ಏಪ್ರಿಲ್ 2022ರಿಂದ ಮಾರ್ಚ್ 2023ರ ನಡುವೆ ಮಾಡಲಾದ ಇಪಿಎಫ್ ಡೆಪಾಸಿಟ್‌ಗೆ ಶೇಕಡ 8.10ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಸೋಮವಾರ (ಮಾರ್ಚ್ 13) ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಶೇಕಡ 98ರಷ್ಟು ವ್ಯವಹಾರಗಳು ಅಥವಾ ಸಂಸ್ಥೆಗಳು ತಮ್ಮ ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ಮೊತ್ತವನ್ನು ಜಮೆ ಮಾಡಿದೆ, ಇದಕ್ಕೆ ಬಡ್ಡಿದರವನ್ನು ಕೂಡಾ ಜಮೆ ಮಾಡಲಾಗುತ್ತದೆ.
"ಇದು (ಬಡ್ಡಿ ಜಮಾ) ನಿರಂತರ ಪ್ರಕ್ರಿಯೆಯಾಗಿದ್ದು, ಸಾಫ್ಟ್‌ವೇರ್ ಅಭಿವೃದ್ಧಿಯ ನಂತರ ಇದನ್ನು ನಿಗದಿತ ರೀತಿಯಲ್ಲಿ ಮಾಡಲಾಗುತ್ತಿದೆ. ಮಾರ್ಚ್ 6, 2023 ರ ವೇಳೆಗೆ ಶೇಕಡ 98ರಷ್ಟು ಕೊಡುಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪ್ರಕ್ರಿಯೆ ಪೂರ್ಣಗೊಂಡಿದೆ," ಎಂದು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಹೇಳಿದ್ದಾರೆ. ಸಚಿವರ ಪ್ರಕಾರ, ಸದಸ್ಯರ ಪಾಸ್‌ಬುಕ್ ಅನ್ನು ಬಡ್ಡಿದರದೊಂದಿಗೆ ಅಪ್‌ಡೇಟ್ ಮಾಡುವುದು ಬರೀ ಒಂದು ಪ್ರಕ್ರಿಯೆಯಾಗಿದೆ. ಆದರೆ ನಿಮ್ಮ ಇಪಿಎಫ್ ಖಾತೆಗೆ ಬಡ್ಡಿದರ ಜಮೆಯಾಗಿದೆಯೇ ಎಂದು ತಿಳಿಯಲು ಪಿಎಫ್ ಬ್ಯಾಲೆನ್ಸ್ ಹೀಗೆ ಚೆಕ್ ಮಾಡಿ...

ಆನ್‌ಲೈನ್‌ನಲ್ಲಿ ಪಿಎಫ್ ಚೆಕ್ ಮಾಡಿ
ಹಂತ 1: epfindia.gov.in ಖಾತೆಗೆ ಲಾಗಿನ್ ಆಗಿ
ಹಂತ 2: ಯುಎಎನ್ ಸಂಖ್ಯೆ, ಪಾಸ್‌ವರ್ಡ್, ಕ್ಯಾಪ್ಚಾ ಕೋಡ್ ನಮೂದಿಸಿ
ಹಂತ 3: ಇ-ಪಾಸ್‌ಬುಕ್ ಮೇಲೆ ಕ್ಲಿಕ್ ಮಾಡಿ
ಹಂತ 4: ಎಲ್ಲ ಮಾಹಿತಿಯನ್ನು ಫೈಲ್ ಮಾಡಿದ ಬಳಿಕ ಹೊಸ ಪೇಜ್ ಕಾಣಲಿದೆ
ಹಂತ 5: ಈಗ ಮೆಂಬರ್ ಐಡಿಯನ್ನು ತೆರೆಯಿರಿ
ಹಂತ 6: ಇಪಿಎಫ್ ಖಾತೆಯಲ್ಲಿನ ಸಂಪೂರ್ಣ ಮೊತ್ತದ ವಿವರ ನಿಮಗೆ ಲಭ್ಯವಾಗಲಿದೆ
ಉಮಾಂಗ್ ಆಪ್‌ನಲ್ಲಿ ಬ್ಯಾಲೆನ್ಸ್ ಚೆಕ್ ಮಾಡಿ
ಹಂತ 1: ಉಮಾಂಗ್ ಆಪ್ ಅನ್ನು ತೆರೆಯಿರಿ
ಹಂತ 2: ಇಪಿಎಫ್‌ಒ ಮೇಲೆ ಕ್ಲಿಕ್ ಮಾಡಿ
ಹಂತ 3: ಎಂಪ್ಲಾಯ್ ಸೆಟ್ರಿಕ್ ಸರ್ವಿಸಸ್ (Employee Centric Services) ಮೇಲೆ ಕ್ಲಿಕ್ ಮಾಡಿ
ಹಂತ 4: View Passbook ಮೇಲೆ ಕ್ಲಿಕ್ ಮಾಡಿ
ಹಂತ 5: ನಿಮ್ಮ ಯುಎಎನ್ ನಂಬರ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ
ಹಂತ 6: ನಿಮ್ಮ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ
ಹಂತ 7: ಅದನ್ನು ನಮೂದಿಸಿದರೆ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಮಾಹಿತಿ ಲಭ್ಯವಾಗಲಿದೆ.
ಎಸ್‌ಎಂಎಸ್, ಮಿಸ್‌ಕಾಲ್ ಮೂಲಕ ಇಪಿಎಫ್ ಬ್ಯಾಲೆನ್ಸ್ ಚೆಕ್
ತಮ್ಮ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಯಿಂದ ಎಸ್‌ಎಂಎಸ್ ಕಳುಹಿಸುವ ಮೂಲಕ ಇಪಿಎಫ್ ಸದಸ್ಯರು ತಮ್ಮ ಇಪಿಎಫ್ ಖಾತೆಯಲ್ಲಿನ ಮೊತ್ತವನ್ನು ಚೆಕ್ ಮಾಡಲು ಸಾಧ್ಯವಾಗಲಿದೆ. ಅದಕ್ಕಾಗಿ ನೀವು 7738299899 ಮೊಬೈಲ್ ಸಂಖ್ಯೆಗೆ EPFOHO UAN ಎಂದು (ಯುಎಎನ್ ಎಂಬಲ್ಲಿ ಸಂಖ್ಯೆ) ಎಸ್‌ಎಂಎಸ್ ಮಾಡಬೇಕಾಗುತ್ತದೆ. ಇನ್ನು ಮಿಸ್‌ಕಾಲ್ ನೀಡುವ ಮೂಲಕವು ನೀವು ಇಪಿಎಫ್ ಖಾತೆಯಲ್ಲಿನ ಮೊತ್ತ ಪರಿಶೀಲಿಸಲು ಸಾಧ್ಯವಾಗಲಿದೆ. ಯುಎಎನ್ ಪೋರ್ಟಲ್‌ನಲ್ಲಿ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಯಿಂದ 011-22901406 ಕ್ಕೆ ಮಿಸ್ ಕಾಲ್ ನೀಡಿದರೆ ನಿಮಗೆ ಇಪಿಎಫ್ ಬ್ಯಾಲೆನ್ಸ್ ಮಾಹಿತಿ ಲಭ್ಯವಾಗಲಿದೆ.


Click it and Unblock the Notifications