ಉದ್ಯೋಗವನ್ನು ಮಾಡುವ ಎಲ್ಲರೂ ಕೂಡಾ ತಮ್ಮ ವೇತನದಲ್ಲಿ ನಿಗದಿತ ಪ್ರಮಾಣದ ಮೊತ್ತವನ್ನು ಉಳಿತಾಯ ಮಾಡುವ ಅವಕಾಶವನ್ನು ಸರ್ಕಾರದ ಯೋಜನೆಗಳು ನೀಡುತ್ತಾ ಬಂದಿದೆ. ಅಂತಹ ಯೋಜನೆಗಳ ಪೈಕಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಯೋಜನೆಯಾಗಿದೆ. ಪ್ರಾವಿಡೆಂಟ್ ಫಂಡ್‌ಗಾಗಿ ಪ್ರತಿ ತಿಂಗಳು ನಮ್ಮ ವೇತನದಿಂದ ನಿಗದಿತ ಪ್ರಮಾಣದ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ. ಈ ಮೊತ್ತವನ್ನು ಕೆಲವೊಂದು ಸಂದರ್ಭಗಳಲ್ಲಿ, ನಿಗದಿತ ಕಾರಣಗಳಿಗಾಗಿ ವಿತ್‌ಡ್ರಾ ಮಾಡುವ ಅವಕಾಶವಿದೆ. ಪಿಎಫ್ ಖಾತೆಯನ್ನು ಹೊಂದಿರುವವರು ತಮ್ಮ ಖಾತೆಯಲ್ಲಿ ಮೊತ್ತವನ್ನು ತಮ್ಮ ನಿವೃತ್ತಿ ಸಂದರ್ಭದಲ್ಲಿ ಸಂಪೂರ್ಣವಾಗಿ ವಿತ್‌ಡ್ರಾ ಮಾಡಬಹುದಾಗಿದೆ.
ಆದರೆ ಯಾವುದೇ ಒಂದು ತುರ್ತು ಇದ್ದಾಗ, ಮದುವೆ, ಶಿಕ್ಷಣ ಇಂತಹ ಸಂದರ್ಭದಲ್ಲಿ ಒಟ್ಟು ಮೊತ್ತದಲ್ಲಿ ಕೊಂಚ ಹಣವನ್ನು ವಿತ್‌ಡ್ರಾ ಮಾಡುವ ಅವಕಾಶವಿದೆ. ಕೇಂದ್ರ ಸರ್ಕಾರವು ಡಿಜಿಟಲ್ ಇಂಡಿಯಾದ ಭಾಗವಾಗಿ ಉಮಾಂಗ್ ಆಪ್ ಅನ್ನು ಜಾರಿ ಮಾಡಿದ್ದು, ಈ ಆಪ್ ಮೂಲಕವೇ ನೀವು ಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡಬಹುದಾಗಿದೆ. ಅದು ಕೂಡಾ ನೀವು ಮನೆಯಲ್ಲಿ ಅಥವಾ ಯಾವುದೇ ನೆಟ್‌ವರ್ಕ್ ಇರುವ ಪ್ರದೇಶದಲ್ಲಿ ಕುಳಿತು ಹಣ ವಿತ್‌ಡ್ರಾ ಮಾಡಬಹುದಾಗಿದೆ. ರೈಲ್ವೆ ಟಿಕೆಟ್ ಬುಕ್ಕಿಂಗ್, ಸಮಯ ಪರಿಶೀಲನೆ, ಆಧಾರ್ ಸೇವೆಗಳು ಕೂಡಾ ಉಮಾಂಗ್ ಆಪ್‌ನಲ್ಲಿ ಲಭ್ಯವಿದೆ. ಉಮಾಂಗ್ ಆಪ್‌ನಲ್ಲಿ ಮೊತ್ತವನ್ನು ವಿತ್‌ಡ್ರಾ ಮಾಡುವುದು ಹೇಗೆ ಎಂದು ಇಲ್ಲಿದೆ ವಿವರ ಮುಂದೆ ಓದಿ...

