ಪ್ರಾವಿಡೆಂಟ್ ಫಂಡ್ ಎಂಬುವುದು ಭಾರತ ಸರ್ಕಾರದ ಹಣಕಾಸು ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಬೇರೆ ಬೇರೆ ಇಂಡಸ್ಟ್ರೀಯ ಜನರು ಪ್ರಾವಿಡೆಂಟ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತಾರೆ. ಅಂದರೆ ಬೀಡಿ ಮೊದಲಾದ ಕಾರ್ಮಿಕರಿಂದ ಹಿಡಿದು ಸಾಫ್ಟ್‌ವೇರ್ ಸಂಸ್ಥೆಯ ಉದ್ಯೋಗಿಗಳವರೆಗೆ ಬೇರೆ ಬೇರೆ ವಲಯದವರು ಮಾಸಿಕವಾಗಿ ಪಿಎಫ್ ಹೂಡಿಕೆ ಮಾಡುತ್ತಾರೆ. ಪಿಎಫ್ ಅನ್ನು ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಸ್ಥೆ (ಇಪಿಎಫ್‌ಒ) ನಿರ್ವಹಣೆ ಮಾಡುತ್ತದೆ.
ಉದ್ಯೋಗಿಗಳಿಗಾಗಿ ಇಪಿಎಫ್‌ಒ ಒಟ್ಟಾಗಿ ಮೂರು ಯೋಜನೆಗಳನ್ನು ಹೊಂದಿದೆ. ಇಪಿಎಫ್ ಯೋಜನೆ (1952), ಪಿಂಚಣಿ ಯೋಜನೆ 1995, ವಿಮಾ ಯೋಜನೆ 1976 ಸರ್ಕಾರದ ಅಡಿಯಲ್ಲಿ ಬರುವ ಇಪಿಎಫ್‌ಒ ಹೊಂದಿರುವ ಮೂರು ಯೋಜನೆಗಳಾಗಿದೆ. ಪ್ರಸ್ತುತ ಇಪಿಎಫ್ ಬಡ್ಡಿದರವು ಶೇಕಡ 8.15ರಷ್ಟಿದೆ.

ಸಾಮಾನ್ಯವಾಗಿ ಪಿಎಫ್ ಬಡ್ಡಿದರವನ್ನು ಚೆಕ್ ಮಾಡುವುದು ಅತೀ ಮುಖ್ಯವಾಗುತ್ತದೆ. ಆದರೆ ಇಂಟರ್‌ನೆಟ್ ಇಲ್ಲದೆಯೇ ನೀವು ಪಿಎಫ್ ಮೊತ್ತವನ್ನು ಚೆಕ್ ಮಾಡಬಹುದು ಎಂಬುವುದು ನಿಮಗೆ ತಿಳಿದಿದೆಯೇ?, ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಮನೆಯಲ್ಲಿಯೇ ಇಂಟರ್‌ನೆಟ್ ಇಲ್ಲದೆ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ ನೋಡಿ
1. ಎಸ್‌ಎಂಎಸ್: ಯುಎಎನ್ ಸಂಖ್ಯೆಯನ್ನು ತಿಳಿದಿರುವವ ಪಿಎಫ್ ಸದಸ್ಯರು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಇಂಟರ್‌ನೆಟ್ ಇಲ್ಲದೆ ಎಸ್‌ಎಂಎಸ್ ಮೂಲಕವೇ ತಿಳಿಯಬಹುದಾಗಿದೆ. ಪಿಎಫ್‌ನಲ್ಲಿ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಗೆ 7738299899ಗೆ ಎಸ್‌ಎಂಎಸ್ ಮಾಡುವ ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ನೀವು ಚೆಕ್ ಮಾಡಬಹುದು.
ಈ ಸಂಖ್ಯೆಗೆ EPFOHO UAN (ಯುಎಎನ್ ಇದ್ದಲ್ಲಿ ನಿಮ್ಮ ಯುಎಎನ್ ಸಂಖ್ಯೆ) ಎಂದು ಎಸ್‌ಎಂಎಸ್ ಕಳುಹಿಸಬೇಕಾಗುತ್ತದೆ. ಈ ಸೌಲಭ್ಯವು ಇಂಗ್ಲೀಷ್, ಹಿಂದಿ, ಪಂಜಾಬಿ, ಗುಜರಾತಿ, ಮರಾಠಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಳಿಯಲ್ಲಿ ಲಭ್ಯವಿದೆ.
