಕಾಮರ್ಸ್ ವೆಬ್‌ಸೈಟ್ ಮೂಲಕವೂ ಇದನ್ನು ಪರಿಶೀಲನೆ ಮಾಡಬಹುದಾಗಿದೆ.
ಖರೀದಿಯನ್ನು ಇಎಂಐ ಆಗಿ ಪರಿವರ್ತಿಸುವುದು ಹೇಗೆ?
ನೀವು ಮೊದಲು ವಸ್ತುವನ್ನು ಖರೀದಿ ಮಾಡಬೇಕಾಗುತ್ತದೆ. ಖರೀದಿಸುವಾಗ ನಿಮ್ಮ ಡೆಬಿಟ್ ಕಾರ್ಡ್ ವಹಿವಾಟನ್ನು ಇಎಂಐ ಮೋಡ್‌ನಲ್ಲಿ ಸ್ವೈಪ್ ಮಾಡಲು ಸ್ಟೋರ್ ಅಸಿಸ್ಟೆಂಟ್‌ಗೆ ಹೇಳಬೇಕಾಗುತ್ತದೆ. ನೀವು ಆನ್‌ಲೈನ್‌ನಲ್ಲಿ ಖರೀದಿಸಿದಾಗ ಅದೇ ಆಯ್ಕೆಯು ಲಭ್ಯವಿದೆ. ನೀವು ಎಷ್ಟು ಸಮಯಕ್ಕೆ ಇಎಂಐ ಪಡೆಯಲು ಬಯಸುತ್ತೀರಿ ಎಂದು ಕೂಡಾ ನಮೂದಿಸಬೇಕಾಗುತ್ತದೆ. ಚಾರ್ಜ್ ಸ್ಲಿಪ್‌ಗೆ ಸಹಿ ಮಾಡಬೇಕಾಗುತ್ತದೆ. ಒಮ್ಮೆ ಬ್ಯಾಂಕ್ ನಿಮ್ಮ ವಿನಂತಿಯನ್ನು ಮಂಜೂರು ಮಾಡಿದರೆ, ವಹಿವಾಟಿನ ಹಣವನ್ನು ಹಿಂತಿರುಗಿಸಲಾಗುತ್ತದೆ. ನೀವು ಆಯ್ಕೆಮಾಡಿದ ಅವಧಿಯ ಆಧಾರದ ಮೇಲೆ ತಾತ್ಕಾಲಿಕ ಇಎಂಐ ಕಂತು ಖಾತೆಯನ್ನು ರಚಿಸಲಾಗುತ್ತದೆ. ನೀವು ಹೊಂದಿರುವ ಮಿತಿಯು ಇಎಂಐ ಅನ್ನು ಸ್ವೀಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತದೆ. ಅನುಮತಿಸಲಾದ ಮಿತಿಗಿಂತ ಹೆಚ್ಚಿನ ಮೊತ್ತವಾಗಿದ್ದರೆ ನಿಮ್ಮ ಇಎಂಐ ವಿನಂತಿಯನ್ನು ನಿರಾಕರಿಸಲಾಗುತ್ತದೆ.


Click it and Unblock the Notifications