ಜನರು ಸಾಮಾನ್ಯವಾಗಿ ತಮ್ಮ ತೀರಾ ಅಗತ್ಯ ಸಂದರ್ಭಗಳಲ್ಲಿ ಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳುತ್ತಾರೆ. ಕುಟುಂಬ ಸದಸ್ಯರಿಗೆ ಅಥವಾ ತಮಗೆ ಮನೆ ರಿಪೇರಿ ಮಾಡಿಕೊಳ್ಳಲು, ಶಿಕ್ಷಣಕ್ಕಾಗಿ, ಮದುವೆ ಖರ್ಚಿಗಾಗಿ, ಆರೋಗ್ಯ ಸಮಸ್ಯೆ ಉಂಟಾದಾಗ ಈ ಮೊತ್ತವನ್ನು ಜನರು ವಿತ್‌ಡ್ರಾ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಪಿಎಫ್ ಮೊತ್ತವನ್ನು ನಾವು ವಿತ್‌ಡ್ರಾ ಮಾಡಿಕೊಳ್ಳಬೇಕಾದರೆ ಹಲವಾರು ಬಾರಿ ಬ್ಯಾಂಕ್ ಅಥವಾ ಪಿಎಫ್ ಕಚೇರಿಗೆ ಭೇಟಿ ನೀಡಬೇಕಾಗಿ ಬರುತ್ತಿತ್ತು. ಆದರೆ ಈಗ ಹಾಗಿಲ್ಲ. ನೀವು ಉಮಾಂಗ್ ಆಪ್ ಮೂಲಕ ಸರಳ ಹಾಗೂ ಸುಲಭವಾಗಿ ಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದಾಗಿದೆ.
ಉಮಾಂಗ್ ಆಪ್‌ನಲ್ಲಿ ಪಿಎಫ್ ಮೊತ್ತ ವಿತ್‌ಡ್ರಾ ಮಾಡಿಕೊಳ್ಳುವುದು ಹೇಗೆ?
ಹಂತ 1: ಉಮಾಂಗ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ನಿಮ್ಮ ಮೊಬೈಲ್ ನಂಬರ್ ಬಳಸಿಕೊಂಡು ರಿಜಿಸ್ಟಾರ್ ಮಾಡಿಕೊಳ್ಳಿ
ಹಂತ 2: ಆಪ್‌ನಲ್ಲಿ ಲಭ್ಯವಿರುವ ಹಲವಾರು ಆಯ್ಕೆಗಳ ಪೈಕಿ ಇಪಿಎಫ್‌ಒ ಅನ್ನು ಕ್ಲಿಕ್ ಮಾಡಿ
ಹಂತ 3: raise claim ಆಯ್ಕೆಯನ್ನು ಮಾಡಿಕೊಂಡು ನಿಮ್ಮ ಯುಎಎನ್ ಸಂಖ್ಯೆಯನ್ನು ನಮೂದಿಸಿ
ಹಂತ 4: ಇಪಿಎಫ್‌ಒದಲ್ಲಿ ನಿಮ್ಮ ರಿಜಿಸ್ಟಾರ್ ಆದ ಮೊಬೈಲ್‌ಗೆ ಬರುವ ಒಟಿಪಿಯನ್ನು ನಮೂದಿಸಿ
ಹಂತ 5: ಪಿಎಫ್ ಖಾತೆಯಿಂದ ಹಣವನ್ನು ವಿತ್‌ಡ್ರಾ ಮಾಡುವ ವಿಧಾನವನ್ನು ಆಯ್ಕೆ ಮಾಡಿ, ಫಾರ್ಮ್ ಅನ್ನು ಭರ್ತಿ ಮಾಡಿಕೊಳ್ಳಿ
ಹಂತ 6: ಫಾರ್ಮ್ ಅನ್ನು ಸಬ್‌ಮಿಟ್ ಮಾಡಿ, ಅದಾದ ಬಳಿಕ ನಿಮ್ಮ ವಿತ್‌ಡ್ರಾ ಮನವಿಗೆ ರೆಫೆರೆನ್ಸ್ ನಂಬರ್ ಲಭ್ಯವಾಗಲಿದೆ.
ಹಂತ 7: ರೆಫೆರೆನ್ಸ್ ನಂಬರ್ ಅನ್ನು ಬಳಸಿಕೊಂಡು ನಿಮ್ಮ ವಿತ್‌ಡ್ರಾ ಮನವಿ ಅನುಮೋದನೆಯಾಗಿದೆಯೇ, ಇಲ್ಲವೇ ಎಂಬುವುದನ್ನು ನೀವು ಚೆಕ್ ಮಾಡಿಕೊಳ್ಳಬಹುದು.
ಹಂತ 8: 3ರಿಂದ 5 ದಿನದ ಒಳಗಾಗಿ ಇಪಿಎಫ್‌ಒ ನಿಮ್ಮ ಖಾತೆಗೆ ಮೊತ್ತವನ್ನು ಜಮೆ ಮಾಡಲಿದೆ.


Click it and Unblock the Notifications