2. ಮಿಸ್ಡ್‌ಕಾಲ್: ಯುಎಎನ್ ಪೋರ್ಟಲ್‌ನಲ್ಲಿ ರಿಜಿಸ್ಟಾರ್ ಆದ ಸದಸ್ಯರು ಮಿಸ್ಡ್‌ಕಾಲ್ ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಯಿಂದ 9966044425ಕ್ಕೆ ಮಿಸ್ಡ್‌ಕಾಲ್ ನೀಡುವ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಎರಡು ರಿಂಗ್‌ಗಳಲ್ಲೇ ಈ ಕರೆ ಕಟ್ ಆಗುತ್ತದೆ.
ಈ ಕರೆ ಮಾಡುವುದಕ್ಕೆ ಯಾವುದೇ ಶುಲ್ಕವಿಲ್ಲ. ನಿಮ್ಮ ಯುಎಎನ್ ಸಂಖ್ಯೆಯು ಬ್ಯಾಂಕ್ ಖಾತೆ, ಆಧಾರ್, ಪ್ಯಾನ್‌ಗೆ ಲಿಂಕ್ ಆಗಿದ್ದರೆ, ಮಿಸ್ಡ್ ಕಾಲ್ ನೀಡಿದ ಬಳಿಕ ನಿಮಗೆ ಪಿಎಫ್ ಬ್ಯಾಲೆನ್ಸ್ ಹಾಗೂ ಪ್ರತಿ ತಿಂಗಳು ಮಾಡುವ ಹೂಡಿಕೆ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಯಾಕೆ ಮುಖ್ಯ?
ಪಿಎಫ್ ಬ್ಯಾಲೆನ್ಸ್ ಅನ್ನು ನೀವು ಆಗಾಗೇ ಚೆಕ್ ಮಾಡುವುದರಿಂದ ಸರಿಯಾದ ಸಮಯಕ್ಕೆ ನಿಮ್ಮ ಖಾತೆಗೆ ಪಿಎಫ್ ಮೊತ್ತಜಮೆಯಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಪಿಎಫ್ ಎಂದಿಗೂ ಕೂಡಾ ಉದ್ಯೋಗಿಯ ಒಂದು ಸುರಕ್ಷಿತ ಹೂಡಿಕೆಯಾಗಿದೆ. ಪ್ರತಿ ತಿಂಗಳು ನಾವು ಕಡ್ಡಾಯವಾಗಿ ಮಾಡುತ್ತಾ ಬರುವ ಹೂಡಿಕೆ ಇದಾಗಿದೆ.
ನಿಯಮ ಬಿಗಿಗೊಳಿಸಿದ ಇಪಿಎಫ್‌ಒ!
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) ತನ್ನ ನಿಯಮವನ್ನು ಬಿಗಿಗೊಳಿಸಿದೆ. ನಿರ್ದಿಷ್ಟ ಕಾರಣಗಳಿಂದಾಗಿ ಕೆಲವು ಪಿಂಚಣಿದಾರರಿಗೆ ಮಾಸಿಕ ಪಿಂಚಣಿ ಪಾವತಿಯನ್ನು ಸ್ಥಗಿತಗೊಳಿಸಿದೆ. ಅಷ್ಟು ಮಾತ್ರವಲ್ಲದೆ ಆ ಪಿಂಚಣಿದಾರರಿಗೆ ಶೋಕಾಸ್ ನೋಟಿಸ್ ಅನ್ನು ಕೂಡಾ ಜಾರಿ ಮಾಡಿದೆ. ಈ ಹಿಂದೆ ಪಾವತಿ ಮಾಡಲಾದ ಪಿಂಚಣಿಯನ್ನು ಮರುಪಾವತಿ ಮಾಡಿ ಎಂದು ಕೂಡಾ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.


Click it and Unblock the Notifications